ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾಗೆ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇದೆ. ಅವಳನ್ನು ಮಾತನಾಡಿಸುವುದು ಇರಲಿ, ಅವರ ನೆರಳು ನಮ್ಮ ಮನೆ ಕಡೆ ಬೀಳಬಾರದು ಅಂತಿದ್ದಾರೆ, ಆದ್ರೆ ಮಾನ್ಯತಾ ಮತ್ತು ಚಾರುಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ತಮ್ಮ ಮನೆಯವರ ಸುದ್ದಿಗೆ ಬಂದವರಿಗೆ ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದುಕೊಳ್ಳುತ್ತಿದ್ದಾನೆ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ (Love) ಆಗಿದೆ. ರಾಮಾಚಾರಿ ಮಾಡಿದ ಎಡವಟ್ಟಿನಿಂದ ಚಾರು ಕಣ್ಣ (Eye) ಕಳೆದುಕೊಂಡಿದ್ದಾಳೆ.
ರಾಮಾಚಾರಿಗಾಗಿ ಸಾಯ್ತಾಳಂತೆ
ರಾಮಾಚಾರಿ ನೀನು ಬೇರೆಯವರ ಕಷ್ಟಕ್ಕೆ ಮರುಗುತ್ತೀಯಾ, ಆದ್ರೆ ನನ್ನ ಪ್ರೀತಿ ಮಾತ್ರ ನಿನಗೆ ಅರ್ಥ ಆಗುತ್ತಿಲ್ಲವೇ? ಎಷ್ಟು ಹಿಂದೆ ಬಿದ್ರೂ ಪ್ರೀತಿ ಮಾಡಲ್ಲ ಅಂತಿಯಲ್ಲ. ನನ್ನ ಪ್ರೀತಿ ಸಾಬೀತು ಪಡಿಸಲು ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾ? ಆಗ ನಿನಗೆ ನನ್ನ ಮೇಲೆ ಪ್ರೀತಿ ಬರುತ್ತಾ ಎಂದು ಕೇಳಿದ್ದಾಳೆ. ನನಗೆ ಆತ್ಮಹತ್ಯೆ ಪದ ಆಗಿ ಬರಲ್ಲ. ಅದು ಹೇಡಿಗಳು ಮಾಡುವ ಕೆಲಸ ಎಂದು ರಾಮಾಚಾರಿ ಹೇಳ್ತಾನೆ.
ಹಿಂದೆಯಿಂದ ತಬ್ಬಿಕೊಂಡ ಚಾರು
ರಾಮಾಚಾರಿ ಯಾವ ಮಾತಿಗೂ ಮನಸೋಲದ ಕಾರಣ, ಚಾರು ರಾಮಾಚಾರಿಯನ್ನು ಹಿಂದೆಯಿಂದ ಗಟ್ಟಿಯಾಗಿ ತಬ್ಬಿಕೊಂಡಿದ್ದಾಳೆ. ರಾಮಾಚಾರಿ ಎಷ್ಟು ಬಿಡಿ ಎಂದ್ರೂ ಕೇಳುತ್ತಿಲ್ಲ. ನನ್ನ ಪ್ರೀತಿ ಒಪ್ಪಿಕೊಳ್ಳುವ ತನಕ ಹೀಗೆ ಹಿಡಿದುಕೊಂಡಿರುತ್ತೇನೆ. ಬಿಡಲ್ಲ. ನನಗೆ ನಿನ್ನ ಪ್ರೀತಿ ಬೇಕು ಎಂಉ ಹಠ ಹಿಡಿದಿದ್ದಾಳೆ.
ಇದನ್ನೂ ಓದಿ: Kannadathi: ಭುವಿಯನ್ನು ಕಾಪಾಡಿದ ಹರ್ಷ, ಮದುವೆಗೆ ಒಪ್ಪಿದ ವರು: ಮುಂದೇನು?
ಚಾರು ತಳ್ಳಿದ ರಾಮಾಚಾರಿ
ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ಈ ರೀತಿ ನಡೆದುಕೊಂಡಿದ್ದಾಳೆ. ಅದಕ್ಕೆ ಕೋಪ ಮಾಡಿಕೊಂಡ ರಾಮಾಚಾರಿ, ತಬ್ಬಿಕೊಂಡಿದ್ದ ಚಾರುಳನ್ನು ತಳ್ಳಿದ್ದಾನೆ. ಆಗ ಆಕೆ ಬಿದ್ದು, ಕೆಮಿಕಲ್ ಇರುವ ಬಾಟೆಲ್ ಹೊಡೆದು ಹೋಗುತ್ತವೆ. ಎಲ್ಲರೂ ಗಾಬರಿ ಆಗ್ತಾರೆ.
ಕಣ್ಣು ಕಳೆದುಕೊಂಡ ಚಾರು
ರಾಮಾಚಾರಿ ತಳ್ಳಿದ್ದರಿಂದ ಚಾರು ಬೀಳ್ತಾಳೆ. ಕೆಮಿಕಲ್ ಹೊಗೆ ಆವರಿಸಿಕೊಂಡು, ಚಾರುಗೆ ಕಣ್ಣು ಬಿಡಲು ಆಗಲ್ಲ. ಎಚ್ಚರ ತಪ್ಪಿ ಬೀಳ್ತಾಳೆ. ಆಗ ಎಲ್ಲರೂ ಆಕೆಯನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಚಾರುಗೆ ಸ್ಟ್ರಾಂಗ್ ಆಗಿರುವ ಕೆಮಿಕಲ್ ಬಿದ್ದು ಕಣ್ಣು ಕಳೆದುಕೊಂಡಿದ್ದಾಳೆ ಎಂದು ಡಾಕ್ಟರ್ ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡು ಶಾಕ್ ಆಗಿದ್ದಾರೆ.
ಚಾರುಗೆ ಬೆಳಕಾಗ್ತಾನಾ ರಾಮಾಚಾರಿ
ಚಾರು ಅವರಿಗೆ ಎರಡು ಕಣ್ಣು ಹೋಗಿದೆ ಎಂದು ಡಾಕ್ಟರ್ ಹೇಳಿದ್ದಾರೆ. ಕೆಮಿಕಲ್ ನಿಂದ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾಳೆ. ತನಗೆ ಕಣ್ಣು ಹೋಗಿರುವ ಸತ್ಯ ಗೊತ್ತಿಲ್ಲ. ಬ್ಯಾಂಡೇಜ್ ತೆಗೆದ ಮೇಲೆ ಸರಿ ಹೋಗಬಹುದು ಎಂದು ಚಾರು ಎಂದುಕೊಂಡಿದ್ದಾಳೆ. ಈಗ ಕತ್ತಲಾಗುರುವ ಚಾರು ಬಾಳಿಗೆ ರಾಮಾಚಾರಿ ಬೆಳಕಾಗ್ತಾನಾ ನೋಡಬೇಕು.
ಇದನ್ನೂ ಓದಿ: Jothe Jotheyali: ಆರ್ಯನ ಕಂಪನಿ ಬಾಸ್ ಆದ ಕೇಶವ್ ಝೇಂಡೆ, ಮುಂದೇನು ಮಾಡ್ತಾಳೆ ಅನು ಸಿರಿಮನೆ?
ಚಾರು ಅತಿಯಾದ ಪ್ರೀತಿಯಿಂದ ಆಪತ್ತು ಎದುರಾಗಿದೆ. ಕಣ್ಣು ಬರುವುದೇ ಇಲ್ವಾ? ರಾಮಾಚಾರಿ ಮುಂದಿನ ನಡೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ