ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾಗೆ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇದೆ. ಅವಳನ್ನು ಮಾತನಾಡಿಸುವುದು ಇರಲಿ, ಅವರ ನೆರಳು ನಮ್ಮ ಮನೆ ಕಡೆ ಬೀಳಬಾರದು ಅಂತಿದ್ದಾರೆ, ಆದ್ರೆ ಮಾನ್ಯತಾ ಮತ್ತು ಚಾರುಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ತಮ್ಮ ಮನೆಯವರ ಸುದ್ದಿಗೆ ಬಂದವರಿಗೆ ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದುಕೊಳ್ಳುತ್ತಿದ್ದಾನೆ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ. ರಾಮಾಚಾರಿ ಮಾಡಿದ ಎಡವಟ್ಟಿನಿಂದ ಚಾರು ಕಣ್ಣ ಕಳೆದುಕೊಂಡಿದ್ದಾಳೆ. ರಾಮಾಚಾರಿ ಕಣ್ಣೀರು (Crying) ಹಾಕಿದ್ದಾನೆ.
ಚಾರು ತಳ್ಳಿದ ರಾಮಾಚಾರಿ
ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ಈ ರೀತಿ ನಡೆದುಕೊಂಡಿದ್ದಾಳೆ. ಅದಕ್ಕೆ ಕೋಪ ಮಾಡಿಕೊಂಡ ರಾಮಾಚಾರಿ, ತಬ್ಬಿಕೊಂಡಿದ್ದ ಚಾರುಳನ್ನು ತಳ್ಳಿದ್ದಾನೆ. ಆಗ ಆಕೆ ಬಿದ್ದು, ಕೆಮಿಕಲ್ ಇರುವ ಬಾಟೆಲ್ ಹೊಡೆದು ಹೋಗುತ್ತವೆ. ಕೆಮಿಕಲ್ ಹೊಗೆ ಆವರಿಸಿಕೊಂಡು, ಚಾರುಗೆ ಕಣ್ಣು ಬಿಡಲು ಆಗಲ್ಲ.
ಶಾಶ್ವತವಾಗಿ ಕಣ್ಣು ಕಳೆದುಕೊಂಡು ಚಾರು
ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿದ ಡಾಕ್ಟರ್, ಸ್ಟ್ರಾಂಗ್ ಆಗಿರುವ ಕೆಮಿಕಲ್ ಬಿದ್ದು ಕಣ್ಣು ಕಳೆದುಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಚಾರುಗೆ ಜೀವನ ಪೂರ್ತಿ ಕಣ್ಣ ಬರಲ್ಲ. ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಆದ್ರೆ ಚಾರು ಬಳಿ ಒಂದು ವಾರ ಮಾತ್ರ. ಆಮೇಲೆ ಸರಿ ಹೋಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada: ಆರ್ಯವರ್ಧನ್ ಗುರೂಜಿ ಮನೆಗೆ ರೂಪೇಶ್ ಶೆಟ್ಟಿ ಭೇಟಿ, ಇದು ಅಪ್ಪ-ಮಗನ ಬಾಂಧವ್ಯ!
ಡಾಕ್ಟರ್ ಗೆ ಕೈ ಮುಗಿದ ರಾಮಾಚಾರಿ
ನನಗೆ ಆಗಬಾರದು ಆಗಿಲ್ಲ. ಒಂದು ವಾರ ನನ್ನ ಕಣ್ಣಿಗೆ ರಜೆ ಕೊಟ್ಟಿದ್ದೀನಿ ಅಷ್ಟೆ. ದಿನ ಡ್ರಾಪ್ಸ್ ಹಾಕಿದ್ರೆ, ಇನ್ನೊಂದು ವೀಕ್ ನಲ್ಲಿ ಕಣ್ಣು ಕಾಣಿಸುತ್ತೆ ಎಂದು ಚಾರು ಹೇಳ್ತಾಳೆ. ಆಕೆಗೆ ಶಾಶ್ವತವಾಗಿ ಕಣ್ಣು ಹೋಗಿರುವುದು ಗೊತ್ತಿಲ್ಲ. ಅಷ್ಟರಲ್ಲಿ ಡಾಕ್ಟರ್ ಯಾರು ಹೇಳಿದ್ದು ಎಂದು ಹೇಳ್ತಾರೆ. ಆಗ ರಾಮಾಚಾರಿ ಡಾಕ್ಟರ್ ಗೆ ಕೈ ಮುಗಿದು ಬೇಡಿಕೊಳ್ತಾನೆ. ಸತ್ಯ ಹೇಳಬೇಡಿ ಎಂದು. ಡಾಕ್ಟರ್ ಸುಮ್ಮನೇ ಹೋಗ್ತಾರೆ.
ಕಾಲಿಡಿದು, ಕಣ್ಣೀರು ಹಾಕಿದ ರಾಮಾಚಾರಿ
ಕಣ್ಣು ಹೋಗಿದ್ರೂ ಏನಂತೆ. ನೀನು ನನ್ನ ಪಕ್ಕದಲ್ಲಿ ಕೂತಿದ್ರೆ, ಅದೇ ನನಗೆ ಖುಷಿ. ನೀನು ನನಗೆ ಬೈಯೋದು. ನಾನು ನಿನ್ನ ಹಿಂದೆ ಬರೋದು ಎಲ್ಲ ಇದ್ದಿದ್ದೆ ಎನ್ನುತ್ತಾಳೆ ಚಾರು. ಚಾರು ಕಾಲಿಡಿದು ರಾಮಾಚಾರಿ ಕಣ್ಣೀರು ಹಾಕುತ್ತಾ ಕ್ಷಮೆ ಕೇಳಿದ್ದಾನೆ. ನಿಮ್ಮನ್ನು ಕ್ಷಮೆ ಕೇಳೋ ಧೈರ್ಯನೂ ಇಲ್ಲ. ಯಾಕ್ ಅಳ್ತಾ ಇದೀಯಾ? ನನಗೆ ಒಂದು ವಾರ ಮಾತ್ರ ಕಣ್ಣು ಹೋಗಿರುವುದು. ಶಾಶ್ವತವಾಗಿ ಅಲ್ಲ ಎಂದು ಚಾರು ರಾಮಾಚಾರಿಯನ್ನು ಸಮಾಧಾನ ಮಾಡ್ತಾಳೆ.
ಒಂದು ವಾರ ಕಣ್ಣಾಗಿ ಇರ್ತಿಯಾ?
ನಿನಗೆ ನನ್ನ ಕಣ್ಣು ಕಳೆದೇ, ಅನ್ನೋ ಚಿಂತೆ ಇದ್ರೆ, ನಾನು ಒಂದು ಶಿಕ್ಷೆ ಕೊಡ್ತೀನಿ. ನನಗೆ ಒಂದು ವಾರ ಕಣ್ಣಾಗಿ ಇರ್ತಿಯಾ ಎಂದು ಚಾರು ಕೇಳಿದ್ದಾಳೆ. ಸತ್ಯ ಗೊತ್ತಿರೋ ರಾಮಾಚಾರಿ ಕಣ್ಣೀರು ಹಾಕುತ್ತಾ ಕೂತಿದ್ದಾನೆ. ನೀನು ನನ್ನ ಜೊತೆ ಇರ್ತಿನಿ ಅಂದ್ರೆ, ಇನ್ನೊಂದು ವಾರ ಬೇಕಾದ್ರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಇರ್ತೇನೆ ಎಂದು ಚಾರು ಹೇಳಿದ್ದಾಳೆ.
ಇದನ್ನೂ ಓದಿ: Kantara Movie: ಮನೆಯಲ್ಲೇ ಕುಳಿತು ಟಿವಿಯಲ್ಲಿ ನೋಡಿ ಕಾಂತಾರ, ಸ್ಟಾರ್ ಸುವರ್ಣದಲ್ಲಿ ದೈವ ದರ್ಶನ!
ಚಾರುಗೆ ಕಣ್ಣು ಬರೋದೇ ಇಲ್ವಾ? ರಾಮಾಚಾರಿ ಕಣ್ಣಾಗಿ ಇರ್ತಾನಾ? ಈ ಸುದ್ದಿ ಗೊತ್ತಾದ್ರೆ ಮಾನ್ಯತಾ ಏನ್ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ