ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ, ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಆದ್ರೆ ಚಾರುಗೆ ಮನೆಯಲ್ಲಿ ಬೇರೆ ಮದುವೆ (Marriage) ಮಾಡಲು ಸಿದ್ಧರಾಗಿದ್ದಾರೆ.
ಚಾರು-ರಾಮಾಚಾರಿ ಮದುವೆ
ಚಾರುಗೆ ಚಿಕ್ಕಮಗಳೂರಿನಲ್ಲಿ ಕಣ್ಣಿನ ಚಿಕಿತ್ಸೆ ಕೊಡಿಸಿರುತ್ತಾರೆ. ಆಕೆಗೆ ಕಣ್ಣು ಬರುತ್ತೆ. ಆದ್ರೆ ರಾಮಾಚಾರಿ ದೂರ ಆಗ್ತಾನೆ ಎಂದು ಕಣ್ಣು ಕಾಣಲ್ಲ. ನನಗೆ ದಿಕ್ಕು ಯಾರು ಎಂದು ಸಾಯೋಕೆ ಹೊರಟಿರುತ್ತಾಳೆ. ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ. ತಾಳಿ ಕಟ್ಟುತ್ತೇನೆ ಎಂದು ಹೇಳಿ ಮದುವೆ ಆಗಿರುತ್ತಾನೆ.
ಮುಹೂರ್ತ ಮುಂದಕ್ಕೆ ಹಾಕಿಸು
ರಾಮಾಚಾರಿ ಗಂಡನಾಗಿ ನೀನು ಈಗ ಸುಳ್ಳು ಹೇಳ್ತೀಯಾ. ಮುಹೂರ್ತ ಮುಂದಕ್ಕೆ ಹಾಕಿಸಿ ನಿನ್ನ ಹೆಂಡ್ತಿ ಕಾಪಾಡಿಕೊಳ್ತೀಯಾ ಅನ್ನೋ ಸಂಪೂರ್ಣ ನಂಬಿಕೆ ಮೇಲೆ ನಿಂತಿದ್ದೀನಿ. ಬೇಗ ಹೇಳು ರಾಮಾಚಾರಿ ಸದ್ಯಕ್ಕೆ ಯಾವುದೇ ಮುಹೂರ್ತ ಇಲ್ಲ ಎಂದು ಹೇಳಿಬಿಡು ರಾಮಾಚಾರಿ ಎಂದು ಚಾರು ಮನಸ್ಸಿನಲ್ಲೇ ಹೇಳಿಕೊಳ್ತಾ ಇದ್ದಾಳೆ.
ನಿಶ್ಚಿತಾರ್ಥಕ್ಕೆ ಮುಹೂರ್ತ ಸಿಕ್ಕಿತು!
ರಾಮಾಚಾರಿ ನಿಶ್ಚಿತಾರ್ಥದ ಮುಹೂರ್ತ ಮುಂದಕ್ಕೆ ಹಾಕ್ತಾನೆ ಎಂದು ಚಾರು ಎಂದುಕೊಂಡಿದ್ದಳು. ಆದ್ರೆ ರಾಮಾಚಾರಿ, ವೃತ್ತಿ ಬದುಕಿಗೆ ಯಾವತ್ತೂ ಮೋಸ ಮಾಡಲ್ಲ ಎಂದು ಹೇಳಿದ್ದಾನೆ. ಅದಕ್ಕೆ ನಿಶ್ಚಿತಾರ್ಥದ ಮುಹೂರ್ತ ಇಟ್ಟುಕೊಟ್ಟಿದ್ದಾನೆ. ಮನೆಯವರಿಗೆಲ್ಲಾ ಖುಷಿ ಆಗಿದೆ. ಆದ್ರೆ ಚಾರು ಬೇಸರ ಮಾಡಿಕೊಂಡಿದ್ದಾಳೆ.
ಮದುವೆಗೂ ಮುಹೂರ್ತ!
ಚಾರು ನಿಶ್ಚಿತಾರ್ಥ ಓಕೆ ಬಿಡು, ಆದ್ರೆ ಮದುವೆ ದಿನಾಂಕವನ್ನು ರಾಮಾಚಾರಿ ಹೇಳಲ್ಲ. ಮುಂದಕ್ಕೆ ಹಾಕ್ತಾನೆ ಎಂದು ನಂಬಿಕೊಂಡು ಕೂತಿದ್ದಾಳೆ. ರಾಮಾಚಾರಿ ಮದುವೆಗೆ ಮುಹೂರ್ತ ನೋಡ್ತಾ ಇದ್ದಾನೆ. ಚಾರು ಹೇಳಿದಂತೆ ಸರಿಯಾದ ಮುಹೂರ್ತ ಇಲ್ಲ ಎಂದು ಹೇಳ್ತಾನಾ? ಅಥವಾ ಅದಕ್ಕೂ ಶೀಘ್ರದಲ್ಲೇ ಮುಹೂರ್ತ ಇದೆ ಎಂದು ಹೇಳ್ತಾನಾ ನೋಡಬೇಕು.
ಬೇರೆಯವನನ ಜೊತೆ ಮದುವೆ ಆಗುತ್ತಾ?
ರಾಮಾಚಾರಿ ಮುಹೂರ್ತ ಇಡುವುದನ್ನು ನೋಡ್ತಾ ಇದ್ರೆ, ಅವನು ಸುಳ್ಳು ಹೇಳಲ್ಲ ಅನ್ನಿಸುತ್ತೆ. ಆದಷ್ಟು ಬೇಗ ಮದುವೆ ಮುಹೂರ್ತ ಇದೆ ಎಂದು ಹೇಳಿದ್ರೂ ಹೇಳಬಹುದು. ಹಾಗಾದ್ರೆ ಚಾರುಗೆ ಪತಿ ರಾಮಾಚಾರಿಯೇ ಬೇರೆಯವರ ಜೊತೆ ಮದುವೆ ಆಗಲು ಮುಹೂರ್ತ ಇಟ್ಟುಕೊಡ್ತಾನಾ ಅನ್ನಿಸುತ್ತೆ. ಚಾರು ತುಂಬಾ ಬೇಸರವಾಗಿದ್ದಾಳೆ.
ಇದನ್ನೂ ಓದಿ: Puttakkana Makkalu: ಸ್ನೇಹಾ ಮುಂದೆ ಮಂಡಿಯೂರಿ ಪ್ರೀತಿ ಹೇಳಿಕೊಂಡ ಕಂಠಿ, ಒಪ್ತಾಳಾ ಪುಟ್ಟಕ್ಕನ ಮಗಳು?
ಚಾರು ಮದುವೆ ಬೇರೆಯವರ ಜೊತೆ ನಡೆಯುತ್ತಾ? ರಾಮಾಚಾರಿ ಏನ್ ಮಾಡ್ತಾನೆ? ಚಾರು ಏನ್ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ