ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾಗೆ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇದೆ. ಅವಳನ್ನು ಮಾತನಾಡಿಸುವುದು ಇರಲಿ, ಅವರ ನೆರಳು ನಮ್ಮ ಮನೆ ಕಡೆ ಬೀಳಬಾರದು ಅಂತಿದ್ದಾರೆ, ಆದ್ರೆ ಮಾನ್ಯತಾ ಮತ್ತು ಚಾರುಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ತಮ್ಮ ಮನೆಯವರ ಸುದ್ದಿಗೆ ಬಂದವರಿಗೆ ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದುಕೊಳ್ಳುತ್ತಿದ್ದಾನೆ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ (Love)ಆಗಿದೆ. ರಾಮಾಚಾರಿ ಬಳಿ ಹೋಗಿ ಲವ್ ಪ್ರಪೋಸ್ ಮಾಡಿದ್ದಾಳೆ. ಅವನು ಒಪ್ಪದಿದ್ದಕ್ಕೆ ಹಿಂದೆ ಹಿಂದೆ ಹೋಗಿ ಹಿಂದೆ ನೀಡುತ್ತಿದ್ದಾಳೆ.
ನಾನು-ನೀನು ಜೊತೆಯಾಗಲು ಸಾಧ್ಯವಿಲ್ಲ
ಚಾರು ಆಫೀಸ್ ನಲ್ಲಿ ರಾಮಾಚಾರಿ ಟೇಬಲ್ ಮೇಲೆ ಇಬ್ಬರು ಜೊತೆಗಿರುವ ಫೋಟೋ ಇಟ್ಟಿರುತ್ತಾಳೆ. ಇಟ್ಟುಕೊಂಡು ರಾಮಾಚಾರಿ ಬಂದು ಆ ಫೋಟೋವನ್ನು ಒಡೆದು, ಹರಿದು ಹಾಕಿ, ಈ ಫೋಟೋ ಯಾವತ್ತೂ ಜೋಡಿಸೋಕೆ ಆಗಲ್ಲ. ಅದೇ ರೀತಿ ನಾನು-ನೀನು ಜೊತೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅದನ್ನು ಕೇಳಿ ಚಾರು ಬೇಸರ ಮಾಡಿಕೊಂಡಿದ್ದಾಳೆ.
ರಾಮಾಚಾರಿ ಮನವೊಲಿಸಲು ಪ್ರಯತ್ನ
ರಾಮಾಚಾರಿ ದೇವಸ್ಥಾನದಲ್ಲಿ ಇದ್ರೆ, ಅಲ್ಲಿಗೆ ಚಾರು ಬಂದು ಅವನ ಹಿಂದೆ ಓಡಾಡ್ತಾ ಇದ್ದಾಳೆ. ಗಂಡ ಎಲ್ಲಿ ಇರ್ತಾನೋ ಅಲ್ಲೇ ಹೆಂಡ್ತಿ ಇರಬೇಕು. ಅದೇ ಸತಿ ಧರ್ಮ. ನಿನಗೆ ಖುಷಿ ಆಗ್ತಾ ಇಲ್ವಾ ರಾಮಾಚಾರಿ, ನಾನು ಮಾತಾಡ್ತಾನೇ ಇದೀನಿ. ಹಾಯ್ ಅಂತ ಆದ್ರೂ ಹೇಳು. ಮಾತಾಡು ರಾಮಾಚಾರಿ, ನಾನು ಈಗ ಮೊದಲಿನಿ ರೀತಿ ಇಲ್ಲ. ತುಂಬಾ ಬದಲಾಗಿದ್ದೇನೆ ನನ್ನ ನಂಬು ಎಂದು ರಾಮಾಚಾರಿ ಬಳಿ ಚಾರು ಹೇಳುತ್ತಿದ್ದಾಳೆ.
ಇದನ್ನೂ ಓದಿ: Bhagya Lakshmi: ತಾಂಡವ್ ಮಾಡಿದ ತಪ್ಪು ಭಾಗ್ಯ ಮೇಲೆ, ಬೇಡಿಕೊಂಡ್ರು ನಂಬದ ಅತ್ತೆ!
ನನ್ನಲ್ಲಿ ಅಂದ ಇಲ್ವಾ? ಚೆಂದ ಇಲ್ವಾ?
ನನಗೆ ನೀನು ಬೇಕು ರಾಮಾಚಾರಿ. ನಿನ್ನ ಪ್ರೀತಿ ಬೇಕು. ನನ್ನ ಅರ್ಥ ಮಾಡ್ಕೋ. ಚಾರು ಎಷ್ಟೇ ಕೇಳಿಕೊಂಡ್ರು ರಾಮಾಚಾರಿ ಮಾತನಾಡಲ್ಲ. ನಾನು ಇಷ್ಟು ಕೂಗಿ ಮಾತನಾಡ್ತಾ ಇದ್ರೂ, ಹಾಗೇ ಹೋಗ್ತಿಯಲ್ಲ. ನಾನು ತಿರುಗಿ ನೋಡದೇ ಇರುಷ್ಟು ಕೆಟ್ಟದಾಗಿ ಇದ್ದೀನಾ? ನನಗೇನು ಅಂದ ಇಲ್ವಾ? ಚೆಂದ ಇಲ್ವಾ? ನನ್ನಲ್ಲಿ ಏನ್ ಕಮ್ಮಿ ಇದೆ ಹೇಳು. ಮಾತನಾಡು ರಾಮಾಚಾರಿ ಎಂದು ಚಾರು ಬೇಡಿಕೊಳ್ಳುತ್ತಿದ್ದಾರೆ.
ದೇವಸ್ಥಾನದಲ್ಲಿ ಅಸಭ್ಯ ವರ್ತನೆ
ರಾಮಾಚಾರಿ ಮಾತನಾಡದೇ ಇದ್ದಿದ್ದಕ್ಕೆ, ಚಾರು ತನ್ನ ಹಾಕಿಕೊಂಡಿದ್ದ ಜಾಕೆಟ್ ತೆಗೆದು, ಭಕ್ತರನ್ನು ಬನ್ನಿ ಇಲ್ಲಿ ಎಂದು ಸೇರಿಸುತ್ತಾಳೆ. ನಾನು ನೋಡೋಕೆ ಚೆನ್ನಾಗಿಲ್ವಾ ಎಂದು ಕೇಳ್ತಾಳೆ. ಅಲ್ಲಿ ಇರೋರು ಸೂಪರ್, ಗೊಂಬೆ ರೀತಿ ಇದ್ದೀರಿ ಎನ್ನುತ್ತಾನೆ. ನಾನು ಯಾರಿಗಾದ್ರೂ ಇಷ್ಟ ಆಗಿದ್ದೀನಾ, ಯಾರಾದ್ರೂ ನನ್ನ ಲವ್ ಮಾಡ್ತೀರಾ ಎಂದು ಕೇಳ್ತಾಳೆ. ಅಲ್ಲಿದ್ದ ಒಬ್ಬ ನನಗೆ ನೀವು ಇಷ್ಟ ಆದ್ರಿ. ನಿಮ್ಮಂಥಾ ಹುಡುಗಿ ಮದುವೆ ಆಗಲು ಪುಣ್ಯ ಬೇಕು ಅಂತಾನೆ.
ಚಾರು ಕಪಾಳಕ್ಕೆ ಹೊಡೆದ ರಾಮಾಚಾರಿ!
ನನಗಾಗಿ ಜನ ಸಾಯ್ತಾರೆ. ಹಿಂದೆ, ಮುಂದೆ ನೋಡದೇ ಲವ್ ಮಾಡ್ತಾರೆ. ಸರಿಯಾಗಿ ನೋಡು ರಾಮಾಚಾರಿ. ನನ್ನಲ್ಲಿ ಏನ್ ಕಮ್ಮಿ ಆಗಿದೆ ಹೇಳು ರಾಮಾಚಾರಿ ಅಂತಾಳೆ. ಅದಕ್ಕೆ ಕೋಪಗೊಂಡ ರಾಮಾಚಾರಿ, ಆಕೆಗೆ ಜಾಕೇಟ್ ಕೊಟ್ಟು, ಕಪಾಳಕ್ಕೆ ಬಾರಿಸುತ್ತಾನೆ. ದೇವಸ್ಥಾನದಲ್ಲಿ ಈ ರೀತಿ ಮಾಡಬೇಡಿ ಎಂದು ಎಚ್ಚರಿಕೆ ನೀಡ್ತಾನೆ.
ಇದನ್ನೂ ಓದಿ: Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?
ಚಾರುಗೆ ರಾಮಾಚಾರಿ ಪ್ರೀತಿ ಸಿಗಲ್ವಾ? ರಾಮಾಚಾರಿ ಮನಸ್ಸು ಕರಗೋದೇ ಇಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ