ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇದೆ. ಅವಳನ್ನು ಮಾತನಾಡಿಸುವುದು ಇರಲಿ, ಅವರ ನೆರಳು ನಮ್ಮ ಮನೆ ಕಡೆ ಬೀಳಬಾರದು ಅಂತಿದ್ದಾರೆ, ಆದ್ರೆ ಮಾನ್ಯತಾ ಮತ್ತು ಚಾರುಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ತಮ್ಮ ಮನೆಯವರ ಸುದ್ದಿಗೆ ಬಂದವರಿಗೆ ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದುಕೊಳ್ಳುತ್ತಿದ್ದಾನೆ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ. ಅಪ್ಪನ ಬಳಿ ಹೇಳಿ ತಮ್ಮ ಕಂಪನಿ (Company) ಸಿಇಓ (CEO) ಪಟ್ಟ ಕೊಡಿಸಲು ಮುಂದಾಗಿದ್ದಾಳೆ.
ಶೈಲು ಅನ್ನೋ ಹೊಸ ಪಾತ್ರ
ರಾಮಾಚಾರಿ ಧಾರಾವಾಹಿಯಲ್ಲಿ ಶೈಲು ಅನ್ನುವ ಹೊಸ ಹೆಸರು ಕೇಳಿ ಬರುತ್ತಿದೆ. ಅದು ಹೊಸ ಪಾತ್ರ ಅಲ್ಲ. ಶೈಲು ಎನ್ನುವುದು ಚಾರು ಸೃಷ್ಟಿ ಮಾಡಿರೋದು. ರಾಮಾಚಾರಿಯನ್ನು ಮಾತನಾಡಿಸಲು ಶೈಲು ಎಂದು ಹೇಳಿಕೊಂಡಿದ್ದಾಳೆ. ಬೇರೆ ನಂಬರ್ ನಿಂದ ಶೈಲು ಎಂದು ಹೇಳಿ, ಅವನ ಜೊತೆ ಮಾತನಾಡುತ್ತಾಳೆ.
ಶೈಲುಗೆ ಮದುವೆ ಆಫರ್
ರಾಮಾಚಾರಿ ಮನೆಯವರಿಗೆ ಚಾರು ಕಂಡ್ರೆ ಆಗಲ್ಲ. ಆದ್ರೆ ಶೈಲು ಅಂದ್ರೆ ಎಲ್ಲರಿಗೂ ತುಂಬಾ ಪ್ರೀತಿ. ಶೈಲುಳನ್ನು ದೇವಸ್ಥಾನದಲ್ಲಿ ನೋಡಿದ ಅಜ್ಜಿ, ಆಕೆಯ ನಡೆ-ನುಡಿ ಇಷ್ಟ ಪಟ್ಟಿದ್ದಾಳೆ. ಅದಕ್ಕೆ ಶೈಲು ನಿನಗೆ ಮನೆಯಲ್ಲಿ ಗಂಡು ಹುಡುಕುತ್ತಾ ಇದ್ದಾರಾ ಎನ್ನುತ್ತಾರೆ. ಆಕೆ ಇಲ್ಲ ಅಂತಾಳೆ. ಅದಕ್ಕೆ ಅಜ್ಜಿ ನನ್ನ ಮೊಮ್ಮಗನನ್ನು ಮದುವೆ ಆಗು ಎಂದು ಆಫರ್ ನಿಡ್ತಾಳೆ. ಚಾರು ಖುಷಿಯಿಂದ ನಾಚಿಕೊಂಡು ಹೋಗುತ್ತಾಳೆ.
ಇದನ್ನೂ ಓದಿ: Bhagya Lakshmi: ವೈಷ್ಣವ್ ಜೊತೆ ಕೀರ್ತಿ ಮದುವೆ ಸಾಧ್ಯವಿಲ್ಲ ಎಂದ ಕುಸುಮಾ!
ಮೊಮ್ಮೊಗ ಅಂದ್ರೆ ರಾಮಾಚಾರಿ ಅಲ್ಲ ಕೋದಂಡ
ಅಜ್ಜಿ ಶೈಲುಗೆ ಮದುವೆ ಆಫರ್ ನೀಡಿರುವುದು ರಾಮಾಚಾರಿಗೆ ಅಲ್ಲ, ಬದಲಿಗೆ ಕೋದಂಡನಿಗೆ. ಕೋದಂಡನ ಹೆಂಡ್ತಿ ಅಪರ್ಣಾ ಸತ್ತಿರುವ ಹಿನ್ನೆಲೆ, ಅವನಿಗೆ ಮದುವೆ ಮಾಡುಲು ಚಾರು ಬಳಿ ಹೇಳಿದ್ದಾಳೆ. ಚಾರು ರಾಮಾಚಾರಿ ಎಂದುಕೊಂಡು ತಪ್ಪು ತಿಳಿದುಕೊಂಡಿದ್ದಾಳೆ. ಮದುವೆಗೆ ಒಪ್ಪಿಗೆ ಎಂದು ನಾಚಿಕೊಂಡು ಓಡಿ ಹೋಗ್ತಾಳೆ.
ಶೈಲುಗೆ ಕಾಲ್ ಮಾಡಿದ ರಾಮಾಚಾರಿ
ರಾಮಾಚಾರಿ ಮದುವೆ ವಿಷಯ ಕೇಳಲು ಶೈಲುಗೆ ಕಾಲ್ ಮಾಡಿದ್ದಾನೆ. ನೀವು ಮದುವೆ ಆಗಲು ನಿಜವಾಗ್ಲೂ ಒಪ್ಪಿಕೊಂಡಿದ್ದೀರಾ ಎಂದು ಕೇಳ್ತಾರೆ. ಆಕೆ ರಾಮಾಚಾರಿಗೆ ಎಂದುಕೊಂಡು ಹೌದು ಎನ್ನುತ್ತಾಳೆ. ಅದಕ್ಕೆ ರಾಮಾಚಾರಿ ಕೋದಂಡನ ವಿಚಾರ ಹೇಳಲು ಹೋಗುತ್ತಾನೆ ಆದ್ರೆ ಚಾರು ಕೇಳಿಸಿಕೊಳ್ಳಲ್ಲ.
ರಾಮಾಚಾರಿಗೆ ಸಿಇಓ ಪಟ್ಟ
ಚಾರು ತನ್ನ ಅಪ್ಪ ಜಯಶಂಕರ್ ಬಳಿ ಬಂದು ಮಾತನಾಡುತ್ತಿದ್ದಾಳೆ. ಅಪ್ಪ ನಾನು ನಿಮ್ಮ ಬಳಿ ಒಂದು ವಿಷು ಕೇಳ್ತೀನಿ ಎಂದು ಹೇಳುತ್ತಾಳೆ. ಅದಕ್ಕೆ ಅವರು ಓಕೆ ಎನ್ನುತ್ತಾರೆ. ನಮ್ಮ ಕಂಪನಿಗೆ ರಾಮಾಚಾರಿಯನ್ನು ಯಾಕೆ ಸಿಇಓ ಆಗಿ ತೆಗೆದುಕೊಳ್ಳಬಾರದು ಎಂದು ಹೇಳ್ತಾಳೆ. ಅದಕ್ಕೆ ಅವರ ಅಪ್ಪ ಓಕೆ ಎನ್ನುತ್ತಾರೆ. ರಾಮಾಚಾರಿ ಕೆಳಗೆ ನಾನು ಇನ್ನು ಸ್ವಲ್ಪ ದಿನ ಕೆಲಸ ಮಾಡ್ತೀನಿ ಎಂದು ಹೇಳ್ತಾಳೆ.
ಇದನ್ನೂ ಓದಿ: BBK Grand Finale: ಶನಿವಾರ-ಭಾನುವಾರ ಅಲ್ಲ, ಶುಕ್ರವಾರ-ಶನಿವಾರ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ!
ರಾಮಾಚಾರಿ ಸಿಇಓ ಪಟ್ಟ ಒಪ್ತಾನಾ? ಕೋದಂಡನ ಮದುವೆ ಮ್ಯಾಟರ್ ಚಾರುಗೆ ಗೊತ್ತಾಗುತ್ತಾ? ಧಾರಾವಾಹಿ ತೀವ್ರ ಕುತೂಹಲ ಮೂಡಿಸುತ್ತಿದ್ದು, ಮುಂದೇನಾಗುತ್ತೆ ಅಂತ ನೊಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ