ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಸೀರಿಯಲ್ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ (Cancer) ಇರುತ್ತೆ. ಅಪರ್ಣಾಗೆ ಆಪರೇಷನ್ ಮಾಡಿಸಲು ಹಣ ಇಲ್ಲದೇ ಆಕೆ ಸಾವನ್ನಪ್ಪುತ್ತಾಳೆ. ಚಾರು ಮೋಸದಿಂದ, ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ಹೆಂಡ್ತಿ, ಮಗುವಿನ ಸಾವಿನಿಂದ ರಾಮಾಚಾರಿ ಅಣ್ಣ (Brother) ಕೋದಂಡ ಹುಚ್ಚನಂತಾಗಿದ್ದಾನೆ. ಚಾರುಳ ಕೊಲ್ಲುತ್ತೇನೆ ಎಂದು ಹೋಗಿ ಜೈಲು ಸೇರಿದ್ದಾನೆ. ಅವನ್ನು ಬಿಡಿಸಲು ಚಾರು ತನಗೆ ತಾನೇ ಶೂಟ್ (Shoot) ಮಾಡಿಕೊಂಡಿದ್ದಾಳೆ.
ಪತ್ನಿ, ಮಗು ಸಾವಿನಿಂದ ಕಂಗೆಟ್ಟ ಕೋದಂಡ
ಕ್ಯಾನ್ಸರ್ ನಿಂದ ಅಪರ್ಣಾ ಸಾವನ್ನಪ್ಪಿದ್ದಾಳೆ. ಸಾಯುವಾಗ ಆಕೆ ಗರ್ಭಿಣೆ ಬೇರೆ ಆಗಿರುತ್ತಾಳೆ. ಅದಕ್ಕೆ ಕೋದಂಡ ಅವರ ಸಾವಿಗೆ ಚಾರು ಕಾರಣ. ಅವಳನ್ನು ಕೊಲ್ಲುತ್ತೇನೆ ಎಂದು ಮನೆಗೆ ಹೋಗಿರುತ್ತಾನೆ. ಆಗ ಮಾನ್ಯಾತ ಅವನಿಗೆ ಹೊಡೆದು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾಳೆ. ಇಗ ಕೋದಂಡ ಜೈಲು ಸೇರಿದ್ದಾನೆ.
ಮಾನ್ಯತಾ ಕಾಲು ಹಿಡಿದ ರಾಮಾಚಾರಿ
ತನ್ನ ಅಣ್ಣ ಕೋದಂಡನನ್ನು ಬಿಡುವಂತೆ ರಾಮಾಚಾರಿ ಪೊಲೀಸರಿಗೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಪೊಲೀಸರು ಮಾನ್ಯತಾ ಅವರು ದೂರು ವಾಪಸ್ ಪಡೆದ್ರೆ ಮಾತ್ರ ಬಿಡ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ರಾಮಾಚಾರಿ ಮಾನ್ಯತಾ ಮನೆಗೆ ಹೋಗಿ, ಆಕೆಯ ಕಾಲು ಹಿಡಿದು ಬೇಡಿಕೊಳ್ಳುತ್ತಿದ್ದಾನೆ. ಆದ್ರೆ ಮಾನ್ಯತಾ ಬಿಡಿಸಲ್ಲ ಎಂದು ಹೇಳಿ ಕಳಿಸುತ್ತಾಳೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಭಾವುಕ ಕ್ಷಣ, ಮನೆಯವರನ್ನು ನೋಡಿ ಕಣ್ಣೀರು!
ಪೊಲೀಸರಿಗೆ ಮನವಿ ಮಾಡಿದ ಚಾರು
ಚಾರು ಪೊಲೀಸರ ಬಳಿ ಹೋಗಿ ಕೋದಂಡನ್ನನು ಬಿಡಿ ಎಂದು ಕೇಳ್ತಾಳೆ. ಪೊಲೀಸರು ಚಾರುಗೂ ಸಹ ಅದನ್ನೇ ಹೇಳ್ತಾರೆ. ನಿಮ್ಮ ಅಮ್ಮ ದೂರು ವಾಪಸ್ ಪಡೆಯಬೇಕು ಎಂದು. ಅದಕ್ಕೆ ಚಾರು ನನ್ನನ್ನೇ ಕೊಲ್ಲಲ್ಲು ಬಂದಿದ್ದು ಅಂತ ದೂರಿನಲ್ಲಿ ಇರೋದು. ನಾನೇ ಹೇಳ್ತಾ ಇದ್ದೇನೆ ಅವರು ನಮ್ಮ ಮನೆಗೆ ಬಂದೇ ಇಲ್ಲ ಎಂದು ಹೇಳ್ತಾಳೆ. ಆದರೂ ಪೊಲೀಸರು ಕೇಳಲ್ಲ.
ಪೊಲೀಸರಿಗೆ ಗನ್ ಹಿಡಿದ ಚಾರು
ಯಾವಾಗ ಪೊಲೀಸರು ಚಾರು ಮಾತು ಕೇಳಲ್ವೋ, ಆಗ ಆಕೆ ಕೋಪ ಮಾಡಿಕೊಂಡು, ಅವರ ಗನ್ ತೆಗೆದು ಅವರ ತಲೆಗೆ ಇಡುತ್ತಾಳೆ. ಕೋದಂಡನನ್ನು ಬಿಡಿ ಎನ್ನುತ್ತಾಳೆ. ಅದಕ್ಕೆ ಕೋದಂಡ ನೋಡು ಇವಳು ಹೇಗೆ ನಾಟಕ ಮಾಡ್ತಾಳೆ ಅಂತ. ರಾಮಾಚಾರಿ ಈಕೆಯನ್ನು ನಂಬಬೇಡ ಎನ್ನುತ್ತಾನೆ.
ತನ್ನ ಕೈಗೆ ತಾನೇ ಶೂಟ್ ಮಾಡಿಕೊಂಡ್ಲು
ರಾಮಾಚಾರಿ ನಾನು ನಿಜ ಹೇಳ್ತಿದ್ದೇನೆ. ಕೋದಂಡನನ್ನು ಬಿಡಿಸಲು ಬಂದಿದ್ದು ಎಂದು. ಆದ್ರೆ ರಾಮಾಚಾರಿ ನಂಬಲ್ಲ. ಅಮ್ಮ-ಮಗಳು ಡ್ರಾಮಾ ಮಾಡ್ತೀರಾ? ನಾನು ನಿಮ್ಮ ಅಮ್ಮನ ಕಾಲು ಹಿಡಿದ್ರೂ ಅವರು ಬಿಡಿಸಲ್ಲ ಅಂದ್ರು.
ಈಗ ನೀನು ಈ ರೀತಿ ಬೇರೆಯವಿಗೆ ಗನ್ ಹಿಡಿತೀಯಾ, ಜೀವದ ಬೆಲೆ ನಿನಗೆ ಗೊತ್ತಾ ಎಂದು ಕೇಳುತ್ತಾನೆ. ಅದಕ್ಕೆ ತನ್ನ ಕೈಗೆ ತಾನೇ ಶೂಟ್ ಮಾಡಿಕೊಂಡು, ಈಗ ನಂಬ್ತೀಯಾ ರಾಮಾಚಾರಿ? ಕೋದಂಡನನ್ನು ಬಿಡಿ ಎನ್ನುತ್ತಿದ್ದಾಳೆ.
ಇದನ್ನೂ ಓದಿ: Kannadathi: ವರೂಧಿನಿಗೆ ಪ್ರಶ್ನೆ ಮೇಲೆ ಪ್ರಶ್ನೆ, ಹರ್ಷನ ಬಳಿ ಸಿಕ್ಕಿ ಹಾಕಿಕೊಳ್ತಾಳಾ ಸೈಕೋ?
ಕೋದಂಡನನ್ನು ಪೊಲೀಸರು ಬಿಡ್ತಾರಾ? ಚಾರು ಪ್ರಾಣಕ್ಕೆ ಅಪಾಯಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ