ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ (Cancer) ಇರುತ್ತೆ. ಅಪರ್ಣಾಗೆ ಆಪರೇಷನ್ ಮಾಡಿಸಲು ಹಣ ಇಲ್ಲದೇ ಆಕೆ ಸಾವನ್ನಪ್ಪುತ್ತಾಳೆ. ಚಾರು ಮೋಸದಿಂದ, ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ತಮ್ಮ ಮನೆಯವರ ಸುದ್ದಿಗೆ ಬಂದ ಚಾರು ಮತ್ತು ಮಾನ್ಯತಾಗೆ ತನ್ನ ಬುದ್ಧಿವಂತಿಕೆಯಿಂದಲೇ ಪಾಠ ಕಲಿಸಲು ರಾಮಾಚಾರಿ ಮುಂದಾಗಿದ್ದಾನೆ. ಇನ್ನೊಂದೆಡೆ ಚಾರು ರಾಮಾಚಾರಿ ಪ್ರೀತಿ (Love) ಪಡೆದುಕೊಳ್ಳಲು ಪರದಾಡುತ್ತಿದ್ದಾಳೆ.
ದೇವರ ಬಳಿ ಕ್ಷಮೆಯಾಚನೆ
ದೇವರೇ ಇಷ್ಟು ದಿನ ಒಳ್ಳೆಯವರಿಗೆ ಒಳ್ಳೆಯದನ್ನು ಮಾಡಿದ್ದೇನೆ. ಕೆಟ್ಟವರಿಗೂ ಒಳ್ಳೆಯದನ್ನೇ ಮಾಡಿದ್ದೇನೆ. ಜೀವನದಲ್ಲಿ ಮೊದಲನೇ ಬಾರಿ ಕೆಟ್ಟವರಿಗೆ ಕೆಟ್ಟವನಾಗುಲು ಬಯಸುತ್ತಿದ್ದೇನೆ. ಕೆಟ್ಟವನ ರೀತಿ ನಟನೆ ಮಾಡೋ ಪರಿಸ್ಥಿತಿ ಬಂದಿದೆ. ಕ್ಷಮಿಸಿ ಬಿಡಪ್ಪ.
ಯಾರೋ ಬಂದು ನಮ್ಮ ಮನೆಯವರಿಗೆ ಕಾಟ ಕೊಟ್ರೆ ಹೇಗೆ ಸುಮ್ಮನಿರುವುದು. ನಮ್ಮ ಮನೆಯವರ ಕಣ್ಣೀರು ನೋಡಿ ಸುಮ್ಮನೆ ಕೂರುವ ಅಪ್ರಯೋಜಕ ಅಲ್ಲ ಎಂದು ದೇವರ ಬಳಿ ಹೇಳಿಕೊಳ್ಳುತ್ತಿದ್ದಾನೆ.
ಬಡವನ ಕೋಪ ಶ್ರೀಮಂತರ ಸೊಕ್ಕು ಇಳಿಸುತ್ತೆ
ಬಡವರ ಕೋಪವನ್ನು ನುಂಗಿಕೊಳ್ಳಬಾರದು. ಶ್ರೀಮಂತರ ಸೊಕ್ಕು ಅಡಗಿಸಬೇಕು. ದೊಡ್ಡವರ ದುರಹಂಕಾರ ಸುಟ್ಟು ಬೂದಿಯಾಗುತ್ತೆ ಅಂತ ತೋರಿಸಿ ಕೊಡಬೇಕು. ರಾಮಾಚಾರಿಗೆ ಒಂದು ವ್ಯಕ್ತಿತ್ವ ಇತ್ತು.
ಅದನ್ನು ಅವರಿಗೆ ಬುದ್ಧಿ ಕಲಿಸಲು ಬದಲಾಯಿಸಿಕೊಳ್ತಿದ್ದೇನೆ. ನಮ್ಮ ಅಣ್ಣನ ಕೋಪಕ್ಕೆ ಒಂದು ಉತ್ತರ. ನಮ್ಮ ಅತ್ತಿಗೆ ಸಾವಿಗೆ ನ್ಯಾಯ. ನಮ್ಮ ಮನೆಯವರ ಮನಸ್ಸಿಗೆ ಒಂದು ನೆಮ್ಮದಿ ಕೊಡಬೇಕು ದೇವರೆ ನಾನು ಎಂದು ರಾಮಾಚಾರಿ ಹೇಳುತ್ತಿದ್ದಾನೆ.
ಇದನ್ನೂ ಓದಿ: Lakshana: ಅಪ್ಪನ ತಪ್ಪಿನಿಂದ ನಕ್ಷತ್ರಾ ಪರದಾಟ, ಭೂಪತಿ ಮನೆಯಲ್ಲಿ ಒಬ್ಬಂಟಿ!
ಶಿಕ್ಷೆ ಕೊಡೋ ಟೈಮ್
ಇಷ್ಟು ದಿನ ದೇವರು ನೋಡಿಕೊಳ್ತಾನೆ ಅಂತ ಸುಮ್ನೆ ಇದ್ದೆ. ನೀನು ಎಷ್ಟು ಜನರನ್ನು ನೋಡ್ತೀಯಾ? ನಾನು ಈ ಬಾರಿ ಅವರಿಗೆ ಬುದ್ಧಿ ಕಲಿಸಲು ಹೋಗ್ತಾ ಇದ್ದೇನೆ. ಬುದ್ಧಿ ಹೇಳಿ ತಿದ್ದೋ ಕಾಲ ಹೋಯ್ತು. ಇನ್ನೇನಿದ್ದರು ಶಿಕ್ಷೆ ಕೊಡೋ ಟೈಮ್. ಅದನ್ನು ನಾನೇ ಮಾಡ್ತೀನಿ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು. ನನ್ನನ್ನು ಕ್ಷಮಿಸು ದೇವರೇ ಎಂದು ರಾಮಾಚಾರಿ ಕೇಳಿಕೊಂಡಿದ್ದಾನೆ.
ರಾಮಾಚಾರಿ ಪ್ರೀತಿ ಬೇಕು
ಮೊದಲು ಚಾರುಗೆ ರಾಮಾಚಾರಿಯನ್ನು ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ಅವನ ಮೇಲೆ ಪ್ರೀತಿ ಆಗಿದೆ. ಹೇಗಾದ್ರೂ ಅವನ ಪ್ರೀತಿ ಪಡೆಯಬೇಕು ಎಂದು ಒದ್ದಾಡುತ್ತಿದ್ದಾಳೆ. ಅವಳು ತನ್ನ ಪ್ರೀತಿ ಹೇಳಿಕೊಳ್ಳುವ ದಿನವೇ, ಅಪರ್ಣಾ ಸಾವನ್ನಪ್ಪಿ, ಏನೇನು ನಡೆದು ಹೋಗುತ್ತೆ. ಈಗ ಅವನ ಬಳಿ ಪ್ರೀತಿ ಹೇಳಿಕೊಳ್ಳಲು ಪರದಾಡುತ್ತಿದ್ದಾಳೆ.
ರಾಮಾಚಾರಿ ಕೆಲಸ ಸಕ್ಸಸ್ ಆಗುತ್ತಂತೆ
ರಾಮಾಚಾರಿ ಮನೆಯವರು ಅವನ ಬಗ್ಗೆ ಭವಿಷ್ಯ ಕೇಳಿದ್ದಾರೆ. ಈಗ ರಾಮಾಚಾರಿಗೆ ಒಳ್ಳೆಯ ಸಮಯ ಅಂತೆ. ಅವನು ಅಂದುಕೊಂಡ ಕೆಲಸ ಆಗುತ್ತಂತೆ. ಪ್ರೀತಿಸಿದ್ರೆ ಪ್ರೇಮಾಚಾರಿ ಆಗ್ತಾನಂತೆ. ದ್ವೇಷಿಸಿದ್ರೆ ಅವರು ಸರ್ವನಾಶ ಆಗ್ತಾರಂತೆ. ಅದನ್ನು ಕೇಳಿ ಮನೆಯವರು ಶಾಕ್ ಆಗಿದ್ದಾರೆ. ಯಾಕಂದ್ರೆ ಅವನು ದ್ವೇಸ ಅಂತ ಓಡಾಡ್ತ ಇದ್ದಾನೆ.
ಇದನ್ನೂ ಓದಿ: Kannadathi: ಭುವಿ-ಹರ್ಷನನ್ನು ದೂರ ಮಾಡಲು ವರು ಸರ್ಕಸ್! ಕನ್ನಡ ಟೀಚರ್ ಹೋಗಿದ್ದೆಲ್ಲಿಗೆ?
ಒಂದೆಂಡೆ ಪ್ರೀತಿ. ಇನ್ನೊಂದೆಡೆ ದ್ವೇಷ. ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ