• Home
 • »
 • News
 • »
 • entertainment
 • »
 • Ramachari: ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ? ಚಾರು ಪ್ರೀತಿ ಹೇಳಿದ್ದನ್ನು ಕೇಳಿಸಿಕೊಳ್ಳಲೇ ಇಲ್ಲ ಚಾರಿ!

Ramachari: ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ? ಚಾರು ಪ್ರೀತಿ ಹೇಳಿದ್ದನ್ನು ಕೇಳಿಸಿಕೊಳ್ಳಲೇ ಇಲ್ಲ ಚಾರಿ!

ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?

ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ?

ಚಾರು ತನ್ನ ಪ್ರೀತಿ ಹೇಳಬೇಕು ಎನ್ನುವಷ್ಟರಲ್ಲಿ , ರಾಮಾಚಾರಿಗೆ ಕಾಲ್ ಬರುತ್ತೆ, ಅವನು ಓಡೋಡಿ ಹೋಗುತ್ತಾನೆ. ರಾಮಾಚಾರಿ ಅತ್ತಿಗೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗ್ತಿದೆ .

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari)  ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿ ಎಷ್ಟೋ ಬಾರಿ ಚಾರುಳನ್ನು ಕಾಪಾಡಿದ್ದಾನೆ. ಅದಕ್ಕೆ ಚಾರುಗೆ ರಾಮಾಚಾರಿ ಮೇಲೆ ಪ್ರೀತಿ ಆಗಿದೆ. ಅದನ್ನು ಹೇಳಿಕೊಳ್ಳುವ ಎಲ್ಲಾ ಸಿದ್ಧತೆ ಮಾಡಿರುತ್ತಾಳೆ. ತನ್ನ ಪ್ರೀತಿ (Love) ಹೇಳಬೇಕು ಎನ್ನುವಷ್ಟರಲ್ಲಿ , ರಾಮಾಚಾರಿಗೆ ಕಾಲ್ ಬರುತ್ತೆ, ಅವನು ಓಡೋಡಿ ಹೋಗುತ್ತಾನೆ. ರಾಮಾಚಾರಿ ಅತ್ತಿಗೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾಳೆ (Death) ಎಂದು ಹೇಳಲಾಗ್ತಿದೆ.


  ಚಾರುಗೆ ರಾಮಾಚಾರಿ ಮೇಲೆ ಲವ್
  ಚಾರುಳನ್ನು ರಾಮಾಚಾರಿ ಎಷ್ಟೋ ಬಾರಿ ಕಾಪಾಡಿದ್ದಾನೆ. ಅದಕ್ಕೆ ಚಾರುಗೆ ಅವನ ಮೇಲೆ ಮೊದಲು ಅಕ್ಕರೆ ಹುಟ್ಟಿತ್ತು. ಈಗ ಅವನ ಮೇಲೆ ಲವ್ ಆಗಿದೆ ಎಂದು ಗೊತ್ತಾಗಿದೆ. ಆದಕ್ಕೆ ತನ್ನ ಖುಷಿಯನ್ನು ಸ್ನೇಹಿತೆ ಬಳಿ ಹೇಳಿಕೊಳ್ಳುತ್ತಿದ್ದಾಳೆ. ರಾಮಾಚಾರಿ ಬಳಿ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ಹೇಳುತ್ತಾಳೆ. ಅದಕ್ಕೆ ಎಲ್ಲಾ ಸಿದ್ಧತೆಯನ್ನೂ ಮಾಡಿದ್ಲು.


  ಅದ್ಧೂರಿ ಪ್ರಪೋಸಲ್
  ರಾಮಾಚಾರಿಗೆ ಅದ್ಧೂರಿಯಾಗಿ ಪ್ರಪೋಸ ಮಾಡಲು, ಅವನು ಬರುವ ದಾರಿಗೆ ಹೂವಿನಿಂದ ಹೃದಯಾಕಾರದ ಕಾಮನಬಿಲ್ಲಿನ ರೀತಿ ಡೆಕೋರೇಟ್ ಮಾಡಿಸಿದ್ದಾಳೆ. ರಾಮಾಚಾರಿ ಅದರ ಒಳಗೆ ನಡೆದುಕೊಂಡು ಬರಬೇಕು. ರಾಮಾಚಾರಿ ಅದರೊಳಗೆ ನಡೆದುಕೊಂಡು ಬರುತ್ತಿರುವಾಗ, ಅವನ ಮೇಲೆ ಹೃದಯಾಕಾರದ ಬಲೂನ್‍ಗಳು ಬೀಳುತ್ತವೆ. ಅವನು ಅಲ್ಲೇ ಖುಷಿಯಿಂದ ನಿಲ್ಲಬೇಕು ಎನ್ನುವುದು ಚಾರು ಪ್ಲ್ಯಾನ್.


  ಇದನ್ನೂ ಓದಿ: Bigg Boss Kannada: ಗಲಾಟೆ ಮಾಡೋ ರೂಪೇಶ್ ರಾಜಣ್ಣ ಬಾಳೆಗಿಡವಂತೆ, ಬೀಳದ ರೀತಿ ತಡೆದಿರೋದು ಯಾರು? 


  ಚಾರು ಪ್ರೀತಿ ನೋಡಲೇ ಇಲ್ಲ ರಾಮಾಚಾರಿ
  ಚಾರುಗೆ ಪ್ರೀತಿ ಹೇಳಿಕೊಳ್ಳಲು ಭಯ ಆಗಿರುತ್ತೆ. ರಾಮಾಚಾರಿಗೆ ತನ್ನ ಅತ್ತಿಗೆ ಚಿಂತೆ ಆಗಿರುತ್ತೆ. ಅದಕ್ಕೆ ಬೇಗ ಮಾತನಾಡಿ ಮೇಡಂ ಎನ್ನುತ್ತಾನೆ. ಚಾರು ಮಾತನಾಡಲು ಆಗುತ್ತಿಲ್ಲ ಎಂದು ಬ್ಯಾನರ್ ಓಪನ್ ಮಾಡ್ತಾಳೆ. ಅಷ್ಟರಲ್ಲಿ ರಾಮಾಚಾರಿ ಕಾಲ್ ಬರುತ್ತೆ. ಚಾರುವಿನ ಬ್ಯಾನರ್ ನೋಡದೇ ಮನೆಗೆ ಓಡಿ ಹೋಗುತ್ತಾನೆ.


  colors Kannada serial, kannada serial, ramachari serial, charu propose to ramachari with grand decoration, ramachari brother wife death, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ? ಚಾರು ಪ್ರೀತಿ ಹೇಳಿದ್ದನ್ನು ಕೇಳಿಸಿಕೊಳ್ಳಲೇ ಇಲ್ಲ ಚಾರಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರುಗೆ ರಾಮಾಚಾರಿ ಮೇಲೆ ಲವ್


  ಕಿಡ್ನಿ ಕೊಡಲು ಸಿದ್ಧತೆ
  ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತದೆ. ಆಪರೇಷನ್ ಮಾಡಿಸಬೇಕಿರುತ್ತದೆ. ರಾಮಾಚಾರಿ ದುಡ್ಡು ಜೋಡಿಸಲು ಆಗದೇ ತನ್ನ ಕಿಡ್ನಿ ಕೊಡಲು ರೆಡಿಯಾಗಿದ್ದಾನೆ. ಹೇಗಾದ್ರೂ ಅತ್ತಿಗೆ ಪ್ರಾಣ ಉಳಿಸಬೇಕು ಎಂದು ಒದ್ದಾಡುತ್ತಿರುತ್ತಾನೆ. ರಕ್ತ ಪರೀಕ್ಷೆ ಕೊಟ್ಟು ವರದಿಗಾಗಿ ಕಾಯ್ತಾ ಇರುತ್ತಾನೆ. ಅಷ್ಟರಲ್ಲೇ ಅತ್ತಿಗೆ ಇಲ್ಲ ಎನ್ನುವ ಸುದ್ದಿ ಬರುತ್ತೆ.


  ರಾಮಾಚಾರಿ ಕಣ್ಣೀರು
  ಚಾರು ತನ್ನ ಪ್ರೀತಿ ಹೇಳಬೇಕು ಎನ್ನುವಷ್ಟರಲ್ಲಿ , ರಾಮಾಚಾರಿಗೆ ಕಾಲ್ ಬರುತ್ತೆ, ಅವನು ಓಡೋಡಿ ಹೋಗುತ್ತಾನೆ. ರಾಮಾಚಾರಿ ಅತ್ತಿಗೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗ್ತಿದೆ .


  ರಾಮಾಚಾರಿ ಓಡೋಡಿ ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿ ಅಪರ್ಣಾಳನ್ನು ಮಲಗಿಸಿರುತ್ತಾರೆ. ಹಾಗಾದ್ರೆ ರಾಮಾಚಾರಿ ಅತ್ತಿಗೆ ಪಾತ್ರ ಮುಕ್ತಾಯವಾಯ್ತಾ? ಕ್ಯಾನ್ಸರ್‍ನಿಂದ ಅಪರ್ಣಾ ಸಾವನ್ನಪ್ಪಿದಳಾ? ರಾಮಾಚಾರಿ ಅಮ್ಮನಂತ ಅತ್ತಿಗೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ವಾ?


  colors Kannada serial, kannada serial, ramachari serial, charu propose to ramachari with grand decoration, ramachari brother wife death, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ? ಚಾರು ಪ್ರೀತಿ ಹೇಳಿದ್ದನ್ನು ಕೇಳಿಸಿಕೊಳ್ಳಲೇ ಇಲ್ಲ ಚಾರಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ರಾಮಾಚಾರಿ ಕಣ್ಣೀರು


  ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಟ್ಟ ಅರುಣ್ ಸಾಗರ್, ಕಾರಣ ಇಲ್ಲಿದೆ 


  ಒಂದು ಕಡೆ ರಾಮಾಚಾರಿ ಹೋಗಿದ್ದಕ್ಕೆ ಚಾರು ಬೇಸರ, ಇನ್ನೊಂದೆಡೆ ಅತ್ತಿಗೆ ನೆನೆದು ರಾಮಾಚಾರಿ ಕಣ್ಣೀರು. ಇಬ್ಬರಿಗೂ ನೋವೇ, ಆದ್ರೆ ಬೇರೆ ಬೇರೆ ರೀತಿ. ಮುಮದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: