• Home
  • »
  • News
  • »
  • entertainment
  • »
  • Ramachari: ರಾಮಾಚಾರಿ ಸಿಗಲ್ಲ ಎಂಬ ನೋವು, ಸಾಯೋಕೆ ಹೊರಟ ಚಾರು!

Ramachari: ರಾಮಾಚಾರಿ ಸಿಗಲ್ಲ ಎಂಬ ನೋವು, ಸಾಯೋಕೆ ಹೊರಟ ಚಾರು!

ಅತ್ತಿಗೆ ಅಪರ್ಣಾ ಸಾವು

ಅತ್ತಿಗೆ ಅಪರ್ಣಾ ಸಾವು

ಚಾರು ತನಗೆ ರಾಮಾಚಾರಿ ಸಿಗಲ್ಲ. ಅವನ ಜೀವನದಲ್ಲಿ ಇನ್ನು ನನಗೆ ಜಾಗ ಇಲ್ಲ. ನಾನು ಮಾಡಿದ ತಪ್ಪಿಗೆ ಸಾವೊಂದೆ ಪರಿಹಾರ ಎಂದು ಸಾಯೋಕೆ ಹೊರಟಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾಗೆ ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ಹೇಳಿರುತ್ತಾರೆ.  ರಾಮಾಚಾರಿ ಆ ಹಣವನ್ನು ಜೋಡಿಸಲು ಒದ್ದಾಡುತ್ತಿರುತ್ತಾನೆ. ಆದ್ರೆ ದುಡ್ಡು ಜೋಡಿಸಲು ಸಾಧ್ಯವಾಗಿರಲಿಲ್ಲ. ಅಪರ್ಣಾ ಸಾವನ್ನಪ್ಪಿದ್ದಾಳೆ (Death). ಚಾರು ಮೋಸದಿಂದ ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ರಾಮಾಚಾರಿಗೆ ಗೊತ್ತಾಗಿದೆ. ಅದಕ್ಕೆ ಚಾರುಗೆ ತುಂಬಾ ಬೈದು ಕಳಿಸಿದ್ದಾನೆ. ಆಕೆ ಆತ್ಮಹತ್ಯೆ (Suicide) ಮಾಡಿಕೊಳ್ಳಲು ಹೊರಟಿದ್ದಾಳೆ.


    ಸಾವಿನ ಮನೆಯಲ್ಲಿ ಬರೀ ಕಣ್ಣೀರು


    ಅತ್ತಿಗೆ ಅಪರ್ಣಾ ಸಾವು ರಾಮಾಚಾರಿ ಮನೆಯವರನ್ನು ಆಘಾತ ಗೊಳಿಸಿದೆ. ಎಲ್ಲರೂ ನಮ್ಮ ಬಳಿ ದುಡ್ಡು ಇದ್ದಿದ್ರೆ ಈಕೆಯನ್ನು ಬದುಕಿಸಿಕೊಳ್ಳಬಹುದಿತ್ತು ಎಂದು ಕೊರಗುತ್ತಿದ್ದಾರೆ. ತಮ್ಮ ಅಸಹಾಯಕ ಸ್ಥಿತಿಗೆ ಕಣ್ಣೀರಿಡುತ್ತಿದ್ದಾರೆ. ಮಗಳ ಅಂತ ಸೊಸೆ, ಅಮ್ಮನಂತ ಅತ್ತಿಗೆ, ಮುದ್ದಿನ ಮಡದಿ ಇಲ್ಲ ಎಂದು ಗೋಳಾಡುತ್ತಿದ್ದಾರೆ.


    ಚಾರು ಮಾಡಿದ ತಪ್ಪಿಗೆ ಅತ್ತಿಗೆಗೆ ಶಿಕ್ಷೆ
    ರಾಮಾಚಾರಿ ಪ್ರಾಜೆಕ್ಟ್ ಗೆದ್ದಿದ್ರೆ, ಲಕ್ಷ ಲಕ್ಷ ದುಡ್ಡು ಬಂದಿರೋದು. ಆದ್ರೆ ಪ್ರಾಜೆಕ್ಟ್ ಸೋತ ಕಾರಣ ದುಡ್ಡು ಸಿಗದೇ ಅತ್ತಿಗೆ ಆಪರೇಷನ್ ಮಾಡಿಸಲು ಆಗಲಿಲ್ಲ. ಅಲ್ಲದೇ ಆ ಪ್ರಾಜೆಕ್ಟ್ ಕದಿದ್ದು ಚಾರು ಎಂದು ಗೊತ್ತಾಗಿದೆ. ಆ ದುಡ್ಡಲ್ಲಿ ಪಾರ್ಟಿ ಮಾಡಿದ್ದಾಳೆ. ಆಕೆಯ ತಪ್ಪಿನಿಂದ ಅಪರ್ಣಾ ಸಾವು ಆಗಿದೆ. ಈ ವಿಷ್ಯ ಗೊತ್ತಾಗಿ, ರಾಮಾಚಾರಿ ಆಕೆ ಇದ್ದಲ್ಲಿಗೆ ಹೋಗಿ ಬೈದು ಬಂದಿರುತ್ತಾನೆ.


    ಇದನ್ನೂ ಓದಿ: Bigg Boss Kannada: ಮುಂದಿನ ವಾರ ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಇಲ್ಲ, ಮನೆಯವರು ಮಾಡಿದ ಎಡವಟ್ಟೇನು? 


    ಅಪರ್ಣಾ ನೋಡಲು ಬಂದ ಚಾರುಗೆ ಗ್ರಹಚಾರ!
    ಚಾರುಗೆ ರಾಮಾಚಾರಿ ಅಷ್ಟೆಲ್ಲಾ ಬೈದು ಬಂದ ಮೇಲೂ, ಚಾರು ಅಪರ್ಣಾ ನೋಡಲು ಬಂದಿರುತ್ತಾಳೆ. ಅದಕ್ಕೆ ರಾಮಾಚಾರಿ ಕೋಪಗೊಂಡು, ಆಕೆಯ ತಪ್ಪುಗಳನ್ನು ಹೇಳಿದ್ದಾಳೆ. ಈ ಮನೆ ಒಂದು ಸುಂದರವಾದ ಸೊಸೆಯನ್ನು ಕಳೆದುಕೊಂಡಿದೆ. ಈ ಮನೆ ಏನೇ ಮಾಡಿತ್ತು ನಿನಗೆ ಎಂದು ರಾಮಾಚಾರಿ ಚಾರುಳನ್ನು ಪ್ರಶ್ನೆ ಮಾಡುತ್ತಿದ್ದಾನೆ. ನಾನು ಅತ್ತಿಗೆಯನ್ನು ಕಳೆದುಕೊಂಡಿದ್ದೇನೆ. ಏನೇ ಮಾಡಿದ್ದೇ ನಾನು ನಿನಗೆ ಎಂದಿದ್ದಾನೆ.


    ನೀನು ಸಂಸ್ಕಾರ ಕಲಿಯಲು ಬಂದಾಗ, ಬಲಗಾಲಿಟ್ಟು ಕರೆದುಕೊಂಡ್ರಲ್ಲ ನಮ್ಮ ಅಪ್ಪ, ಇದು ಅವರ ತಪ್ಪಾ? ಈ ಮನೆಯಲ್ಲಿದ್ದಾಗ ಅದು ಸರಿ, ಇದು ತಪ್ಪು ಎಲ್ಲವನ್ನೂ ಹೇಳಿ ಕೊಟ್ಟಿದ್ದು ತಪ್ಪಾ? ನಿನಗೆ ದೋಸೆ ಹಾಕಲು ಹೇಳಿಕೊಟ್ಟ ಅತ್ತಿಗೆ, ಸೌದೆ ಮೇಲೆ ದಹನ ಆಗ್ತಾ ಇದ್ದಾರೆ. ನೀನು ಒಂದು ಲೀಸ್ಟ್ ಕೊಟ್ಟು ಬಿಡು. ಈ ಮನೆಯಿಂದ ಏನೇನ್ ಬೇಕು ಎಂದು.


    colors Kannada serial, kannada serial, ramachari serial, aparna death, charu decide to suicide, ramachari brother wife death, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ರಾಮಾಚಾರಿ ಸಿಗಲ್ಲ ಎಂಬ ನೋವು, ಸಾಯೋಕೆ ಹೊರಟ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಚಾರುಗೆ ಗ್ರಹಚಾರ!


    ತಲೆ ಎತ್ತಿಕೊಂಡು ಓಡಾಡುತ್ತಿದ್ದ ನಮ್ಮ ಅಪ್ಪನ ಮೇಲೆ ಕಳ್ಳತನದ ಆರೋಪ ಮಾಡಿದ ಕುತಂತ್ರಿ ನೀನು. ಆರೋಪಗಳ ಸರಪಟಾಕಿ ಹಚ್ಚಿ, ಚಪ್ಪಾಳೆ ಹೊಡೆದು ನಗುತ್ತಿದ್ದೆ. ಅದನ್ನೆಲ್ಲಾ ಪಕ್ಕಕ್ಕಿಟ್ಟು ಎದ್ದು ನಿಂತ್ವಿ ಅನ್ನೋ ಕಾರಣಕ್ಕೆ ಈ ರೀತಿ ಸೇಡು ತೀರಿಸಿಕೊಂಡ್ಯಾ ಎಂದು ರಾಮಾಚಾರಿ ಚಾರುಗೆ ಬೈದು ಕಳಿಸಿದ್ದಾನೆ.


    ಇದನ್ನೂ ಓದಿ: Actress Vaishnavi Gowda: 16ನೇ ವಯಸ್ಸಿಗೆ ನಟನೆ ಶುರು ಮಾಡಿದ್ದ ಕಿರುತೆರೆ ನಟಿ ಈಕೆ! ಹಾಗಿದ್ರೆ ಇವ್ರು ಯಾರು ಹೇಳಿ ನೋಡೋಣ 


    ಸಾಯೋಕೆ ಹೊರಟ ಚಾರು
    ಚಾರು ತನಗೆ ರಾಮಾಚಾರಿ ಸಿಗಲ್ಲ. ಅವನ ಜೀವನದಲ್ಲಿ ಇನ್ನು ನನಗೆ ಜಾಗ ಇಲ್ಲ. ನಾನು ಮಾಡಿದ ತಪ್ಪಿಗೆ ಸಾವೊಂದೆ ಪರಿಹಾರ ಎಂದು ಸಾಯೋಕೆ ಹೊರಟಿದ್ದಾಳೆ. ಬೆಟ್ಟದ ಬಳಿ ಹೋಗಿ ನಿಂತು, ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರ ಮಾಡಿದ್ದಾಳೆ.


    colors Kannada serial, kannada serial, ramachari serial, aparna death, charu decide to suicide, ramachari brother wife death, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ರಾಮಾಚಾರಿ ಸಿಗಲ್ಲ ಎಂಬ ನೋವು, ಸಾಯೋಕೆ ಹೊರಟ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಚಾರು


    ಚಾರು ಆತ್ಮಹತ್ಯೆ ಮಾಡಿಕೊಳ್ತಾಳಾ? ರಾಮಾಚಾರಿ ಜೀವನದಲ್ಲಿ ಚಾರುಗೆ ಸಿಗುತ್ತಾ ಜಾಗ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: