• Home
  • »
  • News
  • »
  • entertainment
  • »
  • Ramachari: ಚಾರು ಕೊಲ್ಲಲು ಹೋದ ರಾಮಾಚಾರಿ ಅಣ್ಣ ಕೋದಂಡ! ತನ್ನ ಹೆಂಡ್ತಿ ಸಾವಿಗೆ ಕಾರಣ ಎಂದು ಕೋಪ

Ramachari: ಚಾರು ಕೊಲ್ಲಲು ಹೋದ ರಾಮಾಚಾರಿ ಅಣ್ಣ ಕೋದಂಡ! ತನ್ನ ಹೆಂಡ್ತಿ ಸಾವಿಗೆ ಕಾರಣ ಎಂದು ಕೋಪ

ಚಾರು ಕೊಲ್ಲಲು ಹೋದ ರಾಮಾಚಾರಿ ಅಣ್ಣ ಕೋದಂಡ!

ಚಾರು ಕೊಲ್ಲಲು ಹೋದ ರಾಮಾಚಾರಿ ಅಣ್ಣ ಕೋದಂಡ!

ಚಾರುಳಿಂದ ಇಷ್ಟೆಲ್ಲಾ ಆಗಿದ್ದು. ನಾನು ಆಕೆಯನ್ನು ಸುಮ್ಮನೇ ಬಿಡುವುದಿಲ್ಲ. ಆಕೆಯನ್ನು ಅಪರ್ಣಾ ಬಳಿ ಕಳಿಸುತ್ತೇನೆ. ಅವಳನ್ನು ಕೊಲ್ಲುತ್ತೇನೆ ಎಂದು ಕೋದಂಡ ಹೇಳುತ್ತಿದ್ದಾನೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada)ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಸೀರಿಯಲ್ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ (Cancer) ಇರುತ್ತೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾಗೆ ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ಹೇಳಿರುತ್ತಾರೆ. ರಾಮಾಚಾರಿ ಆ ಹಣವನ್ನು ಜೋಡಿಸಲು ಒದ್ದಾಡುತ್ತಿರುತ್ತಾನೆ. ಆದ್ರೆ ದುಡ್ಡು (Money) ಜೋಡಿಸಲು ಸಾಧ್ಯವಾಗಿರಲಿಲ್ಲ.ಅಪರ್ಣಾ ಸಾವನ್ನಪ್ಪಿದ್ದಾಳೆ. ಚಾರು ಮೋಸದಿಂದ ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ಅದಕ್ಕೆ ಕೋದಂಡ ಆಕೆಯನ್ನು ಕೊಲ್ಲಲು (Murder) ನಿರ್ಧಾರ ಮಾಡಿದ್ದಾನೆ. ಆಕೆ ಮನೆಗೆ ಹೋಗಿದ್ದಾನೆ.


    ಅಪರ್ಣಾ ಜೊತೆ ಮಗು ಸಾವು
    ಕ್ಯಾನ್ಸರ್ ನಿಂದ ಸಾವನ್ನಪ್ಪಿದ ಅಪರ್ಣಾ ಗರ್ಭಿಣಿ ಎಂದು ಎಲ್ಲರಿಗೂ ತಿಳಿಯುತ್ತೆ. ಅಪರ್ಣಾ ಸಾಯೋ ಮೊದಲು ಪತ್ರ ಬರೆದಿರುತ್ತಾಳೆ. 'ನಾನು ಸಾಯುವ ಮೊದಲು ನಿಮಗೆ ಒಂದು ಸುದ್ದಿ ಹೇಳಬೇಕು. ನಾನು ಈಗ ಗರ್ಭಿಣಿ. ಆದ್ರೆ ಆ ಮಗುವನ್ನು ಉಳಿಸಿಕೊಳ್ಳೋ ಭಾಗ್ಯ ನನಗೆ ಇಲ್ಲ. ನನ್ನನ್ನು ಮರೆತು ನೀವು ಬೇರೆ ಮದುವೆ ಆಗಿ, ಮಕ್ಕಳನ್ನು ಮಾಡಿಕೊಳ್ಳಿ' ಎಂದು ಬರೆದಿರುತ್ತಾಳೆ.


    ಚಾರು ಮೇಲೆ ಕೋದಂಡ ಕೋಪ
    ಚಾರು ರಾಮಾಚಾರಿ ಪ್ರಾಜೆಕ್ಟ್ ಕದಿಯದಿದ್ದರೆ, ಅದರಿಂದ ದುಡ್ಡು ಬರುತ್ತಿತ್ತು. ಅಪರ್ಣಾ, ಮಗುವನ್ನು ಉಳಿಸಿಕೊಳ್ಳಬಹುದಿತ್ತು. ಆ ಚಾರುಳಿಂದ ಇಷ್ಟೆಲ್ಲಾ ಆಗಿದ್ದು. ನಾನು ಆಕೆಯನ್ನು ಸುಮ್ಮನೇ ಬಿಡುವುದಿಲ್ಲ. ಆಕೆಯನ್ನು ಅಪರ್ಣಾ ಬಳಿ ಕಳಿಸುತ್ತೇನೆ. ಅವಳನ್ನು ಕೊಲ್ಲುತ್ತೇನೆ ಎಂದು ಕೋದಂಡ ಹೇಳುತ್ತಿದ್ದಾನೆ. ಮನೆಯವರು ಸಮಾಧಾನ ಮಾಡಿದರೂ ಕೇಳುತ್ತಿಲ್ಲ.


    ಇದನ್ನೂ ಓದಿ: Manoj Tiwari: 51ನೇ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಮನೋಜ್ ತಿವಾರಿ, ಬೇಬಿ ಶವರ್ ವಿಡಿಯೋ ನೋಡಿ 


    ಚಾರು ಮನೆಗೆ ಹೋದ್ನಾ ಕೋದಂಡ
    ಅಪರ್ಣಾ ಸಾವನ್ನಪ್ಪಿದ ಕಾರಣ ಮನೆಯಲ್ಲಿ ಕಾರ್ಯಗಳನ್ನು ಮಾಡಬೇಕಿದೆ. ಅದಕ್ಕೆ ಮನೆಯವರು ಎಲ್ಲಾ ಸಿದ್ಧತೆ ಮಾಡಿಕೊಳ್ತಿದ್ದಾರೆ. ಆಗ ಕೋದಂಡನನ್ನು ಕರೆಯುವಂತೆ ಅಜ್ಜಿ ಹೇಳ್ತಾರೆ. ಆಗ ರಾಮಾಚಾರಿ ಕರೆಯಲು ಹೋಗ್ತಾನೆ. ಆದ್ರೆ ಅಲ್ಲಿ ಕೋದಂಡ ಇರುವುದಿಲ್ಲ. ಬೆಳಗ್ಗೆಯೇ ಎದ್ದು ಎಲ್ಲೋ ಹೋಗಿದ್ದಾನೆ. ಚಾರು ಮನೆಗೆ ಹೋಗಿರಬಹುದು ಎಂದು ಎಲ್ಲರೂ ಅನುಮಾನ ಪಡುತ್ತಿದ್ದಾರೆ.


    colors Kannada serial, kannada serial, ramachari brother says i am killing charu, aparna death, ramachari serial, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ಚಾರು ಕೊಲ್ಲಲು ಹೋದ ರಾಮಾಚಾರಿ ಅಣ್ಣ ಕೋದಂಡ!, ತನ್ನ ಹೆಂಡ್ತಿ ಸಾವಿಗೆ ಕಾರಣ ಎಂದು ಕೋಪ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಅಪರ್ಣಾ


    ಅಣ್ಣನ ಕೋಪಕ್ಕೆ ಬ್ರೇಕ್ ಹಾಕ್ತಾನ ರಾಮಾಚಾರಿ?
    ರಾಮಾಚಾರಿಯೂ ತನ್ನ ಅಣ್ಣನಿಗೆ ಬುದ್ಧಿ ಹೇಳಿರುತ್ತಾನೆ. ನಮಗೆ ದುಡ್ಡು ಜೋಡಿಸಲು ಆಗದೇ ಸಾವನ್ನಪ್ಪಿದ್ದಾಳೆ ಅತ್ತಿಗೆ. ಅದಕ್ಕೆ ಬೇರೆಯವರನ್ನು ಕಾರಣ ಮಾಡಬಾರದು ಅಂತ. ಆದ್ರೆ ಕೋದಂಡ ಆ ದುಡ್ಡು ಬರದಂತೆ ಮಾಡಿದ್ದು ಯಾರು ಎಂದು ಕೇಳುತ್ತಿದ್ದಾನೆ. ಎಷ್ಟೇ ಹೇಳಿದ್ರೂ ಕೋದಂಡನ ಕೋಪ ಕಮ್ಮಿ ಆಗ್ತಿಲ್ಲ. ಚಾರುಗೆ ಅಪಾಯ ಮಾಡುವುದನ್ನು ರಾಮಾಚಾರಿ ತಪ್ಪಿಸುತ್ತಾನಾ ನೋಡಬೇಕು.


    colors Kannada serial, kannada serial, ramachari brother says i am killing charu, aparna death, ramachari serial, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ಚಾರು ಕೊಲ್ಲಲು ಹೋದ ರಾಮಾಚಾರಿ ಅಣ್ಣ ಕೋದಂಡ!, ತನ್ನ ಹೆಂಡ್ತಿ ಸಾವಿಗೆ ಕಾರಣ ಎಂದು ಕೋಪ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ರಾಮಾಚಾರಿ


    ಹುಚ್ಚಿಯಂತಾಗಿರುವ ಚಾರು
    ಚಾರು, ರಾಮಾಚಾರಿ ಅತ್ತಿಗೆ ಅಪರ್ಣಾ ಸಾವಿಗೆ ನಾನೇ ಕಾರಣ ಎಂದು ತಿಳಿದು ಸಾಯಲು ಹೊರಟಿರುತ್ತಾಳೆ. ಅಷ್ಟರಲ್ಲೇ ಆಕೆ ಸ್ನೇಹಿತೆ ಬಂದು ತಡೆಯುತ್ತಾಳೆ. ಮನೆಗೆ ಕರೆದುಕೊಂಡು ಬಂದಿದ್ದಾಳೆ. ಚಾರು ಹುಚ್ಚಿಯಂತೆ ಆಡುತ್ತಿದ್ದಾಳೆ. ನನ್ನಿಂದ ಇನ್ನೊಬ್ಬರ ಪ್ರಾಣ ಹೋಯ್ತು. ನಾನು ಪಾಪಿ. ಬದುಕಿರಬಾರದು ಎಂದುಕೊಳ್ತಿದ್ದಾಳೆ. ಮನೆಯ ವಸ್ತುಗಳನ್ನು ಒಡೆದು ಹಾಕುತ್ತಿದ್ದಾಳೆ.


    colors Kannada serial, kannada serial, ramachari brother says i am killing charu, aparna death, ramachari serial, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ಚಾರು ಕೊಲ್ಲಲು ಹೋದ ರಾಮಾಚಾರಿ ಅಣ್ಣ ಕೋದಂಡ!, ತನ್ನ ಹೆಂಡ್ತಿ ಸಾವಿಗೆ ಕಾರಣ ಎಂದು ಕೋಪ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಚಾರು


    ಇದನ್ನೂ ಓದಿ: Bigg Boss Kannada: ಗೊತ್ತಿದ್ದು ತಪ್ಪು ಮಾಡಿದ್ರಾ ಗುರೂಜಿ, ಸೌಕರ್ಯ ಇಲ್ಲದೇ ಮನೆ ಮಂದಿಗೆ ಬೇಸರ! 


    ಕೋದಂಡ ಕೋಪದಲ್ಲಿ ತಪ್ಪು ಮಾಡ್ತಾನಾ? ಚಾರು ಪ್ರಾಣಕ್ಕೆ ಅಪಾಯಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: