ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾಗೆ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇದೆ. ಅವಳನ್ನು ಮಾತನಾಡಿಸುವುದು ಇರಲಿ, ಅವರ ನೆರಳು ನಮ್ಮ ಮನೆ ಕಡೆ ಬೀಳಬಾರದು ಅಂತಿದ್ದಾರೆ, ಆದ್ರೆ ಮಾನ್ಯತಾ, ಚಾರುಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ತಮ್ಮ ಮನೆಯವರ ಸುದ್ದಿಗೆ ಬಂದವರಿಗೆ ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದುಕೊಳ್ಳುತ್ತಿದ್ದಾನೆ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ. ಹೆಸರು ಹೇಳದೇ ರಾಮಾಚಾರಿ ತಂಗಿ (Sister) ಶೃತಿಯನ್ನು ಚಾರು ಕಾಪಾಡಿದ್ದಾಳೆ (Save).
ಕಾಲೇಜಿಗೆ ಹೋಗುತ್ತಿದ್ದ ಶೃತಿಗೆ ಕಾಟ
ರಾಮಾಚಾರಿ ತಂಗಿ ಶೃತಿ ಕಾಲೇಜಿಗೆ ಹೋಗುತ್ತಿರುವಾಗ, ಪೋಲಿ ಒಬ್ಬ ಅಡ್ಡ ಹಾಕುತ್ತಾನೆ. ಆತ ಶೃತಿ ವೇಲ್ ಎಳೆದು ಅಸಭ್ಯವಾಗಿ ವರ್ತಿಸುತ್ತಾನೆ. ಅದಕ್ಕೆ ಶೃತಿ ಅವನಿಂದ ತಪ್ಪಿಸಿಕೊಂಡು, ಭಯಪಟ್ಟು ಓಡಿ ಹೋಗ್ತಾ ಇರ್ತಾಳೆ. ಈ ವಿಷ್ಯವನ್ನು ರಾಮಾಚಾರಿಗೆ ಊರಿನ ಹುಡುಗನೊಬ್ಬ ಬಂದು ಹೇಳ್ತಾನೆ. ಅದಕ್ಕೆ ಆತಂಕದಿಂದ ರಾಮಾಚಾರಿ ಓಡಿ ಹೋಗ್ತಾನೆ.
ರೆಬೆಲ್ ಆದ ಚಾರು
ಶೃತಿ ಓಡಿ ಹೋಗುತ್ತಿರುವುದನ್ನು ನೋಡಿದ ಚಾರು ರೆಬೆಲ್ ಆಗಿದ್ದಾಳೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಸೈಕಲ್ ನಲ್ಲಿ ಬಂದಿದ್ದಾಳೆ. ಆ ಹುಡುಗನಿಗೆ ಸರಿಯಾಗಿ ಹೊಡೆದಿದ್ದಾಳೆ. ನಡು ರೋಡ್‍ನಲ್ಲಿ ಹೆಣ್ಣಿನ ಮೈ ಮುಟ್ಟುತ್ತೀಯಾ ಮಗನೇ, ಬಿಟ್ರೆ ಜುಟ್ಟು ಹಿಡಿತೀರಿ, ಎದ್ರೆ ಕಾಲು ಹಿಡಿಯುತ್ತೀರಿ. ಹೆಣ್ಣನ್ನು ಪೂಜೆ ಮಾಡೋ ಪುಣ್ಯ ಭೂಮಿಯಲ್ಲಿ ಹುಟ್ಟಿ, ಮಣ್ಣು ತಿನ್ನುವ ಕೆಲಸ ಮಾಡ್ತೀಯಾ ಎಂದು ಬೈದಿದ್ದಾಳೆ.
ಇದನ್ನೂ ಓದಿ: Kannadathi: 15 ದಿನದಲ್ಲಿ ಕನ್ನಡತಿ ಮುಗಿಯುತ್ತಾ? ಹರ್ಷ ಕೊಟ್ಟ ಸುಳಿವಿನಿಂದ ಅಭಿಮಾನಿಗಳು ಶಾಕ್
ದುರ್ಗಿ ಆದ ಚಾರು
ನಾಚಿಕೆ ಆಗಲ್ವಾ ನಿನಗೆ? ಹೆಣ್ಣು ಅಂದ್ರೆ ಕೈಯಲ್ಲಿ ಆಗದೇ ಇರುವವರು ಎಂದುಕೊಂಡ್ಯಾ? ತಿರುಗಿ ಬಿದ್ರೆ, ದುರ್ಗಿ ಆಗಿ ನಿನ್ನ ತುಳಿದು ಬಿಡುತ್ತಾಳೆ.ಇದುವರೆಗೂ ಹೆಣ್ಣಿನ ಮೇಲೆ ಕಣ್ಣು ಹಾಕಿದವರು ಉದ್ಧಾರ ಆಗಿಲ್ಲ. ನಿನಗೆ ಬದುಕುವ ಯೋಗ್ಯತೆ ಇಲ್ಲ ಎಂದು ಪೋಲಿಗೆ ಚಾರು ಸರಿಯಾಗಿ ಬುದ್ಧಿ ಕಲಿಸುತ್ತಾಳೆ.
ಶೃತಿಗೆ ಧೈರ್ಯ ತುಂಬಿದ ಚಾರು
ಅಟ್ಟಿಸಿಕೊಂಡು ಬಂದ್ರೆ, ಅಟ್ಟಾಡಿಸಿಕೊಂಡು ಹೊಡೆಯಬೇಕು. ಭಯಪಟ್ಟು ಓಡೋದಲ್ಲ ಎಂದು ಶೃತಿಗೆ ಚಾರು ಹೇಳ್ತಾಳೆ. ಅದಕ್ಕೆ ಶೃತಿ ನನಗೆ ತುಂಬಾ ಭಯ ಆಯ್ತು. ನನಗೆ ನಿಮ್ಮಷ್ಟು ಧೈರ್ಯ ಇಲ್ಲ ಎನ್ನುತ್ತಾಳೆ. ಧೈರ್ಯಕ್ಕೆ ಇನ್ನೊಂದು ಹೆಸರೇ ಹೆಣ್ಣು ಎಂದು ಚಾರು ಹೇಳ್ತಾಳೆ. ನಿಮ್ಮಿಂದ ತುಂಬಾ ಉಪಕಾರ ಆಯ್ತು. ನನ್ನ ಹೆಸರು ಶೃತಿ. ನೀವು ಯಾರು ಎನ್ನುತ್ತಾಳೆ. ಸಹಾಯ ಮಾಡೋಕೆ ಪರಿಚಯ ಇರಬೇಕು ಎಂದು ಇಲ್ಲ. ನನ್ನ ಹೆಸರು ಶೈಲು ಎಂದು ಹೇಳಿ ಚಾರು ಹೋಗ್ತಾಳೆ.
ಶೈಲು ಅನ್ನೋ ಹೊಸ ಪಾತ್ರ
ರಾಮಾಚಾರಿ ಧಾರಾವಾಹಿಯಲ್ಲಿ ಶೈಲು ಅನ್ನುವ ಹೊಸ ಹೆಸರು ಕೇಳಿ ಬರುತ್ತಿದೆ. ಅದು ಹೊಸ ಪಾತ್ರ ಅಲ್ಲ. ಶೈಲು ಎನ್ನುವುದು ಚಾರು ಸೃಷ್ಟಿ ಮಾಡಿರೋದು. ರಾಮಾಚಾರಿಯನ್ನು ಮಾತನಾಡಿಸಲು ಶೈಲು ಎಂದು ಹೇಳಿಕೊಂಡಿದ್ದಾಳೆ. ಬೇರೆ ನಂಬರ್ ನಿಂದ ಶೈಲು ಎಂದು ಹೇಳಿ, ಅವನ ಜೊತೆ ಮಾತನಾಡುತ್ತಾಳೆ.
ಇದನ್ನೂ ಓದಿ: Lakshana: ನಕ್ಷತ್ರಾ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ ಮೌರ್ಯ, ಭೂಪತಿಗೆ ಖುಷಿಯೋ ಖುಷಿ!
ಶೈಲು ಎಂದ್ರೆ ರಾಮಾಚಾರಿಗೆ ಇಷ್ಟ, ಚಾರು ಎಂದ್ರೆ ಕಷ್ಟ, ಶೈಲುನೇ ಚಾರು ಅಂತ ತಿಳಿಯುತ್ತಾ? ರಾಮಾಚಾರಿ ಆಗ ಏನ್ ಮಾಡ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ