ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇದೆ. ಅವಳನ್ನು ಮಾತನಾಡಿಸುವುದು ಇರಲಿ, ಅವರ ನೆರಳು ನಮ್ಮ ಮನೆ ಕಡೆ ಬೀಳಬಾರದು ಅಂತಿದ್ದಾರೆ, ಆದ್ರೆ ಮಾನ್ಯತಾ ಮತ್ತು ಚಾರು ಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ತಮ್ಮ ಮನೆಯವರ ಸುದ್ದಿಗೆ ಬಂದವರಿಗೆ ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದುಕೊಳ್ಳುತ್ತಿದ್ದಾನೆ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ (Love)ಆಗಿದೆ. ಶೈಲು ಹೆಸರಲ್ಲಿ ರಾಮಾಚಾರಿ ಮದುವೆ ಆಗಲು ಹೊರಟವಳಿಗೆ ಶಾಕ್ (Shock) ಆಗಿದೆ.
ಶೈಲು ಅನ್ನೋ ಹೊಸ ಪಾತ್ರ
ರಾಮಾಚಾರಿ ಧಾರಾವಾಹಿಯಲ್ಲಿ ಶೈಲು ಅನ್ನುವ ಹೊಸ ಹೆಸರು ಕೇಳಿ ಬರುತ್ತಿದೆ. ಅದು ಹೊಸ ಪಾತ್ರ ಅಲ್ಲ. ಶೈಲು ಎನ್ನುವುದು ಚಾರು ಸೃಷ್ಟಿ ಮಾಡಿರೋದು. ರಾಮಾಚಾರಿಯನ್ನು ಮಾತನಾಡಿಸಲು ಶೈಲು ಎಂದು ಹೇಳಿಕೊಂಡಿದ್ದಾಳೆ. ಬೇರೆ ನಂಬರ್ ನಿಂದ ಶೈಲು ಎಂದು ಹೇಳಿ, ಅವನ ಜೊತೆ ಮಾತನಾಡುತ್ತಾಳೆ. ಅಲ್ಲದೇ ರಾಮಾಚಾರಿ ಮನೆಯವರಿಗೂ ಇಷ್ಟ ಆಗಿದ್ದಾಳೆ.
ಗಂಡು ರಾಮಾಚಾರಿಯಲ್ಲ ಕೋದಂಡ
ಅಜ್ಜಿ ಶೈಲು ಬಳಿ ಬಂದು ನನ್ನ ಮೊಮ್ಮಗನನ್ನು ಮದುವೆ ಮಾಡಿಕೋ ಎಂದು ಹೇಳಿರುತ್ತಾಳೆ. ಅದಕ್ಕೆ ಚಾರು, ರಾಮಾಚಾರಿ ಎಂದುಕೊಂಡು ಓಕೆ ಎಂದಿರುತ್ತಾರೆ. ಆದ್ರೆ ಮದುವೆ ಆಫರ್ ನೀಡಿರುವುದು ರಾಮಾಚಾರಿಗೆ ಅಲ್ಲ, ಬದಲಿಗೆ ಕೋದಂಡನಿಗೆ. ಕೋದಂಡನ ಹೆಂಡ್ತಿ ಅಪರ್ಣಾ ಸತ್ತಿರುವ ಹಿನ್ನೆಲೆ, ಅವನಿಗೆ ಮದುವೆ ಮಾಡಲು ಚಾರು ಬಳಿ ಹೇಳಿದ್ದಾಳೆ.
ಇದನ್ನೂ ಓದಿ: Kannadathi: ವರು ಸಮಸ್ಯೆಗೆ ಹರ್ಷನ ಮಾಸ್ಟರ್ ಪ್ಲಾನ್; ಕನ್ನಡತಿ ವೀಕ್ಷಕರಿಗೆ ಶೀಘ್ರದಲ್ಲಿಯೇ ಬಿಗ್ ಸಪ್ರೈಸ್
ಹೆಣ್ಣು ನೋಡುವ ಶಾಸ್ತ್ರ
ರಾಮಾಚಾರಿ ಮನೆಯವರು ಹೆಣ್ಣು ನೋಡುವ ಶಾಸ್ತ್ರಕ್ಕೆ ನಿಮ್ಮ ಮನೆಗೆ ಬರುತ್ತೇವೆ ಎಂದು ಶೈಲುಗೆ ಕಾಲ್ ಮಾಡುತ್ತಾರೆ. ಅದಕ್ಕೆ ಗಾಬರಿಗೊಂಡ ಚಾರು. ನಾನು ಅನಾಥೆ, ಅಪ್ಪ-ಅಮ್ಮ ಇಲ್ಲ. ಪಿಜೆಯಲ್ಲಿ ಇದ್ದೇನೆ. ಸಂಜೆ ರಂಗಮಂದಿರದ ಬಳಿ ಸಿಗೋಣ ಎಂದು ಹೇಳ್ತಾಳೆ. ಅದಕ್ಕೆ ಮನೆಯವರು ಒಪ್ಪಿ, ಎಲ್ಲರೂ ಹೆಣ್ಣು ನೋಡೋಕೆ ಹೋಗಿದ್ದಾರೆ.
ನಮ್ಮ ಮಗ ನಿನಗೆ ಇಷ್ಟನಾ?
ನನ್ನ ಮಗ ನಿನಗೆ ಇಷ್ಟ ಆಗಿದ್ದಾನಾ ಎಂದು ರಾಮಾಚಾರಿ ಅಮ್ಮ ಕೇಳ್ತಾರೆ. ಅದಕ್ಕೆ ಶೈಲು ಆಗಿರುವ ಚಾರು, ಇಷ್ಟ ಇಲ್ಲದೇ ಇಲ್ಲಿವರೆಗೂ ಬರುತ್ತೇನಾ? ಅವರಿಗೆ ನನ್ನ ಮನಸ್ಸಲ್ಲಿ ನಾನು ಜಾಗ ಕೊಟ್ಟು ಆಗಿದೆ. ನಿಮ್ಮ ಮಗ ನನಗೆ ತುಂಬಾ ಇಷ್ಟ ಆಗಿದ್ದಾರೆ. ನಿಮ್ಮ ಮನೆ ಸೊಸೆಯಾಗೋಕೆ ನನಗೆ ಸಂಪೂರ್ಣ ಒಪ್ಪಿಗೆ ಇದೆ ಎಂದು ಚಾರು ಹೇಳ್ತಾರೆ. ತಾನೇ ಚಾರು ಎಂದು ಗೊತ್ತಾಗಬಾರದು ಎಂದು ಮುಖಕ್ಕೆ ವೇಲ್ ಕಟ್ಟಿಕೊಂಡು ಬಂದಿದ್ದಾಳೆ.
ಕೋದಂಡ ಗಂಡು, ಚಾರುಗೆ ಶಾಕ್
ಇದು ನಮ್ಮ ಮೊಮ್ಮಗನಿಗೆ ಎರಡನೇ ಮದುವೆ ಎಂದು ಅಜ್ಜಿ ಹೇಳ್ತಾರೆ. ಅದನ್ನು ಕೇಳಿ ಚಾರು ಶಾಕ್ ಆಗಿದ್ದಾಳೆ. ಮೊದಲ ಹೆಂಡ್ತಿ ಕ್ಯಾನ್ಸರ್ ಬಂದು ತೀರಿ ಹೋದ್ಲು. ಎರಡನೇ ಹೆಂಡ್ತಿ ಆಗೋಕೆ ಕೇಳ್ತಾರೆ ಎಂದು ಮುಜುಗರ ಪಟ್ಟುಕೊಳ್ಳಬೇಡು. ಮನೆಯಲ್ಲಿ ದೀಪಾ ಆರಿದ್ರೆ, ಮತ್ತೆ ಹಚ್ಚಲ್ವಾ? ಶೈಲು ನೀನು ನಮಗೆ ಇಷ್ಟ ಆಗಿದ್ದಿ. ನಿನ್ನ ಮನೆ ಮಗಳ ರೀತಿ ನೋಡಿಕೊಳ್ತೇವೆ ಕೋದಂಡನನ್ನು ಮದುವೆ ಆಗ್ತೀಯಾ ಎಂದು ಅಜ್ಜಿ ಕೇಳಿದ್ದಾರೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ನಿಂದ ಆರ್ಯವರ್ಧನ್ ಗುರೂಜಿ ಔಟ್! ಕೈ ಕೊಡ್ತಾ ನಂಬರ್ ಗೇಮ್?
ಚಾರುಗೆ ಶಾಕ್ ಮೇಲೆ ಶಾಕ್. ಇಷ್ಟ ಪಟ್ಟಿದ್ದು ರಾಮಾಚಾರಿಯನ್ನು. ಗಂಡಾಗಿ ಬಂದಿರುವುದು ಕೋದಂಡ. ಈಗ ಚಾರು ಏನ್ ಮಾಡ್ತಾಳೆ. ಆಕೆಯ ಮುಂದಿನ ನಡೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ