ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial) ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿದ್ದಾಳೆ. ಚಾರು ಕಣ್ಣು ಹೋಗಲು ರಾಮಾಚಾರಿ ಕಾರಣ ಎಂದು ಗೊತ್ತಾಗಿ, ರಾಮಾಚಾರಿಗೆ ಮಾನ್ಯತಾ (Manyata) ರೌಡಿಗಳಿಂದ ಹೊಡೆಸಿದ್ದಾಳೆ.
ಮಾನ್ಯತಾ ಕೋಪಕ್ಕೆ ಗುರಿ
ಮಾನ್ಯತಾಗೆ ಮೊದಲೇ ತನ್ನ ಮಗಳು ಚಾರು ಅಂದ್ರೆ ತುಂಬಾ ಇಷ್ಟ. ಆಕೆಗೆ ನೋವಾದ್ರೆ ಸಹಿಸಲ್ಲ. ಇನ್ನೂ ಶಾಶ್ವತವಾಗಿ ಕಣ್ಣು ಹೋಗಲು ರಾಮಾಚಾರಿ ಕಾರಣ ಎಂದು ಕೆಂಡಮಂಡಲವಾಗಿದ್ದಾಳೆ. ನನ್ನ ಮಗಳನ್ನು ಈ ಪರಿಸ್ಥಿತಿಗೆ ತಂದವನನ್ನು ಸುಮ್ಮನೇ ಬಿಡಬಾರದು ಎಂದು ರೌಡಿಗಳ ಜೊತೆ ರಾಮಾಚಾರಿ ಮನೆಯವರನ್ನು ಕಟ್ಟಿ ಹಾಕಿ ಹೊಡೆದಿದ್ದಾಳೆ.
ರಾಮಾಚಾರಿಗೆ ರೌಡಿಗಳ ಏಟು
ರಾಮಾಚಾರಿ ಚಾರುಗಾಗಿ ಒಂಟಿ ಕಾಲಿನ ಸೇವೆ ಮಾಡುತ್ತಿದ್ದಾನೆ. ಮಡಿಯಿಂದ ಕಲ್ಲಿನ ಮೇಲೆ ನಿಂತು ನಾಗರ ದೇವನನ್ನು ಜಪಿಸುತ್ತಿದ್ದಾನೆ. ಇದು ಕೊನೆ ಪ್ರಯತ್ನ ದೇವರು ಏನಾದ್ರೂ ದಾರಿ ತೋರಿಸುತ್ತಾನೆ ಎಂದು ನಂಬಿದ್ದಾನೆ. ಆದ್ರೆ ಅಲ್ಲಿಗೆ ಬಂದ ಮಾನ್ಯತಾ ಮತ್ತು ರೌಡಿಗಳು ರಾಮಾಚಾರಿಯನ್ನು ಸಿಕ್ಕಾ ಪಟ್ಟೆ ಹೊಡೆದಿದ್ದಾರೆ. ಆದ್ರೂ ರಾಮಾಚಾರಿ ಸೇವೆ ಬಿಟ್ಟಿಲ್ಲ.
ನಿನ್ನ ಮನೆಯವರು ಸಾಯ್ತಾರೆ
ನಿನ್ನ ಮನೆ ಸುಟ್ಟು ಬೂದಿ ಆಗುತ್ತೆ. ನಿನ್ನ ಕುಟುಂಬವನ್ನು ಸಾವಿನ ಸರಪಳಿ ಹಾಕಿ ಕಟ್ಟಿ ಹಾಕಿ ಬಂದಿದ್ದೇನೆ. ನನಗೆ ಎಲ್ಲಾ ವಿಷ್ಯ ಗೊತ್ತಾಯ್ತು ಕಣೋ. ನನ್ನ ಮಗಳ ಬಾಳು ಕತ್ತಲೆ ಆಗಲು ನೀನೇ ಕಾರಣ ಎಂದು ನನಗೆ ಗೊತ್ತಾಯ್ತು.
ನನ್ನ ಮಗಳ ದೃಷ್ಟಿಯನ್ನು ಶಾಶ್ವತವಾಗಿ ಕಿತ್ತುಕೊಂಡು, ಇನ್ನು 15 ದಿನದಲ್ಲಿ ಕಣ್ಣು ಬರುತ್ತೆ ಅಂತ ಸುಳ್ಳು ಹೇಳಿದ್ದೀಯಾ? ಸುಳ್ಳು ಹೇಳಿ ಮಾನ್ಯತಾ ಹಿಡಿತದಿಂದ ಬಚಾವ್ ಆಗಬಹುದು ಎಂದುಕೊಂಡ್ಯಾ ಎಂದು ರಾಮಾಚಾರಿಗೆ ಮಾನ್ಯತಾ ಪ್ರಶ್ನೆ ಮಾಡಿದ್ದಾಳೆ.
ಸತ್ಯ ಮುಚ್ಚಿಟ್ಟಿದ್ದು ನಿಜ
ಸತ್ಯ ಗೊತ್ತಾದ್ರೆ ಚಾರು ಮೇಡಂ ತಡೆದುಕೊಳ್ಳಲ್ಲ ಎಂದು ಸುಳ್ಳು ಹೇಳಿದ್ವಿ. ಡಾಕ್ಟರ್ 15 ದಿನದಲ್ಲಿ ಕಣ್ಣು ಬರುತ್ತೆ ಎಂದಿದ್ರು. ಆದ್ರೆ ಬರಲಿಲ್ಲ. ನೀವು ನಮ್ಮ ಮನೆಗೆ ಬಂದಾಗ ಎಲ್ಲಾ ಹೇಳಬೇಕು ಎಂದುಕೊಂಡ್ವಿ. ಆದ್ರೆ ನೀವು ಕೇಳೋ ತಾಳ್ಮೆಯಲ್ಲಿ ಇರಲಿಲ್ಲ. ಇನ್ನು 15 ದಿನದಲ್ಲಿ ನಾಗನ ಸೇವೆ ಮಾಡಿ, ಚಾರು ಮೇಡಂ ಕಣ್ಣು ಬರೋಕೆ ಬೇಡಿಕೊಳ್ಳುತ್ತಿದ್ದೇನೆ ಎಂದು ರಾಮಾಚಾರಿ ಹೇಳ್ತಾನೆ.
ಶಿಕ್ಷೆ ಕಟ್ಟಿಟ್ಟ ಬುತ್ತಿ
ರಾಮಾಚಾರಿ ಏನೇ ಹೇಳಿದ್ರೂ ಮಾನ್ಯತಾ ಕೋಪ ಕಡಿಮೆ ಆಗುತ್ತಿಲ್ಲ. ನನ್ನ ಮಗಳ ಕಣ್ಣು ಸಾಯಿಸಿ ಬಿಟ್ಟೆ. ಆಕೆಯನ್ನು ಶಾಶ್ವತವಾಗಿ ಕುರುಡಿ ಮಾಡಿಬಿಟ್ಟೆ. ನಿನ್ನ ಮಾತ್ರ ಸುಮ್ನೆ ಬಿಡಲ್ಲ. ದೇವರ ಹೆಸರಲ್ಲಿ ನನ್ನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿನಗೆ, ನಿನ್ನ ಮನೆಯವರಿಗೆ ನರಕ ದರ್ಶನವಾಗುತ್ತೆ. ತಪ್ಪು ಮಾಡಿದ್ದು ನಾನು. ನನ್ನ ಮನೆಯವರಿಗೆ ಏಕೆ ಶಿಕ್ಷೆ ಕೊಡ್ತೀರಾ ಎಂದು ರಾಮಾಚಾರಿ ಕೇಳಿದ್ದಾನೆ. ಆದ್ರೂ ಮಾನ್ಯತಾ ಬಿಡದೇ ಕಾಟ ಕೊಡುತ್ತಿದ್ದಾಳೆ.
ಇದನ್ನೂ ಓದಿ: Kannadathi: ಕೆಲ ದಿನಗಳಿಂದ ಭುವಿ ಕೈಗೆ ಸಿಗದ ಹರ್ಷ, ಕಾದಿದ್ಯಾ ಬಿಗ್ ಸರ್ಪ್ರೈಸ್?
ರಾಮಾಚಾರಿ ವ್ರತ ಭಂಗವಾಗುತ್ತಾ? ಮಾನ್ಯತಾ ಕೋಪ ಕಡಿಮೆ ಆಗಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ