ರಾಮಾಚಾರಿ (Ramachari) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಚಾರು-ರಾಮಾಚಾರಿ ಗುಟ್ಟಾಗಿ ಮದುವೆಯಾಗಿದ್ದಾರೆ. ಮನೆಯಲ್ಲಿ ಈ ಸತ್ಯ ಯಾರಿಗೂ ಗೊತ್ತಿಲ್ಲ. ಗೊತ್ತಾದ್ರೆ ದೊಡ್ಡ ರಂಪ ರಾಮಾಯಣ ಆಗೋದು ಪಕ್ಕಾ. ರಾಮಾಚಾರಿ ಚಾರುಗೆ ತನ್ನಿಂದ ದೂರ ಹೋಗು ಎನ್ನುತ್ತಿದ್ದಾ,ಎ ಅದಕ್ಕೆ ಚಾರು ಬೇಸರ ಮಾಡಿಕೊಂಡಿದ್ದಾಳೆ. ಗಂಡ ಬಡವ ಅಂತಾನೋ ಅಥವಾ ಅವನಿಗೆ ಏನಾದ್ರೂ ಕಾಯಿಲೆ ಬಂತು ಅಂತಾನೋ, ಹೆಂಡ್ತಿ ಗಂಡನನ್ನು ಬಿಟ್ಟು ಹೋಗಲ್ಲ. ಮಾತು ಎತ್ತಿದ್ರೆ, ಮನೆತನ, ಸಂಸ್ಕಾರ ಅಂತೀಯಾ. ಗಂಡನನ್ನು ಬಿಟ್ಟು ಇನ್ನೊಬ್ಬನನ್ನು ಕಟ್ಕೋ ಅಂತ ಹೇಳುವುದು, ನಿಮ್ಮ ಮನೆತನಕ್ಕೆ, ಸಂಸ್ಕಾರಕ್ಕೆ ತಕ್ಕ ಕೆಲಸನಾ? ಒಂದು ಸತಿ ಮದುವೆಯಾದ್ರೆ ಮುಗೀತು ರಾಮಾಚಾರಿಗೆ ಎಂದು ಹೇಳಿದ್ದಾಳೆ. ರಾಮಾಚಾರಿ ಸಿಗಲ್ಲ ಎಂದು ವಿಷ (Poison) ಕುಡಿದಿದ್ದಾಳೆ. ಅದಕ್ಕೆ ಪೊಲೀಸರು (Police) ರಾಮಾಚಾರಿ ಮನೆಗೆ ಬಮದಿದ್ದಾರೆ.
ಪ್ರಾಣ ಬಿಡ್ತೀನಿ ಎಂದು ಈ ಹಿಂದೆ ಡ್ರಾಮಾ
ನಿನ್ನ ಹೆಂಡ್ತಿ ಇನ್ಮೇಲೆ ನಿನಗೆ ಭಾರವಾಗಿ ಕಾಡಲ್ಲ. ನಿನ್ನ ಭಾರ ಎಲ್ಲಾ ಕಳಚಿ ಈ ಭೂಮಿ ಬಿಟ್ಟು ಹೋಗಲು ಎಲ್ಲಾ ತಯಾರಿ ನಡೆದಿದೆ. ತಾಳಿ ಬಿಚ್ಚೋಕೆ ಆಗಲ್ಲ. ಆದ್ರೆ ಪ್ರಾಣ ಬಿಡಬಹುದು. ಅದಕ್ಕೆ ಪ್ರಾಣ ಬಿಡ್ತಾ ಇದೀನಿ. ಮುಂದಿನ ಜನ್ಮ ಅಂತ ಇದ್ರೆ, ನನ್ನ ಹಣೆಯಲ್ಲಿ ನಿನ್ನ ಹೆಸರು ಬರೆಸಿಕೊಂಡು ಬರ್ತೇನೆ. ನಿನ್ನ ಕೈನಲ್ಲೇ ತಾಳಿ ಕಟ್ಟಿಸಿಕೊಳ್ತೇನೆ. ಆಗ ನಿನ್ನ ಜೊತೆ ನಾನು ಜೀವನ ನಡೆಸುತ್ತೇನೆ ಎಂದು ಚಾರು ವಿಷ ಕುಡಿಯುವ ನಾಟಕ ಮಾಡಿದ್ದಳು.
ರಾಮಾಚಾರಿಗಾಗಿ ವಿಷ ಕುಡಿದ ಚಾರು
ಯಾವಾಗ ರಾಮಾಚಾರಿ ಚಾರುಳನ್ನು ತಿರುಗಿಯೂ ನೋಡಲಿಲ್ವೋ, ಆಗ ಚಾರು ವಿಷ ಕುಡಿದಿದ್ದಾಳೆ. ಎಚ್ಚರ ತಪ್ಪಿ ಬಿದ್ದಿದ್ದಾಳೆ. ಜೊತೆಗಿದ್ದ ಸಾನ್ವಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಆಸ್ಪತ್ರೆಯಲ್ಲಿ ಪೊಲೀಸರಿಗೆ ದೂರು ನೀಡಿ ಎನ್ನುತ್ತಿದ್ದಾರೆ. ಅದಕ್ಕೆ ಸಾನ್ವಿ ಭಯಪಟ್ಟು ರಾಮಾಚಾರಿಗೆ ಫೋನ್ ಮಾಡಿದ್ದಾಳೆ. ಆದ್ರೆ ರಾಮಾಚಾರಿ ಫೋನ್ ಪಿಕ್ ಮಾಡಿಲ್ಲ.
ಸಾವು ಬದುಕಿನ ನಡುವೆ ಚಾರು
ಚಾರು ಆಸ್ಪತ್ರೆಗೆ ಸೇರಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಎಮರ್ಜೆನ್ಸಿ ವಾರ್ಡ್‍ಗೆ ಹಾಕಿದ್ದಾರೆ. ಸಾನ್ವಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಆದ್ರೆ ಈ ವಿಷ್ಯ ಪೊಲೀಸರಿಗೆ ಗೊತ್ತಾಗಿದೆ. ಅದಕ್ಕೆ ಪೊಲೀಸ್ರು ವಿಚಾರಣೆ ಆರಂಭಿಸಿದ್ದಾರೆ. ಚಾರು ಫೋನ್ ಚೆಕ್ ಮಾಡಿದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
ರಾಮಾಚಾರಿ ಮನೆಗೆ ಪೊಲೀಸರು
ರಾಮಾಚಾರಿ ಹುಟ್ಟುಹಬ್ಬ ಇದೆ. ಅದಕ್ಕೆ ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ. ಸಂಭ್ರಮದಿಂದ ಮನೆಗೆ ಪೊಲೀಸರ ಎಂಟ್ರಿ ಆಗಿದೆ. ಪೊಲೀಸರನ್ನು ಮನೆಯಲ್ಲಿ ನೋಡಿ ಶಾಕ್ ಆಗಿದ್ದಾರೆ. ನಿಮ್ಮ ಮನೆ ಮಗನಿಂದ ಅಲ್ಲಿ ಒಬ್ಬರ ಪ್ರಾಣ ಹೋಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಅದನ್ನು ಕೇಳಿ ಗಾಬರಿಯಾಗಿದ್ದಾರೆ. ರಾಮಾಚಾರಿಯನ್ನು ಎಳೆದುಕೊಂಡು ಹೋಗಿದ್ದಾರೆ.
ಚಾರು ಮೊಬೈಲ್‍ನಲ್ಲಿ ಏನಿತ್ತು?
ಚಾರು ಈ ಮೊದಲು ನಾನು ಸಾಯ್ತೇನೆ ಎಂದು ವಿಡಿಯೋ ಮಾಡಿ ರಾಮಾಚಾರಿಗೆ ಹೇಳಿದ್ದಳು. ಅದನ್ನು ಅವನಿಗೆ ಕಳಿಸಿದ್ದಳು ಕೂಡ. ಪೊಲೀಸರಿಗೆ ಈಗ ಆ ಸಾಕ್ಷಿ ಸಿಕ್ಕಿದೆ. ಅದಕ್ಕೆ ರಾಮಾಚಾರಿಯನ್ನು ಅರೆಸ್ಟ್ ಮಾಡಿದ್ದಾರೆ. ರಾಮಾಚಾರಿ ಮನೆಯವರು ಅವಳು ಯಾಕೆ ನಿನ್ನ ಸಲುವಾಗಿ ವಿಷ ಕುಡಿದಳು ಎಂದು ಕೇಳುತ್ತಿದ್ದಾರೆ. ಆದ್ರೆ ರಾಮಾಚಾರಿ ಯಾವುದೇ ಉತ್ತರ ಹೇಳಿಲ್ಲ.
ಚಾರು ಹುಷಾರಾಗಿ ಮನೆಗೆ ಬರ್ತಾಳಾ? ರಾಮಾಚಾರಿ ಜೈಲಿನಲ್ಲಿ ಇರ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ