ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಅಪರ್ಣಾಗೆ ಆಪರೇಷನ್ ಮಾಡಿಸಲು ಹಣ ಇಲ್ಲದೇ ಆಕೆ ಸಾವನ್ನಪ್ಪುತ್ತಾಳೆ. ಚಾರು ಮೋಸದಿಂದ, ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ತಮ್ಮ ಮನೆಯವರ ಸುದ್ದಿಗೆ ಬಂದ ಚಾರು ಮತ್ತು ಮಾನ್ಯತಾ ಗೆ ತನ್ನ ಬುದ್ಧಿವಂತಿಕೆಯಿಂದಲೇ ಪಾಠ ಕಲಿಸಲು ರಾಮಾಚಾರಿ ಮುಂದಾಗಿದ್ದಾನೆ. ಆದ್ರೆ ಚಾರು ರಾಮಾಚಾರಿ ಬಳಿ ಹೋಗಿ ಲವ್ ಪ್ರಪೋಸ್ ಮಾಡಿದ್ದಾಳೆ. ನಾನು, ನೀನು ಜೊತೆಯಾಗಲು ಸಾಧ್ಯವೇ ಇಲ್ಲ ಎಂದ ರಾಮಾಚಾರಿ ಹೇಳಿದ್ದಾನೆ.
ರಾಮಾಚಾರಿಗೆ ಚಾರು ಪ್ರಪೋಸ್
ರಾಮಾಚಾರಿ ಆಫೀಸ್ ನಲ್ಲಿ ಕೆಲಸ ಮಾಡ್ತಾ ಇರ್ತಾರೆ. ಆಗ ಚಾರು ತಾನು ಮಾತನಾಡಬೇಕು ಎನ್ನುತ್ತಾಳೆ. ಮೊದಲು ರಾಮಾಚಾರಿ ಬೇಡ ಅಂದ. ಆದ್ರೂ ಚಾರು ಬಿಡದೇ ಮಾತನಾಡುತ್ತಿದ್ದಾಳೆ. ಐ ಲವ್ ಯು ರಾಮಾಚಾರಿ. ಅವತ್ತು ನಿನಗೆ ಪ್ರಪೋಸ್ ಮಾಡೋಕೆ ಎಲ್ಲಾ ರೆಡಿ ಮಾಡಿದ್ದೆ. ಆದ್ರೆ ಅವತ್ತು ಅಲ್ಲಿ ಆಗಿದ್ದೇ ಬೇರೆ. ನೀನು ಏನೂ ಕೇಳಿಸಿಕೊಳ್ಳದೇ ಹೋಗಿ ಬಿಟ್ಟೆ ಎಂದು ಚಾರು ಹೇಳ್ತಾಳೆ.
ರಾಮಾಚಾರಿಗೆ ಕೋಪ
ಚಾರು ಹೇಳಿದ್ದನ್ನು ಕೇಳಿ, ರಾಮಾಚಾರಿ ಸಾಕು ನಿಲ್ಲಿಸಿ, ಪ್ರೀತಿ ಅಂತೆ. ಪ್ರೀತಿ ಅರ್ಥ ಗೊತ್ತಾ ನಿಮಗೆ? ಸ್ವಾರ್ಥಿಗಳು ನೀವು. ಆ ಕ್ಷಣಕ್ಕೆ ಬಣ್ಣ ಬದಲಾಯಿಸುತ್ತೀರಿ. ಸುಮ್ಮನೇ ಬದಲಾಗಿದ್ದೀನಿ ಎಂದು ಸುಳ್ಳು ಹೇಳಬೇಡಿ. ನೀವು ಬದಲಾಗುವುದು ನಿಮ್ಮ ಸ್ವಾರ್ಥಕ್ಕೆ. ನಿಮಗೆ ಯಾರ ಮಾತಾದ್ರೂ ಕೇಳಬೇಕು ಅಂದ್ರೆ ನಿಮ್ಮ ಪ್ರತಿಷ್ಠೆ, ಅಹಂಕಾರ ಅಡ್ಡ ಬರುತ್ತೆ. ಹೇಗೆ ಸಂಸಾರ ಮಾಡ್ತೀರಿ ಎಂದು ರಾಮಾಚಾರಿ ಪ್ರಶ್ನೆ ಮಾಡಿದ್ದಾನೆ.
ಇದನ್ನೂ ಓದಿ: Lakshana: ನಕ್ಷತ್ರಾ ಒಳ್ಳೆತನ ನೋಡಿ ಕರಗಿದ ಮೌರ್ಯ! ಕೊಲ್ಲೋ ನಿರ್ಧಾರ ಕೈಬಿಟ್ಟನಾ ಕೊಲೆಗಾರ?
ನಾನು-ನೀನು ಜೊತೆಯಾಗಲು ಸಾಧ್ಯವಿಲ್ಲ
ಚಾರು ಆಫೀಸ್ ನಲ್ಲಿ ರಾಮಾಚಾರಿ ಫೋಟೋ ಇಟ್ಟುಕೊಂಡು ಅದನ್ನು ನೋಡುತ್ತಾ ಕೂತಿರುತ್ತಾಳೆ. ಆಗ ರಾಮಾಚಾರಿ ಅಲ್ಲಿಗೆ ಬಂದು, ಆ ಫೋಟೋವನ್ನು ಒಡೆದು ಹಾಕಿ, ಈ ಫೋಟೋ ಯಾವತ್ತೂ ಜೋಡಣೆ ಆಗಲ್ಲ. ಅದೇ ರೀತಿ ನಾನು-ನೀನು ಜೊತೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅದನ್ನು ಕೇಳಿ ಚಾರು ಬೇಸರ ಮಾಡಿಕೊಂಡಿದ್ದಾಳೆ.
ಅನಾಮಿಕಳ ಹೆಸರಲ್ಲಿ ರಾಮಾಚಾರಿ ಸ್ನೇಹ
ರಾಮಾಚಾರಿ, ಚಾರುಳ ಜೊತೆ ಮಾತನಾಡುತ್ತಿಲ್ಲ. ಅದಕ್ಕೆ ಬೇರೆ ಸಿಮ್ ಮೂಲಕ ಚಾರು ರಾಮಾಚಾರಿ ಸ್ನೇಹ ಮಾಡ್ತಾ ಇದ್ದಾಳೆ. ಅನಾಮಿಕಾಳ ಹೆಸರಲ್ಲಿ ಕಾಲ್ ಮಾಡಿ ರಾಮಾಚಾರಿ ಬಳಿ ಮಾತನಾಡುತ್ತಿದ್ದಾಳೆ. ರಾಮಾಚಾರಿ ಚಾರು ಎಂದು ಗೊತ್ತಿಲ್ಲದೇ, ಅವಳಿಗೆ ಮತ್ತೆ ಬುದ್ಧಿ ಮಾತು ಹೇಳಿದ್ದಾನೆ. ಅದನ್ನು ಕೇಳಿ ಮತ್ತೆ ಚಾರುಗೆ ರಾಮಾಚಾರಿ ಮೇಲೆ ಪ್ರೀತಿ ಹೆಚ್ಚಾಗಿದೆ.
ಇದನ್ನೂ ಓದಿ: Kannadathi: ಸಂಭ್ರಮದಲ್ಲಿದ್ದ ಹರ್ಷನ ಕೈಯಲ್ಲಿ ಡಿವೋರ್ಸ್ ಪೇಪರ್, ಮುಂದಿದೆಯಾ ಬಿಗ್ ಟ್ವಿಸ್ಟ್?
ರಾಮಾಚಾರಿ ಮನೆಯಲ್ಲಿ ಅಪರ್ಣಾ ಸಾವನ್ನಪ್ಪಿದಾಗಿನಿಂದ ತುಂಬಾ ಬೇಸರದಲ್ಲಿ ಇದ್ದಾರೆ. ನಮ್ಮ ಮನೆಯವರ ಸುದ್ದಿಗೆ ಬಂದವರನ್ನು ಸುಮ್ನೆ ಬಿಡಲ್ಲ. ಅವರಿಗೆ ಬುದ್ಧಿ ಕಲಿಸುತ್ತೇನೆ ಎಂದು ರಾಮಾಚಾರಿ ಪಣ ತೊಟ್ಟಿದ್ದಾನೆ. ಅವರಿಗೆ ಗೊತ್ತಾಗದ ರೀತಿ ಬುದ್ಧಿವಂತಿಕೆಯಿಂದ ಅವರಿಗೆ ಹೊಡೆತ ಕೊಡಬೇಕು ಎಂದುಕೊಂಡಿದ್ದಾನೆ. ಅದೇ ರೀತಿ ಎಲ್ಲವನ್ನೂ ಪ್ಲ್ಯಾನ್ ಮಾಡಿ ಮಾಡ್ತಾ ಇದ್ದಾನೆ. ಚಾರು ಮತ್ತು ಮಾನ್ಯತಾ ಕಂಡ್ರೆ ರಾಮಾಚಾರಿಗೆ ಆಗಲ್ಲ
ರಾಮಾಚಾರಿಗೆ ಚಾರು ಮೇಲೆ ಪ್ರೀತಿ ಹುಟ್ಟಲ್ವಾ? ರಾಮಾಚಾರಿ ಪ್ರೀತಿ ಪಡೆಯಲು ಚಾರು ಒದ್ದಾಟ. ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ