• Home
 • »
 • News
 • »
 • entertainment
 • »
 • Ramachari: ಚಾರು ಕೋಣೆಯಲ್ಲಿ ಕೋದಂಡ, ಅಣ್ಣ ಕೊಲ್ಲುವುದನ್ನು ತಪ್ಪಿಸ್ತಾನಾ ರಾಮಾಚಾರಿ?

Ramachari: ಚಾರು ಕೋಣೆಯಲ್ಲಿ ಕೋದಂಡ, ಅಣ್ಣ ಕೊಲ್ಲುವುದನ್ನು ತಪ್ಪಿಸ್ತಾನಾ ರಾಮಾಚಾರಿ?

ಚಾರು ಕೋಣೆಯಲ್ಲಿ ಕೋದಂಡ

ಚಾರು ಕೋಣೆಯಲ್ಲಿ ಕೋದಂಡ

ಮನೆಯವರೆಲ್ಲಾ ಮಲಗಿದ ಮೇಲೆ ಕೋದಂಡ ಚಾರು ಮನೆಗೆ ಚಾಕು ಹಿಡಿದು ಬಂದಿದ್ದಾನೆ. ಹೇಗಾದ್ರೂ ಚಾರುಳನ್ನು ಅಪರ್ಣಾ ಇರೋ ಜಾಗಕ್ಕೆ ಕಳಿಸಬೇಕು ಎನ್ನುತ್ತಿದ್ದಾನೆ. ಇನ್ನೇನು ಚಾಕು ಹಾಕಬೇಕು ಅಷ್ಟರಲ್ಲಿ ರಾಮಾಚಾರಿ ಕಾಲ್ ಬರುತ್ತೆ.

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಸೀರಿಯಲ್ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾಗೆ ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ಹೇಳಿರುತ್ತಾರೆ. ರಾಮಾಚಾರಿ ಆ ಹಣವನ್ನು ಜೋಡಿಸಲು ಒದ್ದಾಡುತ್ತಿರುತ್ತಾನೆ. ಆದ್ರೆ ದುಡ್ಡು ಜೋಡಿಸಲು ಸಾಧ್ಯವಾಗಿರಲಿಲ್ಲ. ಅಪರ್ಣಾ ಸಾವನ್ನಪ್ಪಿದ್ದಾಳೆ. ಚಾರು ಮೋಸದಿಂದ ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ಹೆಂಡ್ತಿ, ಮಗುವಿನ ಸಾವಿನಿಂದ ರಾಮಾಚಾರಿ ಅಣ್ಣ (Brother) ಕೋದಂಡ ಹುಚ್ಚನಂತಾಗಿದ್ದಾನೆ. ಚಾರುಳನ್ನು ಕೊಂದೇ ಕೊಲ್ಲುತ್ತೇನೆ (Murder) ಎನ್ನುತ್ತಿದ್ದಾನೆ.


  ಪತ್ನಿ, ಮಗು ಸಾವಿನಿಂದ ನೋವು
  ಕ್ಯಾನ್ಸರ್ ನಿಂದ ಸಾವನ್ನಪ್ಪಿದ ಅಪರ್ಣಾ ಗರ್ಭಿಣಿ ಎಂದು ಎಲ್ಲರಿಗೂ ತಿಳಿಯುತ್ತೆ. ಅಪರ್ಣಾ ಸಾಯೋ ಮೊದಲು ಪತ್ರ ಬರೆದಿರುತ್ತಾಳೆ. 'ನಾನು ಸಾಯುವ ಮೊದಲು ನಿಮಗೆ ಒಂದು ಸುದ್ದಿ ಹೇಳಬೇಕು. ನಾನು ಈಗ ಗರ್ಭಿಣಿ. ಆದ್ರೆ ಆ ಮಗುವನ್ನು ಉಳಿಸಿಕೊಳ್ಳೋ ಭಾಗ್ಯ ನನಗೆ ಇಲ್ಲ.


  ನನ್ನನ್ನು ಮರೆತು ನೀವು ಬೇರೆ ಮದುವೆ ಆಗಿ, ಮಕ್ಕಳನ್ನು ಮಾಡಿಕೊಳ್ಳಿ' ಎಂದು ಬರೆದಿರುತ್ತಾಳೆ. ಪತ್ನಿ. ಮಗು ಸಾವಿನಿಂದ ಕೋದಂಡ ಹುಚ್ಚನಂತಾಗಿದ್ದಾನೆ. ಚಾರುಳನ್ನು ಕೊಲ್ಲುತ್ತೇನೆ ಎನ್ನುತ್ತಿದ್ದಾನೆ.


  ಚಾರು ಮನೆಗೆ ಚಾಕು ಹಿಡಿದು ಬಂದ ಕೋದಂಡ
  ರಾಮಾಚಾರಿ ತನ್ನ ಅಣ್ಣನಿಗೆ ಎಷ್ಟೇ ಬುದ್ಧಿ ಹೇಳಿದ್ರೂ ಅವನು ಕೇಳ್ತಾ ಇಲ್ಲ. ಮನೆಯವರೆಲ್ಲಾ ಮಲಗಿದ ಮೇಲೆ ಕೋದಂಡ ಚಾರು ಮನೆಗೆ ಚಾಕು ಹಿಡಿದು ಬಂದಿದ್ದಾನೆ. ಹೇಗಾದ್ರೂ ಚಾರುಳನ್ನು ಅಪರ್ಣಾ ಇರೋ ಜಾಗಕ್ಕೆ ಕಳಿಸಬೇಕು ಎನ್ನುತ್ತಿದ್ದಾನೆ. ಇನ್ನೇನು ಚಾಕು ಹಾಕಬೇಕು ಅಷ್ಟರಲ್ಲಿ ರಾಮಾಚಾರಿ ಕಾಲ್ ಬರುತ್ತೆ.


  ಇದನ್ನೂ ಓದಿ: Bigg Boss Kannada: ರಾಕೇಶ್ ಅಡಿಗ ಡ್ರಗ್ ಅಡಿಕ್ಟ್ ಆಗಿದ್ರಾ? ರೂಪೇಶ್ ಶೆಟ್ಟಿ ಸೂಸೈಡ್‍ಗೆ ಯತ್ನಿಸಿದ್ರಾ? 


  ಚಾರು ಖುಷಿಗೆ ಪಾರವೇ ಇಲ್ಲ
  ರಾಮಾಚಾರಿ ಕಾಲ್ ಮಾಡಿದ್ದರಿಂದ ಚಾರು ತುಂಬಾ ಖುಷಿಯಾಗಿದ್ದಾಳೆ. ರಾಮಾಚಾರಿ ಎಲ್ಲವನ್ನೂ ಮರೆತು ಕಾಲ್ ಮಾಡಿದ್ದೀಯಾ ಖುಷಿ ಆಯ್ತು. ನಿನ್ನ ಮನಸ್ಸಿನಲ್ಲಿ ಇರೋದನ್ನು ಹೇಳಿಕೋ ಎಂದು ಹೇಳ್ತಾಳೆ. ರಾಮಾಚಾರಿ ಮೇಡಂ ನನಗೆ ಆತಂಕ ಆಗ್ತಿದೆ ಎಂತಾನೆ. ಅದಕ್ಕೆ ನನಗೂ ನಿನ್ನ ಬಳಿ ಮಾತನಾಡುವಾಗ ಆ ರೀತಿ ಆಗ್ತಿತ್ತು. ಅದನ್ನು ಪ್ರೀತಿ ಅನ್ನುತ್ತಾರೆ ಎನ್ನುವ ಮೊದಲು, ರಾಮಾಚಾರಿ, ನನ್ನ ಮಾತು ಕೇಳಿಸಿಕೊಳ್ಳಿ ಎಂದಿದ್ದಾನೆ.


  colors Kannada serial, kannada serial, hero brother come to charu house for killing, hero brother ready to kill charu because of his wife death, ramachari serial, ramachari serial kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ಚಾರು ಕೋಣೆಯಲ್ಲಿ ಕೋದಂಡ, ಅಣ್ಣ ಕೊಲ್ಲುವುದನ್ನು ತಪ್ಪಿಸುತ್ತಾನಾ ರಾಮಾಚಾರಿ?, ರೊಚ್ಚಿಗೆದ್ದ ಕೋದಂಡ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರು


  ಕೋಣೆಯಲ್ಲಿ ಅಡಗಿರುವ ಕೋದಂಡ
  ಚಾರು ಮೇಡಂ, ನಮ್ಮ ಅಣ್ಣ ನಿಮ್ಮ ಮನೆಗೆ ಬಂದಿದ್ದಾನಾ? ಅವನು ಕಾಣ್ತಾ ಇಲ್ಲ. ನಿನ್ನನ್ನು ಕೊಲ್ಲಬೇಕು ಎನ್ನುತ್ತಿದ್ದ ನೋಡಿ ಎಂದು ರಾಮಾಚಾರಿ ಹೇಳ್ತಾನೆ. ಆಗ ಲೈಟ್ ಆನ್ ಮಾಡಿ ನೋಡಿದ್ರೆ ಕೋದಂಡ ಅಲ್ಲೇ ಇರ್ತಾನೆ. ಚಾರು, ಅವರು ಇಲ್ಲೇ ಇದ್ದಾರೆ ಎಂದು ಹೇಳ್ತಾಳೆ. ರಾಮಾಚಾರಿ ಎಷ್ಟೇ ಹೇಳಿದ್ರೂ ಕೋದಂಡ ಕೇಳ್ತಾ ಇಲ್ಲ.


  colors Kannada serial, kannada serial, hero brother come to charu house for killing, hero brother ready to kill charu because of his wife death, ramachari serial, ramachari serial kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?, ಚಾರು ಕೋಣೆಯಲ್ಲಿ ಕೋದಂಡ, ಅಣ್ಣ ಕೊಲ್ಲುವುದನ್ನು ತಪ್ಪಿಸುತ್ತಾನಾ ರಾಮಾಚಾರಿ?, ರೊಚ್ಚಿಗೆದ್ದ ಕೋದಂಡ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ರಾಮಾಚಾರಿ


  ಚಾರು ಕಾಪಾಡೋರು ಯಾರು?
  ರಾಮಾಚಾರಿ ಪರಿ ಪರಿಯಾಗಿ ಬೇಡಿದ್ರೂ ಕೋದಂಡ ಅವನ ಮಾತು ಕೇಳ್ತಾ ಇಲ್ಲ. ಚಾರುಳನ್ನು ಕೊಂದೇ ಕೊಲ್ಲುತ್ತೇನೆ ಎಂದು ಹಠ ಹಿಡಿದಿದ್ದಾನೆ. ಹಾಗಾದ್ರೆ ಚಾರುಳನ್ನು ಕಾಪಾಡೋರು ಯಾರು? ಚಾರು ಜೋರಾಗಿ ಕೂಗಿ ಕೊಳ್ತಾಳಾ? ಇಲ್ಲ, ಸಾಯಿಸಿ ಬಿಡಲಿ ಎಂದು ಸುಮ್ಮನೇ ಆಗ್ತಾಳಾ? ಕೋದಂಡನ ಕೋಪ ಮಾತ್ರ ಏರುತ್ತಲೇ ಇದೆ.


  ಇದನ್ನೂ ಓದಿ: Bigg Boss Kannada: ಈ ವಾರದ ಕಳಪೆ ಯಾರು? ಅಮೂಲ್ಯನಾ, ಆರ್ಯವರ್ಧನ್ ಗುರೂಜಿನಾ? 


  ಚಾರು ಕೊಲೆ ಆಗುತ್ತಾ? ರಾಮಾಚಾರಿ ಈಗ ಏನ್ ಮಾಡ್ತಾನೆ? ಮುಂದೇನಾಗುತ್ತೆ ಅಂತ ನೊಡೋಕೆ ರಾಮಾಚಾರಿ ಧಾರಾವಾಹಿ ನೋಡಬೇಕು.

  Published by:Savitha Savitha
  First published: