ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇತ್ತು. ಅದಕ್ಕೆ ಆಕೆಯನ್ನು ದೂರ ಇಟ್ಟಿದ್ದ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ. ರಾಮಾಚಾರಿ ಹಿಂದೆ ಬಿದ್ದು ಬಿದ್ದು ನನ್ನ ಪ್ರೀತಿ (Love) ಮಾಡು ಎಂದು ಕಾಡಲು ಶುರು ಮಾಡಿದ್ದಳು. ರಾಮಾಚಾರಿ ಮಾಡಿದ ಎಡವಟ್ಟಿನಿಂದ ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿದ್ದಾಳೆ. ರಾಮಾಚಾರಿ ಕಣ್ಣೀರು (Crying) ಹಾಕುತ್ತಿದ್ದಾನೆ.
ಚಾರು ತಳ್ಳಿ ರಾಮಾಚಾರಿ ಎಡವಟ್ಟು!
ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ.
ಜೀವನ ಪೂರ್ತಿ ಕಣ್ಣು ಬರಲ್ಲ
ರಾಮಾಚಾರಿ ತಳ್ಳಿದ್ದರಿಂದ ಚಾರು ಕೆಮಿಕಲ್ ಇರುವ ರೂಮ್ಗೆ ಹೋಗಿ ಬೀಳುತ್ತಾಳೆ. ಅಲ್ಲಿನ ಬಾಟೆಲ್ವೊಂದು ಒಡೆದು, ಕೆಮಿಕಲ್ ಹೊಗೆ ಆವರಿಸಿಕೊಂಡು, ಚಾರುಗೆ ಕಣ್ಣು ಬಿಡಲು ಆಗಲ್ಲ. ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿದ ಡಾಕ್ಟರ್, ಸ್ಟ್ರಾಂಗ್ ಆಗಿರುವ ಕೆಮಿಕಲ್ ಬಿದ್ದು ಕಣ್ಣು ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾಳೆ ಎಂದು ಹೇಳಿದ್ದರು. ಚಾರುಗೆ ಜೀವನ ಪೂರ್ತಿ ಕಣ್ಣು ಬರಲ್ಲ ಎಂದಿದ್ದಾರೆ.
ಒಂದು ವಾರ ಮನೆಯಲ್ಲಿ ನೋಡಿಕೊಂಡ ರಾಮಾಚಾರಿ
ಚಾರು ತನಗೆ ಒಂದು ವಾರದ ಮಟ್ಟಿಗೆ ಕಣ್ಣು ಹೋಗಿದೆ ಎಂದು ತಿಳಿದುಕೊಂಡಿರುತ್ತಾಳೆ. ಅದಕ್ಕೆ ಮನೆಯಲ್ಲಿ ಒಂದು ವಾರ ಬೇರೆ ಊರಿಗೆ ಹೋಗುವುದಾಗಿ ಹೇಳಿ, ರಾಮಾಚಾರಿ ಮನೆಯಲ್ಲಿ ಇರ್ತಾಳೆ. ರಾಮಾಚಾರಿ ಆಕೆಯನ್ನು ತುಂಬಾ ಕೇರ್ ನಿಂದ ನೋಡಿಕೊಂಡಿದ್ದಾನೆ. ಅದಕ್ಕಾಗಿ ಮನೆಯವರ ವಿರೋಧ ಕಟ್ಟಿಕೊಂಡಿದ್ದಾನೆ. ಆಕೆಗೆ ಶೀತ ಆಗದಂತೆ ಎಚ್ಚರವಹಿಸಿ ಕಣ್ಣಾಗಿ ನೋಡಿಕೊಂಡಿದ್ದಾನೆ.
ಅಮೆರಿಕಾದ ವೈದ್ಯರಿಂದ ತಪಾಸಣೆ
ಇಲ್ಲಿನ ಡಾಕ್ಟರ್ ಶಾಶ್ವತವಾಗಿ ಕಣ್ಣು ಬರಲ್ಲ ಎಂದು ಹೇಳಿದ್ದರು. ಅದಕ್ಕೆ ರಾಮಾಚಾರಿ ಅಮೆರಿಕಾ ವೈದ್ಯರನ್ನು ಸಂಪರ್ಕ ಮಾಡಿದ್ದ. ಅವರು ಚಾರು ಮೇಡಂಗೆ ಕಣ್ಣು ತರಿಸುತ್ತಾರೆ ಎಂದು ನಂಬಿದ್ದ. ಅವರನ್ನು ಬೇಡಿಕೊಂಡಿದ್ದ, ಕಣ್ಣು ಕಾಣುವ ರೀತಿ ಮಾಡಿ ಎಂದು ಕೇಳಿಕೊಂಡಿದ್ದ, ಅವರು ಸಹ ಓಕೆ ಎಂದಿದ್ದರು. ಅದಕ್ಕೆ ರಾಮಾಚಾರಿ ಖುಷಿಯಾಗಿದ್ದ.
ಚಾರುಗೆ ಶಾಶ್ವತವಾಗಿ ಕಣ್ಣು ಬರಲ್ಲ
ಚಾರುಗೆ ಆಸ್ಪತ್ರೆ ಸೇರಿಸಿ, ಕಣ್ಣಿನ ಪರೀಕ್ಷೆ ಮಾಡಿದ್ದಾರೆ. ಆಪರೇಷನ್ ಮಾಡಿದ್ದಾರೆ. ಕಣ್ಣು ಬರುತ್ತೆ ಎಂದುಕೊಂಡು ಆಸೆಯಿಂದ ಕಾಯ್ತಾ ಇದ್ದಾರೆ. ಆದ್ರೆ ಬ್ಯಾಂಡೇಜ್ ತೆಗೆದ್ರೆ, ಚಾರುಗೆ ಏನೂ ಕಾಣ್ತಾ ಇಲ್ಲ. ಅಂದ್ರೆ ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಳಾ? ವೈದ್ಯರ ಚಿಕಿತ್ಸೆ ಕೆಲಸ ಮಾಡಲಿಲ್ವಾ? ರಾಮಾಚಾರಿ ತನ್ನಿಂದ ಇದು ಆಗಿದ್ದು ಎಂದು ಕಣ್ಣೀರಿಡುತ್ತಿದ್ದಾನೆ.
ಇದನ್ನೂ ಓದಿ: Udho Udho Renuka Yallamma: ಸೋಮವಾರದಿಂದ 'ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ' ಹೊಸ ಧಾರಾವಾಹಿy
ಚಾರುಗೆ ಕಣ್ಣು ಬರಲ್ವಾ? ರಾಮಾಚಾರಿ ಈಗ ಏನ್ ಮಾಡ್ತಾನೆ? ಚಾರು ಕಥೆ ಏನು? ಮಾನ್ಯತಾಗೆ ಈ ವಿಷ್ಯ ಗೊತ್ತಾದ್ರೆ ಮುಂದೇನು? ತೀವ್ರ ಕುತೂಹಲ ಮೂಡಿಸುತ್ತಿರುವ ರಾಮಾಚಾರಿ ಸೀರಿಯಲ್ ತಪ್ಪದೇ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ