ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಅಪರ್ಣಾಗೆ ಆಪರೇಷನ್ ಮಾಡಿಸಲು ಹಣ ಇಲ್ಲದೇ ಆಕೆ ಸಾವನ್ನಪ್ಪುತ್ತಾಳೆ. ಚಾರು ಮೋಸದಿಂದ, ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ತಮ್ಮ ಮನೆಯವರ ಸುದ್ದಿಗೆ ಬಂದ ಚಾರು ಮತ್ತು ಮಾನ್ಯತಾ ಗೆ ತನ್ನ ಬುದ್ಧಿವಂತಿಕೆಯಿಂದಲೇ ಪಾಠ ಕಲಿಸಲು ರಾಮಾಚಾರಿ ಮುಂದಾಗಿದ್ದಾನೆ. ಆದ್ರೆ ಚಾರು ರಾಮಾಚಾರಿ ಬಳಿ ಹೋಗಿ ಲವ್ (Love) ಪ್ರಪೋಸಲ್ (Proposal) ಮಾಡಿದ್ದಾಳೆ.
ಚಾರು ಮತ್ತು ಮಾನ್ಯತಾ ಕಂಡ್ರೆ ಕೆಂಡಾಮಂಡಲ
ರಾಮಾಚಾರಿ ಮನೆಯಲ್ಲಿ ಅಪರ್ಣಾ ಸಾವನ್ನಪ್ಪಿದಾಗಿನಿಂದ ತುಂಬಾ ಬೇಸರದಲ್ಲಿ ಇದ್ದಾರೆ. ನಮ್ಮ ಮನೆಯವರ ಸುದ್ದಿಗೆ ಬಂದವರನ್ನು ಸುಮ್ನೆ ಬಿಡಲ್ಲ. ಅವರಿಗೆ ಬುದ್ಧಿ ಕಲಿಸುತ್ತೇನೆ ಎಂದು ರಾಮಾಚಾರಿ ಪಣ ತೊಟ್ಟಿದ್ದಾನೆ. ಅವರಿಗೆ ಗೊತ್ತಾಗದ ರೀತಿ ಬುದ್ಧಿವಂತಿಕೆಯಿಂದ ಅವರಿಗೆ ಹೊಡೆತ ಕೊಡಬೇಕು ಎಂದುಕೊಂಡಿದ್ದಾನೆ. ಅದೇ ರೀತಿ ಎಲ್ಲವನ್ನೂ ಪ್ಲ್ಯಾನ್ ಮಾಡಿ ಮಾಡ್ತಾ ಇದ್ದಾನೆ. ಚಾರು ಮತ್ತು ಮಾನ್ಯತಾ ಕಂಡ್ರೆ ರಾಮಾಚಾರಿಗೆ ಆಗಲ್ಲ.
ಐ ಲವ್ ಯು ರಾಮಾಚಾರಿ!
ರಾಮಾಚಾರಿ ಆಫೀಸ್ ನಲ್ಲಿ ಕೆಲಸ ಮಾಡ್ತಾ ಇರ್ತಾರೆ. ಆಗ ಚಾರು ತಾನು ಮಾತನಾಡಬೇಕು ಎನ್ನುತ್ತಾಳೆ. ಮೊದಲು ರಾಮಾಚಾರಿ ಬೇಡ ಅಂದ. ಆದ್ರೂ ಚಾರು ಬಿಡದೇ ಮಾತನಾಡುತ್ತಿದ್ದಾಳೆ. ಐ ಲವ್ ಯು ರಾಮಾಚಾರಿ. ಅವತ್ತು ನಿನಗೆ ಪ್ರಪೋಸ್ ಮಾಡೋಕೆ ಎಲ್ಲಾ ರೆಡಿ ಮಾಡಿದ್ದೆ. ಆದ್ರೆ ಅವತ್ತು ಅಲ್ಲಿ ಆಗಿದ್ದೇ ಬೇರೆ. ನೀನು ಏನೂ ಕೇಳಿಸಿಕೊಳ್ಳದೇ ಆಗಿ ಹೋಗಿ ಬಿಟ್ಟೆ ಎಂದು ಚಾರು ಹೇಳ್ತಾಳೆ.
ಇದನ್ನೂ ಓದಿ: Vasishta Simha-Haripriya: ಉಡುಪಿ ಕೃಷ್ಣ ಮಠಕ್ಕೆ ವಸಿಷ್ಠ-ಹರಿಪ್ರಿಯಾ ಭೇಟಿ! ಮುಂದಿನ ವರ್ಷ ಮಾರ್ಚ್ನಲ್ಲಿ ಮದುವೆ ಫಿಕ್ಸ್?
ನಿನ್ನಿಂದ ಬದಲಾದೆ
ನೀನೊಬ್ಬ ನನ್ನ ಬಾಳಲ್ಲಿ ಬರಲಿಲ್ಲ ಅಂದ್ರೆ, ನಾನು ಮನುಷ್ಯಳಾಗಿ ಇರ್ತಾ ಇರಲಿಲ್ಲ. ಹೆಣ್ಣಾಗಿದ್ದೇ, ಆದ್ರೆ ಹೆಣ್ತನ ಇರಲಿಲ್ಲ. ಬದುಕ್ತಿದ್ದೇ, ಆದ್ರೆ ಸರಿಯಾದ ರೀತಿ ಜೀವಿಸುತ್ತಿರಲಿಲ್ಲ. ಕಣ್ಣಿತ್ತು, ಆದ್ರೆ ಕಷ್ಟದಲ್ಲಿ ಇದ್ದವರನ್ನು ಯಾವತ್ತು ಕಣ್ಣೆತ್ತಿ ನೋಡಿರಲಿಲ್ಲ. ಕೈಯಿತ್ತು, ಆದ್ರೆ ಯಾವತ್ತೂ ಅವಶ್ಯಕತೆ ಇದ್ದವರಿಗೆ ಸಹಾಯ ಮಾಡಿರಲಿಲ್ಲ. ನಿನ್ನ ಶಕ್ತಿ ಎಂಥದ್ದು ಅಂದ್ರೆ, ಹುಟ್ಟಿದಾಗಿನಿಂದ ತಿದ್ದಿಕೊಳ್ಳದ ಗುಣಗಳನ್ನು ತಿದ್ದಿಕೊಂಡಿದ್ದೇನೆ ಎಂದು ಚಾರು ಹೇಳ್ತಾಳೆ.
ನಿನ್ನ ಹೃದಯ ಬಯಸೋ ಪ್ರಾಮಾಣಿಕ ಪ್ರೇಮಿ
ನಿನ್ನಿಂದ ಪಾಠ ಕಲಿತ್ತಿದ್ದೇನೆ. ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೆಲ್ಲಾ ಕಲಿಸಿ ಅದ್ಭುತ ಮಾಡಿ ಬಿಟ್ಟೆ, ಇನ್ನು ಜೀವನ ಪೂರ್ತಿ ನಿಮ್ಮ ಜೊತೆ ಬದುಕುವ ಅವಕಾಶ ಸಿಕ್ರೆ ಅದು ಸ್ವರ್ಗ ಆಗಿರುತ್ತೆ. ನಿನ್ನ ಒಳ್ಳೆತನಕ್ಕೆ ನಾನು ಅಭಿಮಾನಿ.
ನಿನ್ನ ಹೃದಯ ಬಯಸೋ ಪ್ರಾಮಾಣಿಕ ಪ್ರೇಮಿ. ನನ್ನ ಜೀವನ ನಿನ್ನ ಕೈಗೆ ಕೊಡ್ತೀನಿ. ನನ್ನ ಮುಂದಿನ ಪ್ರತಿಯೊಂದು ಹೆಜ್ಜೆ ನಿನ್ನ ಜೊತೆ ಇಡಬೇಕು. ನನ್ನ ಪ್ರೀತಿ ಒಪ್ಪಿಕೊಂಡು, ನಿನ್ನ ಜೊತೆ ಬಾಳೋ ಅವಕಾಶ ಕೊಡ್ತೀಯಾ ಎಂದು ಚಾರು ರಾಮಾಚಾರಿಯನ್ನು ಕೇಳಿದ್ದಾಳೆ.
ಬದಲಾಗಿದ್ದೀನಿ ಎಂದು ಸುಳ್ಳು ಹೇಳಬೇಡಿ
ಚಾರು ಹೇಳಿದ್ದನು ಕೇಳಿ, ರಾಮಾಚಾರಿ ಸಾಕು ನಿಲ್ಲಿಸಿ, ಪ್ರೀತಿ ಅಂತೆ. ಪ್ರೀತಿ ಅರ್ಥ ಗೊತ್ತಾ ನಿಮಗೆ? ಸ್ವಾರ್ಥಿಗಳು ನೀವು. ಆ ಕ್ಷಣಕ್ಕೆ ಬಣ್ಣ ಬದಲಾಯಿಸುತ್ತೀರಿ. ಸುಮ್ಮನೇ ಬದಲಾಗಿದ್ದೀನಿ ಎಂದು ಸುಳ್ಳು ಹೇಳಬೇಡಿ. ನೀವು ಬದಲಾಗುವುದು ನಿಮ್ಮ ಸ್ವಾರ್ಥಕ್ಕೆ. ನಿಮಗೆ ಯಾರ ಮಾತಾದ್ರೂ ಕೇಳಬೇಕು ಅಂದ್ರೆ ನಿಮ್ಮ ಪ್ರತಿಷ್ಠೆ, ಅಹಂಕಾರ ಅಡ್ಡ ಬರುತ್ತೆ. ಹೇಗೆ ಸಂಸಾರ ಮಾಡ್ತೀರಿ ಎಂದು ರಾಮಾಚಾರಿ ಪ್ರಶ್ನೆ ಮಾಡಿದ್ದಾನೆ.
ಇದನ್ನೂ ಓದಿ: Vasishta Simha-Haripriya: ಪ್ರೀತಿ ಹುಟ್ಟಿಸಿದ ಸಿನಿಮಾಕ್ಕೆ ಒಟ್ಟಿಗೆ ಡಬ್ಬಿಂಗ್ ಮಾಡಿದ ವಸಿಷ್ಠ-ಹರಿಪ್ರಿಯಾ!
ಬದಲಾಗಿರುವ ಚಾರು ಮೇಲೆ ರಾಮಾಚಾರಿಗೆ ನಂಬಿಕೆ ಬರಲ್ವಾ? ರಾಮಾಚಾರಿಗೆ ಪ್ರೀತಿ ಹುಟ್ಟಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ