ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಚಾರುಗೆ ಕಣ್ಣು ಹೋಗಿರುತ್ತೆ. ಅದು ರಾಮಾಚಾರಿಯಿಂದ. ಚಾರುಗೆ ಚಿಕ್ಕಮಗಳೂರಿನಲ್ಲಿ ಕಣ್ಣಿನ ಚಿಕಿತ್ಸೆ ಕೊಡಿಸಿರುತ್ತಾರೆ. ಆಕೆಗೆ ಕಣ್ಣು ಬರುತ್ತೆ. ಆದ್ರೆ ರಾಮಾಚಾರಿ ದೂರ ಆಗ್ತಾನೆ ಎಂದು ಕಣ್ಣು ಕಾಣಲ್ಲ. ನನಗೆ ದಿಕ್ಕು ಯಾರು ಎಂದು ಸಾಯೋಕೆ ಹೊರಟಿರುತ್ತಾಳೆ. ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ. ತಾಳಿ ಕಟ್ಟುತ್ತೇನೆ ಎಂದು ಹೇಳಿ ಮದುವೆ ಆಗಿರುತ್ತಾನೆ. ಮದುವೆ (Marriage) ಸತ್ಯವನ್ನು ಹೇಳಲಾಗದೇ ರಾಮಾಚಾರಿ-ಚಾರು ಪರದಾಡುತ್ತಿದ್ದಾರೆ.
ಮನೆಯಲ್ಲಿ ಸುಳ್ಳು ಹೇಳಿದ ರಾಮಾಚಾರಿ
ರಾಮಾಚಾರಿ ತಾನು ಚಾರುಳನ್ನು ಮದುವೆಯಾದ ವಿಚಾರವನ್ನು ಮುಚ್ಚಿಟ್ಟು ಮನೆಯಲ್ಲಿ ಸುಳ್ಳು ಹೇಳಿದ್ದಾನೆ. ಅಪ್ಪ ಮನೆಯವರ ಬಳಿ ಸುಳ್ಳು ಹೇಳಿ ಚಾರು ಮೇಡಂನ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಿದ್ದು ತಪ್ಪು ತಾನೇ. ಏನೇ ಆಗಲಿ ನಾನು ಸುಳ್ಳು ಹೇಳಬಾರದಿತ್ತು. ಅದು ನನ್ನನ್ನು ಕಾಡುತ್ತಿತ್ತು. ಅದಕ್ಕೆ ದೇವರಿಗೆ ತಪ್ಪು ಒಪ್ಪಿಗೆ ಪತ್ರ ಬರೆದಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಮನೆಯವರು ಅದನ್ನು ನಂಬಿದ್ದಾರೆ.
ಕೈ ಸುಟ್ಟುಕೊಂಡ ರಾಮಾಚಾರಿ
ಮನೆಯಲ್ಲಿ ಸುಳ್ಳು ಹೇಳಿದ ರಾಮಾಚಾರಿ ಕೈ ಸುಟ್ಟುಕೊಂಡಿದ್ದಾನೆ. ಮನೆಯಲ್ಲಿ ಮತ್ತೆ ಸುಳ್ಳು ಹೇಳೋ ಪರಿಸ್ಥಿತಿ ಬರಬಾರದು ಎಂದು ದೇವರಲ್ಲಿ ಬೇಡಿಕೊಂಡಿದ್ದಾನೆ. ಪರಿಸ್ಥಿತಿ ಕೈ ಗೊಂಬೆ ಆಗಿ ರಾಮಾಚಾರಿ ಚಾರುಗೆ ತಾಳಿ ಕಟ್ಟಿದ್ದಾನೆ. ಅದನ್ನು ಹೇಗೆ ಮನೆಯಲ್ಲಿ ಹೇಳಬೇಕು ಎಂದು ಗೊತ್ತಾಗದೇ ಸಂಕಟದಲ್ಲಿ ಒದ್ದಾಡುತ್ತಿದ್ದಾನೆ.
ರಾಮಾಚಾರಿ ಮನೆಯಲ್ಲಿ ಚಾರು
ರಾಮಾಚಾರಿ ಬೆಳಗ್ಗೆ ಎದ್ದು ಕಣ್ಣು ಬಿಟ್ರೆ, ಚಾರು ಮುಂದೆ ಕೂತಿದ್ದಾಳೆ. ಆಕೆಯನ್ನು ತನ್ನ ರೂಮಿನಲ್ಲಿ ನೋಡಿ ರಾಮಾಚಾರಿ ಶಾಕ್ ಆಗಿದ್ದಾನೆ. ಇಲ್ಲಿಗೆ ಹೇಗೆ ಬಂದ್ರಿ ಎಂದು ಕೇಳ್ತಾನೆ. ಅದಕ್ಕೆ ಚಾರು, ನನಗೆ ಈ ಮನೆಯಲ್ಲಿ ಎಲ್ಲಿ, ಹೇಗೆ ಬರಬೇಕು ಎಂದು ಗೊತ್ತಿದೆ. ಸದ್ಯ ಯಾಕೆ ಬಂದೆ ಎಂದು ಕೇಳಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ತಾಳೆ.
ರಾಮಾಚಾರಿಗೆ ಟೆನ್ಶನ್
ಚಾರು ಮೇಡಂ ದಯವಿಟ್ಟು ಹೋಗಿ. ನಮ್ಮ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಬೆಳಗಾಗಿದೆ, ಎಲ್ಲ ಎದ್ದಿರುತ್ತಾರೆ. ನಿಮ್ಮನ್ನು ನೋಡಿದ್ರೆ ಕಷ್ಟ. ಸಾವಿರ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಆ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರ ಇಲ್ಲ ಎಂದು ನಿಮಗೆ ಗೊತ್ತಿದೆ ತಾನೇ. ನಾನು ಹೋಗ್ತೀನಿ ಟೆನ್ಶನ್ ಮಾಡ್ಕೋಬೇಡ ಎಂದು ಕೈಗೆ ಔಷಧಿ ಹಚ್ಚುತ್ತಿದ್ದಾಳೆ. ನನಗೆ ನಿನ್ನ ಬಿಟ್ಟಿರುವ ಶಕ್ತಿ ಇಲ್ಲ ಎಂದು ಚಾರು ರಾಮಾಚಾರಿ ಬಳಿ ಹೇಳ್ತಾ ಇದ್ದಾಳೆ.
ಅಪ್ಪನ ಕಣ್ಣಿಗೆ ಬೀಳುತ್ತಾ ನವಜೋಡಿ?
ರಾಮಾಚಾರಿ ಯಾಕೋ ಎದ್ದಿಲ್ಲ ಎಂದು ಅವರ ತಂದೆ ನಾರಾಯಣ ಆಚಾರ್ಯರು ಎಬ್ಬಿಸಲು ಅವನ ರೂಮ್ ಬಳಿ ಹೋಗ್ತಾರೆ. ರೂಮ್ ಲಾಕ್ ಆಗಿರುತ್ತೆ. ಅದಕ್ಕೆ ಯಾಕೋ ರಾಮಾಚಾರಿ ಯಾವತ್ತೂ ಇಲ್ಲದೇ ಇರೋದು ಈಗ. ಯಾಕೆ ಕೋಣೆ ಬಾಗಿಲು ಲಾಕ್ ಮಾಡಿಕೊಂಡಿದೀಯಾ ಎಂದು ಕೇಳ್ತಾರೆ. ರಾಮಾಚಾರಿಗೆ ಏನು ಹೇಳಬೇಕು ಎಂದು ಗೊತ್ತಾಗದೇ ಆತಂಕಗೊಂಡಿದ್ದಾನೆ.
ಇದನ್ನೂ ಓದಿ: Olavina Nildana: ಪ್ರೀತಿ ಹೇಳಿಕೊಳ್ಳಲು ಬಂದ ತಾರಿಣಿಗೆ ಶಾಕ್, ನಾಲ್ಕೇ ದಿನದಲ್ಲಿ ಆಸ್ಟ್ರೇಲಿಯಾಗೆ ಸಿದ್ಧಾಂತ್
ಚಾರು-ರಾಮಾಚಾರಿ ಅಪ್ಪನ ಕಣ್ಣಿಗೆ ಬೀಳ್ತಾರಾ? ರಾಮಾಚಾರಿ ಈಗ ಏನ್ ಮಾಡ್ತಾರೆ. ಚಾರು ರಾಮಾಚಾರಿ ಮನೆಯಿಂದ ಹೇಗೆ ಹೋಗ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ