ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial).ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಸೀರಿಯಲ್ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾಗೆ ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ಹೇಳಿರುತ್ತಾರೆ. ರಾಮಾಚಾರಿ ಆ ಹಣವನ್ನು ಜೋಡಿಸಲು ಒದ್ದಾಡುತ್ತಿರುತ್ತಾನೆ. ಆದ್ರೆ ದುಡ್ಡು ಜೋಡಿಸಲು ಸಾಧ್ಯವಾಗಿರಲಿಲ್ಲ. ಅಪರ್ಣಾ ಸಾವನ್ನಪ್ಪಿದ್ದಾಳೆ. ಚಾರು ಮೋಸದಿಂದ ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿತ್ತು. ಅದಕ್ಕೆ ಕೋದಂಡ ಚಾರುವನ್ನು ಕೊಲ್ಲಬೇಕು ಎಂದುಕೊಂಡಿದ್ದ. ಮನೆಯವರೆಲ್ಲಾ ತಡೆದಿದ್ರು. ಈಗ ಚಾರು ಅವರ ಮನೆಯಲ್ಲೇ ಸಿಕ್ರೆ ಬಿಡ್ತಾನಾ?
2, 3 ಬಾರಿ ಕೊಲ್ಲಲು ಹೋಗಿದ್ದ ಕೋದಂಡ
ತನ್ನ ಹೆಂಡ್ತಿ ಮಗುವಿನ ಪ್ರಾಣ ತೆಗೆದ ಚಾರುಳನ್ನು ಕೋದಂಡ 2 ಬಾರಿ ಕೊಲ್ಲಲು ಹೋಗಿದ್ದ.ನನ್ನ ಹೆಂಡ್ತಿ ಸಾಯಿಸಿದವಳು. ಇವಳ ಪ್ರಾಣ ತೆಗೆಯಬೇಕು. ಅಪರ್ಣಾ ಪ್ರಾಣ ನುಂಗಿ ನೀರು ಕುಡಿದವಳು. ನನ್ನ ಹೆಂಡ್ತಿ ಸಾವಿಗೆ ಕಾರಣ ಆಗಿರೋ ನಿನ್ನನ್ನು ಸುಮ್ನೆ ಬಿಡಲ್ಲ ಎಂದು ಕೊಲ್ಲಲು ಮನೆಗೆ ಹೋಗಿದ್ದ. ಆದ್ರೆ ರಾಮಾಚಾರಿ ತಡೆದಿದ್ದ.
ಈಗ ತನ್ನ ಮನೆಯಲ್ಲೇ ಚಾರು
ಕಣ್ಣು ಕಳೆದುಕೊಂಡು ಒಂದು ವಾರದ ಮಟ್ಟಿಗೆ ಚಾರು ರಾಮಾಚಾರಿ ಮನೆಗೆ ಬಂದಿದ್ದಾಳೆ. ಆಕೆಯನ್ನು ತನ್ನ ಮನೆಯಲ್ಲಿ ನೋಡಿ ಕೋದಂಡ ರೊಚ್ಚಿಗೆದ್ದಿದ್ದಾನೆ. ಪಾಪಿ, ಕ್ರೂರಿ, ಕೊಲೆಗಡುಕಿ ಏನೇ ಮಾಡ್ತಾ ಇದೀಯಾ ಇಲ್ಲಿ. ಯಾಕೆ ಬಂದೆ ಇಲ್ಲಿ? ನಡುಮನೆಯಲ್ಲಿ ಕಾಲು ಮೇಲೆ ಕಾಲು ಹಾಕಿ ಟೀ ಕುಡೀತಾ ಇದ್ದೀಯಾ, ನನ್ನ ಕೈನಲ್ಲಿ ಸಾಯೋ ಆಸೆನಾ ನಿನಗೆ? ಏನಕ್ಕೆ ಬಂದಿದ್ದಿ ಹೇಳು ಎಂದು ಚಾರುಳನ್ನು ಪ್ರಶ್ನೆ ಮಾಡಿದ್ದಾನೆ ಕೋದಂಡ.
ಇದನ್ನೂ ಓದಿ: Bhagya Lakshmi: ವೈಷ್ಣವ್ಗೆ ಸಾಂತ್ವನ ಹೇಳಿದಕ್ಕೆ ಕಾವೇರಿಗೆ ಕೋಪ! ಭಾಗ್ಯಗೆ ಕಾದಿದೆಯಾ ಗ್ರಹಚಾರ?
ನಾನೇ ಮುಕ್ತಿ ಕೊಡಬೇಕಾ ಇವಳಿಗೆ?
ರಾಮಾಚಾರಿ ಏನ್ ನಡೀತಾ ಇದೆ ಇಲ್ಲಿ? ಯಾರು ಇವಳನ್ನು ಒಳಗಡೆ ಸೇರಿಸಿದ್ದು, ಯಾರು ಸೇರಿಸಿದ್ದು, ಇವಳನ್ನು ಕೊಲೆ ಮಾಡಿ ನಾನು ಜೈಲಿಗೆ ಹೋಗಬೇಕಾ? ಇವಳಿಗೆ ನನ್ನ ಕೈಯಿಂದಾನೆ ಮುಕ್ತಿ ಕೊಡಬೇಕಾ ಹೇಳಿ ಎಂದು ಮನೆಯವರನ್ನು ಕೋದಂಡ ಕೇಳುತ್ತಿದ್ದಾನೆ. ಹಾಗಾದ್ರೆ ಮನೆಗೆ ಬಂದ ಚಾರುಗೆ ಇವತ್ತೇ ಕೊನೆ ದಿನಾನಾ? ಕೋದಂಡ ಕೊಂದು ಬಿಡುತ್ತಾನಾ ನೋಡಬೇಕು.
ಡಾಕ್ಟರ್ ಬಳಿ ಹೋದ ರಾಮಾಚಾರಿ
ರಾಮಾಚಾರಿ ಚಾರುವಿನ ಕಣ್ಣು ಬರೋ ರೀತಿ ಮಾಡಿ ಡಾಕ್ಟರ್ ಎಂದು ಕೇಳಿಕೊಳ್ಳುತ್ತಿದ್ದಾನೆ. ಕಣ್ಣು ಕಳೆದುಕೊಂಡವರ ನೋವು ಹೇಗಿರುತ್ತೆ ಎಂದು 3 ದಿನದಿಂದ ನೋಡಿದೀನಿ ಡಾಕ್ಟರ್. ಚಾರು ಮೇಡಂ ತಡಕಾಡಿದಾಗ, ಹೃದಯಕ್ಕೆ ನೋವಾಗುತ್ತೆ. ಈ ಸಮಸ್ಯೆಗೆ ಪರಿಹಾರ ಸಿಗುತ್ತೆ ಅನ್ನುವ ನಂಬಿಕೆ ಮೇಲೆ ನಿಮ್ಮ ಮುಂದೆ ಬಂದು ಕೂತಿದ್ದೇನೆ ಎಂದು ರಾಮಾಚಾರಿ ಹೇಳ್ತಾನೆ.
ಚಾರುಗೆ ಶಾಶ್ವತವಾಗಿ ಕಣ್ಣು ಬರಲ್ಲ
ಇಲ್ಲಿ ಸಮಸ್ಯೆನಾ ಶಾಶ್ವತವಾಗಿರುವಾಗ, ಶಾಶ್ವತವಾದ ಪರಿಹಾರ ಹೇಗೆ ಸಿಗುತ್ತೆ ರಾಮಾಚಾರಿ ಎಂದು ಡಾಕ್ಟರ್ ಹೇಳುತ್ತಿದ್ದಾರೆ. ಚಾರು ಅವರಿಗೆ ಖಂಡಿತವಾಗಿ ಕಣ್ಣು ಬರಲ್ಲ. ನೀವು ಈ ವಿಷ್ಯನಾ ಚಾರು ಬಳಿ ಹೇಳಿ. ನನ್ನ ಸ್ನೇಹಿತ ಅಮೆರಿಕಾದಲ್ಲಿ ಇದಾರೆ. ಅವರ ಬಳಿ ಕೇಳಿ ಅವರು ಪರಿಹಾರ ಕೊಡಬಹುದು ಎಂದು ಡಾಕ್ಟರ್ ಹೇಳುತ್ತಾರೆ. ಅದನ್ನು ಕೇಳಿ ರಾಮಾಚಾರಿಗೆ ಸ್ವಲ್ಪ ಸಮಾಧಾನ ಆಗಿದೆ.
ಇದನ್ನೂ ಓದಿ: Ramachari: ಕಣ್ಣಿಲ್ಲದ ಚಾರುಗೆ ರಾಮಾಚಾರಿ ಬಗ್ಗೆ ನೂರಾರು ಕನಸು! ಆದರೆ ಮಾನ್ಯತಾ ಪ್ಲಾನ್ ಬೇರೇನೇ ಇದೆ!
ಕೋದಂಡ ಚಾರು ಕೊಲ್ತಾನಾ? ಚಾರು ಕಣ್ಣು ಬರುವುದೇ ಇಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ