ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ, ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಈ ವಿಷ್ಯವನ್ನು ರಾಮಾಚಾರಿ ಮನೆಯಲ್ಲಿ ತಾನೇ ಹೇಳಿದ್ದಾನೆ.
ರಾಮಾಚಾರಿ ಮನೆಯಲ್ಲಿ ಪೂಜೆ
ರಾಮಾಚಾರಿ ಮನೆಯಲ್ಲಿ ಬ್ರಹ್ಮಚಾರಿ ಪೂಜೆ ಇದೆ. ಅದನ್ನು ಮಾಡಲ್ಲ ಎಂದು ರಾಮಾಚಾರಿ ಹೇಳ್ತಾ ಇದ್ದಾನೆ. ಅದಕ್ಕೆ ಅಜ್ಜಿ ಏನ್ ಆಯ್ತು ನಿನಗೆ ಯಾಕೆ ಈ ರೀತಿ ಸುಮ್ಮನೆ ನಿಂತಿದ್ದೀಯಾ ಎಂದು ಕೇಳ್ತಾ ಇದ್ದಾರೆ. ಅದಕ್ಕೆ ರಾಮಾಚಾರಿ ಮಾತನಡಿದ್ರೆ ಏನ್ ಅನಾಹುತ ಆಗುತ್ತೋ ಅನ್ನೋ ಭಯ ಕಾಡ್ತಿದೆ. ಮತ್ತೆ ಸುಳ್ಳು ಹೇಳುತ್ತಾ ತಪ್ಪನ್ನು ಮಾಡ್ತಾ ಇರಬೇಕಾಗುತ್ತೆ. ಆಗಿದ್ದು ಆಗಲಿ ನಿಜ ಹೇಳ್ತೀನಿ ಎಂದು ರಾಮಾಚಾರಿ ಅಂದುಕೊಳ್ತಾ ಇದ್ದಾನೆ.
ಸಂಸ್ಕಾರ, ಸಂಪ್ರದಾಯ ಬದಲಾಗಲ್ಲ
ನಾನು ಬಂದಾಗಿನಿಂದ ನಿನ್ನ ಗಮನಿಸುತ್ತಿದ್ದೇನೆ. ನಿನ್ನಲ್ಲಿ ಅಸಾಧಾರಣವಾದ ಬದಲಾವಣೆ ಆಗಿದೆ. ಏಕೆ, ಏನು ಅಂತ ಗೊತ್ತಿಲ್ಲ. ಆದ್ರೂ ಇರದ ಬಗ್ಗೆ ನಾನು ಯಾವತ್ತೂ ಪ್ರಶ್ನೆಯನ್ನೂ ಮಾಡಿಲ್ಲ. ಒಂದು ಮಾತು ಹೇಳ್ತೀನಿ ತಿಳ್ಕೋ, ಪ್ರಪಂಚ ಎಷ್ಟೇ ಮುಂದುವರೆಯಬಹುದು, ಏನ್ ಬೇಕಾದ್ರೂ ಬದಲಾವಣೆ ಆಗಬಹುದು.
ಆದ್ರೆ ಈ ನಾರಾಯಣ ಆಚಾರ್ಯರ ಮನೆಯಲ್ಲಿ ಸಂಸ್ಕಾರ, ಸಂಪ್ರದಾಯ ಯಾವುತ್ತೂ ಬದಲಾಗಲ್ಲ. ಯಾವ ಅಪಚಾರ ನಡೆಯಲ್ಲ, ಅಪಾಚಾರ ಆಗೋದಕ್ಕೆ ನಾನು ಬಿಡುವುದೂ ಇಲ್ಲ ಎಂದು ನಾರಾಯಣ ಆಚಾರ್ಯರು ಹೇಳಿದ್ದಾರೆ. ಅದಕ್ಕೆ ರಾಮಾಚಾರಿ ಅಪಚಾರ ಆಗಬಾರದು ಎಂದೇ ನಾನು ಈ ಪೂಜೆ ಮಾಡಲ್ಲ ಎಂದು ಎಂದಿದ್ದು ಎಂದು ರಾಮಾಚಾರಿ ಹೇಳ್ತಾನೆ.
ನನಗೆ ಮದುವೆ ಆಗಿದೆ
ನಾನು ಈ ಸೇವೆ ಮಾಡೋ ಆಗಿಲ್ಲ ಎಂದು ರಾಮಾಚಾರಿ ಹೇಳ್ತಾನೆ. ಅದೇ ನಾವ್ ಕೇಳ್ತಾ ಇರೋದು ಏಕೆ ಮಾಡೋ ಆಗಿಲ್ಲ ಎಂದು ರಾಮಾಚಾರಿ ಅಪ್ಪ ಕೇಳ್ತಾರೆ. ಯಾಕಂದ್ರೆ ನನಗೆ ಮದುವೆ ಆಗಿದೆ ಎಂದು ರಾಮಾಚಾರಿ ಸತ್ಯ ಹೇಳಿದ್ದಾನೆ. ರಾಮಾಚಾರಿ ಮದುವೆ ಆಗಿದ್ದಾನೆ ಎಂಬ ಸತ್ಯ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಎಲ್ಲರಿಗೂ ಗಾಬರಿ ಆಗಿದೆ.
ಚಾರು ನೋಡಲು ಬಂದ ಗಂಡು
ಅತ್ತ ಚಾರು ನೋಡಲು ಗಂಡು ಬಂದಿದ್ದಾನೆ. ಎಲ್ಲರಿಗೂ ಒಪ್ಪಿಗೆ ಆಗಿದೆ. ಚಾರುಗೆ ನನ್ನ ಮದುವೆ ಆಗಿದೆ ಎಂದು ಸತ್ಯ ಹೇಳಲು ಆಗುತ್ತಿಲ್ಲ. ರಾಮಾಚಾರಿಯನ್ನು ಮದುವೆ ಆಗಿದ್ದೇನೆ ಎಂದು ಹೇಳಿದ್ರೆ, ಮಾನ್ಯತಾ ಸುಮ್ನೆ ಬಿಡಲ್ಲ. ರಾಮಾಚಾರಿ ಮನೆಯವರನ್ನು ಕೊಂಡು ಬಿಡ್ತಾರೆ ಅನ್ನುವ ಭಯ ಚಾರುಗೆ.
ಇದನ್ನೂ ಓದಿ: Bhagya Lakshmi: ಲಕ್ಷ್ಮಿ ಮೇಲೆ ವೈಷ್ಣವ್‍ಗೆ ಕೋಪ, ಮದುವೆ ನಿಲ್ಲಿಸಲು ಭಾಗ್ಯ ಬಳಿ ನಿಜ ಹೇಳ್ತಾನಾ?
ರಾಮಾಚಾರಿ ಸತ್ಯದಿಂದ ಮನೆಯಲ್ಲಿ ಅಶಾಂತಿ ಉಂಟಾಗುತ್ತಾ? ತಾನು ಯಾರನ್ನು ಮದುವೆ ಆಗಿದ್ದೀನಿ ಎಂದು ರಾಮಾಚಾರಿ ಹೇಳ್ತಾನಾ? ಚಾರು ಬೇರೆ ಮದುವೆ ಆಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ