ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ (Angry) ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ, ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ರಾಮಾಚಾರಿ ಜನಿವಾರದಿಂದ ಸತ್ಯ ಬಯಲಾಗಬಹುದು.
ಚಾರು-ರಾಮಾಚಾರಿ ಮದುವೆ
ಚಾರುಗೆ ಚಿಕ್ಕಮಗಳೂರಿನಲ್ಲಿ ಕಣ್ಣಿನ ಚಿಕಿತ್ಸೆ ಕೊಡಿಸಿರುತ್ತಾರೆ. ಆಕೆಗೆ ಕಣ್ಣು ಬರುತ್ತೆ. ಆದ್ರೆ ರಾಮಾಚಾರಿ ದೂರ ಆಗ್ತಾನೆ ಎಂದು ಕಣ್ಣು ಕಾಣಲ್ಲ. ನನಗೆ ದಿಕ್ಕು ಯಾರು ಎಂದು ಸಾಯೋಕೆ ಹೊರಟಿರುತ್ತಾಳೆ. ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ. ತಾಳಿ ಕಟ್ಟುತ್ತೇನೆ ಎಂದು ಹೇಳಿ ಮದುವೆ ಆಗಿರುತ್ತಾನೆ.
ಬಂಗಾರದ ತಾಳಿ ಹಾಕಿಸಿಕೊಂಡ ಚಾರು
ಚಾರು ಇಷ್ಟು ದಿನ ಅರಿಶಿನ ಕೊಂಬಿನ ತಾಳಿಯಲ್ಲಿದ್ದಳು. ಅದನ್ನು ನೋಡಿದ್ರೆ ಎಲ್ಲರಿಗೂ ಅನುಮಾನ ಬರುತ್ತೆ. ಬಂಗಾರದ ತಾಳಿ ಹಾಕಿಸಿಕೊಳ್ಳಬೇಕು ಎಂದುಕೊಳ್ತಾಳೆ. ಅದಕ್ಕೆ ಆಫೀಸ್‍ನಲ್ಲಿ ದೇವರ ಫೋಟೋ ಇಟ್ಟು, ರಾಮಾಚಾರಿ ಕೈನಲ್ಲಿ ಬಂಗಾರದ ತಾಳಿ ಹಾಕಿಸಿಕೊಂಡಿದ್ದಾಳೆ. ಇನ್ಮೇಲೆ ಯಾರಿಗೂ ಅನುಮಾನ ಬರಲ್ಲ. ಯಾವುದು ಚೈನ್ ಹಾಕಿಕೊಂಡಿದ್ದಾರೆ ಎಂದು ಸುಮ್ನೆ ಆಗ್ತಾರೆ ಎಂದು ಹೇಳಿದ್ದಾಳೆ.
ಮೂರೆಳೆ ಜನಿವಾರ ತೆಗೆದ ರಾಮಾಚಾರಿ
ರಾಮಾಚಾರಿ ಮನೆಯಲ್ಲಿ ಸಂಪ್ರದಾಯದಂತೆ ಮದುವೆಯಾಗದವರು ಮೂರೆಳೆ ಜನಿವಾರ ಹಾಕ್ತಾರೆ. ಆದರೆ ಮದುವೆಯ ನಂತರ ಗೃಹಸ್ಥ ಧರ್ಮ ಪಾಲನೆಗಾಗಿ ಆರೆಳೆ ಜನಿವಾರ ಹಾಕ್ತಾರೇೆ. ರಾಮಾಚಾರಿ ಮೂರೆಳೆ ಜನಿವಾರ ತೆಗೆದಿದ್ದಾನೆ. ಜನಿವಾರ ಬದಲಾಯಿಸಿದ್ದಕ್ಕೆ, ಅವರಮ್ಮ ಏನಾಯ್ತು ರಾಮಾಚಾರಿ ಜನಿವಾರ ಬದಲಾಯಿಸಿದ್ದೀಯಾ ಎಂದು ಕೇಳ್ತಾಳೆ. ಅದಕ್ಕೆ ರಾಮಾಚಾರಿ ಬಟ್ಟೆ ಬದಲಾಯಿಸುವಾಗ ಕತ್ತಿನಿಂದ ಬಂತು, ಅದಕ್ಕೆ ಬದಲಾಯಿಸಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ.
ಆರೆಳೆ ಜನಿವಾರ ಹಾಕಿದ ರಾಮಾಚಾರಿ ಸಿಕ್ಕಿ ಹಾಕಿಕೊಳ್ತಾನಾ?
ಮೂರೆಳೆ ತೆಗೆದು ರಾಮಾಚಾರಿ ಆರೆಳೆ ಜನಿವಾರ ಹಾಕಿದ್ದಾನೆ. ಅದನ್ನು ಶ್ರುತಿ ನೋಡಿದ್ದಾಳೆ. ಗಾಬರಿಯಾಗಿದ್ದಾಳೆ. ತಕ್ಷಣ ಅವರಪ್ಪನ ಬಳಿ ಬಂದು, ಅಪ್ಪ ಆರೆಳೆ ಜನಿವಾರ ಮದುವೆಯಾದವರು ಮಾತ್ರ ಧರಿಸಬೇಕು ತಾನೆ ಎಂದು ಕೇಳಿದ್ದಾಳೆ. ಅದಕ್ಕೆ ಅವರ ತಂದೆ ಹೌದು ಎಂದಿದ್ದಾರೆ. ಹಾಗಾದ್ರೆ ರಾಮಾಚಾರಿ ಅಣ್ಣ ಆರೆಳೆ ಜನಿವಾರ ಹಾಕಿದ್ದಾನೆ ಎಂದು ಹೇಳ್ತಾನೆ.
ಮನೆಯವರ ಬಳಿ ಸತ್ಯ ಬಯಲಾಗುತ್ತಾ?
ರಾಮಾಚಾರಿ ಆರೆಳೆ ಜನಿವಾರ ಹಾಕಿಕೊಂಡಿದ್ದಾನೆ ಎಂಬ ವಿಷಯ ಕೇಳಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಗಾಬರಿಯಾಗಿದ್ದಾರೆ. ಎಲ್ಲರು ಬಂದು ರಾಮಾಚಾರಿಯನ್ನು ಪ್ರಶ್ನೆ ಮಾಡ್ತಾ ಇದ್ದಾರೆ. ರಾಮಾಚಾರಿ ಯಾಕೆ ರೀತಿ ಆರೆಳೆ ಜನಿವಾರ ಹಾಕಿಕೊಂಡಿದ್ದೀಯಾ ಎಂದು ಕೇಳ್ತಾ ಇದ್ದಾರೆ. ಆದ್ರೆ ರಾಮಾಚಾರಿ ಸೈಲೆಂಟ್ ಆಗಿ ನಿಂತಿದ್ದಾನೆ. ಇವತ್ತು ಸತ್ಯ ಹೇಳ್ತಾನಾ ನೋಡಬೇಕು.
ಇದನ್ನೂ ಓದಿ: Sathya Serial: ಸತ್ಯ ಪರ ನಿಂತ ಕಾರ್ತಿಕ್, ಮನೆಯವರ ವಿರೋಧ ಕಟ್ಟಿಕೊಂಡ ದಂಪತಿ!
ಜನಿವಾರದಿಂದ ರಾಮಾಚಾರಿ ಮುಚ್ಚಿಟ್ಟ ಮದುವೆ ಸತ್ಯ ಬಯಲಾಗುತ್ತಾ? ಮನೆಯವರು ಅದನ್ನು ಒಪ್ಪಿಕೊಳ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ