ರಾಮಾಚಾರಿ (Ramachari) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಈ ಕತೆಯ ನಾಯಕ ರಾಮಾಚಾರಿ, ನಾಯಕಿ ಚಾರು. ಧಾರಾವಾಹಿ ಶುರವಾದಾಗ ಇಬ್ಬರಿಗೂ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗುತ್ತಿರಲಿಲ್ಲ. ರಾಮಾಚಾರಿ ಒಳ್ಳೆಯ ಗುಣ, ನಡತೆ, ಅವನ ಸ್ವಾಭಿಮಾನ ನೋಡಿ ಚಾರುಗೆ ಪ್ರೀತಿಯಾಗುತ್ತೆ. ಚಾರು ಮತ್ತು ರಾಮಾಚಾರಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ರಾಮಾಚಾರಿ ಮಾಡಿದ ಯಡವಟ್ಟಿನಿಂದ ಕೆಮಿಕಲ್ ಬಿದ್ದು ಚಾರು ಕಣ್ಣು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತೆ. ಅದಕ್ಕೆ ರಾಮಾಚಾರಿ ಕೊರಗುತ್ತಾ ಇರುತ್ತಾನೆ. ಕಣ್ಣು (Eye) ಕಾಣದ ಚಾರುಗೆ ನಾನೇ ಬೆಳಕಾಗಬೇಕು ಎಂದು ರಾಮಾಚಾರಿ ಯಾರಿಗೂ ಹೇಳದೇ ಆಕೆಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಮದುವೆಯಾದ ವಿಚಾರವನ್ನು ಎಲ್ಲರ ಬಳಿ ಮುಚ್ಚಿಟ್ಟಿದ್ದಾರೆ. ರಾಮಾಚಾರಿ ಹುಟ್ಟುಹಬ್ಬಕ್ಕೆ (Birthday) ಚಾರು ಕದ್ದು ಮುಚ್ಚಿ ಬಂದಿದ್ದಾಳೆ.
ರಾಮಾಚಾರಿ ಹುಟ್ಟುಹಬ್ಬ
ರಾಮಾಚಾರಿ ಈಗ ತನ್ನ ಮನೆಯವರಿಗಾಗಿ, ಮದುವೆ ಸಂಬಂಧವನ್ನು ಕಳೆದುಕೊಳ್ಳೋಣ ಎಂದು ಚಾರುಗೆ ಹೇಳಿದ್ದಾನೆ. ನನ್ನ ಮರೆತು ಬೇರೆಯವರನ್ನು ಮದುವೆಯಾಗು ಎಂದಿದ್ದಾನೆ. ಆದ್ರೆ ಚಾರು ಅದಕ್ಕೆ ಒಪ್ಪುತ್ತಿಲ್ಲ. ಹೇಗಾದ್ರೂ ರಾಮಾಚಾರಿ ಪ್ರೀತಿಯ ಪಡೆಯಬೇಕು ಎಂದುಕೊಂಡಿದ್ದಾಳೆ. ರಾಮಾಚಾರಿ ಹುಟ್ಟುಹಬ್ಬ ಇದೆ. ಅದಕ್ಕೆ ಅವನಿಗೆ ಫೋನ್ ಮಾಡಿ ವಿಶ್ ಮಾಡಲು ಪ್ರಯತ್ನ ಪಡ್ತಾಳೆ. ಆದ್ರೆ ಅವನು ಬೈದು ಫೋನ್ ಕಟ್ ಮಾಡ್ತಾನೆ.
ಕೇಕ್ ತಂದ ಚಾರು
ಚಾರು ರಾಮಾಚಾರಿಗೆ ಬಿಡದೇ ಫೋನ್ ಮಾಡಿ, ಮಾಡಿ ಆಚೆ ಬಾ. ಪಾರ್ಟಿ ಮಾಡಬೇಕು ಎಂದು ಹೇಳ್ತಾಳೆ. ಆದ್ರೆ ರಾಮಾಚಾರಿ ನಾನು ಮನೆ ಬಿಟ್ಟು ಎಲ್ಲಿಗೂ ಬರಲ್ಲ. ಅದು ಈ ರಾತ್ರಿಯಲ್ಲಿ ಎಂದು ಹೇಳ್ತಾನೆ. ಅದಕ್ಕೆ ಚಾರು ತನ್ನ ಸ್ನೇಹಿತೆ ಜೊತೆ ರಾಮಾಚಾರಿ ಮನೆಗೆ ಬಂದಿದ್ದಾಳೆ. ನನ್ನ ಗಂಡನಿಗೆ ಸಪ್ರೈಸ್ ಕೊಡ್ತೇನೆ ಎಂದು ಹೇಳಿದ್ದಾಳೆ,
ಕದ್ದು ಮುಚ್ಚಿ ಮನೆ ಒಳಗೆ ಹೋದ ಚಾರು
ಯಾವಾಗ ರಾಮಾಚಾರಿ ಮನೆಯಿಂದ ಆಚೆ ಬರಲ್ಲ ಅಂದ್ನೋ, ಆಗ ಚಾರು ಕೇಕ್ ಸಮೇತ ಮನೆಗೆ ಬಂದಿದ್ದಾಳೆ. ಮನೆಯಲ್ಲಿ ಯಾರನ್ನು ಕರೆಯದೇ, ತಾನೇ ಬಾಗಿಲು ತೆರೆಯುತ್ತಿದ್ದಾಳೆ. ನಿಧಾನಕ್ಕೆ ಕಿಟಕಿ ಓಪೆನ್ ಮಾಡಿದ್ದಾಳೆ. ಕಿಟಕಿ ಮೂಲಕ ಮನೆಯ ಮುಖ್ಯ ಬಾಗಿಲನ್ನು ತೆರೆದಿದ್ದಾಳೆ. ಯಾರು ಬಾಗಿಲು ತೆರೆಯುತ್ತಿದ್ದಾರೆ ಎಂದು ವೈಶಾಖ ನೋಡಿದ್ದಾಳೆ. ಕಳ್ಳ ಇರಬಹುದಾ ಎಂದು ಆತಂಕಗೊಂಡಿದ್ದಾಳೆ.
ವೈಶಾಖ ಶಾಕ್
ಚಾರು ಬಾಗಿಲು ತೆಗೆಯುವುದನ್ನು ರಾಮಾಚಾರಿ ಅತ್ತಿಗೆ ವೈಶಾಖ ನೋಡ್ತಾ ಇರ್ತಾಳೆ. ಕಳ್ಳನಾ, ದೆವ್ವನಾ ಎಂದು ಭಯಗೊಂಡು ನೋಡ್ತಾ ಇರ್ತಾಳೆ. ಅಷ್ಟರಲ್ಲಿ ಚಾರು ಕೇಕ್ ತೆಗೆದುಕೊಂಡು ಒಳಗೆ ಬರ್ತಾಳೆ. ಅದನ್ನು ನೋಡಿ ವೈಶಾಖ ಶಾಕ್ ಆಗ್ತಾಳೆ. ಇವಳು ಶೃತಿಯನ್ನು ಹುಡುಕಿಕೊಂಡು ಬಂದಿಲ್ಲ. ನನ್ನ ಗಂಡನನ್ನು ಹುಡುಕಿಕೊಂಡು ಬಂದಿಲ್ಲ. ಹಾಗಾದ್ರೆ ರಾಮಾಚಾರಿಯನ್ನೇ ಹುಡುಕಿಕೊಂಡು ಬಂದಿದ್ದಾಳೆ ಎಂದು ಗೆಸ್ ಮಾಡಿದ್ದಾಳೆ.
ರಾಮಾಚಾರಿ ಗುಟ್ಟು ಬಯಲಾಗುತ್ತಾ?
ವೈಶಾಖ ರಾಮಾಚಾರಿ ಅಣ್ಣ ಕೋದಂಡನ್ನು ಮದುವೆಯಾಗಿ ಬಂದಿದ್ದಾಳೆ. ಹೇಳದೇ ಕೇಳದೇ ಮದುವೆಯಾಗಿದ್ದಕ್ಕೆ ಮನೆಯವರೆಲ್ಲಾ ಬೈದಿದ್ದರು. ಅದಕ್ಕೆ ವೈಶಾಖನಿಗೆ ಬೇಸರವಿದೆ. ಈಗ ಚಾರು ಬಂದು ರಾಮಾಚಾರಿ ರೂಮಿನ ಕಡೆಗೆ ಹೋಗ್ತಾ ಇದ್ದಾಳೆ. ಈ ಅವಕಾಶವನ್ನು ವೈಶಾಖ ಮಿಸ್ ಮಾಡಲ್ಲ. ರಾಮಾಚಾರಿ ಗುಟ್ಟು ಈಗ ಬಯಲಾಗುತ್ತಾ ನೋಡಬೇಕು.
ಇದನ್ನೂ ಓದಿ: Actress Alia Bhatt: ಮುತ್ತುಗಳ ಡ್ರೆಸ್‍ನಲ್ಲಿ ಮಿಂಚಿದ ಆಲಿಯಾ ಭಟ್, ಅಭಿಮಾನಿಗಳ ಪ್ರೀತಿ ಕಂಡು ಸಂತೋಷದ ಕಣ್ಣೀರು!
ವೈಶಾಖನ ಬಳಿ ಸಿಕ್ಕಿ ಹಾಕಿಕೊಳ್ತಾಳಾ ಚಾರು? ರಾಮಾಚಾರಿ ಮುಚ್ಚಿಟ್ಟ ಮದುವೆ ಸತ್ಯ ಬಯಲಾಗುತ್ತಾ? ಇದನ್ನು ರಾಮಾಚಾರಿ ಹೇಗೆ ನಿಭಾಯಿಸುತ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ