ಮನೆಯವರೆಲ್ಲಾ ಚಾರು ಮದುವೆ ಮಾಡಬೇಕು ಎಂಬ ಖುಷಿಯಲ್ಲಿದ್ದಾರೆ. ಚಾರು ಮದುವೆಯಾಗಬೇಕು ಎಂದುಕೊಂಡಿದ್ದ ಫೈವ್ ಸ್ಟಾರ್ ಹೋಟೆಲ್‍ನಲ್ಲಿ ನಿಶ್ಚಿತಾರ್ಥ ಮಾಡ್ತಾ ಇದ್ದಾರೆ. ನಾವ್ ಹೇಳ್ತಿರೋದು ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗ್ತಿರುವ ರಾಮಾಚಾರಿ (Ramachari) ಸೀರಿಯಲ್ ಬಗ್ಗೆ. ಈ ಧಾರಾವಾಹಿ (Serial) ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಧಾರಾವಾಹಿಯಲ್ಲಿ ಈಗಾಗಲೇ ಚಾರು ಮತ್ತು ರಾಮಾಚಾರಿಗೆ ಗುಟ್ಟಾಗಿ ಮದುವೆಯಾಗಿದೆ. ರಾಮಾಚಾರಿ ಈ ಮದುವೆ ಸಂಬಂಧ ಕಳೆದುಕೊಂಡು ಬಿಡೋಣ ಎನ್ನುತ್ತಿದ್ದಾನೆ. ಅಲ್ಲದೇ ಚಾರು ಮನೆಯಲ್ಲಿ ವಿಕಾಸ್ ಎನ್ನುವ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಲು ರೆಡಿಯಾಗಿದ್ದಾರೆ. ಅದಕ್ಕೆ ವಿಷ (Poison) ಕುಡಿಯಲು ಸಜ್ಜಾಗಿದ್ದಾಳೆ.
ರಾಮಾಚಾರಿಗೆ ಚಾರು ಬೇಡ
ಚಾರುಗೆ ಕಣ್ಣು ಕಾಣಲ್ಲ ಎಂದು ಒತ್ತಡಕ್ಕೆ ಸಿಲುಕಿ ರಾಮಾಚಾರಿ ತಾಳಿ ಕಟ್ಟಿರುತ್ತಾನೆ. ಆದ್ರೆ ಈಗ ಚಾರುಗೆ ಕಣ್ಣು ಕಾಣ್ತಾ ಇದೆ. ಅಲ್ಲದೇ ರಾಮಾಚಾರಿ ಮನೆಯರಿಗೆ ಚಾರುನ ಕಂಡ್ರೆ ಆಗಲ್ಲ. ಅದಕ್ಕೆ ಮನೆಯವರಿಗಾಗಿ ಚಾರುಳನ್ನು ಬಿಡಲು ತಯಾರಾಗಿದ್ದಾನೆ. ಈ ಮೂರು ಗಂಟಿನ ನಂಟು ಕಳೆದುಕೊಳ್ಳೋಣ ಎಂದು ಹೇಳಿದ್ದಾನೆ. ಅದಕ್ಕೆ ಚಾರು ತುಂಬಾ ಬೇಸರವಾಗಿದ್ದಾಳೆ. ವಿಷ ಕುಡಿಯಲು ಮುಂದಾಗಿದ್ದಾಳೆ.
ಪ್ರಾಣ ಬಿಡ್ತೀನಿ
ನಿನ್ನ ಹೆಂಡ್ತಿ ಇನ್ಮೇಲೆ ನಿನಗೆ ಭಾರವಾಗಿ ಕಾಡಲ್ಲ. ನಿನ್ನ ಭಾರ ಎಲ್ಲಾ ಕಳಚಿ ಈ ಭೂಮಿ ಬಿಟ್ಟು ಹೋಗಲು ಎಲ್ಲಾ ತಯಾರಿ ನಡೆದಿದೆ. ತಾಳಿ ಬಿಚ್ಚೋಕೆ ಆಗಲ್ಲ. ಆದ್ರೆ ಪ್ರಾಣ ಬಿಡಬಹುದು. ಅದಕ್ಕೆ ಪ್ರಾಣ ಬಿಡ್ತಾ ಇದೀನಿ. ಮುಂದಿನ ಜನ್ಮ ಅಂತ ಇದ್ರೆ, ನನ್ನ ಹಣೆಯಲ್ಲಿ ನಿನ್ನ ಹೆಸರು ಬರೆಸಿಕೊಂಡು ಬರ್ತೇನೆ. ನಿನ್ನ ಕೈನಲ್ಲೇ ತಾಳಿ ಕಟ್ಟಿಸಿಕೊಳ್ತೇನೆ. ಆಗ ನಿನ್ನ ಜೊತೆ ನಾನು ಜೀವನ ನಡೆಸುತ್ತೇನೆ ಎಂದು ಚಾರು ಹೇಳ್ತಾ ಇದ್ದಾಳೆ.
ಗುಡ್ ಬೈ ರಾಮಾಚಾರಿ
ಈ ಜನ್ಮಕ್ಕೆ ಇಷ್ಟೇ ಋಣ ಅಂತ ಗೊತ್ತು. ಅದಕ್ಕೆ ಹೋಗ್ತಾ ಇದೀನಿ ರಾಮಾಚಾರಿ. ನಿನ್ನ ಬಿಟ್ಟು ಹೋಗ್ತಾ ಇದೀನಿ ರಾಮಾಚಾರಿ. ಮತ್ತೆ ಯಾವತ್ತೂ ಬರದೇ ಇರುವ ಲೋಕಕ್ಕೆ ವಾಪಸ್ ಹೋಗ್ತಾ ಇದೀನಿ ರಾಮಾಚಾರಿ. ನನ್ನ ಕ್ಷಮಿಸಿ ಬಿಡು. ನಾನು ನಿಗೆ ಯಾವತ್ತೂ ಸಿಗಲ್ಲ. ನಿನ್ನ ಚೆನ್ನಾಗಿರು. ಚೆನಾಗಿರಬೇಕು ಅಷ್ಟೆ. ಗುಡ್ ಬೈ ರಾಮಾಚಾರಿ. ಗುಡ್ ಬೈ ಗಂಡ ಎಂದು ವಿಡಿಯೋ ಮಾಡಿ ರಾಮಾಚಾರಿಗೆ ಕಳಿಸಿದ್ದಾಳೆ ಚಾರು.
ಮೂರು ಗಂಟು ಬಿಚ್ಚಿ ಕೊಡಿ
ನಿಮ್ಮ ಕೊರಳಿನಲ್ಲಿರುವ ತಾಳಿ, ನಮ್ಮ ಕುಟುಂಬದವರ ಚಿತೆಗೆ ಇಡುವ ಕೊಳ್ಳಿ ತರ ಕಾಣ್ತಾ ಇದೆ. ನೀವು ನನಗೆ ಮುಕ್ತಿ ಕೊಡದಿದ್ದರೆ ನಾನು ಇರಲ್ಲ. ನಾನು ನಮ್ಮ ಮನೆಯವರ ಮೇಲೆ ಜೀವವನ್ನೇ ಇಟ್ಟಿದ್ದೇನೆ. ಅವರ ಜೀವಕ್ಕೆ ಏನಾದ್ರೂ ಆದ್ರೆ, ನನ್ನ ಜೀವ ಮಣ್ಣು ಸೇರುತ್ತೆ. ನಿಮ್ಮನ್ನು ಕೈ ಮುಗಿದು ಬೇಡಿಕೊಳ್ತೇನೆ ದಯವಿಟ್ಟು ನನಗೆ ಬಿಡುಗಡೆ ಕೊಡಿ. ಈ ರಾಮಾಚಾರಿಗಾಗಿ ನಿಮ್ಮ ಕತ್ತಿನಲ್ಲಿರುವ ಮೂರು ಗಂಟು ಬಿಟ್ಟಿ ಮುಕ್ತಿ ಕೊಡಿ ಎಂದು ಕೇಳಿಕೊಂಡಿದ್ದಾನೆ.
ಇದನ್ನೂ ಓದಿ: Ramachari: ನನಗೆ ಯಾವ ಸಮಾರಂಭವೂ ಬೇಡ, ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ ಎಂದ ಚಾರು!
ರಾಮಾಚಾರಿ ಮನೆಯವರಿಗಾಗಿ ಚಾರು ಬಿಡುತ್ತಿದ್ದಾನೆ. ಆದ್ರೆ ಇಲ್ಲಿ ಚಾರು ರಾಮಾಚಾರಿಗಾಗಿ ತನ್ನ ಪ್ರಾಣವನ್ನೇ ಬಿಡ್ತಾ ಇದ್ದಾಳೆ. ರಾಮಾಚಾರಿ ಚಾರು ಪ್ರಾಣ ಕಾಪಾಡ್ತಾಳಾ? ಚಾರು ಪಾತ್ರ ಕೊನೆಗೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ