• Home
  • »
  • News
  • »
  • entertainment
  • »
  • Ramachari: ಅಮ್ಮನ ಮಮತೆ ತೋರುತ್ತಿದ್ದ ಅತ್ತಿಗೆಗೆ ರಾಮಾಚಾರಿಯಿಂದ ಭಾವಪೂರ್ಣ ವಿದಾಯ

Ramachari: ಅಮ್ಮನ ಮಮತೆ ತೋರುತ್ತಿದ್ದ ಅತ್ತಿಗೆಗೆ ರಾಮಾಚಾರಿಯಿಂದ ಭಾವಪೂರ್ಣ ವಿದಾಯ

ಅತ್ತಿಗೆಗೆ ರಾಮಾಚಾರಿಯಿಂದ ಭಾವಪೂರ್ಣ ವಿದಾಯ

ಅತ್ತಿಗೆಗೆ ರಾಮಾಚಾರಿಯಿಂದ ಭಾವಪೂರ್ಣ ವಿದಾಯ

ರಾಮಾಚಾರಿ ಅತ್ತಿಗೆ ಮೃತದೇಹಕ್ಕೆ ಛತ್ರಿ ಹಿಡಿದಿದ್ದಾನೆ. ಎಲ್ಲರೂ ನೋಡಿ ಮತ್ತಷ್ಟು ಜೋರಾಗಿ ಅತ್ತಿದ್ದಾರೆ. ಅತ್ತಿಗೆ ಇನ್ನಿಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗದೇ, ಕಣ್ಣೀರಿಡುತ್ತಲೇ ಆಕೆ ಚಿತೆಗೆ ಬೆಂಕಿ ಇಟ್ಟಿದ್ದಾರೆ, ಕಣ್ಣೀರಿನ ವಿದಾಯ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ (Cancer) ಇರುತ್ತೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾಗೆ ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ಹೇಳಿರುತ್ತಾರೆ. ರಾಮಾಚಾರಿ ಆ ಹಣವನ್ನು ಜೋಡಿಸಲು ಒದ್ದಾಡುತ್ತಿರುತ್ತಾನೆ. ಆದ್ರೆ ದುಡ್ಡು ಜೋಡಿಸಲು ಸಾಧ್ಯವಾಗಿರಲಿಲ್ಲ.ಅಪರ್ಣಾ ಸಾವನ್ನಪ್ಪಿದ್ದಾಳೆ (Death). ಚಾರು ಮೋಸದಿಂದ ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ರಾಮಾಚಾರಿಗೆ ಗೊತ್ತಾಗಿದೆ. ಬಿಟ್ಟು ಹೋದ ಅತ್ತಿಗೆಗೆ ಭಾವಪೂರ್ಣ ವಿದಾಯ ಹೇಳಲಾಗಿದೆ.


    ಅಮ್ಮನಂತಾ ಅತ್ತಿಗೆ ಇನ್ನಿಲ್ಲ
    ಅತ್ತಿಗೆ ಅಪರ್ಣಾ ಸಾವು ರಾಮಾಚಾರಿ ಮನೆಯವರನ್ನು ಆಘಾತ ಗೊಳಿಸಿದೆ. ಎಲ್ಲರೂ ನಮ್ಮ ಬಳಿ ದುಡ್ಡು ಇದ್ದಿದ್ರೆ ಈಕೆಯನ್ನು ಬದುಕಿಸಿಕೊಳ್ಳಬಹುದಿತ್ತು ಎಂದು ಕೊರಗುತ್ತಿದ್ದಾರೆ. ತಮ್ಮ ಅಸಹಾಯಕ ಸ್ಥಿತಿಗೆ ಕಣ್ಣೀರಿಡುತ್ತಿದ್ದಾರೆ. ಮಗಳ ಅಂತ ಸೊಸೆ, ಅಮ್ಮನಂತ ಅತ್ತಿಗೆ, ಮುದ್ದಿನ ಮಡದಿ ಇಲ್ಲ ಎಂದು ಗೋಳಾಡುತ್ತಿದ್ದಾರೆ.


    ಚಾರುಗೆ ಮಾತಿನ ಚಾಟಿ
    ಚಾರು ಅಪರ್ಣಾಳನ್ನು ನೋಡಲು ಬಂದಿರುತ್ತಾಳೆ. ಅದಕ್ಕೆ ರಾಮಾಚಾರಿ ಕೋಪಗೊಂಡು, ಆಕೆಯ ತಪ್ಪುಗಳನ್ನು ಹೇಳಿದ್ದಾಳೆ. ಈ ಮನೆ ಒಂದು ಸುಂದರವಾದ ಸೊಸೆಯನ್ನು ಕಳೆದುಕೊಂಡಿದೆ. ಈ ಮನೆ ಏನೇ ಮಾಡಿತ್ತು ನಿನಗೆ ಎಂದು ರಾಮಾಚಾರಿ ಚಾರುಳನ್ನು ಪ್ರಶ್ನೆ ಮಾಡುತ್ತಿದ್ದಾನೆ. ನಾನು ಅತ್ತಿಗೆಯನ್ನು ಕಳೆದುಕೊಂಡಿದ್ದೇನೆ. ಏನೇ ಮಾಡಿದ್ದೇ ನಾನು ನಿನಗೆ ಎಂದಿದ್ದಾನೆ. ನಿನ್ನ ತಪ್ಪಿನಿಂದ ನಮಗೆ ನೋವು ಎಂದು ಬೈದು ಕಳಿಸಿದ್ದಾನೆ.


    ಇದನ್ನೂ ಓದಿ: Kannadathi: ಅಮ್ಮಮ್ಮ ಬರೆದ ವಿಲ್ ಓದುವ ಸಮಯ ಬಂದೇ ಬಿಡ್ತು; ವರು, ಸಾನಿಯಾ ಮುಂದೇನು ಮಾಡ್ತಾರೆ?


    ಅತ್ತಿಗೆಗೆ ಬಿಸಿ ನೀರು ಕಾಯಿಸಿದ ರಾಮಾಚಾರಿ
    ಅಪರ್ಣಾ ಅಂತ್ಯಕ್ರಿಯೆ ಮಾಡಬೇಕಿದೆ. ಅದಕ್ಕೆ ಅವಳ ದೇಹ ಶುದ್ಧಿ ಮಾಡಬೇಕು ಎಂದು ಹೇಳುತ್ತಾರೆ. ಅದಕ್ಕೆ ರಾಮಾಚಾರಿ ಬಿಸಿ ನೀರು ಕಾಯಿಸುತ್ತಾನೆ. ಅಲ್ಲಿ ಇರುವವರು ಸತ್ತವರಿಗೆ ಯಾಕೆ ಬಿಸಿ ನೀರು. ತಣ್ಣೀರು ಸಾಕು ಎನ್ನುತ್ತಾರೆ. ಆಗ ರಾಮಾಚಾರಿ ಆ ರೀತಿ ಹೇಳಬೇಡಿ. ನಮ್ಮ ಅತ್ತಿಗೆಗೆ ತಣ್ಣೀರಿನ ಸ್ನಾನ ಆಗಲ್ಲ ಎಂದು ಹೇಳಿ ಅಳುತ್ತಾ ಬಿಸಿ ನೀರು ಕಾಯಿಸುತ್ತಿದ್ದಾನೆ.


    colors Kannada serial, kannada serial, aparna death, last journey of aparna, ramachari serial, charu decide to suicide, ramachari brother wife death, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ಅಮ್ಮನ ರೀತಿಯ ಅತ್ತಿಗೆಗೆ ರಾಮಾಚಾರಿಯಿಂದ ಭಾವಪೂರ್ಣ ವಿದಾಯ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಕಣ್ಣೀರಿನ ವಿದಾಯ


    ಅತ್ತಿಗೆ ಮೃತದೇಹಕ್ಕೆ ಛತ್ರಿ ಹಿಡಿದ
    ಅಪರ್ಣಾಳ ದೇಹ ಸುಡಲು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಆಗ ಜೋರಾಗಿ ಮಳೆ ಬರುತ್ತಿದೆ. ತನ್ನ ಅತ್ತಿಗೆ ನೆನೆಯಬಾರದು ಎಂದು ರಾಮಾಚಾರಿ, ಓಡಿ ಹೋಗಿ ಛತ್ರಿ ತಂದಿದ್ದಾನೆ. ಅತ್ತಿಗೆ ಮೃತದೇಹಕ್ಕೆ ಛತ್ರಿ ಹಿಡಿದಿದ್ದಾನೆ. ಎಲ್ಲರೂ ನೋಡಿ ಮತ್ತಷ್ಟು ಜೋರಾಗಿ ಅತ್ತಿದ್ದಾರೆ. ಅತ್ತಿಗೆ ಇನ್ನಿಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗದೇ, ಕಣ್ಣೀರಿಡುತ್ತಲೇ ಆಕೆ ಚಿತೆಗೆ ಬೆಂಕಿ ಇಟ್ಟಿದ್ದಾರೆ, ಕಣ್ಣೀರಿನ ವಿದಾಯ ಹೇಳಿದ್ದಾರೆ.


    ಇದನ್ನೂ ಓದಿ: Actress Amulya: ತಿರುಪತಿಯಲ್ಲಿ ಅಮೂಲ್ಯ ಜಗದೀಶ್, ವೆಂಕಟೇಶ್ವರನಿಗೆ ಮಕ್ಕಳ ಕೂದಲು ಅರ್ಪಣೆ


    ಮಳೆಯಲ್ಲೇ ಕುಸಿದ ಚಾರು
    ಚಾರುಗೆ ರಾಮಾಚಾರಿ ತುಂಬಾ ಬೈದಿದ್ದಾನೆ. ತನ್ನ ಪ್ರೀತಿ ಹೇಳಿಕೊಳ್ಳುವ ಸಂದರ್ಭದಲ್ಲಿ ಈ ರೀತಿಯ ಅನಾಹುತ ಆಗಿ ಹೋಯ್ತು. ರಾಮಾಚಾರಿ ನನ್ನ ಕ್ಷಮಿಸಲ್ಲ. ಯಾವನು ಯಾವತ್ತೂ ಸಿಗಲ್ಲ ಎಂದು ಮನೆಯಲ್ಲೇ ಅಳುತ್ತಾ ಕೂತಿದ್ದಾಳೆ. ಅಲ್ಲದೇ ಸೂಸೈಡ್ ಮಾಡಿಕೊಳ್ಳೋ ನಿರ್ಧಾರ ಮಾಡಿದ್ದಾಳೆ.


    colors Kannada serial, kannada serial, aparna death, last journey of aparna, ramachari serial, charu decide to suicide, ramachari brother wife death, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ಅಮ್ಮನ ರೀತಿಯ ಅತ್ತಿಗೆಗೆ ರಾಮಾಚಾರಿಯಿಂದ ಭಾವಪೂರ್ಣ ವಿದಾಯ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಮಳೆಯಲ್ಲೇ ಕುಸಿದ ಚಾರು


    ಅತ್ತಿಗೆಗೆ ರಾಮಾಚಾರಿಯಿಂದ ಭಾವಪೂರ್ಣ ವಿದಾಯ, ಚಾರ ಕಥೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: