Rithvik Krupakar: ಪ್ರೊಡಕ್ಷನ್ ಹೌಸ್ ಓನರ್​ ಅಂತೆ ಈ ನಟ - ತೆರೆ ಮೇಲಿನ ರಾಮಾಚಾರಿಯ ಕಥೆ ಇದು

ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ವಿಭಿನ್ನವಾಗಿ ಅದ್ದೂರಿ ಮೇಕಿಂಗ್‌ನೊಂದಿಗೆ ಪ್ರಸಾರ ಆಗುತ್ತಿರುವ 'ರಾಮಾಚಾರಿ' ಧಾರಾವಾಹಿಯಲ್ಲಿ ಪೌರೋಹಿತ್ಯ ಮಾಡುವ ಹುಡುಗ ಹೈಲೇಟ್ ಎನ್ನೋದು ವಿಶೇಷ.

ರಿತ್ವಿಕ್ ಕೃಪಾಕರ್

ರಿತ್ವಿಕ್ ಕೃಪಾಕರ್

  • Share this:
    ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ವಿಭಿನ್ನವಾಗಿ ಅದ್ದೂರಿ ಮೇಕಿಂಗ್‌ನೊಂದಿಗೆ ಪ್ರಸಾರ ಆಗುತ್ತಿರುವ 'ರಾಮಾಚಾರಿ' (Ramachari) ಧಾರಾವಾಹಿಯಲ್ಲಿ ಪೌರೋಹಿತ್ಯ ಮಾಡುವ ಹುಡುಗ ಹೈಲೇಟ್ ಎನ್ನೋದು ವಿಶೇಷ. ಮಹಿಳಾ ಪ್ರಧಾನ ಧಾರಾವಾಹಿಗಳ ಮಧ್ಯೆ ರಾಮಾಚಾರಿ ಎನ್ನುವ ಹುಡುಗನ ಕಥೆಯನ್ನು ಹೈಲೈಟ್ ಮಾಡಿ ತೋರಿಸಲಾಗಿದೆ. ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿಯಲ್ಲಿ ರಾಮಾಚಾರಿ ಪಾತ್ರಕ್ಕೆ ರಿತ್ವಿಕ್‌ ಕೃಪಾಕರ್ (Rithvik Krupakar) ಅವರು ಬಣ್ಣ ಹಚ್ಚಿದ್ದಾರೆ. ‘ರಾಮಾಚಾರಿ’ ಧಾರಾವಾಹಿಯ ನಾಯಕನ ಪಾತ್ರದ ಮೂಲಕ ಗುರುತಿಸಿಕೊಂಡಿರುವ  ರಿತ್ವಿಕ್‌ ರಂಗಭೂಮಿ ಯಿಂದ ಕಿರುತೆರೆ (Small Screen) ಯವರೆಗೆ ಹೆಜ್ಜೆ ಹಾಕಿದ ಬಹುಮುಖ ಪ್ರತಿಭೆ. 

    ರಾಮಾಚಾರಿ ಕಿರುತೆರೆ ಲೋಕದಲ್ಲಿ ವಿಭಿನ್ನವಾಗಿ ಅದ್ದೂರಿ ಮೇಕಿಂಗ್‌

    ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ವಿಭಿನ್ನವಾಗಿ ಅದ್ದೂರಿ ಮೇಕಿಂಗ್‌ನೊಂದಿಗೆ ಪ್ರಸಾರ ಆಗುತ್ತಿರುವ 'ರಾಮಾಚಾರಿ' ಧಾರಾವಾಹಿಯಲ್ಲಿ ಪೌರೋಹಿತ್ಯ ಮಾಡುವ ಹುಡುಗ ಹೈಲೇಟ್ ಎನ್ನೋದು ವಿಶೇಷ. ಮಹಿಳಾ ಪ್ರಧಾನ ಧಾರಾವಾಹಿಗಳ ಮಧ್ಯೆ ರಾಮಾಚಾರಿ ಎನ್ನುವ ಹುಡುಗನ ಕಥೆಯನ್ನು ಹೈಲೈಟ್ ಮಾಡಿ ತೋರಿಸಲಾಗಿದೆ. ಚಾರು ಸೊಕ್ಕನ್ನು ರಾಮಾಚಾರಿ ಹೇಗೆ ಮುರಿಯುತ್ತಾನೆ? ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟತ್ತಾ? ಕುಟುಂಬದ ಗೌರವವನ್ನು ಆತ ಹೇಗೆ ಉಳಿಸುತ್ತಾನೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

    ಇದನ್ನೂ ಓದಿ: Doresani: ಕುತೂಹಲ ಘಟ್ಟ ತಲುಪಿದ ದೊರೆಸಾನಿ ಸೀರಿಯಲ್, ನಡೆಯುತ್ತಾ ಆನಂದ್ - ದೀಪಿಕಾ ಮದುವೆ?

    ಶಂಕರ್ ಅಶ್ವತ್ಥ್, ರಿತ್ವಿಕ್, ಜಹಾಂಗೀರ್, ಅಂಜಲಿ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ ಈ ಧಾರಾವಾಹಿಯ ಸಂಭಾಷಣೆ, ಚಿತ್ರಕಥೆ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ.

    ಶ್ಲೋಕ ಮಂತ್ರಗಳನ್ನು ಹೇಳುವ ಸವಾಲು

    ಇಡೀ ಪಾತ್ರದುದ್ದಕ್ಕೂ ನಟ ಋತ್ವಿಕ್ ಸಾಂಪ್ರದಾಯಿಕ ಆಚಾರ-ವಿಚಾರಗಳನ್ನು ಅನುಸರಿಸಿಕೊಂಡು ನಟನೆ ಮಾಡಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಶ್ಲೋಕ ಮಂತ್ರಗಳನ್ನು ಹೇಳುವ ಮೂಲಕ ಸಂಭಾಷಣೆಯ ಜೊತೆಗೆ ಶ್ಲೋಕವನ್ನು ಅಭ್ಯಾಸ ಮಾಡುವ ಸವಾಲು ಇವರಿಗಿದೆ. ತನ್ನ ಉತ್ತಮ ಪಾತ್ರದಿಂದ ಪ್ರಭಾವಿತನಾಗಿ ಇವರು ಮಾಂಸಹಾರವನ್ನು ತ್ಯಜಿಸಿರುವುದು ಇನ್ನೂ‌ ವಿಶೇಷ.

    ರಂಗಭೂಮಿ ಹಿನ್ನೆಲೆಯಿಂದ ಬಂದ  ರಿತ್ವಿಕ್

    ಬಾಲ್ಯದಿಂದಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಇವರು ವೇದಿಕೆಯಲ್ಲಿ ನಟನೆ ಪ್ರದರ್ಶನ ನೀಡುತ್ತಾ ತಮ್ಮ ನಟನಾ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ಎನ್ನುತ್ತಾರೆ. ರಿಥ್ವಿಕ್ ಕೃಪಾಕರ್ ಅವರು ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ನಟನ ರಂಗಶಾಲೆ ಮೈಸೂರಿನಲ್ಲಿ ರಂಗಭೂಮಿ ಕಲಾವಿದರಾಗಿ ವೃತ್ತಿ ಜೀವನ ಆರಂಭಿಸಿದರು. ಅವರು 200 ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳನ್ನು ಮಾಡಿದ್ದಾರೆ.

    ಇದನ್ನೂ ಓದಿ: Hitler Kalyana: 200 ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ‌ ಹಿಟ್ಲರ್ ಕಲ್ಯಾಣ

    ಮಸ್ತಾಂಗ್ ಪ್ರೊಡಕ್ಷನ್ಸ್ ಹೆಸರಿನ ನಿರ್ಮಾಣ ಸಂಸ್ಥೆಯ ಮಾಲೀಕ

    ರಿಥ್ವಿಕ್ ರಾಯಲ್ ಮಸ್ತಾಂಗ್ ಪ್ರೊಡಕ್ಷನ್ಸ್ ಹೆಸರಿನ ನಿರ್ಮಾಣ ಸಂಸ್ಥೆಯ ಮಾಲೀಕರಾಗಿದ್ದಾರೆ. ಈ ಪ್ರೊಡಕ್ಷನ್ ಹೌಸ್ ಮೂಲಭೂತವಾಗಿ ಫೀಚರ್ ಮೂವೀಗಳು, ಆರ್ಟ್ ಮೂವೀಗಳು, ಶಾರ್ಟ್ ಮೂವೀಸ್, ಡಾಕ್ಯುಮೆಂಟರಿಗಳು, ಇಂಟರ್ವ್ಯೂಗಳು, ವ್ಲಾಗ್‌ಗಳು ಮುಂತಾದ ಹೊಸ ಮತ್ತು ಸೃಜನಶೀಲ ಸಿನಿಮಾ ಸಂಬಂಧಿತ ವಿಷಯಗಳ ನಿರ್ಮಾಣದ ಗುರಿಯನ್ನು ಹೊಂದಿದೆ. ಕಳೆದ 3 ವರ್ಷಗಳಿಂದ ನೃತ್ಯವನ್ನೂ ಅಭ್ಯಾಸ ಮಾಡುತ್ತಿದ್ದಾರೆ. ನೃತ್ಯ ಪ್ರಕಾರಗಳಲ್ಲಿ ಹಿಪ್ ಹಾಪ್, ಬಿ ಬಾಯಿಂಗ್, ಸಮಕಾಲೀನ, ಲಾಕಿಂಗ್, ಪಾಪಿಂಗ್, ರೊಬೊಟಿಕ್ಸ್, ಭಾರತೀಯ ಶೈಲಿಗಳು ಮತ್ತು ಬಾಲಿವುಡ್ ಶೈಲಿಯ ನೃತ್ಯಗಳು ಸೇರಿವೆ.

    4 ವರ್ಷಗಳಿಂದ ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡುತ್ತಿದ್ದು, ವುಶು, ಬಾಕ್ಸಿಂಗ್ ಮತ್ತು ಕಿಕ್ ಬಾಕ್ಸಿಂಗ್ ಶೈಲಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು ಹಲವಾರು ಮಾರ್ಷಲ್ ಆರ್ಟ್ ವೆಪನ್ಸ್ ಅನ್ನು ಸಹ ಕರಗತ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾರ್ಷಲ್ ಆರ್ಟ್ಸ್ ತರಗತಿಗಳನ್ನೂ ನಡೆಸುತ್ತಿದ್ದಾರೆ.
    Published by:Swathi Nayak
    First published: