ರಾಮಾಚಾರಿ (Ramachari) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಈ ಕತೆಯ ನಾಯಕ ರಾಮಾಚಾರಿ, ನಾಯಕಿ ಚಾರು. ಧಾರಾವಾಹಿ ಶುರವಾದಾಗ ಇಬ್ಬರಿಗೂ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗುತ್ತಿರಲಿಲ್ಲ. ರಾಮಾಚಾರಿ ಒಳ್ಳೆಯ ಗುಣ, ನಡತೆ, ಅವನ ಸ್ವಾಭಿಮಾನ ನೋಡಿ ಚಾರುಗೆ ಪ್ರೀತಿಯಾಗುತ್ತೆ (Love) .ಚಾರು ಮತ್ತು ರಾಮಾಚಾರಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಮಾಚಾರಿ ಮಾಡಿದ ಯಡವಟ್ಟಿನಿಂದ ಕೆಮಿಕಲ್ ಬಿದ್ದು ಚಾರು ಕಣ್ಣು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತೆ. ಅದಕ್ಕೆ ರಾಮಾಚಾರಿ ಕೊರಗುತ್ತಾ ಇರುತ್ತಾನೆ. ಕಣ್ಣು ಕಾಣದ ಚಾರುಗೆ ನಾನೇ ಬೆಳಕಾಗಬೇಕು ಎಂದು ರಾಮಾಚಾರಿ ಯಾರಿಗೂ ಹೇಳದೇ ಆಕೆಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಮದುವೆಯಾದ (Marriage) ವಿಚಾರವನ್ನು ಎಲ್ಲರ ಬಳಿ ಮುಚ್ಚಿಟ್ಟಿದ್ದಾರೆ. ಈಗ ಚಾರುಗೆ ಕಣ್ಣು ಕಾಣ್ತಾ ಇದೆ.
ಗುಟ್ಟಾಗಿ ಮದುವೆಯಾಗಿ ಬಂದ ಕೋದಂಡ
ರಾಮಾಚಾರಿ ಅಣ್ಣ ಕೋದಂಡನ ಮೊದಲ ಹೆಂಡ್ತಿ ಅಪೂರ್ವ ಸತ್ತಿದ್ದಾಳೆ. ಅದಕ್ಕೆ ಕೋದಂಡ ಗುಟ್ಟಾಗಿ ಎರಡನೇ ಮದುವೆಯಾಗಿದ್ದಾನೆ. ಹೆಂಡ್ತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಯವರೆಲ್ಲಾ ಬೈದು, ಒಳಗೆ ಕರೆದುಕೊಂಡಿದ್ದಾರೆ. ಅಪ್ಪ ಮಾತ್ರ, ನನ್ನನ್ನು ಮಾತನಾಡಿಸಬೇಡ ಎಂದು ಹೇಳಿದ್ದಾರೆ. ಅದಕ್ಕೆ ರಾಮಾಚಾರಿಗೆ ತನ್ನ ಗುಟ್ಟಿನ ಮದುವೆ ಬಗ್ಗೆ ಚಿಂತೆ ಆಗಿದೆ.
ಅಪ್ಪನ ಸಾವಿಗೆ ಕಾರಣವಾಗಬೇಕಾ?
ನಿನ್ನ ಅಣ್ಣ ಮಾಡಿದ ಕೆಲಸ, ನೀನು ಮಾಡಿದ್ರೆ ನಾನು ಸತ್ತೇ ಹೋಗ್ತಿದ್ದೆ ಎಂದು ರಾಮಾಚಾರಿ ಅಪ್ಪ ಹೇಳಿದ್ದಾರೆ. ಅದನ್ನು ಕೇಳಿ ರಾಮಾಚಾರಿ ಬೇಸರ ಮಾಡಿಕೊಂಡಿದ್ದಾನೆ. ಮದುವೆ ವಿಷ್ಯವಾಗಿ ಚಾರ ಬಳಿ ಮಾತನಾಡುತ್ತಿದ್ದಾನೆ. ಅಣ್ಣನಿಗಿಂತ ಮುಂಚೆ ನಾನೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದೇನೆ ಎಂದು ಅಪ್ಪನಿಗೆ ಹೇಗೆ ಹೇಳಲಿ, ನಮ್ಮ ಅಪ್ಪನ ಸಾವಿಗೆ ನಾನೇ ಕಾರಣವಾಗಬೇಕಾ? ಉಸಿರು ನಿಲ್ಲಿಸುವ ಮದುವೆ ಬೇಕಾ ಎಂದು ಚಾರುಳನ್ನು ರಾಮಾಚಾರಿ ಕೇಳ್ತಾ ಇದ್ದಾನೆ.
ನನಗೆ ಬಿಡುಗಡೆ ಕೊಡಿ
ಕುಟುಂಬವನ್ನು ಸರ್ವನಾಶ ಮಾಡೋ ನಮ್ಮ ಮದುವೆ ಮುಂದುವರೆಯಬೇಕಾ? ಸಂಸಾರ ಬೆರೆಸಲು ಆಗದ ಗಂಟು ಗಂಟಲ್ಲ ಚಾರು ಮೇಡಂ. ಅದು ಕಗ್ಗಂಟು. ಅದನ್ನು ಬಿಡಿಸಿಕೊಂಡ್ರೆ ನಮಗೆ ನೆಮ್ಮದಿ. ನಾನು ಬದುಕಿರುವಾಗ್ಲೇ ಸತ್ತ ರೀತಿ ನೋಡೋಕೆ ನಿಮಗೆ ಇಷ್ಟನಾ? ನೀವು ನನ್ನನ್ನು ಇಷ್ಟ ಪಡೋದೇ ಸತ್ಯ ಆದ್ರೆ ದಯವಿಟ್ಟು ನನಗೆ ಬಿಡುಗಡೆ ಕೊಡಿ ಎಂದು ಚಾರುಳನ್ನು ರಾಮಾಚಾರಿ ಬೇಡಿಕೊಳ್ತಾ ಇದ್ದಾನೆ.
ನಿಮ್ಮ ಜೀವ ಉಳಿಸಲು ತಾಳಿ ಕಟ್ಟಿದೆ
ಅವತ್ತು ನಿಮಗೆ ಕಣ್ಣು ಇರಲಿಲ್ಲ. ನನ್ನ ಜೀವನಕ್ಕೆ ಯಾರು ಗತಿ ಅಂತ ನೀವು ಸಾಯೋಕೆ ಹೊರಟಿದ್ದೀರಿ. ಆಗ ನಾನು ನಿಮಗೆ ತಾಳಿ ಕಟ್ಟಿ ಜೀವ ಉಳಿಸಿದ್ದೆ. ಆದ್ರೆ ಇವತ್ತು ನಿಮಗೆ ಕಣ್ಣು ಇದೆ. ಸುಂದರವಾದ ಜೀವನ ಇದೆ. ದಯವಿಟ್ಟು ನನ್ನ ಬಿಟ್ಟು, ನಿಮ್ಮ ಬದುಕನ್ನು ನೀವು ಕಟ್ಟಿಕೊಳ್ಳಿ. ನಾನು ಯಾವತ್ತೂ ನಿಮ್ಮನ್ನು ಮನಸಾರೆ ಒಪ್ಪಿಕೊಂಡಿಲ್ಲ. ನಿಮ್ಮ ಜೀವಕ್ಕೆ ಬೆಲೆ ಕೊಟ್ಟು ಅವತ್ತು ತಾಳಿ ಕಟ್ಟಿದೆ ಎಂದು ರಾಮಾಚಾರಿ ಹೇಳ್ತಾ ಇದ್ದಾನೆ.
ಮೂರು ಗಂಟು ಬಿಚ್ಚಿ ಕೊಡಿ
ನಿಮ್ಮ ಕೊರಳಿನಲ್ಲಿರುವ ತಾಳಿ, ನಮ್ಮ ಕುಟುಂಬದವರ ಚಿತೆಗೆ ಇಡುವ ಕೊಳ್ಳಿ ತರ ಕಾಣ್ತಾ ಇದೆ. ನೀವು ನನಗೆ ಮುಕ್ತಿ ಕೊಡದಿದ್ದರೆ ನಾನು ಇರಲ್ಲ. ನಾನು ನಮ್ಮ ಮನೆಯವರ ಮೇಲೆ ಜೀವವನ್ನೇ ಇಟ್ಟಿದ್ದೇನೆ. ಅವರ ಜೀವಕ್ಕೆ ಏನಾದ್ರೂ ಆದ್ರೆ, ನನ್ನ ಜೀವ ಮಣ್ಣು ಸೇರುತ್ತೆ. ನಿಮ್ಮನ್ನು ಕೈ ಮುಗಿದು ಬೇಡಿಕೊಳ್ತೇನೆ ದಯವಿಟ್ಟು ನನಗೆ ಬಿಡುಗಡೆ ಕೊಡಿ. ಈ ರಾಮಾಚಾರಿಗಾಗಿ ನಿಮ್ಮ ಕತ್ತಿನಲ್ಲಿರುವ ಮೂರು ಗಂಟು ಬಿಟ್ಟಿ ಮುಕ್ತಿ ಕೊಡಿ ಎಂದು ಕೇಳಿಕೊಳ್ತಾ ಇದ್ದಾನೆ.
ಇದನ್ನೂ ಓದಿ: Ramachari: ಒಂದು ಕಡೆ ಅಪ್ಪ, ಮತ್ತೊಂದು ಕಡೆ ವಿಕಾಸ್; ಚಾರು-ರಾಮಾಚಾರಿ ಪರದಾಟ!
ಚಾರು ತಾಳಿ ಬಿಚ್ಚಿ ಕೊಡ್ತಾಳಾ? ರಾಮಾಚಾರಿ ಸಮಸ್ಯೆ ಬಗೆಹರಿಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ