• Home
 • »
 • News
 • »
 • entertainment
 • »
 • Ramachaari: ಅತ್ತಿಗೆ ಸಾವಿಗೆ ಕಾರಣವಾದ ಚಾರು, ಸಿಡಿದೆದ್ದ ರಾಮಾಚಾರಿ ಏನ್ ಮಾಡ್ತಾನೆ?

Ramachaari: ಅತ್ತಿಗೆ ಸಾವಿಗೆ ಕಾರಣವಾದ ಚಾರು, ಸಿಡಿದೆದ್ದ ರಾಮಾಚಾರಿ ಏನ್ ಮಾಡ್ತಾನೆ?

ಚಾರು ಪ್ರಾಜೆಕ್ಟ್ ಕದ್ದ ಕಾರಣ ಅತ್ತಿಗೆ ಸಾವು

ಚಾರು ಪ್ರಾಜೆಕ್ಟ್ ಕದ್ದ ಕಾರಣ ಅತ್ತಿಗೆ ಸಾವು

Ramachaari: ಚಾರು ಮಾಡಿದ ತಪ್ಪು ತಿಳಿದು, ರಾಮಾಚಾರಿ ಆಕೆ ಇರುವ ಸ್ಥಳಕ್ಕೆ ಹೋಗಿದ್ದಾನೆ. ಆಕೆಗೆ ಏನ್ ಹೇಳ್ತಾನೆ? ಅತ್ತಿಗೆ ಸಾವಿಗೆ ಕಾರಣವಾದವಳ ವಿರುದ್ಧ ಏನ್ ಮಾಡ್ತಾನೆ ಅನ್ನೋ ಭಯ ಶುರುವಾಗಿದೆ.

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದೇ ಒಂದು ಚೆಂದ. ರಾಮಾಚಾರಿ (Ramachaari) ಎಷ್ಟೋ ಬಾರಿ ಚಾರುಳನ್ನು ಕಾಪಾಡಿದ್ದಾನೆ. ಅದಕ್ಕೆ ಚಾರುಗೆ ರಾಮಾಚಾರಿ ಮೇಲೆ ಪ್ರೀತಿ ಆಗಿದೆ. ಅದನ್ನು ಹೇಳಿಕೊಳ್ಳುವ ಎಲ್ಲಾ ಸಿದ್ಧತೆ ಮಾಡಿರುತ್ತಾಳೆ. ತನ್ನ ಪ್ರೀತಿ ಹೇಳಬೇಕು ಎನ್ನುವಷ್ಟರಲ್ಲಿ, ರಾಮಾಚಾರಿ ಅತ್ತಿಗೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ಬರುತ್ತದೆ. ಅತ್ತಿಗೆ ಸಾವಿಗೆ (Death) ಚಾರು ಕಾರಣ. ತನ್ನ ಪ್ರಾಜೆಕ್ಟ್ (Project) ಕದ್ದಿದ್ದರಿಂದ ದುಡ್ಡು ಸಿಗದೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಗೊತ್ತಾಗಿದೆ. ಅದಕ್ಕೆ ಕೋಪದಿಂದ ಹೊರಟಿದ್ದಾನೆ.


  ಕ್ಯಾನ್ಸರ್ ನಿಂದ ಅಪರ್ಣಾ ಸಾವು
  ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅಪರ್ಣಾಗೆ ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ಹೇಳಿರುತ್ತಾರೆ. ಆದ್ರೆ ಅದಕ್ಕೆ ಲಕ್ಷ ಲಕ್ಷ ದುಡ್ಡು ಬೇಕಾಗಿರುತ್ತೆ. ರಾಮಾಚಾರಿ ಆ ಹಣವನ್ನು ಜೋಡಿಸಲು ಒದ್ದಾಡುತ್ತಿರುತ್ತಾನೆ. ಆದ್ರೆ ದುಡ್ಡು ಜೋಡಿಸಲು ಸಾಧ್ಯವಾಗಿರಲಿಲ್ಲ. ದುಡ್ಡು ಜೋಡಿಸೋದು 1 ದಿನ ಲೇಟ್ ಆದ ಕಾರಣ, ಅಪರ್ಣಾ ಸಾವನ್ನಪ್ಪಿದ್ದಾಳೆ.


  ಕಿಡ್ನಿ ಕೊಡಲು ಒಪ್ಪಿದ್ರೂ ಇಲ್ಲ ಪ್ರಯೋಜನ
  ರಾಮಾಚಾರಿ ಅತ್ತಿಗೆಯನ್ನು ಹೇಗಾದ್ರೂ ಕಾಪಾಡಬೇಕು. ಆಪರೇಷನ್ ಮಾಡಿಸಬೇಕು ಎಂದು ಕಿಡ್ನಿ ಕೊಡಲು ಸಿದ್ಧವಾಗಿರುತ್ತಾನೆ. ಅದರಿಂದ ಬಂದ ದುಡ್ಡಿನಿಂದ ಆಕೆಯ ಪ್ರಾಣ ಉಳಿಸಿಕೊಳ್ಳಬೇಕು ಎಂದುಕೊಂಡಿರುತ್ತಾನೆ. ಆದ್ರೆ ಕಿಡ್ನಿ ಕೊಡಲು ಎಲ್ಲ ಪರೀಕ್ಷೆ ಮಾಡಿಸಿ ವರದಿಗಾಗಿ ಕಾಯ್ತಾ ಇರ್ತಾನೆ. ಆದ್ರೆ ವರದಿ ಬರೋದು ತಡವಾಗಿ ದುಡ್ಡು ಸಿಗುವುದು ಲೇಟ್ ಆಗುತ್ತೆ. ಅದಕ್ಕೆ ಆ ದುಡ್ಡು ತಂದ್ರೂ ಪ್ರಯೋಜನವಾಗಿಲ್ಲ.


  ಇದನ್ನೂ ಓದಿ: Jothe Jotheyali: ಝೇಂಡೆಗೆ ಗೊತ್ತಾದ ಆರ್ಯ ಬದುಕಿರುವ ಸತ್ಯ! ವಿಶ್ವಾಸ್ ತನ್ನ ಗೆಳೆಯನೇ ಎಂದು ಖುಷಿ 


  ಅತ್ತಿಗೆ ಸಾವಿಗೆ ಚಾರು ಕಾರಣ
  ರಾಮಾಚಾರಿ ತನ್ನ ಅತ್ತಿಗೆ ಹೆಣದ ಮುಂದೆ ಕೂತು ಅಳುತ್ತಾ ಇರುತ್ತಾನೆ. ಈ ಸಾವಿಗೆ ನಾನೇ ಕಾರಣ. ದುಡ್ಡು ಜೋಡಿಸಲು ಆಗಲಿಲ್ಲ ಎಂದು. ಆಗ ಚಾರು ಗೆಳತಿ ಮಿಂಚು, ರಾಮಾಚಾರಿ ಈ ಸಾವಿಗೆ ಕಾರಣ ನೀನಲ್ಲ ಚಾರು ಎನ್ನುತ್ತಾಳೆ. ಏಕೆ ಆ ರೀತಿ ಹೇಳ್ತೀರಿ ಎಂದು ರಾಮಾಚಾರಿ ಕೇಳ್ತಾನೆ. ಆಗ ಮಿಂಚು, ರಾಮಾಚಾರಿ ನೀನು ಮಾಡಿದ ಪ್ರಾಜೆಕ್ಟ್ ನ್ನು ನಿಮ್ಮ ಮನೆಯಿಂದ ಕದ್ದು, ಅವಳದು ಎಂದು ಹೇಳಿದಳು. ನಿನ್ನ ಪ್ರಾಜೆಕ್ಟ್ ಡಿಲಿಟ್ ಮಾಡಿದಳು ಎಂಬ ಸತ್ಯವನ್ನು ಹೇಳಿದ್ದಾಳೆ.


  colors Kannada serial, kannada serial, aparna death, ramachari know about truth about project, ramachari serial, charu propose to ramachari with grand decoration, ramachari brother wife death, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ? ಚಾರು ಪ್ರೀತಿ ಹೇಳಿದ್ದನ್ನು ಕೇಳಿಸಿಕೊಳ್ಳಲೇ ಇಲ್ಲ ಚಾರಿ, ಚಾರು ಪ್ರಾಜೆಕ್ಟ್ ಕದ್ದ ಕಾರಣ ಅತ್ತಿಗೆ ಸಾವು, ಕೋಪಗೊಂಡ ರಾಮಾಚಾರಿ ಏನ್ ಮಾಡ್ತಾನೆ?, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ರಾಮಾಚಾರಿ ಅತ್ತಿಗೆ


  ರಾಮಾಚಾರಿ ದುಡ್ಡಲ್ಲಿ ಮೋಜು-ಮಸ್ತಿ
  ರಾಮಾಚಾರಿ ಪ್ರಾಜೆಕ್ಟ್ ಗೆದ್ದಿದ್ರೆ, ಲಕ್ಷ ಲಕ್ಷ ದುಡ್ಡು ಬಂದಿರೋದು. ಆದ್ರೆ ಪ್ರಾಜೆಕ್ಟ್ ಸೋತ ಕಾರಣ ದುಡ್ಡು ಸಿಗದೇ ಅತ್ತಿಗೆ ಆಪರೇಷನ್ ಮಾಡಿಸಲು ಆಗಲಿಲ್ಲ. ಅಲ್ಲದೇ ಆ ದುಡ್ಡಲ್ಲಿ ಚಾರು ಪಾರ್ಟಿ ಮಾಡಿ, ಹಣದ ಹೊಳೆ ಹರಿಸಿದ್ದಾಳೆ. ಇಲ್ಲಿ ರಾಮಾಚಾರಿ ಅತ್ತಿಗೆ ಸಾವನ್ನಪ್ಪಿದ್ರೆ, ಅಲ್ಲಿ ಚಾರು ಪಾರ್ಟಿ ಮಾಡುತ್ತಿದ್ದಾಳೆ. ಈ ವಿಷ್ಯ ಗೊತ್ತಾಗಿ, ಚಾರು ಬಳಿ ರಾಮಾಚಾರಿ ಹೊರಟಿದ್ದಾನೆ.


  ಇದನ್ನೂ ಓದಿ: Lakshana: ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ, ಭೂಪತಿ-ನಕ್ಷತ್ರಾಗೆ ಹೆಚ್ಚಾದ ಆತಂಕ! 


  ಚಾರುಗೆ ಕಾದಿದ್ಯಾ ಮಾರಿಹಬ್ಬ?
  ಚಾರು ಮಾಡಿದ ತಪ್ಪು ತಿಳಿದು, ರಾಮಾಚಾರಿ ಆಕೆ ಇರುವ ಸ್ಥಳಕ್ಕೆ ಹೋಗಿದ್ದಾನೆ. ಆಕೆಗೆ ಏನ್ ಹೇಳ್ತಾನೆ? ಅತ್ತಿಗೆ ಸಾವಿಗೆ ಕಾರಣವಾದವಳ ವಿರುದ್ಧ ಏನ್ ಮಾಡ್ತಾನೆ ಅನ್ನೋ ಭಯ ಶುರುವಾಗಿದೆ. ಅಲ್ಲದೇ ಚಾರು ರಾಮಾಚಾರಿ ತನ್ನ ಪ್ರೀತಿ ಒಪ್ಪಿಕೊಳ್ತಾನೆ. ಅವನು ಈ ಜಾಗಕ್ಕೆ ಬಂದೇ ಬರುತ್ತಾನೆ ಎಂದು ಕಾಯುತ್ತಿದ್ದಾಳೆ. ರಾಮಾಚಾರಿ ಬರುತ್ತಿದ್ದಾನೆ. ಆದ್ರೆ ಪ್ರೀತಿ ಒಪ್ಪಿಕೊಳ್ಳಲು ಅಲ್ಲ. ಆಕೆಗೆ ಬೈಯ್ಯಲು.


  colors Kannada serial, kannada serial, aparna death, ramachari know about truth about project, ramachari serial, charu propose to ramachari with grand decoration, ramachari brother wife death, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ? ಚಾರು ಪ್ರೀತಿ ಹೇಳಿದ್ದನ್ನು ಕೇಳಿಸಿಕೊಳ್ಳಲೇ ಇಲ್ಲ ಚಾರಿ, ಚಾರು ಪ್ರಾಜೆಕ್ಟ್ ಕದ್ದ ಕಾರಣ ಅತ್ತಿಗೆ ಸಾವು, ಕೋಪಗೊಂಡ ರಾಮಾಚಾರಿ ಏನ್ ಮಾಡ್ತಾನೆ?, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ರಾಮಾಚಾರಿ


  ರಾಮಾಚಾರಿ ಚಾರುವನ್ನು ಜೀವನದಲ್ಲೇ ಮಾತನಾಡಿಸಲ್ವಾ? ಚಾರು ಕನಸು ಏನಾಗುತ್ತೆ? ರಾಮಾಚಾರಿ ಪ್ರೀತಿ ಸಿಗಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: