ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ನಾನು ಲವ್ (Love) ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾಳೆ. ಚಾರುಗೆ ಕಣ್ಣು (Eye) ವಾಪಸ್ ತರುವ ಕೊನೆಯ ಪ್ರಯತ್ನ ರಾಮಾಚಾರಿ ಮಾಡ್ತಾ ಇದ್ದಾನೆ.
ರಾಮಾಚಾರಿಯೇ ಕಾರಣ
ಚಾರು ತನಗೆ 15 ದಿನ ಆದ ಮೇಲೆ ಕಣ್ಣು ಬರುತ್ತೆ. ಆಯಾಗಿ ಇರಬಹುದು. ನಾನು ಮೊದಲಿನ ರೀತಿ ಪ್ರಪಂಚ ನೋಡಬಹುದು ಎಂದುಕೊಂಡಿರುತ್ತಾಳೆ. ಆದ್ರೆ ತನಗೆ ಕಣ್ಣು ಬರಲ್ಲ. ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದೇನೆ ಎಂಬುದು ಗೊತ್ತಾಗಿದೆ. ಈ ವಿಷ್ಯ ಮುಚ್ಚಿಟ್ಟ ರಾಮಾಚಾರಿ ಮೇಲೆ ಚಾರು ಕೋಪಗೊಂಡಿದ್ದಾಳೆ.
ಅವಧೂತರ ಮಾತಿನಂತೆ ಚಾರು ಚಿಕಿತ್ಸೆ
ರಾಮಾಚಾರಿ ಚಾರುಗೆ ಹೇಗಾದ್ರೂ ಕಣ್ಣು ಕಾಣುವಂತೆ ಮಾಡಬೇಕು ಎಂದುಕೊಂಡಿದ್ದಾನೆ. ಅದಕ್ಕೆ ಅವಧೂತರೊಬ್ಬರು ಭೇಟಿ ಮಾಡಿದ್ದಾನೆ. ಅವರು ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗು ಎಂದು ರಾಮಾಚಾರಿಗೆ ಪರಿಹಾರ ಹೇಳಿದ್ದಾರೆ.
ಅದಕ್ಕೆ ಚಾರುಳನ್ನು ಆ ಪ್ರದೇಶಕ್ಕೆ ಕರೆದುಕೊಂಡು ಹೋಗಲು ರಾಮಾಚಾರಿ ಬಂದಿದ್ದಾನೆ. ಮಾನ್ಯತಾ ಬಳಿ ಕೈ ಮುಗಿದು ಬೇಡಿಕೊಳ್ತಾ ಇದ್ದಾನೆ. ನನ್ನಿಂದ ಆದ ತಪ್ಪನ್ನು ಸರಿ ಮಾಡ್ತೇನೆ. ಚಾರು ಕಳಿಸಿ ಎಂದು ಕೇಳಿಕೊಳ್ತಾ ಇದ್ದಾನೆ.
ಮಗಳನ್ನು ಕಳಿಸಲು ಒಪ್ಪದ ಮಾನ್ಯತಾ
ಮಾನ್ಯತಾ ಏನಂದ್ರು ಒಪ್ಪದೇ ಮನೆಯಿಂದ ಆಚೆ ಹೋಗು ಎಂದು ಬೈಯ್ತಾ ಇದ್ದಾಳೆ. ಅದಕ್ಕೆ ರಾಮಾಚಾರಿ, ನನ್ನ ಮೇಲಿನ ಹಠ, ಕೋಪಕ್ಕೆ ನಿಮ್ಮ ಮಗಳ ಬದುಕಿನಲ್ಲಿ ನೀವೇ ಮುಳ್ಳಾಗಬೇಡಿ. ಅವರು ಮತ್ತೆ ಈ ಜಗತ್ತನ್ನು ನೋಡುವ ಅವಕಾಶಕ್ಕೆ ಕಲ್ಲು ಹಾಕಬೇಡಿ.
ಅವರು ಸಿದ್ಧಿ ಪುರುಷರು. ಅವರು ಹೇಳಿದ ಮಾತು ಖಂಡಿತಾವಾಗಿ ಸಕ್ಸಸ್ ಆಗುತ್ತೆ ಎಂದು ರಾಮಾಚಾರಿ ಹೇಳ್ತಾ ಇದ್ದಾನೆ.
ಜೈಶಂಕರ್ ಬಳಿ ಮನವಿ
ಧಾತ್ರಿ ವನಕ್ಕೆ ಕರೆದುಕೊಂಡು ಹೋಗು, ಹೋದ ಕಣ್ಣು ವಾಪಸ್ ಬರುತ್ತೆ ಎಂದು ಅವಧೂತರು ಹೇಳಿದ್ದಾರೆ. ಚಾರು ಮೇಡಂ ಮೊದಲಿನ ರೀತಿ ಆಗಬೇಕು ಎನ್ನುವ ಒಳ್ಳೆಯ ಉದ್ದೇಶದಿಂದ ಕೇಳಿಕೊಳ್ತಾ ಇದ್ದೇನೆ. ಕೈ ಮುಗಿದು ಕೇಳಿಕೊಳ್ತೇನೆ ದಯವಿಟ್ಟು ಚಾರು ಮೇಡಂನ ನನ್ನ ಜೊತೆ ಕಳಿಸಿಕೊಡಿ ಎಂದು ರಾಮಾಚಾರಿ ಜೈಶಂಕರ್ ಬಳಿ ಕೇಳಿದ್ದಾರೆ.
ಚಾರು ಕಳಿಸಲು ಒಪ್ಪಿಗೆ
ರಾಮಾಚಾರಿ ಬೇಡಿಕೊಂಡ ನಂತರ ಜೈಶಂಕರ್ ಒಪ್ಪಿ ಕರೆದುಕೊಂಡು ಹೋಗು ರಾಮಾಚಾರಿ ಎಂದು ಹೇಳಿದ್ದಾನೆ. ಆಗ ಮಾನ್ಯತಾ ಇವನು ಸುಳ್ಳನ್ನು ನಂಬಿ ಕಳಿಸಬೇಡಿ ಎನ್ನುತ್ತಾಳೆ. ನಮ್ಮ ಮಗಳನ್ನು ಕೊಲ್ತಾನೆ ಎಂದು ಹೇಳ್ತಾಳೆ. ನೋಡು ಮಾನ್ಯತಾ, ರಾಮಾಚಾರಿ ಯಾವತ್ತೂ ಸುಳ್ಳು ಹೇಳಲ್ಲ. ಅಲ್ಲದೇ ನಮ್ಮ ಮಗಳ ಜೀವವನ್ನು ಎಷ್ಟೋ ಬಾರಿ ಉಳಿಸಿದ್ದಾನೆ ಎಂದು ಹೇಳ್ತಾರೆ.
ಇದನ್ನೂ ಓದಿ: Actor Prakash Raj: ಕೆಲವರು ಬೊಗಳುತ್ತಾರೆ ಕಚ್ಚಲ್ಲ, ಪಠಾಣ್ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ಹೀಗ್ಯಾಕೆ ಅಂದ್ರು?
ಚಾರುಗೆ ಕಣ್ಣು ಬರುತ್ತಾ? ಅವಧೂತರಿಂದ ಪವಾಡ ನಡೆಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ