• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Ramachari: ಚಾರುಗೆ ಬೇರೆ ಮದುವೆ ಮಾಡಲು ಜಾತಕ ನೋಡಲು ಹೊರಟ ರಾಮಾಚಾರಿ! ಹೆಂಡ್ತಿಗಾಗಿ ಸುಳ್ಳು ಹೇಳ್ತಾನಾ?

Ramachari: ಚಾರುಗೆ ಬೇರೆ ಮದುವೆ ಮಾಡಲು ಜಾತಕ ನೋಡಲು ಹೊರಟ ರಾಮಾಚಾರಿ! ಹೆಂಡ್ತಿಗಾಗಿ ಸುಳ್ಳು ಹೇಳ್ತಾನಾ?

ರಾಮಾಚಾರಿ

ರಾಮಾಚಾರಿ

ನನಗೆ ಇಷ್ಟ ಇಲ್ಲದೇ ಇರೋ ಒಂದು ಹೆಣ್ಣಿಗೆ ತಾಳಿ ಕಟ್ಟಿಸಿದೆ. ಅವರನ್ನು ನನ್ನ ಹೆಂಡ್ತಿಯಾಗಿ ಮಾಡಿದೆ. ಈಗ ಅದೇ ಹೆಂಡ್ತಿಗೆ ಇನ್ನೊಂದು ಗಂಡಿನ ಜೊತೆ ಮದುವೆ ಆಗುತ್ತೋ, ಇಲ್ವೋ ಎಂದು ಹೇಳೋಕೆ ಕಳಿಸುತ್ತಾ ಇದೀಯಾ? ಇದೆಂಥಾ ಪರೀಕ್ಷೆ?

 • News18 Kannada
 • 3-MIN READ
 • Last Updated :
 • Karnataka, India
 • Share this:

  ರಾಮಾಚಾರಿ (Ramachari)  ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ, ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಆದ್ರೆ ಮಾನ್ಯತಾ ಬೇರೆ ಗಂಡಿನ ಜಾತಕ ನೋಡಲು ರಾಮಾಚಾರಿಗೆ ಹೇಳಿದ್ದಾಳೆ.


  ನಾನು ಏನು ಮಾಡಬೇಕು?
  ಚಾರುಳನ್ನು ರಾಮಾಚಾರಿ ಮದುವೆ ಆಗಿದ್ದಾನೆ. ಅವಳಿಗೆ ಬೇರೆ ಮದುವೆ ಮಾಡಲು, ಇವನೇ ಜಾತಕ ನೋಡಲು ಹೊರಟಿದ್ದಾನೆ. ಅದಕ್ಕೆ ತುಂಬಾ ಬೇಸರ ಮಾಡಿಕೊಂಡಿದ್ದಾನೆ. ಎಷ್ಟು ಏಟು ಕೊಡ್ತೀಯಾ ದೇವರೇ? ಏನೇ ಕರ್ಮಫಲ ಎಂದು ಅರ್ಥ ಮಾಡಿಕೊಂಡ್ರೂ, ಏಟಿನ ಭಾರಗಳು ಜಾಸ್ತಿ ಆಗ್ತಾನೆ ಇವೆ.


  ಹೃದಯದ ಭಾರಗಳು ಹೆಚ್ಚಾಗ್ತಿವೆ. ಏನೇ ಕರ್ಮ ಸಿದ್ಧಾಂತಗಳನ್ನು ಓದಿ, ಅರ್ಥ ಮಾಡಿಕೊಂಡ್ರೂ, ನಾನು ಒಬ್ಬ ಮನುಷ್ಯ ತಾನೇ. ನನಗೂ ಹೃದಯ ಅನ್ನೋದು ಇದೆ. ನನಗೂ ನೋವಾಗುತ್ತೆ ದೇವರೇ ಎಂದು ದೇವರ ಬಳಿ ಹೇಳಿದ್ದಾನೆ.


  ದೇವರ ಬಳಿ ರಾಮಾಚಾರಿ ಪ್ರಶ್ನೆ
  ಯಾರ ಜೊತೆ ನನ್ನ ಋಣ ಮುಗಿಸಿಕೊಳ್ಳೋಣ ಎಂದುಕೊಂಡೇನೋ ಅವರ ಜೊತೆ ಜೀವನ ಪೂರ್ತಿ ಕಳೆಯೋ ಹಾಗೆ ಮಾಡಿದೆ. ನನಗೆ ಇಷ್ಟ ಇಲ್ಲದೇ ಇರೋ ಒಂದು ಹೆಣ್ಣಿಗೆ ತಾಳಿ ಕಟ್ಟಿಸಿದೆ. ಅವರನ್ನು ನನ್ನ ಹೆಂಡ್ತಿಯಾಗಿ ಮಾಡಿದೆ. ಈಗ ಅದೇ ಹೆಂಡ್ತಿಗೆ ಇನ್ನೊಂದು ಗಂಡಿನ ಜೊತೆ ಮದುವೆ ಆಗುತ್ತೋ, ಇಲ್ವೋ ಎಂದು ಹೇಳೋಕೆ ಕಳಿಸುತ್ತಾ ಇದೀಯಾ? ಇದೆಂಥಾ ಪರೀಕ್ಷೆ?


  ವೃತ್ತಿ ಧರ್ಮ ಪಾಲಿಸಲಾ? ಹೆಂಡ್ತಿ ಧರ್ಮ ಪಾಲಿಸಬೇಕಾ? ನನ್ನ ತಂದೆಗೆ ಒಳ್ಳೆ ಮಗ ಆಗಬೇಕಾ? ಹೆಂಡ್ತಿಗೆ ಒಳ್ಳೆ ಗಂಡನಾಗಬೇಕಾ? ಏನ್ ಮಾಡಲಿ ದೇವರೇ ಯಾಕೆ ನನ್ನ ಕೈಯೊಂದ ತಪ್ಪು ಮೇಲೆ ತಪ್ಪು ಮಾಡಿಸುತ್ತಾ ಇದ್ದೀಯಾ? ನನ್ನ ಆತ್ಮದ ಕೂಗು ನಿನಗೆ ಕೇಳಿಸುತ್ತಿಲ್ಲವೇ? ಎಂದು ರಾಮಾಚಾರಿ ದೇವರ ಬಳಿ ಪ್ರಶ್ನೆ ಮಾಡ್ತಾ ಇದ್ದಾನೆ.
  ದೇವರು ಕ್ರೂರಿನಾ?
  ರಾಮಾಚಾರಿಗೆ ಚಾರು ಕಾಲ್ ಮಾಡಿ, ವಿಷ್ಯ ಗೊತ್ತಾಯ್ತಾ ರಾಮಾಚಾರಿ, ನನ್ನ ಜಾತಕ ನೋಡಲು ನಿನ್ನನ್ನು ಕರೆಸುತ್ತಿದ್ದಾರೆ. ಒಂದು ಸಲ ದೇವರು ಎಂಥಾ ಕ್ರೂರಿ ಅನ್ನಿಸುತ್ತಾನೆ. ಇನ್ನೊಂದು ಸಾರಿ, ಈಗ ಆಗ್ತಾ ಇರೋದೆಲ್ಲಾ ಒಳ್ಳೆಯದೇ ರಾಮಾಚಾರಿ. ನಿನ್ನ ಬದಲು ನಿನ್ನ ತಂದೆ ಬಂದಿದ್ರೆ ಸುಳ್ಳು ಹೇಳೋಕೆ ಆಗ್ತಾ ಇರಲಿಲ್ಲ. ನನ್ನ ಮತ್ತು ಆ ಹುಡುಗನ ಜಾತಕ ಸೆಟ್ ಮಾಡಿ ಕೊಡ್ತಾ ಇದ್ರು ಎಂದು ಚಾರು ಹೇಳಿದ್ದಾಳೆ.


  colors kannada serial, kannada serial, ramachari serial, ramachari in problem, charu gives one suggestion, charu was blind chemical effect, ramachari serial kannada cast, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ಚಾರುಗೆ ಬೇರೆ ಮದುವೆ ಮಾಡಲು ಜಾತಕ ನೋಡಲು ಹೊರಟ ರಾಮಾಚಾರಿ! ಹೆಂಡ್ತಿಗಾಗಿ ಸುಳ್ಳು ಹೇಳ್ತಾನಾ?, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಮಾನ್ಯತಾ


  ಸುಳ್ಳು ಹೇಳು
  ನೀನು ಜಾತಕ ನೋಡಲು ಬರುತ್ತಿರುವುದರಿಂದ ಸುಳ್ಳು ಹೇಳಬಹುದು. ಈ ಮದುವೆ ನಡೆಯಲ್ಲ. ಈ ಜಾತಕ ಮ್ಯಾಚ್ ಆಗಲ್ಲ ಅಂತ ಹೇಳಿಬಿಡು. ಒಂದೆರೆಡು ವರ್ಷ ನನಗೆ ಮದುವೆ ಭಾಗ್ಯ ಇಲ್ಲ ಎಂದು ಸುಳ್ಳು ಹೇಳು. ಸುಳ್ಳು ಹೇಳಿದ್ರೆ ಯಾವ ತಪ್ಪು ಇಲ್ಲ ರಾಮಾಚಾರಿ. ಜಾಸ್ತಿ ಯೋಚನೆ ಮಾಡಬೇಡ.


  colors kannada serial, kannada serial, ramachari serial, ramachari in problem, charu gives one suggestion, charu was blind chemical effect, ramachari serial kannada cast, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ಚಾರುಗೆ ಬೇರೆ ಮದುವೆ ಮಾಡಲು ಜಾತಕ ನೋಡಲು ಹೊರಟ ರಾಮಾಚಾರಿ! ಹೆಂಡ್ತಿಗಾಗಿ ಸುಳ್ಳು ಹೇಳ್ತಾನಾ?, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರು


  ತನ್ನ ಹೆಂಡ್ತಿಗೆ ಇನ್ನೊಬ್ಬ ಗಂಡಿನ ಜೊತೆ ಜಾತಕ ಹೊಂದಿಸುವ ಕೆಲಸ ಯಾವ ಗಂಡನೂ ಮಾಡಬಾರದು. ಅಂತ ತಪ್ಪು ನೀನು ಮಾಡಬೇಡ. ಡ್ಯಾಡ್ ಗೆ ನಿನ್ನ ಮೇಲೆ ತುಂಬಾ ನಂಬಿಕೆ. ನೀನು ಒಂದು ಮಾತು ಹೇಳಿದ್ರೆ ನಿನ್ನ ನಂಬ್ತಾರೆ. ಸಾವಿರು ಸುಳ್ಳು ಹೇಳಿ, ಒಂದು ಮದುವೆ ಮಾಡು ಅಂತಾರೆ. ನಮ್ಮ ಮದುವೆ ಮುಂದುವರೆಸಲು ನೀನು ಒಂದು ಸುಳ್ಳು ಹೇಳು ಎಂದು ಚಾರು ರಾಮಾಚಾರಿ ಬಳಿ ಹೇಳ್ತಾ ಇದ್ದಾಳೆ.


  ಇದನ್ನೂಓದಿ: Megha Shetty: ಸೀರೆಯುಟ್ಟ ಅನು ಸಿರಿಮನೆ, ಫ್ಯಾನ್ ಅಂದ್ರು ‘ಎಲ್ಲಿದೆ ನಿಮ್ಮನೆ, ಕೊಲ್ಲಬೇಡಿ ಸುಮ್ಮನೆ’!


  ರಾಮಾಚಾರಿ ಈಗ ಏನ್ ಮಾಡ್ತಾನೆ? ಸುಳ್ಳು ಹೇಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು