• Home
  • »
  • News
  • »
  • entertainment
  • »
  • Ramachari: ಅಪರ್ಣಾ ಅಂತ್ಯಕ್ರಿಯೆ ಮಾಡಿದ ಜಾಗದಲ್ಲಿ ಚಾರು, ರೊಚ್ಚಿಗೆದ್ದ ಕೋದಂಡ!

Ramachari: ಅಪರ್ಣಾ ಅಂತ್ಯಕ್ರಿಯೆ ಮಾಡಿದ ಜಾಗದಲ್ಲಿ ಚಾರು, ರೊಚ್ಚಿಗೆದ್ದ ಕೋದಂಡ!

ರೊಚ್ಚಿಗೆದ್ದ ಕೋದಂಡ!

ರೊಚ್ಚಿಗೆದ್ದ ಕೋದಂಡ!

ನನ್ನ ಹೆಂಡ್ತಿ ಸಾವಿಗೆ ಕಾರಣ ಆಗಿರೋ ನಿನ್ನನ್ನು ಸುಮ್ನೆ ಬಿಡಲ್ಲ ಕಣೇ ಎಂದು ಕೋದಂಡ ಚಾರುಗೆ ಚುಚ್ಚಲು ಹೋಗುತ್ತಾನೆ. ಚಾರು ಜೋರಾಗಿ ಕೂಗಿ ಕೊಳ್ತಾಳೆ. ಆಗ ರಾಮಾಚಾರಿ ಬಂದು ಆಗೋ ಅನಾಹುತ ತಪ್ಪಿಸುತ್ತಾನೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಸೀರಿಯಲ್ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್  (Cancer) ಇರುತ್ತೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾಗೆ ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ಹೇಳಿರುತ್ತಾರೆ. ರಾಮಾಚಾರಿ ಆ ಹಣವನ್ನು ಜೋಡಿಸಲು ಒದ್ದಾಡುತ್ತಿರುತ್ತಾನೆ. ಆದ್ರೆ ದುಡ್ಡು ಜೋಡಿಸಲು ಸಾಧ್ಯವಾಗಿರಲಿಲ್ಲ. ಅಪರ್ಣಾ ಸಾವನ್ನಪ್ಪಿದ್ದಾಳೆ. ಚಾರು ಮೋಸದಿಂದ ತನ್ನ ಪ್ರಾಜೆಕ್ಟ್ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ಚಾರುಗೆ ತನ್ನ ತಪ್ಪಿನ ಅರಿವಾಗಿ ಅಪರ್ಣಾ ಅಂತ್ಯಕ್ರಿಯೆ ನಡೆದ ಜಾಗಕ್ಕೆ ಬಂದು ಕ್ಷಮೆ (Sorry) ಕೇಳುತ್ತಿದ್ದಾನೆ. ಅದನ್ನು ನೋಡಿ ಕೋದಂಡ ಕೋಪಗೊಂಡಿದ್ದಾನೆ.


    ಅಪರ್ಣಾ ಜೊತೆ ಮಗು ಸಾವು
    ಕ್ಯಾನ್ಸರ್ ನಿಂದ ಸಾವನ್ನಪ್ಪಿದ ಅಪರ್ಣಾ ಗರ್ಭಿಣಿ ಎಂದು ಎಲ್ಲರಿಗೂ ತಿಳಿಯುತ್ತೆ. ಅಪರ್ಣಾ ಸಾಯೋ ಮೊದಲು ಪತ್ರ ಬರೆದಿರುತ್ತಾಳೆ. 'ನಾನು ಸಾಯುವ ಮೊದಲು ನಿಮಗೆ ಒಂದು ಸುದ್ದಿ ಹೇಳಬೇಕು. ನಾನು ಈಗ ಗರ್ಭಿಣಿ. ಆದ್ರೆ ಆ ಮಗುವನ್ನು ಉಳಿಸಿಕೊಳ್ಳೋ ಭಾಗ್ಯ ನನಗೆ ಇಲ್ಲ. ನನ್ನನ್ನು ಮರೆತು ನೀವು ಬೇರೆ ಮದುವೆ ಆಗಿ, ಮಕ್ಕಳನ್ನು ಮಾಡಿಕೊಳ್ಳಿ' ಎಂದು ಬರೆದಿರುತ್ತಾಳೆ.


    ಅಪರ್ಣಾ ಅಂತ್ಯಕ್ರಿಯೆ ಮಾಡಿದ ಜಾಗದಲ್ಲಿ ಚಾರು
    ಚಾರು ತಾನು ಪ್ರಾಜೆಕ್ಟ್ ಕದಿಯಲಿಲ್ಲ ಎಂದಿದ್ರೆ, ರಾಮಾಚಾರಿ ಅತ್ತಿಗೆ ಬದುಕುತ್ತಿದ್ದರು. ಇದೆಲ್ಲಾ ನನ್ನ ತಪ್ಪಿನಿಂದ ಆಗಿದೆ. ನಾನು ಕ್ಷಮೆ ಕೇಳಬೇಕು ಎಂದು ಅಪರ್ಣಾ ಅಂತ್ಯಕ್ರಿಯೆ ನಡೆದ ಜಾಗಕ್ಕೆ ಬಂದು, ಬೂದಿ ಮುಂದೆ ಕೂತು ಕ್ಷಮೆ ಕೇಳುತ್ತಿದ್ದಾಳೆ. ನನ್ನನ್ನು ಕ್ಷಮಿಸಿ, ನಾನು ಪಾಪಿ. ನನ್ನ ದುರಂಕಾರದಿಂದ ಈ ರೀತಿ ಆಯ್ತು ಎಂದು ಹೇಳುತ್ತಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ರಾಮಾಚಾರಿ ಮತ್ತು ಕೋದಂಡ ಬರುತ್ತಾರೆ.


    ಇದನ್ನೂ ಓದಿ: Bhagya Lakshmi: ಲಕ್ಷ್ಮಿ ಮೇಲೆ ಕಾವೇರಿ ಒಲವು! ಭಾಗ್ಯ ತಂಗಿಗೆ ಒಳ್ಳೆ ಗಂಡು ಸಿಕ್ಕೇ ಬಿಟ್ನಾ? 


    ಚಾರು ನೋಡಿ ರೊಚ್ಚಿಗೆದ್ದ ಕೋದಂಡ
    ಏನೇ ರಾಕ್ಷಸಿ, ಮಾಡೋದೆಲ್ಲಾ ಮಾಡಿ ಇಲ್ಲಿ ಬಂದು ಕೂತಿದೀಯಾ? ನನ್ನ ಹೆಂಡ್ತಿ ಸಾವಿಗೆ ಕಾರಣ ಆಗಿರೋ ನಿನ್ನನ್ನು ಸುಮ್ನೆ ಬಿಡಲ್ಲ ಕಣೇ ಎಂದು ಕೋದಂಡ ಚಾರುಗೆ ಚುಚ್ಚಲು ಹೋಗುತ್ತಾನೆ. ಚಾರು ಜೋರಾಗಿ ಕೂಗಿ ಕೊಳ್ತಾಳೆ. ಆಗ ರಾಮಾಚಾರಿ ಬಂದು ಆಗೋ ಅನಾಹುತ ತಪ್ಪಿಸುತ್ತಾನೆ.


    colors Kannada serial, kannada serial, aparna death, hero brother ready to kill charu because of his wife death, ramachari serial, ramachari serial kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ಅಪರ್ಣಾ ಅಂತ್ಯಕ್ರಿಯೆ ಮಾಡಿದ ಜಾಗದಲ್ಲಿ ಚಾರು, ರೊಚ್ಚಿಗೆದ್ದ ಕೋದಂಡ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಚಾರು ನೋಡಿ ರೊಚ್ಚಿಗೆದ್ದ ಕೋದಂಡ


    ನನ್ನ ಪ್ರತೀಕಾರ ತೀರಬೇಕು
    ಬಿಡು ರಾಮಾಚಾರಿ, ನನ್ನ ಹೆಂಡ್ತಿ ಸಾಯಿಸಿದವಳು. ಇವಳ ಪ್ರಾಣ ತೆಗೆಯಬೇಕು ಎಂದು ಕೋದಂಡ ಹೇಳ್ತಾನೆ. ಅವಳ ಪ್ರಾಣ ತೆಗೆದ್ರೆ ಅತ್ತಿಗೆ ವಾಪಸ್ ಬರಲ್ಲ ಎಂದು ರಾಮಾಚಾರಿ ಹೇಳ್ತಾನೆ. ಖಂಡಿತ ಬರ್ತಾಳೆ. ಅವಳ ಜೀವ ತೆಗೆದವಳ ಜೀವ ತೆಗೆದ್ರೆ, ಅವಳ ಆತ್ಮಕ್ಕೆ ತೃಪ್ತಿ ಆಗುತ್ತೆ. ಆಕೆ ಮತ್ತೆ ಹುಟ್ಟಿ ಬರ್ತಾಳೆ.


    ಅಪರ್ಣಾ ಪ್ರಾಣ ನುಂಗಿ ನೀರು ಕುಡಿದವಳ ಅಸ್ಥಿಯನ್ನು ನಾನು ಬಿಡಬೇಕು. ನನ್ನ ಮನಸ್ಸು ಕಲ್ಲಾಗಿದೆ. ದೇಹ ಜಡಗಟ್ಟಿದೆ. ನಿನ್ನ ಯಾವ ಉಪದೇಶಗಳು ನನಗೆ ಕೇಳಿಸಲ್ಲ. ನನ್ನ ಮುಂದೆ ಇರೋದು ಪ್ರತೀಕಾರ ಅಷ್ಟೆ  ಎಂದು ಕೋದಂಡ ಹೇಳ್ತಾನೆ.


    colors Kannada serial, kannada serial, aparna death, hero brother ready to kill charu because of his wife death, ramachari serial, ramachari serial kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ಅಪರ್ಣಾ ಅಂತ್ಯಕ್ರಿಯೆ ಮಾಡಿದ ಜಾಗದಲ್ಲಿ ಚಾರು, ರೊಚ್ಚಿಗೆದ್ದ ಕೋದಂಡ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಚಾರು


    ಮಗು ಕೊಂದ ಪಾಪಿ
    ಹೇಗೆ ಸುಮ್ಮನೆ ಬಿಡುವುದು ರಾಮಾಚಾರಿ ಇವಳನ್ನು ನನ್ನ ಹೆಂಡ್ತಿಯನ್ನು ಕೊಂದವಳು. ನನ್ನ ಮಗು ಸಾವಿಗೆ ಕಾರಣ ಆದವಳನ್ನು ಹೇಗೆ ಬಿಡಲಿ ಎಂದು ಕೋದಂಡ ಹೇಳ್ತಾನೆ. ಅದಕ್ಕೆ ಚಾರು ಮಗುನಾ ಎಂದು ಕೇಳುತ್ತಾಳೆ. ಅದಕ್ಕೆ ಕೋದಂಡ ಹೌದು ರಾಕ್ಷಸಿ, ನೀನು ಕೊಂದಿದ್ದು ಒಂದು ಜೀವವನ್ನು ಅಲ್ಲ. 2 ಜೀವವನ್ನು. ನನ್ನ ಹೆಂಡ್ತಿ ಸಾಯುವಾಗ ಬಸುರಿ ಆಗಿದ್ಲು ಕಣೇ, ಕಣ್ಣು ಬಿಡುವ ಮುಂಚೆಯೇ ನನ್ನ ಮಗು ಕೊಂದ ಪಾಪಿ ನೀನು ಎಂದು ಮತ್ತೆ ಹೊಡೆಯಲು ಹೋಗ್ತಾನೆ.


    ಇದನ್ನೂ ಓದಿ: Kendasampige: ತೀರ್ಥಂಕರ್ ನಾಪತ್ತೆ, ಸುಮನಾ ಮೇಲೆ ಸಾಧನಾ ಕೆಂಡಾಮಂಡಲ! 


    ಅಷ್ಟರಲ್ಲಿ ಚಾರು ಅಮ್ಮ ಮಾನ್ಯತಾ ಬಂದು ಹೆಣ್ಣು ಮಗಳಿಗೆ ಹಿಂಸೆ ಮಾಡ್ತಾ ಇದ್ದೀರಾ ಎಂದು ಬೈಯುತ್ತಾಳೆ. ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು