ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಅಪರ್ಣಾಗೆ ಆಪರೇಷನ್ ಮಾಡಿಸಲು ಹಣ ಇಲ್ಲದೇ ಆಕೆ ಸಾವನ್ನಪ್ಪುತ್ತಾಳೆ (Death). ಚಾರು ಮೋಸದಿಂದ, ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ತಮ್ಮ ಮನೆಯವರ ಸುದ್ದಿಗೆ ಬಂದ ಚಾರು ಮತ್ತು ಮಾನ್ಯತಾಗೆ ತನ್ನ ಬುದ್ಧಿವಂತಿಕೆಯಿಂದಲೇ ಪಾಠ ಕಲಿಸಲು ರಾಮಾಚಾರಿ ಮುಂದಾಗಿದ್ದಾನೆ. ಮಾನ್ಯತಾಳನ್ನು (Manyata) ಕೂಡಿ ಹಾಕಿ ಭಯಪಡಿಸುತ್ತಿದ್ದಾನೆ.
ಗೋಡೌನ್ ನಲ್ಲಿ ಬಂಧಿಯಾದ ಮಾನ್ಯತಾ
ರಾಮಾಚಾರಿ ಹೇಗಾದ್ರೂ ಮಾಡಿ ಮಾನ್ಯತಾ ಮತ್ತು ಚಾರುಗೆ ಬುದ್ಧಿ ಕಲಿಸಬೇಕು ಎಂದು ಮುಂದಾಗಿದ್ದಾನೆ. ಅದಕ್ಕೆ ತಕ್ಕಂತೆ ಎಲ್ಲಾ ಪ್ಲ್ಯಾನ್ ಮಾಡಿದ್ದಾನೆ. ಮಾನ್ಯತಾ ಕಾರು ಡ್ರೈವರ್ ಗೆ ಬೆದರಿಸಿ, ಮಾನ್ಯತಾಳನ್ನು ಗೋಡೌನ್ ಗೆ ಕರೆದುಕೊಂಡು ಬರುವಂತೆ ಮಾಡಿದ್ದಾನೆ. ಕಾರು ಡ್ರೈವರ್ ರಾಮಾಚಾರಿ ಹೇಳಿದ ಜಾಗಕ್ಕೆ ಮಾನ್ಯತಾಳನ್ನು ತಂದು ಬಿಟ್ಟಿದ್ದಾನೆ. ಗೋಡೌನ್ ನಲ್ಲಿ ಮಾನ್ಯತಾ ಲಾಕ್ ಆಗಿದ್ದಾಳೆ.
ಮರೆಯಲ್ಲಿ ನಿಂತು ರಾಮಾಚಾರಿ ಆಟ
ನಿಮಗೆ ದುಡ್ಡು ಬೇಕಾ? ಆಸ್ತಿ ಬೇಕಾ? ಏನ್ ಬೇಕಾದ್ರೂ ಕೇಳಿ ಕೊಡ್ತೀನಿ. ದಯವಿಟ್ಟು ಬಿಟ್ಟು ಬಿಡಿ ಎಂದು ಮಾನ್ಯತಾ ಕೇಳುತ್ತಿದ್ದಾಳೆ. ಮರೆಯಲ್ಲಿ ನಿಂತು ರಾಮಾಚಾರಿ ಮಾನ್ಯತಾಗೆ ಭಯಪಡಿಸುತ್ತಿದ್ದಾನೆ. ನಿಮ್ಮ ಕೋಟಿ ಕೋಟಿ ಹಣ ನಮ್ಮ ಮನೆಯಲ್ಲಿ ಹೋದ ಪ್ರಾಣ ವಾಪಸ್ ಕೊಡಲ್ಲ. ನಿನ್ನ ಪ್ರಾಣ ಬೇಕು ಎಂದು ಹೇಳುತ್ತಾನೆ.
ಇದನ್ನೂ ಓದಿ: Monsoon Raaga: ಓಟಿಟಿಯಲ್ಲಿ ಬರ್ತಿದೆ ಮಾನ್ಸೂನ್ ರಾಗಾ, ಡಾಲಿ-ರಚಿತಾ ಮೋಡಿ ನೋಡಿ
ಗನ್ ತೆಗೆದುಕೊಂಡು ಶೂಟ್ ಮಾಡಿಕೊಳ್ಳುವಂತೆ ಆರ್ಡರ್
ರಾಮಾಚಾರಿ ನಿನ್ನ ನಾನು ಸಾಯಿಸಬಾರದು ಎಂದ್ರೆ, ನೀನೇ ಸಾಯಬೇಕು ಎಂದು ಗನ್ ಕೊಟ್ಟಿದ್ದಾನೆ. ಮಾನ್ಯತಾ ಎಷ್ಟೋ ಕೇಳಿಕೊಂಡ್ರು ರಾಮಾಚಾರಿ ಬಿಡುತ್ತಿಲ್ಲ. ನೀನು ಈ ಕೂಡಲೇ ಶೂಟ್ ಮಾಡಿಕೋ ಎಂದು ಹೇಳುತ್ತಿದ್ದಾನೆ. ಅದನ್ನು ಕೇಳಿ ಮಾನ್ಯತಾ ತುಂಬಾ ಗಾಬರಿಯಾಗಿದ್ದಾಳೆ. ಬದುಕಲು ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದಾಳೆ.
ಚಾರುಗೆ ಕಾಲ್ ಮಾಡಿದ ಮಾನ್ಯತಾ
ಇನ್ನು ಮಾನ್ಯತಾ ಚಾರುಗೆ ಕಾಲ್ ಮಾಡಿ, ಬೇಗ ಬಾ ಬೇಬಿ, ನನ್ನ ಪ್ರಾಣ ಅಪಾಯದಲ್ಲಿ ಇದೆ. ನೀನು ಬಂದ್ರೆ ಮಾತ್ರ ನನ್ನ ಜೀವ ಉಳಿಯುತ್ತೆ ಎಂದು ಹೇಳಿದ್ದಾಳೆ. ಗಾಬರಿಗೊಂಡ ಚಾರು, ಅಮ್ಮ ಹೇಳಿದ ಜಾಗಕ್ಕೆ ಬರುತ್ತಿದ್ದಾಳೆ. ಏನಾಯ್ತು ಅಮ್ಮ? ಯಾರು ಈ ರೀತಿ ಮಾಡಿದ್ದು ಎಂದು ಕೇಳುತ್ತಿದ್ದಾಳೆ.
ಚಾರು ಮತ್ತು ಮಾನ್ಯತಾಗೆ ನರಕ ದರ್ಶನ
ರಾಮಾಚಾರಿ ಮನೆಯಲ್ಲಿ ಅಪರ್ಣಾ ಸಾವನ್ನಪ್ಪಿದಾಗಿನಿಂದ ತುಂಬಾ ಬೇಸರದಲ್ಲಿ ಇದ್ದಾರೆ. ನಮ್ಮ ಮನೆಯವರ ಸುದ್ದಿಗೆ ಬಂದವರನ್ನು ಸುಮ್ನೆ ಬಿಡಲ್ಲ. ಅವರಿಗೆ ಬುದ್ಧಿ ಕಲಿಸುತ್ತೇನೆ ಎಂದು ರಾಮಾಚಾರಿ ಪಣ ತೊಟ್ಟಿದ್ದಾನೆ. ಅವರಿಗೆ ಗೊತ್ತಾಗದ ರೀತಿ ಬುದ್ಧಿವಂತಿಕೆಯಿಂದ ಅವರಿಗೆ ಹೊಡೆತ ಕೊಡಬೇಕು ಎಂದುಕೊಂಡಿದ್ದಾನೆ. ಅದೇ ರೀತಿ ಎಲ್ಲವನ್ನೂ ಪ್ಲ್ಯಾನ್ ಮಾಡಿ ಮಾಡ್ತಾ ಇದ್ದಾನೆ.
ಇದನ್ನೂ ಓದಿ: Bigg Boss Sanya: ಸಾನ್ಯಾ ಐಯ್ಯರ್ ಮೇಲೆ ದೇವಿ ಬರ್ತಾಳಂತೆ! ನಟಿ ಹೇಳಿದ್ದೇನು?
ಮಾನ್ಯತಾ ಪ್ರಾಣ ಉಳಿಯುತ್ತಾ? ಬೆದರಿಸಿ ಸುಮ್ನೆ ಬಿಡ್ತಾನಾ ರಾಮಾಚಾರಿ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ