ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಚಾರುಗೆ ಕಣ್ಣು ಹೋಗಿರುತ್ತೆ. ಅದು ರಾಮಾಚಾರಿಯಿಂದ. ಚಾರುಗೆ ಚಿಕ್ಕಮಗಳೂರಿನಲ್ಲಿ ಕಣ್ಣಿನ ಚಿಕಿತ್ಸೆ ಕೊಡಿಸಿರುತ್ತಾರೆ. ಆಕೆಗೆ ಕಣ್ಣು ಬರುತ್ತೆ. ಆದ್ರೆ ರಾಮಾಚಾರಿ ದೂರ ಆಗ್ತಾನೆ ಎಂದು ಕಣ್ಣು ಕಾಣಲ್ಲ. ನನಗೆ ದಿಕ್ಕು ಯಾರು ಎಂದು ಸಾಯೋಕೆ ಹೊರಟಿರುತ್ತಾಳೆ. ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ. ತಾಳಿ ಕಟ್ಟುತ್ತೇನೆ ಎಂದು ಹೇಳಿ ಮದುವೆ (Marriage) ಆಗಿರುತ್ತಾನೆ. ಮದುವೆ ಸತ್ಯವನ್ನು (Truth) ಹೇಳಲಾಗದೇ ರಾಮಾಚಾರಿ ಅಪ್ಪನ ಬಳಿ ಸುಳ್ಳು ಹೇಳಿದ್ದಾರೆ.
ಸತ್ಯವಂತ ರಾಮಾಚಾರಿ
ರಾಮಾಚಾರಿ ಚಾರು ಮದುವೆಗೂ ಮುಂಚೆ ಒಂದು ಸುಳ್ಳು ಸಹ ಹೇಳಿಲ್ಲ. ಅಪ್ಪ ಹಾಕಿದ ಗೆರೆ ದಾಟಿದವನು ಅಲ್ಲ. ತುಂಬಾ ಶಿಸ್ತಿನ ಮಗ. ಮನೆಯವರು ಅಂದ್ರೆ ಗೌರವ, ಪ್ರೀತಿ. ಆಚಾರ, ವಿಚಾರಗಳನ್ನು ಪಾಲಿಸುವ ಗುಣವಂತ. ಮನೆಯವರ ಒಳಿತಿಗಾಗಿ ಜೀವನ ಮೀಸಲಿಟ್ಟ ನಾಯಕ. ರಾಮಾಚಾರಿ ಸತ್ತರೂ ಸರಿಯೇ, ಸುಳ್ಳು ಹೇಳಲ್ಲ ಎಂದು ನಂಬಿದ್ದಾರೆ.
ಮನೆಯವರ ಕೈನಲ್ಲಿ ಪತ್ರ
ಚಾರು ಮತ್ತು ರಾಮಾಚಾರಿ ಮದುವೆ ಆಗಿದ್ದಾರೆ. ಆ ವಿಷ್ಯ ಹೇಳಲು ಆಗದೇ ಒದ್ದಾಡುತ್ತಿದ್ದಾರೆ. ಅಲ್ಲದೇ ರಾಮಾಚಾರಿ ದೇವರಿಗೆ ಒತ್ರ ಬರೆದಿರುತ್ತಾನೆ. ನಾನು ದೊಡ್ಡ ತಪ್ಪು ಮಾಡಿದ್ದೇನೆ. ಮನೆಯಲ್ಲಿ ಈ ವಿಷ್ಯ ಹೇಳೋಕೆ ಆಗ್ತಿಲ್ಲ. ನನ್ನನ್ನು ಕ್ಷಮಿಸು ಎಂದು ಪತ್ರ ಬರೆದು ದೇವರ ಹುಂಡಿಗೆ ಹಾಕಿರ್ತಾನೆ. ಅದು ಮನೆಯವರ ಕೈಗೆ ಸಿಕ್ಕಿದೆ. ಎಲ್ಲರೂ ಅದನ್ನು ನೋಡಿ ಗಾಬರಿ ಆಗಿದ್ದಾರೆ.
ಪತ್ರದ ಸತ್ಯ ಕೇಳಿದ ಅಪ್ಪ
ಪತ್ರವನ್ನು ಕೈಲಿ ಹಿಡಿದ ನಾರಾಯಣ ಆಚಾರ್ಯರು ಈ ಪತ್ರವನ್ನು ಯಾಕೆ ದೇವರಿಗೆ ಬರೆದೆ? ಮನೆಯಲ್ಲಿ ಇಷ್ಟು ಜನ ಇದ್ರೂ ಯಾರ ಬಳಿಯೂ ಸತ್ಯ ಹೇಳಲು ಆಗಲಿಲ್ವಾ? ಏನು ಅಂತ ತಪ್ಪು ಮಾಡಿದ್ದೀಯಾ ಎಂದು ಪ್ರಶ್ನೆ ಮಾಡ್ತಾ ಇದ್ದಾರೆ. ರಾಮಾಚಾರಿಗೆ ಸತ್ಯ ಹೇಳಲು ಸಂಕಟವಾಗುತ್ತಿದೆ. ಸತ್ಯ ಹೇಳಿದ್ರೆ ಮನೆಯವರು ಸಹಿಸಲ್ಲ ಎನ್ನುವ ಭಯ ಕಾಡ್ತಿದೆ.
ಅಪ್ಪನ ಬಳಿ ಸುಳ್ಳು ಹೇಳಿದ ರಾಮಾಚಾರಿ
ರಾಮಾಚಾರಿ ತಾನು ಚಾರುಳನ್ನು ಮದುವೆಯಾದ ವಿಚಾರವನ್ನು ಮುಚ್ಚಿಟ್ಟು ಸುಳ್ಳು ಹೇಳಿದ್ದಾನೆ. ಅಪ್ಪ ಮನೆಯವರ ಬಳಿ ಸುಳ್ಳು ಹೇಳಿ ಚಾರು ಮೇಡಂನ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಿದ್ದು ತಪ್ಪು ತಾನೇ. ಏನೇ ಆಗಲಿ ನಾನು ಸುಳ್ಳು ಹೇಳಬಾರದಿತ್ತು. ಅದು ನನ್ನನ್ನು ಕಾಡುತ್ತಿತ್ತು. ಅದಕ್ಕೆ ದೇವರಿಗೆ ತಪ್ಪು ಒಪ್ಪಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾನೆ. ಮನೆಯವರು ಅದನ್ನು ನಂಬಿದ್ದಾರೆ.
ರಾಮಾಚಾರಿ ಮೇಲೆ ಮತ್ತೆ ಗೌರವ
ನೀನು ಸುಳ್ಳು ಹೇಳಲ್ಲ ಅಂತ ಗೊತ್ತಿದ್ರೂ ನಿನ್ನ ಮೇಲೆ ಅನುಮಾನ ಪಟ್ಟೆವು. ಸತ್ಯವಂತ ಕಣೋ ನೀನು. ನಮ್ಮ ಎಷ್ಟು ಜನ್ಮದ ಪುಣ್ಯದ ಫಲವೂ, ಏನೋ ನಿನ್ನಂತಹ ಪಿತೃ ಪಾರಿಪಾಲಕ ಮಗ ಸಿಕ್ಕಿದ್ದು.
ನಿನ್ನ ವ್ಯಕ್ತಿತ್ವ ಅಟ್ಟದಲ್ಲಿ ಇದ್ರೆ, ಅದನ್ನು ನಾವು ನೆಲಕ್ಕೆ ಇಳಿಸಿ ನೋಡಿ ಬಿಟ್ಟೆವು. ನೀನು ನಮ್ಮ ಹೆಮ್ಮೆಯ ಮಗ ಕಣೋ. ಧರ್ಮ, ಸತ್ಯ, ನಿಷ್ಠೆಗೆ ಇನ್ನೊಂದು ಹೆಸರೇ ರಾಮಾಚಾರಿ ಎಂದು ಅವರಪ್ಪ ಹೇಳಿದ್ದಾನೆ. ಅದನ್ನು ಕೇಳಿ ರಾಮಾಚಾರಿಗೆ ಬೇಸರವಾಗಿದೆ.
ಇದನ್ನೂ ಓದಿ: Kangana Ranaut Birthday: ನಟಿ ಕಂಗನಾ ರಣಾವತ್ ಹುಟ್ಟುಹಬ್ಬ, ಬಾಲಿವುಡ್ ಕ್ವೀನ್ ಮುಂದಿನ ಚಿತ್ರಗಳು ಇವು!
ಮನೆಯವರ ಮುಂದೆ ಸುಳ್ಳು ಹೇಳಿ ಸಂಕಟ ಪಡುತ್ತಿರುವ ರಾಮಾಚಾರಿ. ಸತ್ಯ ಹೇಳೋ ಟೈಂ ಬರುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ