ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಅಪರ್ಣಾಗೆ ಆಪರೇಷನ್ ಮಾಡಿಸಲು ಹಣ ಇಲ್ಲದೇ ಆಕೆ ಸಾವನ್ನಪ್ಪುತ್ತಾಳೆ. ಚಾರು ಮೋಸದಿಂದ, ತನ್ನ ಪ್ರಾಜೆಕ್ಟ್ ಕದ್ದಿದ್ದರಿಂದ ದುಡ್ಡು ಸಿಗದೇ ಅತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಮನೆಯವರಿಗೆ ಗೊತ್ತಾಗಿದೆ. ತಮ್ಮ ಮನೆಯವರ ಸುದ್ದಿಗೆ ಬಂದ ಚಾರು ಮತ್ತು ಮಾನ್ಯತಾಗೆ ತನ್ನ ಬುದ್ಧಿವಂತಿಕೆಯಿಂದಲೇ ಪಾಠ ಕಲಿಸಲು ರಾಮಾಚಾರಿ ಮುಂದಾಗಿದ್ದಾನೆ. ಇನ್ನೊಂದೆಡೆ ಚಾರು ರಾಮಾಚಾರಿ ಮನೆಗೆ ಬಂದು, ನಿಮ್ಮ ಮನೆ (Home) ಬೆಳಗಲು ಅವಕಾಶ (Chance) ಕೊಡಿ ಎಂದು ಕೇಳ್ತಿದ್ದಾಳೆ.
ಮಾನ್ಯತಾ, ಚಾರುಗೆ ಬುದ್ಧಿ ಕಲಿಸಲು ತೀರ್ಮಾನ
ತಮ್ಮ ಕುಟುಂಬಕ್ಕೆ ಕಷ್ಟ ಕೊಟ್ಟವರನ್ನು ಬಿಡಬಾರದು ಎಂದು ಮಾನ್ಯತಾ ಮತ್ತು ಚಾರು ರಾಮಾಚಾರಿ ಬುದ್ಧಿ ಕಲಿಸಲು ಹೊರಟಿದ್ದಾನೆ. ದೇವರೇ ಇಷ್ಟು ದಿನ ಒಳ್ಳೆಯವರಿಗೆ ಒಳ್ಳೆಯದನ್ನು ಮಾಡಿದ್ದೇನೆ. ಕೆಟ್ಟವರಿಗೂ ಒಳ್ಳೆಯದನ್ನೇ ಮಾಡಿದ್ದೇನೆ. ಜೀವನದಲ್ಲಿ ಮೊದಲನೇ ಬಾರಿ ಕೆಟ್ಟವರಿಗೆ ಕೆಟ್ಟವನಾಗುಲು ಬಯಸುತ್ತಿದ್ದೇನೆ. ಕೆಟ್ಟವನ ರೀತಿ ನಟನೆ ಮಾಡೋ ಪರಿಸ್ಥಿತಿ ಬಂದಿದೆ. ಕ್ಷಮಿಸಿ ಬಿಡಪ್ಪ.
ಯಾರೋ ಬಂದು ನಮ್ಮ ಮನೆಯವರಿಗೆ ಕಾಟ ಕೊಟ್ರೆ ಹೇಗೆ ಸುಮ್ಮನಿರುವುದು. ನಮ್ಮ ಮನೆಯವರ ಕಣ್ಣೀರು ನೋಡಿ ಸುಮ್ಮನೆ ಕೂರುವ ಅಪ್ರಯೋಜಕ ಅಲ್ಲ ಎಂದು ದೇವರ ಬಳಿ ಕ್ಷಮೆ ಕೇಳಿ, ಶಿಕ್ಷೆ ಕೊಡಿಸಲು ಮುಂದಾಗಿದ್ದಾನೆ.
ಇದನ್ನೂ ಓದಿ: Kannadathi: ನೀರಿಗೆ ಬಿದ್ದಿದ್ಯಾಕೆ ಭುವಿ? ಹೀರೋ ಪತ್ನಿಗೆ ಏನಾಯ್ತು?
ರಾಮಾಚಾರಿ ಮನೆಗೆ ಬಂದ ಚಾರು!
ರಾಮಾಚಾರಿ ಮನೆಯವರು ಆ ಚಾರು ಇನ್ಮೇಲೆ ನಮ್ಮ ಸುದ್ದಿಗೆ ಬರದಿದ್ರೆ ಸಾಕು ಎಂದು ಮಾತನಾಡಿಕೊಳ್ಳುತ್ತಿರುವಾಗ್ಲೇ, ಚಾರ ಮನೆ ಬಾಗಿಲಲ್ಲಿ ನಿಂತಿದ್ದಾಳೆ. ಒಳಗೆ ಬರಬಹುದಾ ಎಂದು ಕೇಳಿದ್ದಾಳೆ. ಅವರು ಮಾತನಾಡಿಲ್ಲ. ಅದಕ್ಕೆ ಅವಳೇ ಒಳಗೆ ಬಂದು, ಮನೆ ಬಾಗಿಲಿಗೆ ಬಂದವರನ್ನು ಒಳಗೆ ಬರಬೇಡ ಅನ್ನುವಷ್ಟು ಕೆಟ್ಟವರಲ್ಲ ನೀವು ಅಂತ ಗೊತ್ತು ಅದಕ್ಕೆ ಬಂದಿದ್ದೇನೆ ಎಂದು ಹೇಳುತ್ತಿದ್ದಾಳೆ.
ರಾಮಾಚಾರಿ ಅಮ್ಮನ ಆಶೀರ್ವಾದ ಕೇಳಿದ ಚಾರು
ಅಮ್ಮ ಆಶೀರ್ವಾದ ಮಾಡಿ ಎಂದು ರಾಮಾಚಾರಿ ತಾಯಿ ಕಾಲಿಗೆ ಬಿದ್ದಿದ್ದಾಳೆ. ಹಿರಿಯರಿಗೆ ಕಾಲಿಗೆ ನಮಸ್ಕಾರ ಮಾಡೋ ಸಂಸ್ಕಾರ ಹೇಳಿ ಕೊಟ್ಟವರೇ ನೀವು. ನೀವೇ ಆಶೀರ್ವಾದ ಮಾಡಲು ಹಿಂಜರಿಯುವುದ ಸರಿನಾ ಎಂದು ಚಾರು ಕೇಳ್ತಾಳೆ. ಈ ಮನೆಯಲ್ಲಿ ನಾನು ಕಲಿತ ಜೀವನ ಪಾಠ ಸಂಸ್ಕಾರ. ನನ್ನ ಕೊನೆ ಉಸಿರು ಇರುವವರೆಗೂ ನನ್ನ ಜೊತೆ ಇರುತ್ತೆ. ಮುಂದಿನ ಜನ್ಮಕ್ಕೂ ನನ್ನ ಜೊತೆ ಬರುತ್ತೆ ಎಂದು ಹೇಳ್ತಾ ಇದ್ದಾಳೆ.
ಹಳೇ ಚಾರು ಮಾಡಿದ ತಪ್ಪುಗಳು
ನನ್ನಿಂದ ಈ ಮನೆಗೆ ತುಂಬಾ ತೊಂದ್ರೆಗಳಾಗಿವೆ. ಅದೆಲ್ಲಾ ಹಳೇ ಚಾರು ಮಾಡಿರೋ ತಪ್ಪುಗಳು. ಇವತ್ತಿಗೆ ಆ ತಪ್ಪುಗಳನ್ನು ನಾನೇ ಕ್ಷಮಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ನೀವು ಕ್ಷಮಿಸಿ ಅಂತ ಹೇಗೆ ಕೇಳಿಕೊಳ್ಳಲಿ ಎಂದು ರಾಮಾಚಾರಿ ಮನೆಯವರ ಮುಂದೆ ಚಾದು ಹೇಳುತ್ತಿದ್ದಾಳೆ.
ನಿಮ್ಮ ಮನೆ ಬೆಳಗಲು ಅವಕಾಶ ಕೊಡಿ
ಚಾರು ತನ್ನ ಮನದ ಮಾತನ್ನು ರಾಮಾಚಾರಿ ಅಮ್ಮನ ಬಳಿ ಹೇಳಿಕೊಂಡಿದ್ದಾಳೆ. ನನ್ನ ತಪ್ಪಿನಿಂದ ಈ ಮನೆಯಲ್ಲಿ ಒಂದು ಸಾವಾಗಿದೆ. ಅವರನ್ನು ವಾಪಸ್ ಕರೆಸಲು ಆಗಲ್ಲ. ಆದ್ರೆ ನನಗೆ ಈ ಮನೆ ಬೆಳಗಲು ಅವಕಾಶ ಕೊಡಿ ಎಂದು ಕೇಳ್ತಾಳೆ. ಅದನ್ನು ಕೇಳಿ ಮನೆಯವರು ಶಾಕ್ ಆಗಿದ್ದಾರೆ. ಇವಳ ಸಹವಾಸ ಬೇಡ ಅಂತಿರುವಾಗ, ಮನೆ ಬೆಳಗಲು ಅವಕಾಶ ಕೊಡಿ ಅಂತಿದ್ದಾಳಲ್ಲ ಎಂದು ಕೊಂಡಿದ್ದಾರೆ.
ಇದನ್ನೂ ಓದಿ: Kendasampige: ಅಮ್ಮನ ವಿರುದ್ಧವೇ ತಿರುಗಿ ಬಿದ್ದ ಕುಡುಕ ಮಗ, ಸುಮನಾಗೆ ಹೆಚ್ಚಿದ ಚಿಂತೆ!
ಚಾರುಗೆ ಆ ಮನೆ ಬೆಳಗೋ ಅವಕಾಶ ಸಿಗುತ್ತಾ? ರಾಮಾಚಾರಿ ತನ್ನ ಸೇಡು ತೀರಿಸಿಕೊಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸಿರೀಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ