• Home
  • »
  • News
  • »
  • entertainment
  • »
  • Ramachari: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಚಾರು, ರಾಮಾಚಾರಿ ಮದುವೆ ಆಗಲು ಶೈಲುಗೆ ಆಫರ್!

Ramachari: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಚಾರು, ರಾಮಾಚಾರಿ ಮದುವೆ ಆಗಲು ಶೈಲುಗೆ ಆಫರ್!

ರಾಮಾಚಾರಿ ಮದುವೆ ಆಗಲು ಶೈಲುಗೆ ಆಫರ್!

ರಾಮಾಚಾರಿ ಮದುವೆ ಆಗಲು ಶೈಲುಗೆ ಆಫರ್!

ಶೈಲುಳನ್ನು ದೇವಸ್ಥಾನದಲ್ಲಿ ನೋಡಿದ ಅಜ್ಜಿ, ಆಕೆಯ ನಡೆ-ನುಡಿ ಇಷ್ಟ ಪಟ್ಟಿದ್ದಾಳೆ. ಅಜ್ಜಿ ನನ್ನ ಮೊಮ್ಮಗ ರಾಮಾಚಾರಿಯನ್ನು ಮದುವೆ ಆಗು ಎಂದು ಆಫರ್ ನಿಡ್ತಾಳೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇದೆ. ಅವಳನ್ನು ಮಾತನಾಡಿಸುವುದು ಇರಲಿ, ಅವರ ನೆರಳು ನಮ್ಮ ಮನೆ ಕಡೆ ಬೀಳಬಾರದು ಅಂತಿದ್ದಾರೆ, ಆದ್ರೆ ಮಾನ್ಯತಾ ಮತ್ತು ಚಾರು ಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ತಮ್ಮ ಮನೆಯವರ ಸುದ್ದಿಗೆ ಬಂದವರಿಗೆ ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದುಕೊಳ್ಳುತ್ತಿದ್ದಾನೆ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ. ರಾಮಾಚಾರಿ ಬಳಿ ಮಾತನಾಡಲು ಶೈಲು ಎಂದುಕೊಂಡು ಓಡಾಡುತ್ತಿದ್ದಾಳೆ. ಶೈಲುಗೆ ಚಾರಿ ಅಜ್ಜಿ ಕಡೆಯಿಂದ ಮದುವೆ ಆಫರ್ (Offer) ಬಂದಿದೆ.


    ಶೈಲು ಅನ್ನೋ ಹೊಸ ಪಾತ್ರ
    ರಾಮಾಚಾರಿ ಧಾರಾವಾಹಿಯಲ್ಲಿ ಶೈಲು ಅನ್ನುವ ಹೊಸ ಹೆಸರು ಕೇಳಿ ಬರುತ್ತಿದೆ. ಅದು ಹೊಸ ಪಾತ್ರ ಅಲ್ಲ. ಶೈಲು ಎನ್ನುವುದು ಚಾರು ಸೃಷ್ಟಿ ಮಾಡಿರೋದು. ರಾಮಾಚಾರಿಯನ್ನು ಮಾತನಾಡಿಸಲು ಶೈಲು ಎಂದು ಹೇಳಿಕೊಂಡಿದ್ದಾಳೆ. ಬೇರೆ ನಂಬರ್ ನಿಂದ ಶೈಲು ಎಂದು ಹೇಳಿ, ಅವನ ಜೊತೆ ಮಾತನಾಡುತ್ತಾಳೆ.


    ಶೈಲು ನೋಡಲು ಬಂದ ರಾಮಾಚಾರಿ ಅಜ್ಜಿ, ತಂಗಿ
    ಶೈಲು ಈ ಹಿಂದ ಒಮ್ಮೆ ರೌಡಿಗಳ ಕೈಯಿಂದ ರಾಮಾಚಾರಿ ತಂಗಿ ಶೃತಿಯನ್ನು ಕಾಪಾಡಿರುತ್ತಾಳೆ. ಅದಕ್ಕೆ ಶೃತಿ ಮತ್ತು ಅವರಜ್ಜಿ ಅವಳನ್ನು ನೋಡಲು ದೇವಸ್ಥಾನಕ್ಕೆ ಬಂದಿದ್ದಾರೆ. ಶೈಲುಳನ್ನು ಮಾತನಾಡಿಸಲು. ದೇವರಿಗೆ ಕೈ ಮುಗಿಯುತ್ತಿದ್ದ ಚಾರುಳನ್ನು, ನಿನ್ನ ಮುಖ ನೋಡಬೇಕು ತಿರುಗು ಎನ್ನುತ್ತಾರೆ.


    ಇದನ್ನೂ ಓದಿ: Bigg Boss Kannada: ತಲೆಗೆ ಎಣ್ಣೆ ಹಚ್ಚುವ ವಿಷಯಕ್ಕೆ ಮನಸ್ತಾಪ, ಅಮೂಲ್ಯಗೆ ಅಹಂಕಾರ ಹೆಚ್ಚು ಎಂದ ರಾಕಿ! 


    ಸ್ಪಲ್ಪದರಲ್ಲೇ ಚಾರು ಬಚಾವ್
    ಚಾರು ತನ್ನ ಮುಖ ನೋಡಿದ್ರೆ ಎಲ್ಲಾ ಸತ್ಯ ಗೊತ್ತಾಗುತ್ತೆ ಅಂತ, ದೇವರ ಬಳಿ ಕಾಪಾಡಪ್ಪ ಎಂದು ಬೇಡಿಕೊಳ್ತಾಳೆ. ಆಗ ಯಾರೋ ಒಬ್ಬ ಇವಳ ಮೇಲೆ ಅರಿಶಿನ, ಕುಂಕುಮ ಚೆಲ್ತಾನೆ. ಆಗ ಚಾರು ಮುಖ ತುಂಬಾ ಕುಕುಂಮ ಆಗಿರುತ್ತೆ. ಆಗ ಆಕೆ ಧೈರ್ಯವಾಗಿ, ಶೃತಿ ಮತ್ತು ಅಜ್ಜಿ ಕಡೆ ತಿರುಗುತ್ತಾಳೆ. ಆಗ ಚಾರು ಎಂದು ಅವರಿಗೆ ಗೊತ್ತಾಗಲ್ಲ.


    colors Kannada serial, kannada serial, ramachari serial, ramachari serial hero grand mother marriage offer to charu, charu saves ramachari sister, ರಾಮಾಚಾರಿ ಧಾರಾವಾಹಿ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಚಾರು, ರಾಮಾಚಾರಿ ಮದುವೆ ಆಗಲು ಶೈಲುಗೆ ಆಫರ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಚಾರು


    ರಾಮಾಚಾರಿ ಮದುವೆ ಆಫರ್
    ರಾಮಾಚಾರಿ ಮನೆಯವರಿಗೆ ಚಾರು ಕಂಡ್ರೆ ಆಗಲ್ಲ. ಆದ್ರೆ ಶೈಲು ಅಂದ್ರೆ ಎಲ್ಲರಿಗೂ ತುಂಬಾ ಪ್ರೀತಿ. ಶೈಲುಳನ್ನು ದೇವಸ್ಥಾನದಲ್ಲಿ ನೋಡಿದ ಅಜ್ಜಿ, ಆಕೆಯ ನಡೆ-ನುಡಿ ಇಷ್ಟ ಪಟ್ಟಿದ್ದಾಳೆ. ಅದಕ್ಕೆ ಶೈಲು ನಿನಗೆ ಮನೆಯಲ್ಲಿ ಗಂಡು ಹುಡುಕುತ್ತಾ ಇದ್ದಾರಾ ಎನ್ನುತ್ತಾರೆ. ಆಕೆ ಇಲ್ಲ ಅಂತಾಳೆ. ಅದಕ್ಕೆ ಅಜ್ಜಿ ನನ್ನ ಮೊಮ್ಮಗ ರಾಮಾಚಾರಿಯನ್ನು ಮದುವೆ ಆಗು ಎಂದು ಆಫರ್ ನಿಡ್ತಾಳೆ. ಚಾರು ಖುಷಿಯಿಂದ ನಾಚಿಕೊಂಡು ಹೋಗುತ್ತಾಳೆ.


    ಖುಷಿಯಾದ ಚಾರು
    ಚಾರು ರಾಮಾಚಾರಿ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾಳೆ. ಅವನ ಹಿಂದೆ ಹಿಂದೆ ಓಡಾಡುತ್ತಿದ್ದಾಳೆ. ಅವನು ಅವಳನ್ನು ತಿರುಗಿಯೂ ನೋಡ್ತಾ ಇಲ್ಲ. ಆದ್ರೆ ಶೈಲು ಅಂದ್ರೆ ಮಾತ್ರ, ರಾಮಾಚಾರಿ, ಅವರ ಮನೆಯವರಿಗೂ ಇಷ್ಟ. ಪ್ರೀತಿ ಮಾಡೋ ಹುಡುಗನ ಮದುವೆ ಆಫರ್ ಬಂದಿದ್ದಕ್ಕೆ ಚಾರು ಖುಷಿ ಆಗಿದ್ದಾಳೆ.


    colors Kannada serial, kannada serial, ramachari serial, ramachari serial hero grand mother marriage offer to charu, charu saves ramachari sister, ರಾಮಾಚಾರಿ ಧಾರಾವಾಹಿ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಚಾರು, ರಾಮಾಚಾರಿ ಮದುವೆ ಆಗಲು ಶೈಲುಗೆ ಆಫರ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ರಾಮಾಚಾರಿ ಅಜ್ಜಿ,ತಂಗಿ


    ಇದನ್ನೂ ಓದಿ: Avatar 2: ಭಾರತದಲ್ಲಿ ನಿರೀಕ್ಷೆ ಮಾಡಿದ್ದಷ್ಟು ಗಳಿಸಿಲ್ಲ ಅವತಾರ್ 2, ವಿಶ್ವದಾದ್ಯಂತ ಗಳಿಸಿದ್ದೆಷ್ಟು? 


    ಚಾರು ಶೈಲು ಅಂತ ಗೊತ್ತಾಗುತ್ತಾ? ರಾಮಾಚಾರಿ ಪ್ರೀತಿ ಚಾರುಗೆ ಸಿಗುತ್ತಾ? ಶೈಲುನೇ ಚಾರು ಅಂತ ಗೊತ್ತಾದ್ರೆ, ಮನೆಯವರ ನಿರ್ಧಾರವೇನು? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: