ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ, ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಈ ವಿಷ್ಯ ರಾಮಾಚಾರಿ ಮನೆಯಲ್ಲಿ ಗೊತ್ತಾಗಿದೆ.
ಜಾತಕ ಹೊಂದುತ್ತೆ ಎಂದ ರಾಮಾಚಾರಿ!
ಚಾರುಗೆ ಮದುವೆ ಮಾಡಬೇಕು ಎಂದು ಮಾನ್ಯತಾ ಗಂಡು ಹುಡುಕಿದ್ದಾಳೆ. ಆ ಜಾತಕ ನೋಡಲು ರಾಮಾಚಾರಿಯನ್ನಯ ಕರೆಸಿರುತ್ತಾರೆ. ಆಗ ಚಾರು ನೀನೇ ಬಂದಿದ್ದು ಒಳ್ಳೆದಾಯತು ಮನೆಯಲ್ಲಿ ಸುಳ್ಳು ಹೇಳು. ಜಾತಕ ಹೊಂದಲ್ಲ ಎನ್ನು ಎಂದು ಹೇಳಿ ಕೊಟ್ಟಿರುತ್ತಾಳೆ. ಆದ್ರೆ ರಾಮಾಚಾರಿಗೆ ಸುಳ್ಳು ಹೇಳೋಕೆ ಮನಸ್ಸು ಆಗದೇ, ಜಾತಕ ಸರಿ ಇದೆ ಮದುವೆ ಮಾಡಬಹುದು ಎಂದು ಹೇಳ್ತಾನೆ. ಅದನ್ನು ಕೇಳಿ ಚಾರು ಶಾಕ್ ಆಗಿದ್ದಾಳೆ.
ನನ್ನ ತಾಳಿಗೆ ಏನು ಅರ್ಥ
ರಾಮಾಚಾರಿ ಜಾತಕ ಹೇಳಿ ಹೊರಡುವಾಗ, ಅವನನ್ನು ತಡೆದು ಚಾರು ಪ್ರಶ್ನೆ ಮಾಡ್ತಾ ಇದ್ದಾಳೆ. ಯಾಕೆ ಈ ರೀತಿ ಜಾತಕ ಸರಿ ಹೋಗುತ್ತೆ ಎಂದು ಹೇಳಿದೆ ಎಂದು ಕೇಳ್ತಾಳೆ. ಅದಕ್ಕೆ ರಾಮಾಚಾರಿ ನನಗೆ ಸುಳ್ಳು ಹೇಳಲು ಸಾಧ್ಯವಿಲ್ಲ ಅಂತಾನೆ. ಅದಕ್ಕೆ ಚಾರು ಹಾಗಾದ್ರೆ ನೀನು ಕಟ್ಟಿದ ತಾಳಿಗೆ ಏನು ಅರ್ಥ ಎಂದು ಕೇಳ್ತಾಳೆ. ಅದಕ್ಕೆ ರಾಮಾಚಾರಿ ನಾನು ನಿಮ್ಮನ್ನು ಕೈ ಬಿಡಲ್ಲ ಎಂದು ಮಾತು ಕೊಟ್ಟು ಹೋಗ್ತಾನೆ.
ರಾಮಾಚಾರಿ ಮನೆಯಲ್ಲಿ ಅನುಮಾನ
ರಾಮಾಚಾರಿ ಮನೆಯಲ್ಲಿ ಅವನ ಬಗ್ಗೆ ಅನುಮಾನ ಬಂದಿದೆ. ಯಾಕೋ ರಾಮಾಚಾರಿ ಮೊದಲಿನ ರೀತಿ ಇಲ್ಲ. ತುಂಬಾ ಬೇಸರದಿಂದ ಇರ್ತಾನೆ. ಏನಾದ್ರೂ ಸಮಸ್ಯೆ ಆಗಿದ್ಯಾ ಎಂದು ಕೇಳ್ತಾ ಇದ್ದಾರೆ. ರಾಮಾಚಾರಿ ಆ ರೀತಿ ಏನು ಆಗಿಲ್ಲ ಎಂದು ಸುಳ್ಳು ಹೇಳ್ತಾ ಇದ್ದಾನೆ. ಆದ್ರೆ ಒಳಗೊಳಗೆ ಚಾರುಗೆ ತಾಳಿ ಕಟ್ಟಿದ್ದರ ಬಗ್ಗೆ ಯೋಚ್ನೆ ಮಾಡ್ತಾ ಇದ್ದಾನೆ.
ಅಜ್ಜಿಗೆ ಗೊತ್ತಾದ ಸತ್ಯ
ರಾಮಾಚಾರಿ ಮನೆಯಲ್ಲಿ ಅವರ ಅಜ್ಜಿಗೆ ಎಲ್ಲಾ ಸತ್ಯ ಗೊತ್ತಾಗಿದೆ. ನೀನು ಎಲ್ಲರ ವಿರೋಧ ಕಟ್ಟಿಕೊಂಡು ಯಾಕೆ ಚಿಕ್ಕಮಗಳೂರಿಗೆ ಹೋದೆ? ಚಾರು ಜೊತೆ ಹೋಗಿದ್ದ ಕಾರಣ ಏನು? ನನಗೆ ಎಲ್ಲ ಸತ್ಯ ಗೊತ್ತಾಗಿದೆ. ನೀನು ಚಾರುಗೆ ತಾಳಿ ಕಟ್ಟಿದ್ದೀಯಾ ತಾನೆ ಎಂದು ಅಜ್ಜಿ ಪ್ರಶ್ನೆ ಮಾಡ್ತಾ ಇದ್ದಾಳೆ. ಅದನ್ನು ಕೇಳಿ ರಾಮಾಚಾರಿಗೆ ಶಾಕ್ ಆಗಿದೆ. ಇದೆಲ್ಲಾ ಇವರಿಗೆ ಹೇಗೆ ಗೊತ್ತಾಯ್ತು ಎಂದು ಆತಂಕಗೊಂಡಿದ್ದಾನೆ.
ರಾಮಾಚಾರಿ ತಾಯಿಗೆ ಹೃದಯಾಘಾತ
ಅಜ್ಜಿ ಕೇಳಿದ ಪ್ರಶ್ನೆಗಳಿಗೆ ರಾಮಾಚಾರಿ ತತ್ತರಿಸಿ ಹೋಗುತ್ತಾನೆ. ಹೌದು ನಾನು ಚಾರು ಮೇಡಂಗೆ ತಾಳಿ ಕಟ್ಟಿದ್ದೇನೆ. ಯಾವುದೋ ಒತ್ತಡಕ್ಕೆ ಸಿಲುಕಿ ತಾಳಿ ಕಟ್ಟಬೇಕಾದ ಪರಿಸ್ಥಿತಿ ಬಂತು ಎಂದು ರಾಮಾಚಾರಿ ಹೇಳಿದ್ದಾನೆ. ಅದನ್ನು ಕೇಳಿ ರಾಮಾಚಾರಿ ತಾಯಿಗೆ ಹೃದಯಾಘಾತವಾಗಿದೆ. ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಹೆತ್ತಮ್ಮನನ್ನು ಆ ಸ್ಥಿತಿಯಲ್ಲಿ ನೋಡಿ ರಾಮಾಚಾರಿ ಭಯಪಟ್ಟಿದ್ದಾನೆ.
ಇದನ್ನೂ ಓದಿ: Namratha Gowda: ನಮ್ರತಾ ಗೌಡ ಕ್ಯೂಟ್ ಲುಕ್ ನೋಡಿ, ವೈಟ್ ಡ್ರೆಸ್‍ನಲ್ಲಿ 'ನಾಗಿಣಿ'
ರಾಮಾಚಾರಿ ತಾಯಿ ಬದುಕುತ್ತಾರಾ? ಚಾರು ಮದುವೆ ವಿಷ್ಯದಿಂದ ಏನೇನ್ ತೊಂದ್ರೆ ಆಗುತ್ತೆ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ