ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ. ಆದ್ರೆ ಕಾಣುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾಳೆ. ಮದುವೆ (Marriage) ಆಗು ಎಂದು ತಾಳಿ ಕೈನಲ್ಲಿ ಹಿಡಿದು ನಿಂತಿದ್ದಾಳೆ.
ಕಣ್ಣು ಕಾಣಲ್ಲ ಎಂದು ಸುಳ್ಳು
ಚಿಕ್ಕಮಗಳೂರಿನಲ್ಲಿ ಚಾರು ಚಿಕಿತ್ಸೆ ಎಲ್ಲಾ ಮುಗಿದಿದೆ. ಚಾರು ನನಗೆ ಕಣ್ಣು ಕಾಣಲ್ಲ ಎಂದು ಸುಳ್ಳು ಹೇಳಿದ್ದಾಳೆ. ಕಣ್ಣು ಬಂದ್ರೆ, ನಾನ್ಯಾರೋ, ಇವರ್ಯಾರೋ. ನನಗೂ ಇವರಿಗೂ ಯಾವುದೇ ಸಂಬಂಧ ಇಲ್ಲ ಎಂದು ರಾಮಾಚಾರಿ ಹೇಳಿರುತ್ತಾನೆ. ಅದಕ್ಕೆ ರಾಮಾಚಾರಿ ದೂರ ಆಗ್ತಾನೆ ಎಂದು ಭಯದಿಂದ ಚಾರು ಸುಳ್ಳು ಹೇಳಿದ್ದಾಳೆ.
ಪ್ರೀತಿಗಾಗಿ ಸುಳ್ಳು ಹೇಳ್ತಾ ಇದ್ದೀನಿ
ಚಾರುಗೆ ಕಣ್ಣು ಬಂದಿರುವ ವಿಚಾರ ಚಿಕ್ಕಮಗಳೂರಿನ ಆಶ್ರಮದ ಗುರೂಜಿಗೆ ಗೊತ್ತಾಗಿದೆ. ಅದಕ್ಕೆ ಏಕೆ ಸುಳ್ಳು ಹೇಳ್ತಾ ಇದ್ದೀಯಾ ಎಂದು ಚಾರುನನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಚಾರು, ನನಗೆ ರಾಮಾಚಾರಿ ಎಂದರೆ ಪ್ರಾಣ. ಅವನಿಗೆ ನನ್ನ ಕಣ್ಣು ಬಂತು ಎಂದು ಗೊತ್ತಾದ್ರೆ, ಅವನು ನನ್ನ ಕಣ್ಣೆತ್ತಿ ಸಹ ನೋಡಲ್ಲ. ಅದಕ್ಕೆ ಪ್ರೀತಿಗಾಗಿ ಸುಳ್ಳು ಹೇಳ್ತೇನೆ ಎಂದು ಚಾರು ಹೇಳಿದ್ದಾಳೆ. ಅದಕ್ಕೆ ಆ ಗುರುಗಳು ಸಹ ರಾಮಾಚಾರಿಗೆ ನಿಜ ಹೇಳಿಲ್ಲ.
ಸಾಯೋಕೆ ಹೊರಟ ಚಾರು
ಚಾರು ಮತ್ತು ರಾಮಾಚಾರಿ ಬೆಟ್ಟದ ಮೇಲೆ ಸೂರ್ಯಾಸ್ತ ನೋಡಲು ಹೋಗಿದ್ದಾರೆ. ಚಾರುಗೆ ರಾಮಾಚಾರಿಯನ್ನು ಮದುವೆಗೆ ಹೇಗೆ ಒಪ್ಪಿಸಬೇಕು ಎಂದು ಗೊತ್ತಿಲ್ಲ. ಅದಕ್ಕೆ ಚಾರು ಸಾಯುತ್ತೇನೆ ಎಂದು ಹೇಳಿದ್ದಾಳೆ. ಬೆಟ್ಟದ ತುದಿಯಲ್ಲಿ ಚಾರು ನಿಂತಿದ್ದಾಳೆ. ರಾಮಾಚಾರಿ ನನ್ನ ಕಣ್ಣಿನ ಸಮಸ್ಯೆಗೆ ಪರಿಹಾರ ಸಿಗಲಿಲ್ಲ ನಾನು ಸಾಯುತ್ತೇನೆ. ಬದುಕಿ ಏನು ಪ್ರಯೋಜನ ಎಂದು ಕೇಳ್ತಾ ಇದ್ದಾಳೆ.
ತಾಳಿ ಕೈಲಿಡಿದ ಚಾರು
ರಾಮಾಚಾರಿ ಚಾರುಳನ್ನು ತಡೆಯುತ್ತಿದ್ದಾನೆ. ಬೇಡ ಚಾರು ಮೇಡಂ ಸಾಯಬೇಡಿ. ನನಗೆ ಯಾರು ದಿಕ್ಕು, ನನ್ನ ಯಾರು ನೋಡಿಕೊಳ್ತಾರೆ ಎಂದು ಕೇಳ್ತಾಳೆ. ಅದಕ್ಕೆ ರಾಮಾಚಾರಿ ನಾನು ನಿಮ್ಮನ್ನು ಅರ್ಧ ದಾರಿಗೆ ಕೈಬಿಡಲ್ಲ ಮೇಡಂ ಎಂದು ಹೇಳುತ್ತಾನೆ. ಅದಕ್ಕೆ ಚಾರು, ನೀನು ಜೀವನ ಪೂರ್ತಿ ನನ್ನ ಜೊತೆ ಇರಬೇಕು ಎಂದ್ರೆ, ಗಂಡನಾಗಿ ಮಾತ್ರ ಸಾಧ್ಯ. ನನ್ನನ್ನು ಮದುವೆ ಆಗ್ತೀಯಾ ಎಂದು ತಾಳಿ ಹಿಡಿದು ಕೇಳುತ್ತಿದ್ದಾಳೆ.
ಚಾರು ಮದುವೆ ಆಗ್ತಾನಾ ರಾಮಾಚಾರಿ?
ಚಾರು ಪರಿಸ್ಥಿತಿಗೆ ತಾನೇ ಕಾರಣ ಎಂದು ರಾಮಾಚಾರಿಗೆ ಗೊತ್ತು. ಅದಕ್ಕೆ ಅವನು ತುಂಬಾ ಬೇಸರ ಮಾಡಿಕೊಂಡಿದ್ದಾನೆ. ತಾನು ಮಾಡಿದ ತಪ್ಪನ್ನು ಸರಿ ಮಾಡಲು ಆಗಲಿಲ್ಲ ಎಂದು ಚಿಂತೆ ಮಾಡುತ್ತಿದ್ದಾನೆ. ಈಗ ಚಾರು ಮದುವೆ ಆಗು ಅಂತಿದ್ದಾಳೆ. ಹಾಗಾದ್ರೆ ಚಾರುಳನ್ನು ರಾಮಾಚಾರಿ ಮದುವೆ ಆಗ್ತಾನಾ? ಮನೆಯಲ್ಲಿ ತನ್ನ ಮಾವನ ಮಗಳನ್ನು ಮದುವೆ ಆಗುವುದಾಗಿ ಮಾತು ಕೊಟ್ಟಿದ್ದಾನೆ.
ಇದನ್ನೂ ಓದಿ: Puttakkana Makkalu: ತನ್ನ ಕನಸಿನ ಹುಡುಗಿ ಬಗ್ಗೆ ಸ್ನೇಹಾ ಮುಂದೆ ಹೇಳಿದ್ದಾನೆ ಕಂಠಿ, ತಾನೇ ಎಂದು ಗೊತ್ತಾಗುತ್ತಾ ಮಿಸ್‍ಗೆ?
ರಾಮಾಚಾರಿ-ಚಾರು ಮದುವೆ ಆಗುತ್ತಾ? ರಾಮಾಚಾರಿ ನಡೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ