ರಾಮಾಚಾರಿ (Ramchari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿದ್ದಾಳೆ.
ಕಣ್ಣಿನಿ ಚಿಕಿತ್ಸೆಗೆ ರಾಮಾಚಾರಿ ಟೀಂ ಚಿಕ್ಕಮಗಳೂರಿನಲ್ಲಿದೆ. ಅಲ್ಲಿ ತನ್ನ ಸುದ್ದಿಗೆ ಬಂದ ಗೂಂಡಾಗೆ ಚಾರು ದಿಟ್ಟ ಉತ್ತರ ಕೊಟ್ಟಿದ್ದಾಳೆ.
ಚಿಕ್ಕಮಗಳೂರಿನಲ್ಲೂ ರೌಡಿ ಕಾಟ
ಚಾರು ಮತ್ತು ರಾಮಾಚಾರಿ ಈ ಹಿಂದೆ ಪ್ರಾಜೆಕ್ಸ್ ಗಾಗಿ ಚಿತ್ರದುರ್ಗಕ್ಕೆ ಹೋಗಿರುತ್ತಾರೆ. ಚಾರು ಅಲ್ಲಿ ರೌಡಿಗಳಿಗೆ ಹೇಳಿ ರಾಮಾಚಾರಿಯನ್ನು ಹೊಡೆಯುವಂತೆ ಹೇಳಿರುತ್ತಾಳೆ. ಅವರು ಹೊಡೆದಿರುತ್ತಾರೆ. ಆಗ ದುಡ್ಡು ಪಡೆಯಲು ಬಂದ ಗೂಂಡಾ ಚಾರುಳ ಮೇಲೆ ಕಣ್ಣು ಹಾಕಿರುತ್ತಾನೆ. ಆಕೆಯನ್ನು ಹಾಳು ಮಾಡಲು ಹೋಗಿರುತ್ತಾನೆ. ರೌಡಿಗಳಿಂದ ರಾಮಾಚಾರಿ ಕಾಪಾಡಿರುತ್ತಾನೆ. ಅವರು ಈಗ ಚಿಕ್ಕಮಗಳೂರಿನಲ್ಲಿ ಪ್ರತ್ಯಕ್ಷ ಆಗಿದ್ದಾನೆ.
ಚಾರು ಮೇಲೆ ಕಣ್ಣಾಕಿದ ಕೇಡಿ
ಚಾರು ಮೇಲೆ ಕಣ್ಣು ಹಾಕಿರುವ ಗೂಂಡಾ, ಚಾರು ಒಬ್ಬಳೇ ಆಶ್ರಮದಲ್ಲಿ ಇದ್ದಾಗ ಬಂದಿದ್ದಾನೆ. ಆಕೆಯ ಮೇಲೆ ಮೃಗದಂತೆ ಎರಗಿದ್ದಾನೆ. ನೀನು ನನಗೆ ಬೇಕು. ಚಿತ್ರದುರ್ಗದಲ್ಲಿ ಮಿಸ್ ಆಗಿದ್ದೆ, ಈಗ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾನೆ. ಅದಕ್ಕೆ ಚಾರು ಗಾಬರಿಯಾಗಿ ಕಿರುಚಿಕೊಳ್ತಾ ಇದ್ದಾಳೆ. ಆದ್ರೆ ಅಲ್ಲಿ ಯಾರು ಇಲ್ಲ.
ಸ್ವಯಂ ರಕ್ಷಣೆ ಮಾಡಿಕೊಂಡ ಚಾರು
ಚಾರುಗೆ ತನ್ನನ್ನು ಕಾಪಾಡಲು ಯಾರು ಇಲ್ಲ ಎಂದು ಗೊತ್ತಾಗಿದೆ. ಅದಕ್ಕೆ ತಾನೇ ಸ್ವಯಂ ರಕ್ಷಣೆಗೆ ನಿಂತಿದ್ದಾರೆ. ಕಣ್ಣು ಇಲ್ಲ ಅಂದ್ರೆ ಏನಾಯ್ತು, ಕಿವಿಗಳಿಂದ ಎಲ್ಲವನ್ನೂ ಆಲಿಸಿದ್ದಾಳೆ. ರೌಡಿ ಮಾತನಾಡುವ ಜಾಡು ನೋಡಿ ಅವನಿಗೆ ಕಲ್ಲು ಬೀಸಿದ್ದಾಳೆ. ಅಲ್ಲದೇ ಕೋಲು ತೆಗೆದುಕೊಂಡು ರೌಡಿಗೆ ಚೆನ್ನಾಗಿ ಹೊಡೆದಿದ್ದಾಳೆ.
ಕಾಡೋ ಕೇಡಿಗೆ ದಿಟ್ಟ ಉತ್ತರ
ಚಾರುಗೆ ಕಣ್ಣು ಕಾಣದೇ ಇರಬಹುದು. ಆದ್ರೆ ರಾಮಾಚಾರಿ ಧೈರ್ಯದ ಪಾಠ ಹೇಳಿಕೊಟ್ಟಿದ್ದಾನೆ. ಶಬ್ಧವೇದಿ ವಿದ್ಯೆ ಬಗ್ಗೆ ತಿಳಿಸಿಕೊಟ್ಟಿದ್ದಾನೆ. ಇದರಿಂದ ಚಾರು ಸ್ಟ್ರಾಂಗ್ ಆಗಿದ್ದಾಳೆ. ತನ್ನನ್ನು ತಾನೆ ಕಾಪಾಡಿಕೊಂಡಿದ್ದಾಳೆ. ಸ್ವಯಂ ರಕ್ಷಣೆ ಮಾಡಿಕೊಂಡಿದ್ದಾಳೆ. ಕಾಡೋ ಕೇಡಿಗೆ ಕೋಲಿನ ಏಟು ನೀಡಿ ದಿಟ್ಟ ಉತ್ತರ ಕೊಟ್ಟಿದ್ದಾಳೆ.
ರಾಮಾಚಾರಿ ಬರ್ತಾನಾ?
ಚಾರು ಏನೋ ಪ್ರಯತ್ನ ಮಾಡಿ ತನ್ನನ್ನು ತಾನು ಕಾಪಾಡಿಕೊಳ್ತಾ ಇದ್ದಾಳೆ. ಆದ್ರೆ ಒಬ್ಬನೇ ಇರುವ ರೌಡಿಗಳು ಸಂಖ್ಯೆ ಹೆಚ್ಚಾದ್ರೆ ಏನ್ ಕಥೆ? ಚಾರು ಒಬ್ಬರೇ ಎಲ್ಲಾ ರೌಡಿಗಳನ್ನು ಹೊಡೆಯಲು ಸಾಧ್ಯವಿಲ್ಲ. ಅದಕ್ಕೆ ಚಾರುಳನ್ನು ಕಾಪಾಡಲು ರಾಮಾಚಾರಿ ಬರ್ತಾನಾ ನೋಡಬೇಕು. ಬಂದೊಇರುವ ಸಮಸ್ಯೆಯಿಂದ ಹೇಗೆ ಪಾರಾಗ್ತಾರೆ ಎನ್ನುವುದನ್ನು ಸಂಚಿಕೆಯಲ್ಲಿ ನೋಡಬೇಕು.
ಇದನ್ನೂ ಓದಿ: Vasishta Simha-Haripriya: ನೀಲಿ ಬಣ್ಣದ ಉಡುಗೆಯಲ್ಲಿ ನವಜೋಡಿ! ದೃಷ್ಟಿ ಆಗುತ್ತೆ ಎಂದ ಜನ
ಚಾರು ಏಟಿಗೆ ಓಡಿ ಹೋಗ್ತಾನಾ ರೌಡಿ? ಕೋಪಗೊಂಡು ಇನ್ನಷ್ಟು ಜನರನ್ನು ಕರೆದುಕೊಂಡು ಬರ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ