• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ramachari: ಶಾಶ್ವತವಾಗಿ ಕಣ್ಣು ಹೋಗಿರುವುದು ಚಾರುಗೆ ಗೊತ್ತಾಗಿದೆ, ವಿಹಾನ್ ಜೊತೆ ಮದುವೆ ಮಾಡಿಸಲು ಮಾನ್ಯತಾ ತಯಾರಿ!

Ramachari: ಶಾಶ್ವತವಾಗಿ ಕಣ್ಣು ಹೋಗಿರುವುದು ಚಾರುಗೆ ಗೊತ್ತಾಗಿದೆ, ವಿಹಾನ್ ಜೊತೆ ಮದುವೆ ಮಾಡಿಸಲು ಮಾನ್ಯತಾ ತಯಾರಿ!

ಚಾರು

ಚಾರು

ಶೈಲು ಅವರೇ ಚಾರು ಎಂದು ಗೊತ್ತಿಲ್ಲದೇ ಸತ್ಯ ಹೇಳಿದ್ದಾನೆ. ಶೈಲು ಅವರೇ ನಾನು ಮಾಡಿದ ತಪ್ಪಿನಿಂದ ಚಾರು ಮೇಡಂ ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾನೆ. ಅದನ್ನು ಕೇಳಿ ಚಾರು ಶಾಕ್ ಆಗಿದ್ದಾಳೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial) ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ (Angry) ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿದ್ದಾಳೆ. ಇಷ್ಟು ದಿನ ಆ ವಿಷ್ಯ ಚಾರುಗೆ ಗೊತ್ತಿರಲಿಲ್ಲ. ಅದನ್ನು ಶೈಲು ಬಳಿ ರಾಮಾಚಾರಿಯೇ ಹೇಳಿದ್ದಾನೆ.


    ಚಾರುನೇ ಶೈಲು
    ರಾಮಾಚಾರಿ ಧಾರಾವಾಹಿಯಲ್ಲಿ ಶೈಲು ಅನ್ನುವ ಹೊಸ ಹೆಸರು ಕೇಳಿ ಬರುತ್ತಿದೆ. ಅದು ಹೊಸ ಪಾತ್ರ ಅಲ್ಲ. ಶೈಲು ಎನ್ನುವುದು ಚಾರು ಸೃಷ್ಟಿ ಮಾಡಿರೋದು. ರಾಮಾಚಾರಿಯನ್ನು ಮಾತನಾಡಿಸಲು ತಾನು ಶೈಲು ಎಂದು ಹೇಳಿಕೊಂಡಿದ್ದಾಳೆ. ಬೇರೆ ನಂಬರ್ ನಿಂದ ಶೈಲು ಎಂದು ಹೇಳಿ, ಅವನ ಜೊತೆ ಮಾತನಾಡುತ್ತಾಳೆ.


    ರಾಮಾಚಾರಿಯೂ ಶೈಲು ಜೊತೆ ಮಾತು
    ರಾಮಾಚಾರಿಯೂ ಶೈಲು ಜೊತೆ ತುಂಬಾ ಚೆನ್ನಾಗಿ ಮಾತನಾಡುತ್ತಾನೆ. ತನ್ನ ಕಷ್ಟ-ಸುಖ ಎಲ್ಲಾ ಹೇಳಿಕೊಳ್ತಾನೆ. ಅದೇ ರೀತಿ ಅವರೇ ಚಾರು ಎಂದು ಗೊತ್ತಿಲ್ಲದೇ ಸತ್ಯ ಹೇಳಿದ್ದಾನೆ. ಶೈಲು ಅವರೇ ನಾನು ಮಾಡಿದ ತಪ್ಪಿನಿಂದ ಚಾರು ಮೇಡಂ ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾನೆ. ಅದನ್ನು ಕೇಳಿ ಚಾರು ಶಾಕ್ ಆಗಿದ್ದಾಳೆ.


    ಚಾರುಗೆ ಆಘಾತ
    ಚಾರು ತನಗೆ 15 ದಿನ ಆದ ಮೇಲೆ ಕಣ್ಣು ಬರುತ್ತೆ. ಆಯಾಗಿ ಇರಬಹುದು. ನಾನು ಮೊದಲಿನ ರೀತಿ ಪ್ರಪಂಚ ನೋಡಬಹುದು ಎಂದುಕೊಂಡಿರುತ್ತಾಳೆ. ಆದ್ರೆ ತನಗೆ ಕಣ್ಣು ಬರಲ್ಲ ಎಂಬುದನ್ನು ರಾಮಾಚಾರಿ ಬಾಯಲ್ಲಿ ಕೇಳಿ ಆಘಾತಕ್ಕೆ ಒಳಗಾಗಿದ್ದಾಳೆ. ನಾನು ಇನ್ಮೇಲೆ ಕುರುಡಳಾಗಿರಬೇಕು ಎಂದು ಕಣ್ಣೀರಿಡುತ್ತಿದ್ದಾಳೆ.




    ವಿಹಾನ್ ಜೊತೆ ಮದುವೆ ಮಾಡಲು ಮಾನ್ಯತಾ ರೆಡಿ
    ಮಾನ್ಯತಾ ತನ್ನ ಅಣ್ಣನ ಮಗ ವಿಹಾನ್ ಜೊತೆ ಚಾರು ಮದುವೆ ಮಾಡಬೇಕು ಎಂದುಕೊಂಡಿದ್ದಳು. ತನ್ನ ಅಣ್ಣ ಮತ್ತು ವಿಹಾನ್ ಜೊತೆ ಮಾತನಾಡಿದ್ದಾಳೆ. ಅದನ್ನೇ ಚಾರು ಬಳಿ ಕೇಳಿದ್ದಾಳೆ. ವಿಹಾನ್ ಮದುವೆ ಆಗಲು ಸಾಧ್ಯವಿಲ್ಲ ಎಂದು ಚಾರು ಹೇಳಿದ್ದಾಳೆ. ಅದನ್ನು ಕೇಳಿ ಮಾನ್ಯತಾ ಶಾಕ್ ಆಗಿದ್ದಾಳೆ. ಅಲ್ಲದೇ ಚಾರುಗೆ ವಿಹಾನ್ ಜೊತೆ ಮದುವೆ ಮಾಡಲೇ ಬೇಕು ಎಂದು ಪಣ ತೊಟ್ಟಿದ್ದಾಳೆ.


    colors kannada serial, kannada serial, ramachari serial, charu was blind chemical effect, charu know about here eyes condition, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ಶಾಶ್ವತವಾಗಿ ಕಣ್ಣು ಹೋಗಿರುವುದು ಚಾರುಗೆ ಗೊತ್ತಾಗಿದೆ, ವಿಹಾನ್ ಜೊತೆ ಮದುವೆ ಮಾಡಲು ಮಾನ್ಯತಾ ತಯಾರಿ!, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಮಾನ್ಯತಾ


    ರಾಮಾಚಾರಿಯನ್ನು ಪ್ರೀತಿಸುತ್ತಿರುವ ಚಾರು
    ಚಾರು ತನ್ನ ಅತ್ತೆ ಮಗನನ್ನು ಮದುವೆ ಆಗಲ್ಲ ಎಂದು ಹೇಳಿದ್ದಾಳೆ. ಅದಕ್ಕೆ ಕಾರಣ ಚಾರು ರಾಮಾಚಾರಿಯನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಾಳೆ. ಅರನ್ನೇ ಮದುವೆ ಆಗಬೇಕು ಎಂದುಕೊಂಡಿದ್ದಾಳೆ. ಆದ್ರೆ ರಾಮಾಚಾರಿ ಚಾರುಳನ್ನು ಲವ್ ಮಾಡ್ತಿಲ್ಲ. ಈಗ ಚಾರು ಏನ್ ಮಾಡ್ತಾಳೆ ಎನ್ನುವುದೇ ಪ್ರಶ್ನೆ ಆಗಿದೆ.


    colors kannada serial, kannada serial, ramachari serial, charu was blind chemical effect, charu know about here eyes condition, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ಶಾಶ್ವತವಾಗಿ ಕಣ್ಣು ಹೋಗಿರುವುದು ಚಾರುಗೆ ಗೊತ್ತಾಗಿದೆ, ವಿಹಾನ್ ಜೊತೆ ಮದುವೆ ಮಾಡಲು ಮಾನ್ಯತಾ ತಯಾರಿ!, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ರಾಮಾಚಾರಿ


    ಇದನ್ನೂ ಓದಿ: Milana Nagaraj: ಸ್ಯಾಂಡಲ್‍ವುಡ್ ನಟಿ ಮಿಲನಾ ಅವರ AI ಫೋಟೋಸ್ ನೋಡಿ! 


    ಚಾರು ಕಣ್ಣಿನ ಆಘಾತದಿಂದ ಆಚೆ ಬರ್ತಾಳಾ? ವಿಹಾನ್ ಮದುವೆ ಆಗ್ತಾಳಾ? ಚಾರುಗೆ ರಾಮಾಚಾರಿ ಸಿಗ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: