ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಅಪರ್ಣಾಗೆ ಆಪರೇಷನ್ ಮಾಡಿಸಲು ಹಣ ಇಲ್ಲದೇ ಆಕೆ ಸಾವನ್ನಪ್ಪುತ್ತಾಳೆ. ಚಾರು ಮೋಸದಿಂದ, ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ತಮ್ಮ ಮನೆಯವರ ಸುದ್ದಿಗೆ ಬಂದ ಚಾರು ಮತ್ತು ಮಾನ್ಯತಾಗೆ ತನ್ನ ಬುದ್ಧಿವಂತಿಕೆಯಿಂದಲೇ ಪಾಠ ಕಲಿಸಲು ರಾಮಾಚಾರಿ ಮುಂದಾಗಿದ್ದಾನೆ. ಮಾನ್ಯತಾಳನ್ನು ಕೂಡಿ ಹಾಕಿ ಭಯಪಡಿಸುತ್ತಿದ್ದಾನೆ. ಈಗ ಚಾರು, ಮಾನ್ಯತಾ (Manyata) ಮುಂದೆ ಬಂದು ಬಾಂಧವ್ಯದ ಪಾಠ (Lesson) ಹೇಳಿದ್ದಾನೆ.
ಚಾರು ಮತ್ತು ಮಾನ್ಯತಾಗೆ ಭಯ
ರಾಮಾಚಾರಿ ಮನೆಯಲ್ಲಿ ಅಪರ್ಣಾ ಸಾವನ್ನಪ್ಪಿದಾಗಿನಿಂದ ತುಂಬಾ ಬೇಸರದಲ್ಲಿ ಇದ್ದಾರೆ. ನಮ್ಮ ಮನೆಯವರ ಸುದ್ದಿಗೆ ಬಂದವರನ್ನು ಸುಮ್ನೆ ಬಿಡಲ್ಲ. ಅವರಿಗೆ ಬುದ್ಧಿ ಕಲಿಸುತ್ತೇನೆ ಎಂದು ರಾಮಾಚಾರಿ ಪಣ ತೊಟ್ಟಿದ್ದಾನೆ. ಅವರಿಗೆ ಗೊತ್ತಾಗದ ರೀತಿ ಬುದ್ಧಿವಂತಿಕೆಯಿಂದ ಅವರಿಗೆ ಹೊಡೆತ ಕೊಡಬೇಕು ಎಂದುಕೊಂಡಿದ್ದಾನೆ. ಅದೇ ರೀತಿ ಎಲ್ಲವನ್ನೂ ಪ್ಲ್ಯಾನ್ ಮಾಡಿ ಮಾನ್ಯತಾಳನ್ನು ಅಲ್ಲಿಗೆ ಕರೆಸಿಕೊಂಡಿದ್ದ.
ಮಗಳನ್ನು ಕೊಲ್ಲಲು ಅಡ್ಡ ಬಂದ ಮಮತೆ
ರಾಮಾಚಾರಿ ಮಾನ್ಯತಾಗೆ ಭಯಪಡಿಸಿರುತ್ತಾನೆ, ನೀನು ಬದುಕಬೇಕು ಎಂದ್ರೆ ನಿನ್ನ ಮಗಳ ಪ್ರಾಣ ಬಲಿ ಕೊಡು ಎಂದು. ಅಂತೆಯೇ ಮಾನ್ಯತಾ ಚಾರುಳನ್ನು ಅಲ್ಲಿಗೆ ಕರೆಸುತ್ತಾಳೆ. ಆದ್ರೆ ಚಾರುಳನ್ನು ಕೊಲ್ಲಲು ಆಗಲ್ಲ. ತಾನೇ ಸಾಕಿ ಬೆಳೆಸಿದ ಕಂದನನ್ನು ಕೊಲ್ಲುವುದು ಹೇಗೆ? ನಾನೇ ಸಾಯ್ತೀನಿ ಎಂದು ತಲೆಗೆ ಗುಂಡು ಹಾರಿಸಿಕೊಳ್ತಾರೆ. ಆದ್ರೆ ಅದರಲ್ಲಿ ಗುಂಡು ಇರಲ್ಲ. ಚಾರು ಯಾರು ನೀನು ಧೈರ್ಯ ಇದ್ರೆ ನಮ್ಮ ಕಣ್ಣ ಮುಂದೆ ಬಾ ಎನ್ನುತ್ತಾಳೆ.
ಇದನ್ನೂ ಓದಿ: Vaishnavi Gowda: ಮೊದಲ ಬಾರಿ ಮೌನ ಮುರಿದ ವೈಷ್ಣವಿ ಗೌಡ ತಾನು ಡಿಪ್ರೆಷನ್ಗೆ ಹೋಗಿಲ್ಲ ಅಂದ್ರು
ಚಾರು-ಮಾನ್ಯತಾ ಮುಂದೆ ಬಂದ ರಾಮಾಚಾರಿ
ರಾಮಾಚಾರಿ ಮಾನ್ಯತಾ ಮತ್ತೆ ಚಾರು ಮುಂದೆ ಬರುತ್ತಾನೆ. ನೀನಾ ಎಂದು ಮಾನ್ಯತಾ ಕೇಳ್ತಾಳೆ. ಹೌದು ನಾನೇ. ನಿಮ್ಮ ಮಗಳು ವಿಷ್ಯಕ್ಕೆ ಬಂದ್ರೆ ನಿಮಗೆ ಬಂಧ, ಬಾಂಧವ್ಯ ನೆನಪಾಗುತ್ತೆ. ಬೇರೆಯವರಿಗೆ ಅದು ಇರಲ್ವಾ? ನಮ್ಮ ರೀತಿಯ ಬಡವರಿಗೆ ಭಾವನೆ ಬರಲ್ವಾ? ನಮ್ಮ ಕುಟುಂಬದ ಮುಂದೆ ನಮ್ಮ ಅತ್ತಿಗೆ ಸತ್ತಿದ್ದಾರೆ. ಅದರ ನೋವನ್ನು ನಾವು ಅನುಭವಿಸುತ್ತಿದ್ದೇವೆ. ನಿಮಗೆ ಆ ಬಗ್ಗೆ ಗೊತ್ತಾ ಎಂದು ರಾಮಾಚಾರಿ ಮಾನ್ಯತಾಳನ್ನು ಪ್ರಶ್ನೆ ಮಾಡಿದ್ದಾನೆ.
ಸಾವಿನ ಮುಂದೆ ಏನೂ ಇಲ್ಲ
ಸಾವು ನಿಮ್ಮ ನೆತ್ತಿ ಮೇಲೆ ಕೂತಾಗ, ನಿಮ್ಮ ದುಡ್ಡು, ಆಸ್ತಿ, ಕಾರು ಲೆಕ್ಕಕ್ಕೆ ಬರಲ್ಲ. ಈ ಜಗತ್ತು ಭ್ರಮೆಯಲ್ಲಿ ಬದುಕುತ್ತಿದೆ. ಬರುವಾಗ ಏನೂ ತರಲ್ಲ. ಹೋಗುವಾಗಲೂ ಏನು ತರಲ್ಲ. ನಿಮ್ಮ ಧಿಮಾಕು, ಕೋಪ, ಅಸಡ್ಡೆ ಯಾವುದು ನಿಮ್ಮ ಜೀವ ಉಳಿಸಲ್ಲ. ದುಡ್ಡಿದೆ ಎಮದು ಬೇರೆಯವರ ಜೀವನದಲ್ಲಿ ಆಟ ಆಡಬೇಡಿ ಎಂದು ರಾಮಾಚಾರಿ ಹೇಳ್ತಾನೆ.
ರಾಮಾಚಾರಿ ಖಡಕ್ ಎಚ್ಚರಿಕೆ
ಕರ್ಮ ಅನ್ನುವುದು ಹುಚ್ಚು ನಾಯಿ ತರ. ನೀವು ಕೋಲು ತೋರಿಸಿ, ದೂರ ತಳ್ಳಿ, ಅದು ಬೆನ್ನ ಹಿಂದೆ ಬಂದು ಹುಡುಕಿಕೊಂಡು ಬಂದು ಕಚ್ಚುತ್ತೆ. ನಾನು ಒಂದು ಪಾಠ ಕಲಿಸಿದ್ದೇನೆ. ಇದನ್ನು ಕಲಿತು, ಗೆರೆ ಎಳೆದು ಬದುಕಿದ್ರೆ, ನಿಮ್ಮ ಮುಂದಿನ ಭವಿಷ್ಯ ಚೆನ್ನಾಗಿರುತ್ತೆ.
ಇಲ್ಲ ಅಂದ್ರೆ, ನಾನು ಚದುರಂಗದ ಆಟ ಶುರು ಮಾಡಿ ಆಗಿದೆ. ಪಾನ್ಗಳನ್ನು ಎತ್ತಿ ಇಡ್ತಾನೇ ಇರ್ತಿನಿ. ಏನು ಮಾಡ್ತೀನಿ ಅಂತ ನಿಮಗೆ ಗೊತ್ತೇ ಆಗಲ್ಲ. ಪೆಟ್ಟುಗಳು ಮಾತ್ರ ಬೀಳ್ತಾನೆ ಇರುತ್ತೆ ಹುಷಾರ್ ಎಂದು ರಾಮಾಚಾರಿ ಎಚ್ಚರಿಕೆ ಕೊಟ್ಟಿದ್ದಾನೆ.
ಇದನ್ನೂ ಓದಿ: Kannadathi: ನಾನು ಹುಚ್ಚಿ, ಪ್ಲೀಸ್ ಹರ್ಷನನ್ನ ಬಿಟ್ಟುಬಿಡಿ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಹಠಮಾರಿ ಸಾನಿಯಾ
ಚಾರು ಬದಲಾಗಿದ್ದಾಳೆ, ಮಾನ್ಯತಾ ಬದಲಾಗುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ