ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ, ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಈ ವಿಷ್ಯ ಮಾನ್ಯಾತಾಗೆ ಗೊತ್ತಾಗಿದೆ.
ಸಾಯೋ ನಾಟಕ ಮಾಡಿ ತಾಳಿ ಕಟ್ಟಿಸಿಕೊಂಡಿರುವ ಚಾರು
ಚಾರುಗೆ ಚಿಕ್ಕಮಗಳೂರಿನಲ್ಲಿ ಕಣ್ಣಿನ ಚಿಕಿತ್ಸೆ ಕೊಡಿಸಿರುತ್ತಾರೆ. ಆಕೆಗೆ ಕಣ್ಣು ಬರುತ್ತೆ. ಆದ್ರೆ ರಾಮಾಚಾರಿ ದೂರ ಆಗ್ತಾನೆ ಎಂದು ಕಣ್ಣು ಕಾಣಲ್ಲ. ನನಗೆ ದಿಕ್ಕು ಯಾರು ಎಂದು ಸಾಯೋಕೆ ಹೊರಟಿರುತ್ತಾಳೆ. ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ.
ಕಡೆ ಪಕ್ಷ ಈ ತಾಳಿ ಕಟ್ಟಿ, ನಿಮ್ಮ ಬಾಳ ಸಂಗಾತಿಯಾಗಿ, ಜೀವನ ಪೂರ್ತಿ ನಿಮ್ಮ ಕಣ್ಣಾಗಿರುತ್ತೇನೆ. ಬದುಕು ನಿಮಗಾಗಿ, ಈ ಜೀವನ ಎಲ್ಲ ನಿಮಗಾಗಿ. ಎಂಥದ್ದೇ ಪರಿಸ್ಥಿತಿ ಬಂದ್ರೂ ಕಾಯಾ, ವಾಚಾ, ಮನಸ್ಸಾ, ನಿಮ್ಮ ಗಂಡನಾಗಿ ನಿಮ್ಮ ಕೈ ಹಿಡಿದು ನಡೆಸುತ್ತೇನೆ ಎಂದು ರಾಮಾಚಾರಿ ಹೇಳಿ ತಾಳಿ ಕಟ್ಟಿರುತ್ತಾನೆ. ಅದಕ್ಕೆ ಚಾರು ಸಹ ಖುಷಿಯಾಗಿರುತ್ತಾಳೆ.
ನಿಜ ಹೇಳದ ಚಾರು-ಚಾರಿ
ರಾಮಾಚಾರಿ ಮತ್ತು ಚಾರು ತಾವು ಮದುವೆ ಆಗಿದ್ದೇವೆ ಎಂದು ಇನ್ನೂ ಯಾರ ಬಳಿಯೂ ಹೇಳಿಲ್ಲ. ರಾಮಾಚಾರಿ ತನ್ನ ಕಷ್ಟ, ಜವಾಬ್ದಾರಿ ಮುಗಿದ ಮೇಲೆ ಹೇಳೋಣ ಎಂದಿದ್ದಾನೆ. ಅದಕ್ಕೆ ಚಾರು ಸಹ ಒಪ್ಪಿ ತನ್ನ ತವರು ಮನೆಯಲ್ಲಿ ಇದ್ದಾಳೆ. ಮಾನ್ಯತಾ ಚಾರುಗೆ ಬೇರೆ ಗಂಡು ನೋಡಿದ್ದಾಳೆ. ಮದುವೆ ತಯಾರಿ ನಡೆಸಿದ್ದಾಳೆ. ಚಾರು ಬೇಸರ ಮಾಡಿಕೊಂಡಿದ್ದಾಳೆ.
ಚಾರು ಕತ್ತಲ್ಲಿ ತಾಳಿ
ಚಾರು ರಾಮಾಚಾರಿ ಮನೆಗೆ ಹೊಂದಿಕೊಳ್ಳಬೇಕು ಎಂದು ಸಂಪ್ರದಾಯಗಳನ್ನು ಕಲಿಯುತ್ತಿದ್ದಾಳೆ. ರಂಗೋಲಿ ಹಾಕುವಾಗ, ಚಾರು ತಮ್ಮ ಚಾರು ಕತ್ತಿನಲ್ಲಿ ತಾಳಿ ನೋಡಿದ್ದಾನೆ. ಅದನ್ನು ಹೋಗಿ ಮಾನ್ಯತಾ ಬಳಿ ಹೇಳಿದ್ದಾನೆ. ಅರಿಶಿನದ ಕೊಂಬು ಹಿಡಿದು, ಏನಮ್ಮ ಎಂದು ಕೇಳಿದ್ದಾನೆ. ಇದನ್ನು ಯಾಕೆ ಕೊರಳಲ್ಲಿ ಹಾಕ್ತಾರೆ ಎಂದಿದ್ದಾನೆ. ಅದಕ್ಕೆ ಮಾನ್ಯತಾ ಅದು ತಾಳಿ ಎಂದಿದ್ದಾಳೆ. ಚಾರು ಅಕ್ಕನ ಕೊರಳಲ್ಲಿ ನೋಡಿದೆ ಎಂದು ಹೇಳಿದ್ದಾನೆ.
ಮಾನ್ಯತಾ ಕೆಂಡಾಮಂಡಲ
ಮಾನ್ಯತಾ ಸೀದಾ ಹೋಗಿ ಚಾರು ಕೊರಳಿನಲ್ಲಿರು ತಾಳಿ ತೆಗೆದಿದ್ದಾಳೆ. ಇದೇನು? ಇದು ಯಾವಗಿನಿಂದ ಇದೆ. ಇದನ್ನು ಕಟ್ಟಿದ್ದು ಯಾರು ಎಂದು ನೂರೆಂಟು ಪ್ರಶ್ನೆ ಮಾಡುದ್ದಾಳೆ. ಅದಕ್ಕೆ ಚಾರು ಏನು ಉತ್ತರಿಸದೇ ಸುಮ್ಮನೇ ನಿಂತಿದ್ದಾಳೆ. ಒಂದು ವೇಳೆ ಸತ್ಯ ಹೇಳಿದ್ರೆ, ಅವರ ಅಮ್ಮ ರಾಮಾಚಾರಿಯನ್ನು ಕೊಲ್ಲುತ್ತಾಳೆ ಎಂಬ ಭಯ ಇದೆ.
ಇದನ್ನೂ ಓದಿ: Ragini Dwivedi: ಬಂದೂಕು ಹಿಡಿದ ತುಪ್ಪದ ಬೆಡಗಿ, 'ಬಿಂಗೊ' ರಾಗಿಣಿ ಬೋಲ್ಡ್ ಲುಕ್!
ಚಾರು ನಿಜ ಹೇಳ್ತಾಳಾ? ಮತ್ತೆ ಸುಳ್ಳು ಹೇಳಿ ತಪ್ಪಿಸಿಕೊಳ್ತಾಳಾ? ರಾಮಾಚಾರಿಗೆ ಕಾದಿದ್ಯಾ ಗಂಡಾಂತರ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ