Ramachari: ಕಣ್ಣು ಕಂಡರೂ ಕಾಣಲ್ಲ ಎಂದ ಚಾರು, ಎಲ್ಲಾ ರಾಮಾಚಾರಿ ಪ್ರೀತಿಗಾಗಿ!

ಕಣ್ಣು ಕಂಡರೂ ಕಾಣಲ್ಲ ಎಂದ ಚಾರು

ಕಣ್ಣು ಕಂಡರೂ ಕಾಣಲ್ಲ ಎಂದ ಚಾರು

ಚಾರು ಚಿಕಿತ್ಸೆ ಎಲ್ಲಾ ಮುಗಿದಿದೆ. ಚಾರುಗೆ ಕಣ್ಣು ಬರುತ್ತೆ ಎಂದು ರಾಮಾಚಾರಿ ಖುಷಿಯಾಗಿದ್ದಾನೆ. ಚಾರು ಕಣ್ಣಿಗೆ ಕಟ್ಟಿದ್ದ ಪಟ್ಟಿ ತೆಗೆದಿದ್ದಾರೆ. ಚಾರುಗೆ ಕಣ್ಣು ಕಾಣುತ್ತಿದೆ. ಆದ್ರೆ ಚಾರು ನನಗೆ ಕಣ್ಣು ಕಾಣಲ್ಲ ಎಂದು ಸುಳ್ಳು ಹೇಳಿದ್ದಾಳೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುತ್ತಾಳೆ. ಈಗ ಕಣ್ಣು (Eye) ಬಂದಿದೆ. ಆದ್ರೆ ಕಾಣುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾಳೆ.


  ಮೊದಲು ಕಣ್ಣು ಬರಲ್ಲ ಎಂದ ಗುರುಗಳು
  ಚಾರುಗೆ ಕಣ್ಣು ತರಿಸಲು ಚಿಕ್ಕಮಗಳೂರಿನ ಒಂದು ಆಶ್ರಮಕ್ಕೆ ರಾಮಾಚಾರಿ, ಚಾರು ಹೋಗಿದ್ದರು. ಅಲ್ಲಿನ ಗುರುಗಳನ್ನು ಭೇಟಿ ಮಾಡಿದ್ದರು. ಅವರು ಚಾರು ಕಣ್ಣಿಗೆ ಔಷಧಿ ಹಾಕಿ. ಈಕೆಗೆ ಕಣ್ಣು ಬರಲು ಸಾಧ್ಯವಿಲ್ಲ. ಶಾಶ್ವತವಾಗಿ ಇವರು ಕರುಡರಾಗಿರಬೇಕು ಎಂದಿದ್ದರು. ಆಗ ರಾಮಾಚಾರ ಅವರ ಕಾಲು ಹಿಡಿದು ಬೇಡಿಕೊಂಡಿರುತ್ತಾನೆ.


  ಚಾರು ಚಿಕಿತ್ಸೆ ಯಶಸ್ವಿ
  ಚಿಕಿತ್ಸೆಗೆ ಈ ಹೆಣ್ಣು ಮಗು ಕೂಡ ಕಷ್ಟ ಅನುಭವಿಸಬೇಕು. ನಮ್ಮ ಔಷಧಿ ಪದ್ಧತಿ ಅನುಸರಿಸಬೇಕಾದ್ರೆ, ತುಂಬಾ ಶ್ರಮಪಡಬೇಕಾಗುತ್ತೆ. ತುಂಬಾ ಕಠಿಣವಾದ ಆಚರಣೆಗಳಿವೆ. ಅದನ್ನು ಪಾಲಿಸುವುದು, ಅನುಭವಿಸುವುದು ಸುಲಭದ ಮಾತಲ್ಲ ಎಂದು ಗುರುಗಳು ಹೇಳ್ತಾರೆ. ಆದ್ರೆ ಚಾರು ಎಲ್ಲಾ ಕಷ್ಟಗಳನ್ನು ದಾಟಿ ಚಿಕಿತ್ಸೆ ಪಡೆದಿದ್ದಾಳೆ.


  ರಾಮಾಚಾರಿ ದೂರ ಆಗ್ತಾನೆ ಅನ್ನೋ ಭಯ
  ರಾಮಾಚಾರಿಯನ್ನು ಆ ಆಶ್ರಮದ ಗುರೂಜಿ ನೀನು ಈಕೆಯನ್ನು ಮದುವೆ ಆಗೋ ಹುಡುಗಿನಾ ಎಂದು ಕೇಳಿರುತ್ತಾರೆ. ಅದಕ್ಕೆ ಇಲ್ಲ ಗುರೂಜಿ. ಅಲ್ಲದೇ ಅದು ಎಂದಿಗೂ ಸಾಧ್ಯವಿಲ್ಲ. ಇವರ ಕಣ್ಣು ಬಂದ್ರೆ, ನಾನ್ಯಾರೋ, ಇವರ್ಯಾರೋ. ನನಗೂ ಇವರಿಗೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಾನೆ. ಅದನ್ನು ಕೇಳಿದ ಚಾರು ಅಯ್ಯೋ ನನ್ನ ಕಣ್ಣು ಬಂದ್ರೆ ರಾಮಾಚಾರಿ ದೂರ ಆಗ್ತಾನೆ ಎಂದು ಭಯಗೊಂಡಿದ್ದಾಳೆ.


  colors kannada serial, kannada serial, ramachari serial, charu telling lie because of ramachari love, ramachari serial kannada cast, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ಕಣ್ಣು ಕಂಡರೂ ಕಾಣಲ್ಲ ಎಂದ ಚಾರು, ಎಲ್ಲಾ ರಾಮಾಚಾರಿ ಪ್ರೀತಿಗಾಗಿ!, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ರಾಮಾಚಾರಿ ಪ್ರೀತಿಗಾಗಿ


  ಕಣ್ಣು ಕಾಣಲ್ಲ ಎಂದು ಸುಳ್ಳು
  ಚಾರು ಚಿಕಿತ್ಸೆ ಎಲ್ಲಾ ಮುಗಿದಿದೆ. ಚಾರುಗೆ ಕಣ್ಣು ಬರುತ್ತೆ ಎಂದು ರಾಮಾಚಾರಿ ಖುಷಿಯಾಗಿದ್ದಾನೆ. ಚಾರು ಕಣ್ಣಿಗೆ ಕಟ್ಟಿದ್ದ ಪಟ್ಟಿ ತೆಗೆದಿದ್ದಾರೆ. ಚಾರುಗೆ ಕಣ್ಣು ಕಾಣುತ್ತಿದೆ. ರಾಮಾಚಾರಿ ಚಾರು ಮೇಡಂ ಎಲ್ಲಾ ಕಾಣ್ತಿದೆ ತಾನೇ. ನಾನು ಇಲ್ಲಿದ್ದೇನೆ. ಇವರೇ ನಿನಗೆ ಚಿಕಿತ್ಸೆ ನೀಡಿದವರು ಎಂದೆಲ್ಲಾ ಹೇಳ್ತಾನೆ. ಆದ್ರೆ ಚಾರು ನನಗೆ ಕಣ್ಣು ಕಾಣಲ್ಲ ಎಂದು ಸುಳ್ಳು ಹೇಳಿದ್ದಾಳೆ.
  ಎಲ್ಲಾ ರಾಮಾಚಾರಿ ಪ್ರೀತಿಗಾಗಿ
  ಚಾರುಗೆ ಕಣ್ಣು ಕಾಣಲ್ಲ ಎಂದು ರಾಮಾಚಾರಿ ಅಳುತ್ತಿದ್ದಾನೆ. ನಿಂತಲ್ಲೇ ಕುಸಿದು  ಬಿದ್ದಿದ್ದಾನೆ. ನನ್ನ ಪ್ರಯತ್ನ ಯಶಸ್ಸು ಕಾಣಲಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ. ಅದನ್ನು ನೋಡಿ ಚಾರು ಸಹ ಕಣ್ಣೀರು ಹಾಕುತ್ತಿದ್ದಾಳೆ. ನಾನು ಕಣ್ಣು ಕಾಣುತ್ತೆ ಎಂದು ಹೇಳಿದ್ರೆ, ನೀನು ನನ್ನಿಂದ ದೂರ ಆಗ್ತೀಯಾ. ಅದಕ್ಕೆ ನಾನು ಕಣ್ಣು ಕಾಣ್ತಿಲ್ಲ ಎಂದು ಸುಳ್ಳು ಹೇಳ್ತೀನಿ ಎಂದಿದ್ದಾಳೆ.


  colors kannada serial, kannada serial, ramachari serial, charu telling lie because of ramachari love, ramachari serial kannada cast, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ಕಣ್ಣು ಕಂಡರೂ ಕಾಣಲ್ಲ ಎಂದ ಚಾರು, ಎಲ್ಲಾ ರಾಮಾಚಾರಿ ಪ್ರೀತಿಗಾಗಿ!, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಕುಸಿದು ಬಿದ್ದ ರಾಮಾಚಾರಿ


  ಇದನ್ನೂ ಓದಿ: Sara Annaiah: ಸೀರೆ ಮೇಲಿನ ಪ್ರೀತಿ ಯಾವತ್ತೂ ಕಮ್ಮಿ ಆಗಲ್ವಂತೆ, ಸಾರಾ ಅಣ್ಣಯ್ಯ ಕ್ಯೂಟ್ ಲುಕ್ ನೋಡಿ!


  ರಾಮಾಚಾರಿಗೆ ಬೇಸರ, ಚಾರುಗೆ ಖುಷಿ. ಇಬ್ಬರು ಒಂದಾಗ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: