ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ (Angry) ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ, ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಈ ವಿಷ್ಯ ಮಾನ್ಯಾತಾಗೆ ಗೊತ್ತಾಗಿದೆ.
ಚಾರು-ರಾಮಾಚಾರಿ ಮದುವೆ
ಚಾರುಗೆ ಚಿಕ್ಕಮಗಳೂರಿನಲ್ಲಿ ಕಣ್ಣಿನ ಚಿಕಿತ್ಸೆ ಕೊಡಿಸಿರುತ್ತಾರೆ. ಆಕೆಗೆ ಕಣ್ಣು ಬರುತ್ತೆ. ಆದ್ರೆ ರಾಮಾಚಾರಿ ದೂರ ಆಗ್ತಾನೆ ಎಂದು ಕಣ್ಣು ಕಾಣಲ್ಲ. ನನಗೆ ದಿಕ್ಕು ಯಾರು ಎಂದು ಸಾಯೋಕೆ ಹೊರಟಿರುತ್ತಾಳೆ. ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ. ತಾಳಿ ಕಟ್ಟುತ್ತೇನೆ ಎಂದು ಹೇಳಿ ಮದುವೆ ಆಗಿರುತ್ತಾನೆ.
ಚಾರು ದೂರ ಮಾಡೋ ಯೋಚನೆಯಲ್ಲಿ ರಾಮಾಚಾರಿ
ರಾಮಾಚಾರಿ ಚಾರುಗೆ ಕಣ್ಣು ಬರಲ್ಲ ಎಂದು ಹೇಳಿ ತಾಳಿ ಕಟ್ಟಿರುತ್ತಾನೆ. ಆದ್ರೆ ಚಾರುಗೆ ಈಗ ಕಣ್ಣು ಬಂದಿದೆ. ಅವರು ಶ್ರೀಮಂತರು, ಮನೆಯಲ್ಲಿ ಗಂಡು ನೋಡಿದ್ದಾರೆ. ಅವರನ್ನು ಅವರು ಮದುವೆ ಆಗಬಹುದು. ನಾನು ಪರಿಸ್ಥಿತಿಗೆ ಕಟ್ಟು ಬಿದ್ದು ಮದುವೆ ಆಗಿದ್ದೇನೆ. ಈ ಮದುವೆಯಿಂದ ಎಲ್ಲಾ ಸಂಬಂಧಗಳು ಹಾಳಾಗುತ್ತವೆ. ಅದಕ್ಕೆ ಈ ಮದುವೆ ಸಂಬಂಧವನ್ನೇ ದೂರ ಮಾಡಿಕೊಂಡ್ರೆ ಒಳ್ಳೆಯದು ಎಂದು ರಾಮಾಚಾರಿ ಯೋಚನೆ ಮಾಡುತ್ತಿದ್ದಾನೆ.
ಅಪ್ಪನ ಬಳಿ ಪರಿಹಾರ ಕೇಳಿದ ಚಾರಿ
ರಾಮಾಚಾರಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ತುಂಬಾ ಗೊಂದಲದಲ್ಲಿ ಇದ್ದಾನೆ. ಒಮ್ಮೆ ಮದುವೆಯಾದ್ರೆ ಮುಗೀತು, ಆದ್ರೆ ಅಪ್ಪನ ಬಳಿ ಒಂದು ಪರಿಹಾರ ಕೇಳೇ ಬಿಡೋಣ ಎಂದುಕೊಂಡಿದ್ದಾನೆ. ಅದಕ್ಕೆ ಹೋಗಿ, ಅಪ್ಪ ಬಲವಂತಕ್ಕೆ ಮದುವೆ ಆದ್ರೆ ಅದನ್ನು ಮುರಿದುಕೊಳ್ಳಬಹುದಾ ಎಂದು ಕೇಳಿದ್ದಾನೆ. ಅದಕ್ಕೆ ಅವರಪ್ಪ ಇಲ್ಲ, ಒಮ್ಮೆ ಮದುವೆಯಾದ್ರೆ ಮುಗೀತು ಎಂದು ಹೇಳಿದ್ದಾರೆ. ರಾಮಾಚಾರಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ.
ಮದುವೆ ವಿಷ್ಯ ಮನೆಯಲ್ಲಿ ಹೇಳೋಣ ಎಂದ ಚಾರು
ಇನ್ನು ಇತ್ತ ಚಾರು ಕೊರಳಿನಲ್ಲಿರುವ ತಾಳಿಯನ್ನು ಮಾನ್ಯತಾ ನೋಡಿದ್ದಾಳೆ. ಏನು ಎಂದು ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಚಾರು ಸುಳ್ಳು ಹೇಳಿದ್ದಾಳೆ. ಕಣ್ಣು ಬರಲು ಗುರುಗಳು ಕೊಟ್ಟ ತಾಯ್ತಾ ಎಂದಿದ್ದಾಳೆ. ಆದ್ರೂ ಮಾನ್ಯತಾಗೆ ಡೌಟ್ ಬಂದಿದೆ. ಅದಕ್ಕೆ ಚಾರು ರಾಮಾಚಾರಿಗೆ ಫೋನ್ ಮಾಡಿ, ನನ್ನ ಅಮ್ಮ ನನ್ನ ಕತ್ತಿನಲ್ಲಿರುವ ತಾಳಿ ನೋಡಿದ್ದಾಳೆ. ಮದುವೆ ವಿಷ್ಯ ಮನೆಯಲ್ಲಿ ಹೇಳೋಣ, ಮುಂದೆ ಆಗೋದನ್ನು ಇಬ್ಬರು ಸೇರಿ ಎದುರಿಸೋಣ ಎಂದು ಹೇಳ್ತಾ ಇದ್ದಾಳೆ.
ಸತ್ಯ ಹೇಳ್ತಾರಾ?
ಇಬ್ಬರ ಮನೆಯವರಿಗೆ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ. ಮಾನ್ಯತಾ ಮೊದಲೇ ರಾಮಾಚಾರಿ ಮೇಲೆ ಕತ್ತಿ ಮಸೆಯುತ್ತಿದ್ದಾಳೆ. ಇನ್ನೂ ಈ ಮದುವೆ ವಿಷ್ಯ ಗೊತ್ತಾದ್ರೆ, ರಾಮಾಚಾರಿ ಕುಟುಂಬದವರನ್ನು ಜೀವಂತ ಉಳಿಸುತ್ತಾಳೆ ಎನ್ನೋ ನಂಬಿಕೆ ಇಲ್ಲ. ಎಲ್ಲವನ್ನೂ ಮೀರಿ ರಾಮಾಚಾರಿ ಮತ್ತು ಚಾರು ಮನೆಯಲ್ಲಿ ಮದುವೆ ವಿಷ್ಯ ಹೇಳ್ತಾರಾ? ಇಬ್ಬರು ಒಟ್ಟಿಗೆ ನಿಂತು ಕಷ್ಟವನ್ನು ಎದುರಿಸ್ತಾರಾ ನೋಡಬೇಕು.
ಇದನ್ನೂ ಓದಿ: Amulya Gowda: ಬಿಗ್ ಬಾಸ್ ಸ್ಪರ್ಧಿ ಅಮೂಲ್ಯ ಗೌಡ ಕ್ಯೂಟ್ ಫೋಟೋಸ್, ಬಾರ್ಬಿ ಡಾಲ್ ಎಂದ ಫ್ಯಾನ್ಸ್!
ರಾಮಾಚಾರಿ-ಚಾರು ಮದುವೆ ವಿಷ್ಯ ಎಲ್ಲರಿಗೂ ಗೊತ್ತಾಗುತ್ತಾ? ಮನೆಯಲ್ಲಿ ಇಬ್ಬರು ಸತ್ಯ ಹೇಳ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ