• Home
 • »
 • News
 • »
 • entertainment
 • »
 • Ramachari: ತನ್ನ ಪ್ರಾಣ ಉಳಿಸಿಕೊಳ್ಳಲು ಮಗಳನ್ನು ಬಲಿ ಕೊಡಲು ಮಾನ್ಯತಾ ಸಿದ್ಧ!

Ramachari: ತನ್ನ ಪ್ರಾಣ ಉಳಿಸಿಕೊಳ್ಳಲು ಮಗಳನ್ನು ಬಲಿ ಕೊಡಲು ಮಾನ್ಯತಾ ಸಿದ್ಧ!

ಮಗಳನ್ನು ಬಲಿ ಕೊಡಲು ಮಾನ್ಯತಾ ಸಿದ್ಧ!

ಮಗಳನ್ನು ಬಲಿ ಕೊಡಲು ಮಾನ್ಯತಾ ಸಿದ್ಧ!

ಬೇರೆಯವರ ಜೀವನದಲ್ಲಿ ಆಟ ಆಡೋ ಮಾನ್ಯತಾ ಮಗಳನ್ನು ತುಂಬಾ ಪ್ರೀತಿ ಮಾಡ್ತಾಳೆ ಅಂದುಕೊಂಡಿದ್ವಿ. ಆದ್ರೆ ಮಾನ್ಯತಾಗೆ ತನ್ನ ಪ್ರಾಣದ ಮುಂದೆ ಯಾರೂ ಲೆಕ್ಕಕ್ಕಿಲ್ಲ. ತಾನು ಬದುಕಬೇಕು ಅಷ್ಟೇ ಎನ್ನುತ್ತಿದ್ದಾಳೆ.

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಅಪರ್ಣಾಗೆ ಆಪರೇಷನ್ ಮಾಡಿಸಲು ಹಣ ಇಲ್ಲದೇ ಆಕೆ ಸಾವನ್ನಪ್ಪುತ್ತಾಳೆ. ಚಾರು ಮೋಸದಿಂದ, ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ತಮ್ಮ ಮನೆಯವರ ಸುದ್ದಿಗೆ ಬಂದ ಚಾರು ಮತ್ತು ಮಾನ್ಯತಾಗೆ ತನ್ನ ಬುದ್ಧಿವಂತಿಕೆಯಿಂದಲೇ ಪಾಠ ಕಲಿಸಲು ರಾಮಾಚಾರಿ ಮುಂದಾಗಿದ್ದಾನೆ. ಮಾನ್ಯತಾಳನ್ನು ಕೂಡಿ ಹಾಕಿ ಭಯಪಡಿಸುತ್ತಿದ್ದಾನೆ. ನಿನ್ನ ಪ್ರಾಣ ಉಳಿಯಬೇಕು ಎಂದ್ರೆ ನಿನ್ನ ಮಗಳು (Daughter) ಪ್ರಾಣ ಬಲಿ ಕೊಡು ಎಂದು ಕೇಳಿದ್ದಾನೆ. ಅದಕ್ಕೆ ಮಾನ್ಯತಾ (Manyata) ಒಪ್ಪಿದ್ದಾಳೆ.


  ಚಾರು ಮತ್ತು ಮಾನ್ಯತಾಗೆ ಕಾಟ
  ರಾಮಾಚಾರಿ ಮನೆಯಲ್ಲಿ ಅಪರ್ಣಾ ಸಾವನ್ನಪ್ಪಿದಾಗಿನಿಂದ ತುಂಬಾ ಬೇಸರದಲ್ಲಿ ಇದ್ದಾರೆ. ನಮ್ಮ ಮನೆಯವರ ಸುದ್ದಿಗೆ ಬಂದವರನ್ನು ಸುಮ್ನೆ ಬಿಡಲ್ಲ. ಅವರಿಗೆ ಬುದ್ಧಿ ಕಲಿಸುತ್ತೇನೆ ಎಂದು ರಾಮಾಚಾರಿ ಪಣ ತೊಟ್ಟಿದ್ದಾನೆ. ಅವರಿಗೆ ಗೊತ್ತಾಗದ ರೀತಿ ಬುದ್ಧಿವಂತಿಕೆಯಿಂದ ಅವರಿಗೆ ಹೊಡೆತ ಕೊಡಬೇಕು ಎಂದುಕೊಂಡಿದ್ದಾನೆ. ಅದೇ ರೀತಿ ಎಲ್ಲವನ್ನೂ ಪ್ಲ್ಯಾನ್ ಮಾಡಿ ಮಾಡ್ತಾ ಇದ್ದಾನೆ.
  ಬಂಧಿಯಾದ ಮಾನ್ಯತಾಗೆ ಭಯ
  ರಾಮಾಚಾರಿ ಮಾನ್ಯತಾ ಕಾರು ಡ್ರೈವರ್ ಗೆ ಬೆದರಿಸಿ, ಮಾನ್ಯತಾಳನ್ನು ಗೋಡೌನ್ ಗೆ ಕರೆದುಕೊಂಡು ಬರುವಂತೆ ಮಾಡಿದ್ದಾನೆ. ಕಾರು ಡ್ರೈವರ್ ರಾಮಾಚಾರಿ ಹೇಳಿದ ಜಾಗಕ್ಕೆ ಮಾನ್ಯತಾಳನ್ನು ತಂದು ಬಿಟ್ಟಿದ್ದಾನೆ. ಗೋಡೌನ್ ನಲ್ಲಿ ಮಾನ್ಯತಾ ಲಾಕ್ ಆಗಿದ್ದಾಳೆ. ಗನ್ ಕೊಟ್ಟು ನೀನೇ ಸಾಯಬೇಕು ಎಂದು ರಾಮಾಚಾರಿ ಮರೆಯಲ್ಲಿ ನಿಂತು ಹೇಳ್ತಾನೆ. ಮಾನ್ಯತಾ ಎಷ್ಟೇ ಕೇಳಿಕೊಂಡ್ರು ರಾಮಾಚಾರಿ ಬಿಡುತ್ತಿಲ್ಲ. ಬದುಕಲು ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದಾಳೆ.


  ಇದನ್ನೂ ಓದಿ: Jothe Jotheyali: ಮೀರಾ ರಾಜೀನಾಮೆ ಹಿಂದೆ ಝೇಂಡೆ ಕೈವಾಡ, ಅನುಗೆ ಗೊತ್ತಾಗುತ್ತಾ ಸತ್ಯ? 


  ಮಗಳನ್ನು ಬಲಿ ಕೊಡು ಎಂದ ರಾಮಾಚಾರಿ
  ಮಾನ್ಯತಾ ನನ್ನನ್ನು ಉಳಿಸು ಎಂದು ಬೇಡಿಕೊಂಡಿದ್ದಕ್ಕೆ, ರಾಮಾಚಾರಿ ಒಂದು ಅವಕಾಶ ನೀಡಿದ್ದಾನೆ. ನಿನ್ನ ಪ್ರಾಣ ಉಳಿಯಬೇಕು ಅಂದ್ರೆ, ನಿನ್ನ ಮಗಳು ಇಲ್ಲಿಗೆ ಬರಬೇಕು ಎಂದು ಹೇಳಿದ್ದಾನೆ. ಅದಕ್ಕೆ ಮಾನ್ಯತಾ ಒಪ್ಪಿಕೊಂಡಿದ್ದಾಳೆ. ಬೇಬಿ ಕ್ಷಮಿಸು. ನಾನು ಬದುಕಬೇಕು ಎಂದು ತನಗೆ ತಾನೇ ಹೇಳಿಕೊಂಡಿದ್ದಾಳೆ.


  colors Kannada serial, kannada serial, ramachari serial, ramachari serial hero plans work, ramachari serial kannada cast, ರಾಮಾಚಾರಿ ಧಾರಾವಾಹಿ, ತನ್ನ ಪ್ರಾಣ ಉಳಿಸಿಕೊಳ್ಳಲು ಮಗಳನ್ನು ಬಲಿ ಕೊಡಲು ಮಾನ್ಯತಾ ಸಿದ್ಧ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ರಾಮಾಚಾರಿ


  ಚಾರುಳನ್ನು ಕರೆಸಿಕೊಂಡ ಮಾನ್ಯತಾ!
  ಮಾನ್ಯತಾ ತನ್ನ ಪ್ರಾಣ ಉಳಿಸಿಕೊಳ್ಳಬೇಕು ಎಂದು ಮಗಳನ್ನು ತಾನು ಇರುವ ಜಾಗಕ್ಕೆ ಕರೆಸಿಕೊಂಡಿದ್ದಾಳೆ. ಅಮ್ಮ ಏನೂ ಅಪಾಯದಲ್ಲಿದ್ದಾಳೆ ಚಾರು ಬೇಗೆ ಬೇಗ ಅಲ್ಲಿಗೆ ಬಂದಿದ್ದಾಳೆ. ರಾಮಾಚಾರಿ ಆರ್ಡರ್ ನಂತೆ ಚಾರುಳನ್ನು ಗೋಡೌನ್ ಒಳಗೆ ಬರುವಂತೆ ಮಾನ್ಯತಾ ಹೇಳಿದ್ದಾಳೆ. ಚಾರು ಸಹ ಸಲ್ಲಿಗೆ ಬಂದಿದ್ದಾಳೆ.


  colors Kannada serial, kannada serial, ramachari serial, ramachari serial hero plans work, ramachari serial kannada cast, ರಾಮಾಚಾರಿ ಧಾರಾವಾಹಿ, ತನ್ನ ಪ್ರಾಣ ಉಳಿಸಿಕೊಳ್ಳಲು ಮಗಳನ್ನು ಬಲಿ ಕೊಡಲು ಮಾನ್ಯತಾ ಸಿದ್ಧ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರು


  ತನ್ನ ಜೀವವೇ ಹೆಚ್ಚಾಯ್ತಾ?
  ಬೇರೆಯವರ ಜೀವನದಲ್ಲಿ ಆಟ ಆಡೋ ಮಾನ್ಯತಾ ಮಗಳನ್ನು ತುಂಬಾ ಪ್ರೀತಿ ಮಾಡ್ತಾಳೆ ಅಂದುಕೊಂಡಿದ್ವಿ. ಆದ್ರೆ ಮಾನ್ಯತಾಗೆ ತನ್ನ ಪ್ರಾಣದ ಮುಂದೆ ಯಾರೂ ಲೆಕ್ಕಕ್ಕಿಲ್ಲ. ತಾನು ಬದುಕಬೇಕು ಅಷ್ಟೇ ಎನ್ನುತ್ತಿದ್ದಾಳೆ. ಚಾರುಗೆ ಅಮ್ಮನ ವಂಚನೆ ಗೊತ್ತಿಲ್ಲದೇ ಅಲ್ಲಿಗೆ ಬಂದಿದ್ದಾಳೆ. ಯಾರ ಪ್ರಾಣ ಹೋಗುತ್ತೋ ಗೊತ್ತಿಲ್ಲ.


  ಇದನ್ನೂ ಓದಿ: BBK Rakesh: ವೈಲೆಂಟ್ ಆದ ರಾಕೇಶ್ ಅಡಿಗ, ಏನೂ ಕಿತ್ತುಕೊಳ್ಳಲು ಆಗಲ್ಲ ಎಂದು ಸವಾಲ್! 


  ಚಾರು ಪ್ರಾಣ ಅಪಾಯದಲ್ಲಿದ್ಯಾ? ರಾಮಾಚಾರಿ ಪಾಠ ಜೀವ ತೆಗೆಯುತ್ತಾ? ಮಾನ್ಯತಾ ಏನ್ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು