ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಸೀರಿಯಲ್ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಅಪರ್ಣಾಗೆ ಆಪರೇಷನ್ ಮಾಡಿಸಲು ಹಣ ಇಲ್ಲದೇ ಆಕೆ ಸಾವನ್ನಪ್ಪುತ್ತಾಳೆ. ಚಾರು ಮೋಸದಿಂದ, ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ತಮ್ಮ ಮನೆಯವರ ಸುದ್ದಿಗೆ ಬಂದ ಚಾರು ಮತ್ತು ಮಾನ್ಯತಾಗೆ ತನ್ನ ಬುದ್ಧಿವಂತಿಕೆಯಿಂದಲೇ ಪಾಠ ಕಲಿಸಲು ರಾಮಾಚಾರಿ ಮುಂದಾಗಿದ್ದಾನೆ. ಇನ್ನೊಂದೆಡೆ ಚಾರು ರಾಮಾಚಾರಿ ಪ್ರೀತಿ (Love) ಪಡೆದುಕೊಳ್ಳಲು ಪರದಾಡುತ್ತಿದ್ದಾಳೆ.
ಬದುಕಿರುವಾಗ್ಲೇ ನರಕ ದರ್ಶನ
ಈ ಮನೆಯ ಜೀವಗಳು ಸಾಯೋಕೆ ಕಾರಣವಾದ ಆ ಚಾರು ಮತ್ತು ಮಾನ್ಯತಾಳನ್ನು ಕಾಡಿಸುತ್ತೇನೆ. ನಮಗೆ ನರಕ ತೋರಿಸಲು ಪಣ ತೊಟ್ಟವರಿಗೆ, ನಾನು ಬದುಕಿರುವಾಗ್ಲೇ ನರಕ ತೋರಿಸುತ್ತೇನೆ ಎಂದು ರಾಮಾಚಾರಿ ಹೇಳುತ್ತಾನೆ. ಆಗ ಅವರ ತಾಯಿ ಬೇಡ ರಾಮಾಚಾರಿ. ನೀನು ತಾಳ್ಮೆಯಿಂದ ಇರು. ಕೋದಂಡನ ರೀತಿ ಮಾತನಾಡಬೇಡ ಎಂದು ಹೇಳ್ತಾಳೆ.
ಬುದ್ಧಿಯಿಂದ ಪಾಠ ಕಲಿಸುತ್ತೇನೆ
ನಮ್ಮನ್ನು ಭಯಪಡಿಸಲು ಬಂದವರಿಗೆ ನಮ್ಮ ಶಕ್ತಿ ಏನು ಎಂದು ತೋರಿಸುತ್ತೇನೆ. ದುಡ್ಡಿಗಿಂತ ಶಕ್ತಿಶಾಲಿ ಈ ಬುದ್ಧಿ. ಇನ್ಮೇಲೆ ಆ ತಾಯಿ-ಮಗಳಿಗೆ ನನ್ನ ಕಡೆಯಿಂದ ಹೊಡೆತ ಬೀಳುತ್ತಲೇ ಇರುತ್ತೆ. ಯಾರು ಹೊಡೆದ್ರು ಅಂತ ಗೊತ್ತಾಗಲ್ಲ. ಯಾಕ್ ಹೊಡೆದ್ರು ಅಂತ ಗೊತ್ತಾಗಲ್ಲ. ಯಾವ ಸಾಕ್ಷಿಯೂ ಸಿಗಲ್ಲ. ಯಾವ ಗಾಯನೂ ಇರಲ್ಲ. ನಾನು ಹೊಡೆಯಲು ಬಳಸುವ ಆಯುಧ ಚಾಕು, ಕತ್ತಿ ಅಲ್ಲ. ಅದಕ್ಕಿಂತ ಅರಿತವಾದ ಬುದ್ಧಿ ಎಂದು ರಾಮಾಚಾರಿ ಹೇಳ್ತಾನೆ.
ಇದನ್ನೂ ಓದಿ: Lakshana: ಮೌರ್ಯನನ್ನು ಕೊಂದ ಸಿಎಸ್ ವಿರುದ್ಧ ನಕ್ಷತ್ರಾ ಕಿಡಿ, ಪೊಲೀಸರಿಗೆ ದೂರು ಕೊಡಲು ರೆಡಿ!
ದುಡ್ಡಿನ ಮದ ಇಳಿಸುತ್ತೇನೆ
ದುಡ್ಡಿನ ದರ್ಪದಲ್ಲಿ ಗೆಲುವಿನ ಸಿಹಿ ತಿಂತಾ ಇದ್ರು. ಈಗ ಸೋಲಿನ ಕಹಿಯನ್ನು ನಾನು ತೋರಿಸುತ್ತೇನೆ. ಸತಾಯಿಸುತ್ತೇನೆ. ಯಾಕಾದ್ರೂ ರಾಮಾಚಾರಿ ತಂಟೆಗೆ ಹೋದವಪ್ಪಾ ಎಂದು ಕೊಳ್ಳಬೇಕು. ನಮಗೆ ಕಾಟ ಕೊಡಬೇಕು ಎಂದುಕೊಂಡವರು, ನಮ್ಮ ಕಾಟ ತಡೆಯಲಾರದೇ, ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು.
ಇನ್ಮೇಲೆ ಅವರ ಮನೆಯಲ್ಲಿ ನೆಮ್ಮದಿ ಇರಬಾರದು. ಅವರ ಕೀರ್ತಿ, ಪ್ರತಿಷ್ಠೆ ನೆಲಕ್ಕೆ ಬೀಳುತ್ತೆ ಎಂದು ರಾಮಾಚಾರಿ ಸವಾಲ್ ಹಾಕಿದ್ದಾನೆ.
ರಾಮಾಚಾರಿ ಪ್ರೀತಿ ಬೇಕು
ಮೊದಲು ಚಾರುಗೆ ರಾಮಾಚಾರಿಯನ್ನು ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ಅವನ ಮೇಲೆ ಪ್ರೀತಿ ಆಗಿದೆ. ಹೇಗಾದ್ರೂ ಅವನ ಪ್ರೀತಿ ಪಡೆಯಬೇಕು ಎಂದು ಒದ್ದಾಡುತ್ತಿದ್ದಾಳೆ. ಅವಳು ತನ್ನ ಪ್ರೀತಿ ಹೇಳಿಕೊಳ್ಳುವ ದಿನವೇ, ಅಪರ್ಣಾ ಸಾವನ್ನಪ್ಪಿ, ಏನೇನು ನಡೆದು ಹೋಗುತ್ತೆ.
ರಾಮಾಚಾರಿ ಮನೆಯವರೇ ಟಾರ್ಗೆಟ್
ತನ್ನ ಪ್ರೀತಿಯ ವಿಷಯವನ್ನು ಅಮ್ಮನ ಬಳಿ ಹೇಳಿಕೊಳ್ಳಬೇಕು ಎಂದು ಚಾರು ಬರುತ್ತಾಳೆ. ಆದ್ರೆ ಮಾನ್ಯತಾ ಗರಂ ಆಗಿದ್ದು. ಇನ್ಮೇಲೆ ಆ ರಾಮಾಚಾರಿ ಮನೆಯವರು ನಮ್ಮ ತಂಟೆಗೆ ಬಂದ್ರೆ, ಒಬ್ಬರನ್ನು ಬದುಕಿಸಲ್ಲ. ಎಲ್ಲರನ್ನೂ ಸಾಯಿಸಿ ಬಿಡ್ತೇನೆ ಎಂದು ಮಾನ್ಯತಾ ಹೇಳುತ್ತಿದ್ದಾಳೆ. ಅದನ್ನು ಕೇಳಿ ಚಾರು ಭಯಪಟ್ಟಿದ್ದಾಳೆ.
ಇದನ್ನೂ ಓದಿ: Amitha Kulal: ಕುಡ್ಲದ ಕುವರಿ ಮಲೆನಾಡ ಬೆಡಗಿಯಾದ ಕಥೆ, ಒಲವಿನ ನಿಲ್ದಾಣದ ತಾರಿಣಿ ಯಾರು?
ರಾಮಾಚಾರಿ ಹೊಸ ಗೇಮ್ ಹೇಗಿರುತ್ತೆ? ಚಾರು-ಮಾನ್ಯತಾಗೆ ಕೆಟ್ಟಕಾಲ ಶುರುನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ