ರಾಮಾಚಾರಿ (Ramachari) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಚಾರು-ರಾಮಾಚಾರಿ ಗುಟ್ಟಾಗಿ ಮದುವೆಯಾಗಿದ್ದಾರೆ. ಮನೆಯಲ್ಲಿ ಈ ಸತ್ಯ ಯಾರಿಗೂ ಗೊತ್ತಿಲ್ಲ. ಗೊತ್ತಾದ್ರೆ ದೊಡ್ಡ ರಂಪ ರಾಮಾಯಣ ಆಗೋದು ಪಕ್ಕಾ. ರಾಮಾಚಾರಿ ಚಾರುಗೆ ತನ್ನಿಂದ ದೂರ ಹೋಗು ಎನ್ನುತ್ತಿದ್ದಾ,ಎ ಅದಕ್ಕೆ ಚಾರು ಬೇಸರ ಮಾಡಿಕೊಂಡಿದ್ದಾಳೆ. ಗಂಡ ಬಡವ ಅಂತಾನೋ ಅಥವಾ ಅವನಿಗೆ ಏನಾದ್ರೂ ಕಾಯಿಲೆ ಬಂತು ಅಂತಾನೋ, ಹೆಂಡ್ತಿ ಗಂಡನನ್ನು ಬಿಟ್ಟು ಹೋಗಲ್ಲ. ಮಾತು ಎತ್ತಿದ್ರೆ, ಮನೆತನ, ಸಂಸ್ಕಾರ ಅಂತೀಯಾ. ಗಂಡನನ್ನು ಬಿಟ್ಟು ಇನ್ನೊಬ್ಬನನ್ನು ಕಟ್ಕೋ ಅಂತ ಹೇಳುವುದು, ನಿಮ್ಮ ಮನೆತನಕ್ಕೆ, ಸಂಸ್ಕಾರಕ್ಕೆ ತಕ್ಕ ಕೆಲಸನಾ? ಒಂದು ಸತಿ ಮದುವೆಯಾದ್ರೆ ಮುಗೀತು ರಾಮಾಚಾರಿಗೆ ಎಂದು ಹೇಳಿದ್ದಾಳೆ. ರಾಮಾಚಾರಿ ಸಿಗಲ್ಲ ಎಂದು ವಿಷ ಕುಡಿದಿದ್ದಾಳೆ. ಆಸ್ಪತ್ರೆಯಲ್ಲಿರುವ ಚಾರುಗೆ ನೀನೇ ನನ್ನ ಹೆಂಡ್ತಿ (Wife) ಎಂದು ರಾಮಾಚಾರಿ ಮಾತು ಕೊಟ್ಟಿದ್ದಾನೆ.
ರಾಮಾಚಾರಿಗಾಗಿ ವಿಷ ಕುಡಿದ ಚಾರು
ರಾಮಾಚಾರಿ ಚಾರುಗೆ ನೀನು ನನ್ನ ಬಿಟ್ಟು ಹೋಗು ಎಂದು ಹೇಳ್ತಾನೆ. ಯಾವಾಗ ರಾಮಾಚಾರಿ ಚಾರುಳನ್ನು ತಿರುಗಿಯೂ ನೋಡಲಿಲ್ವೋ, ಆಗ ಚಾರು ವಿಷ ಕುಡಿದಿದ್ದಾಳೆ. ಎಚ್ಚರ ತಪ್ಪಿ ಬಿದ್ದಿದ್ದಾಳೆ. ಜೊತೆಗಿದ್ದ ಸಾನ್ವಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ರಾಮಾಚಾರಿ, ರಾಮಾಚಾರಿ ಎಂದು ಚಾರು ಕನಸವರಿಸುತ್ತಿದ್ದಾಳೆ.
ರಾಮಾಚಾರಿ ನೀನು ಅಂದ್ರೆ ತುಂಬಾ ಇಷ್ಟ
ರಾಮಾಚಾರಿ ಚಾರುಳನ್ನು ದೂರ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ, ಚಾರು ಮಾತ್ರ ದೂರ ಹೋಗ್ತಾ ಇಲ್ಲ. ರಾಮಾಚಾರಿ ದೂರ ಹೋಗ್ತಾನೆ ಎಂದು ಸಾಯುವುದಕ್ಕೂ ಸಿದ್ಧವಾಗಿದ್ದಾಳೆ. ಅದಕ್ಕೆ ವಿಷ ಕುಡಿದು ಆಸ್ಪತ್ರೆಯಲ್ಲಿ ಮಲಗಿದ್ದಾಳೆ. ರಾಮಾಚಾರಿ ನನಗೆ ನೀನು ತುಂಬಾ ಇಷ್ಟ. ಅದನ್ನು ಹೇಗೆ ಹೇಳಲಿ ಹೇಳು ಎಂದು ಚಾರು ಕೇಳ್ತಾ ಇದ್ದಾಳೆ.
ನೀನೇ ನನ್ನ ಜಗತ್ತು
ನಾನು ಎಷ್ಟು ಇಷ್ಟ ಪಡ್ತಿನಿ ಅಂತ ನಿನಗೆ ನಂಬಿಕೆ ಇಲ್ವಾ ರಾಮಾಚಾರಿ. ನೀನು ಅಂದ್ರೆ ಪ್ರಾಣ. ನನ್ನ ಜೀವನದಲ್ಲಿ ನೀನು ಇರಬೇಕು. ಕಷ್ಟ ಬರಲಿ, ಸುಖ ಬರಲಿ ನೀನು ಇರಬೇಕು. ಎಲ್ಲಾ ಪರಿಸ್ಥಿಯಲ್ಲೂ ನಾನು ನಿನ್ನ ಜೊತೆಯೇ ಇರಬೇಕು. ನಿನಗೆ ನಾನು ಬೇಡ ಅನ್ನಿಸಿರಬಹುದು. ಆದ್ರ ನನಗೆ ನೀನು ಬೇಕು. ನೀನು ಇಲ್ಲ ಅಂದ್ರೆ ಈ ಉಸಿರೇ ನಿಂತು ಹೋದ ರೀತಿ ಆಗುತ್ತೆ ಎಂದು ಚಾರು ರಾಮಾಚಾರಿ ಬಳಿ ಹೇಳುತ್ತಿದ್ದಾಲೆ.
ನಿನ್ನ ಜೊತೆ ಇರ್ತಿನಿ
ರಾಮಾಚಾರಿ ನಿನಗಾಗಿ ನಾನು ಏನ್ ಬೇಕಾದ್ರೂ ಮಾಡ್ತೇನೆ. ಮನೆಯವರ ಮುಂದೆ ಸತ್ಯ ಹೇಳು. ನಾನು ಸದಾ ನಿನ್ನ ಜೊತೆ ಇರ್ತೇನೆ. ನಿನ್ನು ಬಿಟ್ಟು ಹೋಗಲ್ಲ. ನಿನಗಾಗಿ ಜಗತ್ತನೇ ಬೇಕಾದ್ರೂ ಎದುರು ಹಾಕಿ ಕೊಳ್ತೇನೆ. ಆದ್ರೆ ನೀ ಇಲ್ಲ ಅಂದ್ರೆ ನಾನು ಸತ್ತೇ ಹೋಗ್ತೀನಿ. ನಿ ಇಲ್ಲ ನಾ ಸತ್ತೆ ಹೋಗ್ತಿನಿ ರಾಮಾಚಾರಿ ಎಂದು ಚಾರು ಹೇಳಿದ್ದಾಳೆ.
ನೀನೇ ನನ್ನ ಹೆಂಡ್ತಿ
ಚಾರು ಮೇಡಂ ನಿಮಗೆ ಹೇಗೆ ಹೇಳಲಿ, ನಮ್ಮ ಮನೆಯ ಪ್ರಾಬ್ಲಂ ದಿನೇ ದಿನೇ ಹೆಚ್ಚಾಗುತ್ತಿದೆ. ಈ ವಿಷ್ಯ ಗೊತ್ತಾದ್ರೆ ಅವರು ಸತ್ತೇ ಹೋಗ್ತಾರೆ. ಈಗಾಗಲೇ ನಮ್ಮ ಮನೆಯಲ್ಲಿ ಏನೇನೋ ರಾಮಾಯಣ ನಡೆಯುತ್ತಿದೆ ಎಂದು ರಾಮಾಚಾರಿ ಹೇಳಿದ್ದಾನೆ. ಅದಕ್ಕೆ ಚಾರು ನನ್ನ ಹೆಂಡ್ತಿ ಎಂದು ಪ್ರಮಾಣ ಮಾಡಿ ಹೇಳು ಎಂದಿದ್ದಾಳೆ. ಅದಕ್ಕೆ ರಾಮಾಚಾರಿ ಒಪ್ಪಿದ್ದಾನೆ. ನೀವೇ ನನ್ನ ಹೆಂಡ್ತಿ ಎಂದು ಆಣೆ ಮಾಡಿದ್ದಾನೆ. ಅದಕ್ಕೆ ಚಾರು ಖುಷಿಯಾಗಿದ್ದಾಳೆ.
ಇದನ್ನೂ ಓದಿ: Ninade Naa: ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ, ಮೇ 16ರಿಂದ 'ನೀನಾದೆ ನಾ'!
ರಾಮಾಚಾರಿ ಚಾರುವನ್ನು ಹೆಂಡ್ತಿಯಾಗಿ ಸ್ವೀಕಾರ ಮಾಡ್ತಾನಾ? ಮನೆಯವರಿಗೆಲ್ಲಾ ಸತ್ಯ ಹೇಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ