ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇದೆ. ಅವಳನ್ನು ಮಾತನಾಡಿಸುವುದು ಇರಲಿ, ಅವರ ನೆರಳು ನಮ್ಮ ಮನೆ ಕಡೆ ಬೀಳಬಾರದು ಅಂತಿದ್ದಾರೆ, ಆದ್ರೆ ಮಾನ್ಯತಾ ಮತ್ತು ಚಾರುಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ತಮ್ಮ ಮನೆಯವರ ಸುದ್ದಿಗೆ ಬಂದವರಿಗೆ ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದುಕೊಳ್ಳುತ್ತಿದ್ದಾನೆ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ (Love) ಆಗಿದೆ. ರಾಮಾಚಾರಿ ಬಳಿ ಮಾತನಾಡಲು ಶೈಲು (Shilu) ಎಂದುಕೊಂಡು ಓಡಾಡುತ್ತಿದ್ದಾಳೆ.
ಚಾರು ಕಂಡ್ರೆ ರಾಮಾಚಾರಿಗೆ ಆಗಲ್ಲ
ಚಾರು ಎಷ್ಟೇ ಹಿಂದೆ ಬಿದ್ದು ಲವ್ ಮಾಡಿ, ಮಾತನಾಡಿ ಎಂದ್ರೂ ರಾಮಾಚಾರಿ ಒಪ್ಪುತ್ತಿಲ್ಲ. ಅವಳ ಮುಖ ಸಹ ನೋಡಲು ಇಷ್ಟ ಪಡಲ್ಲ. ಅಲ್ಲದೇ ಚಾರು ಅಮ್ಮ ಮಾನ್ಯತಾ ರಾಮಾಚಾರಿಗೆ ಅಡ್ಡ ಹಾಕಿ, ನನ್ನ ಮಗಳ ಹಿಂದೆ ಓಡಾಡಬೇಡ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿ ಕೋಪ ಮಾಡಿಕೊಂಡು, ಯಾರು ನಿಮ್ಮ ಮಗಳ ಹಿಂದೆ ಬರ್ತಾ ಇದ್ದಾರೆ ನೋಡಿಕೊಳ್ಳಿ ಎಂದು ಬೈದು ಹೋಗುತ್ತಾನೆ.
ಶೈಲು ಅನ್ನೋ ಹೊಸ ಪಾತ್ರ
ರಾಮಾಚಾರಿ ಧಾರಾವಾಹಿಯಲ್ಲಿ ಶೈಲು ಅನ್ನುವ ಹೊಸ ಹೆಸರು ಕೇಳಿ ಬರುತ್ತಿದೆ. ಅದು ಹೊಸ ಪಾತ್ರ ಅಲ್ಲ. ಶೈಲು ಎನ್ನುವುದು ಚಾರು ಸೃಷ್ಟಿ ಮಾಡಿರೋದು. ರಾಮಾಚಾರಿಯನ್ನು ಮಾತನಾಡಿಸಲು ಶೈಲು ಎಂದು ಹೇಳಿಕೊಂಡಿದ್ದಾಳೆ. ಬೇರೆ ನಂಬರ್ ನಿಂದ ಶೈಲು ಎಂದು ಹೇಳಿ, ಅವನ ಜೊತೆ ಮಾತನಾಡುತ್ತಾಳೆ.
ಇದನ್ನೂ ಓದಿ: Bigg Boss Kannada: ಅಮೂಲ್ಯಗೆ ಮದುವೆ ಬೇಡಿಕೆ ಇಟ್ರಾ ರಾಕೇಶ್?
ರಾಮಾಚಾರಿ ತಂಗಿ ರಕ್ಷಣೆ
ಅಲ್ಲದೇ ರಾಮಾಚಾರಿ ತಂಗಿ ಶೃತಿಗೆ ರೌಡಿಯೊಬ್ಬ ಅಡ್ಡ ಹಾಕಿದಾಗ, ಚಾರು ಮುಖಕ್ಕೆ ಮಾಸ್ಕ್ ಹಾಕಿಕೊಂಡು, ರೌಡಿಗೆ ಬುದ್ಧಿ ಕಲಿಸಿರುತ್ತಾಳೆ. ಅಲ್ಲದೇ ತನ್ನ ಹೆಸರು ಶೈಲು ಎಂದಿರುತ್ತಾಳೆ. ಅದಕ್ಕೆ ರಾಮಾಚಾರಿಗೆ ತಾನು ಮಾತನಾಡುವ ಶೈಲು ಎಂದು ಗೊತ್ತಾಗಿ ಖುಷಿಯಾಗಿದೆ. ಅಲ್ಲದೇ ಚಾರಿ ಮನೆಯವರ ಮನಸ್ಸು ಸಹ ಕದ್ದಿದ್ದಾಳೆ.
ಶೈಲು ಭೇಟಿಯಾಗಲು ಬಂದ ರಾಮಾಚಾರಿ
ತಮ್ಮ ಕುಟುಂಬಕ್ಕೆ ನಿಮ್ಮಿಂದ ಸಹಾಯ ಆಗಿದೆ. ಅದಕ್ಕೆ ನಾನು ನಿಮ್ಮನ್ನು ಭೇಟಿಯಾಗಬೇಕು ಎಂದು ರಾಮಾಚಾರಿ ಶೈಲುಗೆ ಹೇಳ್ತಾನೆ. ಅದಕ್ಕೆ ಚಾರು ತನ್ನ ವೇಷ ಬದಲಾಯಿಸಿಕೊಂಡು, ಟ್ರೆಡಿಷನಲ್ ಡ್ರೆಸ್ ನಲ್ಲಿ ಬಂದಿದ್ದಾಳೆ. ಮುಖ ಕಂಡು ಹಿಡಿಯಬಾರದು ಅಂತ ಮಾಸ್ಕ್ ಹಾಕಿಕೊಂಡಿದ್ದಾಳೆ.
ಚಾರು ಬಣ್ಣ ಬಯಲಾಗುತ್ತಾ?
ಶೈಲು ಆಗಿ ಬಂದಿರುವ ಚಾರುಗೆ ರಾಮಾಚಾರಿ ಕಾಫಿ ತರಿಸಿದ್ದಾನೆ. ಕುಡಿಯಿರಿ ಎಂದು ಬಲವಂತ ಮಾಡ್ತಾ ಇದ್ಧಾನೆ. ಮಾಸ್ಕ್ ತೆಗೆದ್ರೆ ತನ್ನ ಬಂಡವಾಳ ಬಯಲಾಗುತ್ತೆ. ಅದಕ್ಕೆ ಚಾರು ಒದ್ದಾಡುತ್ತಿದ್ದಾಳೆ. ರಾಮಾಚಾರಿಗೆ ಚಾರುನೇ ಶೈಲು ಎಂದು ಗೊತ್ತಾಗುತ್ತಾ ನೋಡಬೇಕು.
ಇದನ್ನೂ ಓದಿ: Lakshana: ಅಮ್ಮನ ಮನವೊಲಿಸಲು ಪಣತೊಟ್ಟ ಮೌರ್ಯ, ಚಂದ್ರಶೇಖರ್ಗೆ ಶಕುಂತಲಾ ದೇವಿ ಬಳಿ ಕ್ಷಮೆ ಇಲ್ಲ!
ರಾಮಾಚಾರಿ ಪ್ರೀತಿ ಪಡೆಯಲು ಚಾರು ಶೈಲು ಆಗಿ ಒದ್ದಾಟ, ರಾಮಾಚಾರಿಗೆ ಈ ಸತ್ಯ ಗೊತ್ತಾಗುತ್ತಾ? ಚಾರುಗೆ ರಾಮಾಚಾರಿ ಪ್ರೀತಿ ಸಿಗಲ್ವಾ? ರಾಮಾಚಾರಿ ಮನಸ್ಸು ಕರಗೋದೇ ಇಲ್ವಾ? ಮುಂದೇನಾಗುತ್ತೆ ಅಂತ ನೊಡೋಕೆ ರಾಮಾಚಾರಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ