ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial) ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾಳೆ. ಈ ವಿಷ್ಯ ಚಾರುಗೆ ಗೊತ್ತಾಗಿದೆ. ರಾಮಾಚಾರಿಯನ್ನು ಮರೆತು ವಿಹಾನ್ ಜೊತೆ ಮದುವೆ ಆಗಲು ಒಪ್ಪಿದ್ದಾಳೆ.
ರಾಮಾಚಾರಿ ಮೇಲೆ ಕೋಪ
ಚಾರು ತನಗೆ 15 ದಿನ ಆದ ಮೇಲೆ ಕಣ್ಣು ಬರುತ್ತೆ. ಆಯಾಗಿ ಇರಬಹುದು. ನಾನು ಮೊದಲಿನ ರೀತಿ ಪ್ರಪಂಚ ನೋಡಬಹುದು ಎಂದುಕೊಂಡಿರುತ್ತಾಳೆ. ಆದ್ರೆ ತನಗೆ ಕಣ್ಣು ಬರಲ್ಲ. ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದೇನೆ ಎಂದಬುದು ಗೊತ್ತಾಗಿದೆ. ಈ ವಿಷ್ಯ ಮುಚ್ಚಿಟ್ಟ ರಾಮಾಚಾರಿ ಮೇಲೆ ಚಾರು ಕೋಪಗೊಂಡಿದ್ದಾಳೆ. ಆಕೆ ಅವನನ್ನು ತನ್ನ ಮನಸ್ಸಿನಿಂದ ಕಿತ್ತು ಹಾಕತ್ತೇನೆ ಎಂದಿದ್ದಾಳೆ.
ಅಮ್ಮನ ಮಾತು ಕೇಳು ಚಾರು ತಯಾರಿ
ಚಾರು ರಾಮಾಚಾರಿಯನ್ನು ಪ್ರೀತಿ ಮಾಡ್ತಾ ಇದ್ದಳು. ಅವನ್ನನ್ನೇ ಮದುವೆ ಆಗಬೇಕು ಎಂದುಕೊಂಡಿದ್ದಳು. ಆದ್ರೆ ರಾಮಾಚಾರಿ ತನಗೆ ಸುಳ್ಳು ಹೇಳಿದ್ದಾನೆ ಎಂದು ಗೊತ್ತಾಗಿ ಬೇಸರ ಮಾಡಿಕೊಂಡಿದ್ದಾಳೆ. ಅಮ್ಮ ಹೇಳಿದ ಹಾಗೇ ಕೇಳಬೇಕು. ರಾಮಾಚಾರಿಯನ್ನು ಸಂಪೂರ್ಣ ಮರೆತು ಹೋಗಬೇಕು ಎಂದು ನಿರ್ಧಾರ ಮಾಡಿದ್ದಾಳೆ.
ವಿಹಾನ್ ಜೊತೆ ಚಾರು ನಿಶ್ಚಿತಾರ್ಥ
ಮಾನ್ಯತಾ ತನ್ನ ಅಣ್ಣನ ಮಗ ವಿಹಾನ್ ಜೊತೆ ಚಾರು ಮದುವೆ ಮಾಡಬೇಕು ಎಂದುಕೊಂಡಿದ್ದಳು. ತನ್ನ ಅಣ್ಣ ಮತ್ತು ವಿಹಾನ್ ಜೊತೆ ಮಾತನಾಡಿದ್ದಾಳೆ. ಅಲ್ಲದೇ ನಿಶ್ಚಿತಾರ್ಥ ಮಾಡಲು ಎಲ್ಲಾ ತಯಾರಿ ನಡೆಸಿದ್ದಾಳೆ. ಆದ್ರೆ ವಿಹಾನ್ ಚಾರು ಚಿಕ್ಕಮ್ಮನ ಮಗಳು ಆದ್ಯಾಳನ್ನು ಪ್ರೀತಿ ಮಾಡ್ತಾ ಇದ್ದಾನೆ. ಈ ವಿಷ್ಯವನ್ನು ತನ್ನ ಅತ್ತೆ ಮಾನ್ಯತಾಗೆ ಹೇಳಬೇಕು ಎಂದುಕೊಂಡಿದ್ದಾನೆ.
ವಿಹಾನ್ ಬಳಿ ನಿಜ ಹೇಳ್ತಾಳಾ?
ಚಾರು ತನ್ನ ಅಮ್ಮನ ಬಳಿ ನಿನ್ನ ನಿರ್ಧಾರವೇ ಸರಿ ಮಾಮ್, ನಾನು ವಿಹಾನ್ ಜೊತೆ ಮದುವೆ ಆಗ್ತೀನಿ ಎನ್ನುತ್ತಾಳೆ. ಅದಕ್ಕೆ ಮಾನ್ಯತಾಗೆ ತುಂಬಾ ಖುಷಿಯಾಗಿದೆ. ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೀಯಾ ಎನ್ನುತ್ತಾಳೆ. ಆಗ ಚಾರು ನನಗೆ ಶಾಶ್ವತವಾಗಿ ಕಣ್ಣು ಬರಲ್ಲ ಅನ್ನುವ ವಿಚಾರವನ್ನು ವಿಹಾನ್‍ಗೆ ಹೇಳಿಬಿಡೋಣ. ಮುಂದೆ ಗೊತ್ತಾದ್ರೆ ಕಷ್ಟ ಎನ್ನುತ್ತಾಳೆ.
ಸತ್ಯ ಮುಚ್ಚಿಟ್ಟು ಮದುವೆ
ಮಾನ್ಯತಾ ತನ್ನ ಮಗಳಿಗೆ ಶಾಶ್ವತವಾಗಿ ಕಣ್ಣು ಹೋಗಿರುವುದನ್ನು ತನ್ನ ಅಣ್ಣನ ಬಳಿಯೇ ಮುಚ್ಚಿಟ್ಟಿದ್ದಾಳೆ. ಸುಳ್ಳು ಹೇಳಿ ಮದುವೆ ಮಾಡುಲು ನಿರ್ಧಾರ ಮಾಡಿದ್ದಾಳೆ. ಮದುವೆ ಆದ ಮೇಲೆ ನಿಜ ಹೇಳೋಣ. ನಾನು ನನ್ನ ಅಣ್ಣನಿಗೆ ತಿಳಿಸಿ ಹೇಳೇನೆ. ಅದನ್ನು ಅವರು ಒಪ್ಪಿಕೊಳ್ತಾರೆ ಎಂದು ಹೇಳುತ್ತಿದ್ದಾಳೆ. ಆದ್ರೂ ಚಾರುಗೆ ಯಾಕೋ ಸಮಾಧಾನ ಇಲ್ಲ.
ಇದನ್ನೂ ಓದಿ: Kannadathi: ಹರ್ಷನನ್ನು ಮದುವೆ ಆಗ್ತೀನಿ ಎಂದ ವರೂ, ಕೊನೆಯಲ್ಲಿದೆಯಾ ಟ್ವಿಸ್ಟ್?
ಚಾರು ನಿಜವಾಗ್ಲೂ ರಾಮಾಚಾರಿಯನ್ನು ಮರೆಯುತ್ತಾಳಾ? ವಿಹಾನ್ ಬಳಿ ಸತ್ಯ ಹೇಳ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ