ರಾಮಾಚಾರಿ (Ramachari) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಚಾರು-ರಾಮಾಚಾರಿ ಗುಟ್ಟಾಗಿ ಮದುವೆಯಾಗಿದ್ದಾರೆ (Marriage). ಮನೆಯಲ್ಲಿ ಈ ಸತ್ಯ ಯಾರಿಗೂ ಗೊತ್ತಿಲ್ಲ. ಗೊತ್ತಾದ್ರೆ ದೊಡ್ಡ ರಂಪ ರಾಮಾಯಣ ಆಗೋದು ಪಕ್ಕಾ. ರಾಮಾಚಾರಿ ಚಾರುಗೆ ತನ್ನಿಂದ ದೂರ ಹೋಗು ಎನ್ನುತ್ತಿದ್ದಾನೆ ಅದಕ್ಕೆ ಚಾರು ಬೇಸರ ಮಾಡಿಕೊಂಡಿದ್ದಾಳೆ. ರಾಮಾಚಾರಿ ಸಿಗಲ್ಲ ಎಂದು ಚಾರು ವಿಷ (Poison) ಕುಡಿದಿದ್ದಳು. ಆದ್ರೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದ್ರೆ ಚಾರು ತಾನು ಸತ್ತೋಗುತ್ತೇನೆ ಎಂದು, ವಿಡಿಯೋವೊಂದನ್ನು ರಾಮಾಚಾರಿ ಅತ್ತಿಗೆ ಮತ್ತು ತಂಗಿ (Sister) ಶೃತಿಗೆ ಕಳಿಸಿದ್ದಳು. ಅದರಲ್ಲಿ ರಾಮಾಚಾರಿ ಮತ್ತು ಚಾರು ಮದುವೆಯಾದ ಸತ್ಯ ಇದೆ. ಈಗ ಆ ಸತ್ಯ ಶೃತಿಗೆ ಗೊತ್ತಾಗಿದೆ.
ಅತ್ತಿಗೆಯಿಂದ ಪಾರಾದ ರಾಮಾಚಾರಿ
ಚಾರು ಕಳುಹಿಸಿದ್ದ ವಿಡಿಯೋವನ್ನ ರಾಮಾಚಾರಿ ಅತ್ತಿಗೆ ವೈಶಾಖ ಇನ್ನೇನು ನೋಡಬೇಕಿತ್ತು. ಅಷ್ಟರಲ್ಲಿ ಗೆಳೆಯ ಮುರಾರಿ ಶಂಖ ಊದಿ, ಜಾಗಟೆ ಬಾರಿಸಿ ಅದನ್ನು ತಡೆಯುತ್ತಾನೆ. ವೈಶಾಖ ಮುರಾರಿ ನೋಡಲು ಹೊರಗೆ ಬರುತ್ತಾಳೆ. ಆಗ ಫೋನ್‍ನಿಂದ ಚಾರು ಕಳುಹಿಸಿದ್ದ ವಿಡಿಯೋವನ್ನ ರಾಮಾಚಾರಿ ಡಿಲೀಟ್ ಮಾಡುತ್ತಾನೆ.
ಶೃತಿಗೆ ಗೊತ್ತಾದ ಸತ್ಯ
ಚಾರು, ಶ್ರುತಿ ಮೊಬೈಲ್ ಫೋನ್‍ಗೂ ವಿಡಿಯೋ ಕಳುಹಿಸಿರುತ್ತಾಳೆ. ಅದನ್ನ ಡಿಲೀಟ್ ಮಾಡಲು ರಾಮಾಚಾರಿ ಮುಂದಾದಾಗ, ಅದರಲ್ಲಿ ವಿಡಿಯೋ ಇರಲ್ಲ. ಆದ್ರೆ ಅದನ್ನು ಶೃತಿ ನೋಡಿದ್ದಾಳೆ.ನಿನಗೋಸ್ಕರ ಕಾಯ್ತಾ ಇರೋ ದೀಪ. ಅವಳ ಪ್ರೀತಿ. ದೀಪಾಳನ್ನು ನಾನೇ ಮೀಟ್ ಮಾಡ್ತೀನಿ.
ಕೆಲವೊಂದು ಸಲ ಬದುಕಲ್ಲಿ ಬರೋ ಸುಂಟರಗಾಳಿಯಿಂದ, ಬೇಡದೇ ಇರೋ ಕಸ ಮನೆಗೆ ಬಂದು ತುಂಬಿಕೊಳ್ಳೋ ಸಾಧ್ಯತೆ ಇರುತ್ತೆ ಅದಕ್ಕೆ. ಮನೆ ಯಜಮಾನಿ ಆಗೋಳಿಗೆ, ಕಸ ಒಳಗೆ ಬರದೇ ಇರೋ ಹಾಗೆ ಭದ್ರವಾಗಿ ಬಾಗಿಲು ಹಾಕಿಕೊಳ್ಳುವುದನ್ನು ಹೇಳಿ ಕೊಡಬೇಕು ಎಂದು ಶೃತಿ ಹೇಳಿದ್ದಾಳೆ.
ಚಾರು ಬಳಿ ಪ್ರಶ್ನೆ
ನಿಮಗೆ ಎಲ್ಲನೂ ತಮಾಷೆ ಅಲ್ವಾ? ಶೃತಿ ಮೊಬೈಲ್‍ಗೆ ವಿಡಿಯೋ ಕಳಿಸಿದ್ದೇನೆ ಅಂತ ಹೇಳಿದ್ರಿ. ಆದ್ರೆ ಅಲ್ಲಿ ಯಾವ ವಿಡಿಯೋ ಸಹ ಇರಲಿಲ್ಲ. ನಾನು ಚೆಕ್ ಮಾಡಿದೆ. ಇರೋ ಟೆನ್ಶನ್ ಸಾಲದು ಅಂತ, ಹೊಸ ಹೊಸ ಸಮಸ್ಯೆ ಕ್ರಿಯೇಟ್ ಮಾಡ್ತೀರಿ. ನಿಮಗೆ ಎಲ್ಲಾ ತಮಾಷೆ ಅಲ್ವಾ ಎಂದು ರಾಮಾಚಾರಿ ಚಾರುಳನ್ನು ಪ್ರಶ್ನೆ ಮಾಡಿದ್ದಾನೆ.
ನಾನು ತಮಾಷೆ ಮಾಡ್ತಾ ಇಲ್ಲ. ಈ ರೀತಿಯ ವಿಷ್ಯದಲ್ಲಿ ಯಾರಾದ್ರೂ ತಮಾಷೆ ಮಾಡ್ತಾರಾ? ನಾನು ನಿಜವಾಗ್ಲೂ ವಿಡಿಯೋ ಕಳಿಸಿದ್ದೆ ಎಂದು ಚಾರು ಹೇಳ್ತಾಳೆ. ಆ ವಿಡಿಯೋ ಏನಾದ್ರೂ ನಮ್ಮ ಮನೆಗೆ ತಲುಪಿ ಬಿಟ್ರೆ, ನಾನು ಆ ಮನೆಗೆ ಬೇಡವಾದ ಮಗ ಆಗ್ತೀನಿ.
ನಿನ್ನ ಜೊತೆ ಇರ್ತಿನಿ
ರಾಮಾಚಾರಿ ನಿನಗಾಗಿ ನಾನು ಏನ್ ಬೇಕಾದ್ರೂ ಮಾಡ್ತೇನೆ. ಮನೆಯವರ ಮುಂದೆ ಸತ್ಯ ಹೇಳು. ನಾನು ಸದಾ ನಿನ್ನ ಜೊತೆ ಇರ್ತೇನೆ. ನಿನ್ನು ಬಿಟ್ಟು ಹೋಗಲ್ಲ. ನಿನಗಾಗಿ ಜಗತ್ತನೇ ಬೇಕಾದ್ರೂ ಎದುರು ಹಾಕಿ ಕೊಳ್ತೇನೆ. ಆದ್ರೆ ನೀ ಇಲ್ಲ ಅಂದ್ರೆ ನಾನು ಸತ್ತೇ ಹೋಗ್ತೀನಿ. ನೀ ಇಲ್ಲ ನಾ ಸತ್ತೆ ಹೋಗ್ತಿನಿ ರಾಮಾಚಾರಿ ಎಂದು ಚಾರು ಹೇಳಿದ್ದಾಳೆ.
ಇದನ್ನೂ ಓದಿ: Jothe Jotheyali: ಇವತ್ತು ಜೊತೆ ಜೊತೆಯಲಿ ಸೀರಿಯಲ್ ಲಾಸ್ಟ್ ಎಪಿಸೋಡ್, ಅಭಿಮಾನಿಗಳು ಬೇಸರ!
ತಂಗಿ ಶೃತಿ ಮನೆಯಲ್ಲಿ ಅಣ್ಣ ರಾಮಾಚಾರಿ ಸತ್ಯವನ್ನು ಹೇಳ್ತಾಳಾ? ಇಲ್ಲ ದೀಪಾಗೆ ಹೇಳಿ ಎಲ್ಲವನ್ನೂ ಸರಿ ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ