ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial) ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿದ್ದಾಳೆ. ಅದಕ್ಕೆ ರಾಮಾಚಾರಿ ಒಂಟಿ ಕಾಲಿನಲ್ಲಿ ನಿಲ್ಲುವ ಹರಕೆ ಹೊತ್ತಿದ್ದಾನೆ.
ಮಗಳ ನೋಡಿ ಮಾನ್ಯತಾ ಕಣ್ಣೀರು
ಕಣ್ಣು ಕಳೆದುಕೊಂಡು ರಾಮಾಚಾರಿ ಮನೆಯಲ್ಲಿದ್ದ ಚಾರುವನ್ನು ಮಾನ್ಯತಾ ಕರೆದುಕೊಂಡು ಬಂದಿದ್ದಾಳೆ. ಅವಳು ಚಾರುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕಣ್ಣು ಟೆಸ್ಟ್ ಮಾಡಿಸಿದ್ದಾಳೆ. ಆಗ ಡಾಕ್ಟರ್ ಚಾರುಗೆ ಶಾಶ್ವತವಾಗಿ ಕಣ್ಣು ಬರಲ್ಲ ಎಂದಿದ್ದಾರೆ. ಅದನ್ನು ಕೇಳಿ ಮಾನ್ಯತಾ ಗಾಬರಿ ಆಗಿದ್ದಾರೆ. ಮಗಳಿಗೆ ಕಣ್ಣು ಬರಲ್ಲ ಎಂದು ಕಣ್ಣೀರು ಹಾಕುತ್ತಿದ್ದಾಳೆ.
ತನ್ನ ಮನೆಯವರಿಂದ ಚಾರುಗೆ ಕಣ್ಣು ಹೋಗಿದ್ದು!
ಚಾರು ಕಣ್ಣು ಹೋಗಲು ರಾಮಾಚಾರಿ ಕಾರಣ. ಆದ್ರೆ ಆ ಕಣ್ಣು ಬರಲು ಡಾಕ್ಟರ್ ಪ್ರಯತ್ನ ಮಾಡ್ತೇರೆ. ಆದ್ರೆ ಅದಕ್ಕೆ ಅವರನ್ನು ತುಂಬಾ ಹುಷಾರಾಗಿ ನೋಡಿಕೊಳ್ಳಿ ಎಂದಿರುತ್ತಾರೆ. ಅದಕ್ಕೆ ರಾಮಾಚಾರಿ ಕೇರ್ ಮಾಡ್ತಾ ಇರ್ತಾರೆ.
ಆದ್ರೆ ರಾಮಾಚಾರಿ ಅಣ್ಣ ಕೋದಂಡ ಚಾರುಳನ್ನು ಮನೆಯಿಂದ ಆಚೆ ತಳ್ಳಿರುತ್ತಾನೆ. ಆಗ ಚಾರು ಮಳೆಯಲ್ಲಿ ನೆಂದು ಶೀತ ಆಗುತ್ತೆ. ಅದಕ್ಕೆ ಡಾಕ್ಟರ್ ಪ್ರಯತ್ನಕ್ಕೆ ಪ್ರಯೋಜನ ಆಗಲ್ಲ. ಅದಕ್ಕೆ ರಾಮಾಚಾರಿ ತನ್ನ ಮನೆವರಿಂದ ಈ ರೀತಿ ಆಯ್ತು ಎಂದು ಕೊರಗುತ್ತಿದ್ದಾನೆ.
ಒಂಟಿ ಕಾಲಿನ ಸೇವೆ ಮಾಡಲು ನಿರ್ಧಾರ
ಚಾರುಗೆ ವೈದ್ಯರು ಕಣ್ಣು ಬರಲ್ಲ ಎಂದು ಹೇಳಿದ್ದಾರೆ. ಆದ್ರೆ ರಾಮಾಚಾರಿ ದೇವರ ಮೇಲೆ ಭಾರ ಹಾಕಿದ್ದಾನೆ. ದೇವರೇ ಬೇರೆ ದಾರಿ ತೋರಿಸಪ್ಪ ಎಂದು ಹರಕೆ ಕಟ್ಟಿಕೊಂಡಿದ್ದಾನೆ. ದಿನವೆಲ್ಲಾ ನಾಗರ ಕಟ್ಟೆ ಮುಂದೆ ಒಂಟಿ ಕಾಲಿನಲ್ಲಿ ನಿಲ್ಲುವುದಾಗಿ ಹೇಳಿದ್ದಾನೆ. ಅದಕ್ಕೆ ಮನೆಯವರೆಲ್ಲಾ ಬೇಡ ಅಂದ್ರೂ ಕೇಳುತ್ತಿಲ್ಲ.
ನಿಸ್ವಾರ್ಥ ಸೇವೆ
ನಾನು ಈ ಸೇವೆಯನ್ನು ನನಗಾಗಿ ಮಾಡುತ್ತಿಲ್ಲ. ಬೇರೆಯವರಿಗೆ ಒಳ್ಳೆಯದಾಗಲಿ ಅಂತ ಮಾಡ್ತಾ ಇದೀನಿ. ಚಾರು ಮೇಡಂ ಕಣ್ಣು ವಾಪಸ್ ಬರಲಿ ಅನ್ನೋ ಕಡೆ ಭರವಸೆಯಿಂದ ಇದನ್ನು ಮಾಡ್ತಾ ಇದ್ದೇನೆ. ನಿಸ್ವಾರ್ಥ ಸೇವೆಗೆ ದೇವರು ಬೆಂಬವಾಗಿ ನಿಲ್ಲುತ್ತಾನೆ ಎಂದು ರಾಮಾಚಾರಿ ಹೇಳ್ತಾನೆ. ದೇವರ ಸೇವೆ ಮಾಡಲು ರೆಡಿಯಾಗಿದ್ದಾನೆ.
ವಿಹಾನ್ ಬೇಡ ಎಂದ ಚಾರು
ಮಾನ್ಯತಾ ತನ್ನ ಅಣ್ಣನ ಮಗ ವಿಹಾನ್ ಜೊತೆ ಚಾರು ಮದುವೆ ಮಾಡಬೇಕು ಎಂದುಕೊಂಡಿದ್ದಳು. ತನ್ನ ಅಣ್ಣ ಮತ್ತು ವಿಹಾನ್ ಜೊತೆ ಮಾತನಾಡಿದ್ದಾಳೆ. ಅದನ್ನೇ ಚಾರು ಬಳಿ ಕೇಳಿದ್ದಾಳೆ. ವಿಹಾನ್ ಮದುವೆ ಆಗಲು ಸಾಧ್ಯವಿಲ್ಲ ಎಂದು ಚಾರು ಹೇಳಿದ್ದಾಳೆ. ಅದನ್ನು ಕೇಳಿ ಮಾನ್ಯತಾ ಶಾಕ್ ಆಗಿದ್ದಾಳೆ. ಅಲ್ಲದೇ ಚಾರು ರಾಮಾಚಾರಿಯನ್ನು ಇಷ್ಟ ಪಡ್ತಾ ಇದ್ದಾಳೆ.
ಇದನ್ನೂ ಓದಿ: Punyavathi: ಮಾರ್ಡನ್ ಡ್ರೆಸ್‍ನಲ್ಲಿ ಪದ್ಮಿನಿ ಡ್ಯಾನ್ಸ್! ಹೊಸ ಅವತಾರ ನೋಡಿ ಶಾಕ್ ಆದ ನಂದನ್
ಚಾರುಗೆ ಕಣ್ಣು ಬರುತ್ತಾ? ರಾಮಾಚಾರಿ ಸೇವೆ ದೇವರಿಗೆ ಸಲ್ಲುತ್ತಾ? ರಾಮಾಚಾರಿ ಚಾರುಳನ್ನು ಲವ್ ಮಾಡ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ